ರಣ ಸಾಹಿತ್ಯ ಪರಿಷತ್ತು ಚಟುವಟಿಕೆಗಳು ಯುವಕರಿಗೆ ಮುಟ್ಟಿಸಿ-ನಗರಾಜ ಮಸ್ಕಿ

e-ಸುದ್ದಿ  ಮಸ್ಕಿ

೧೨ನೇ ಶತಮಾನದ ಶರಣರು ಸಾರಿದ ವಚನ ಚಳುವಳಿ ಇಂದಿನ ಅಗತ್ಯವಗಿದ್ದು ಶರಣ ಸಾಹಿತ್ಯ ಪರಿಷತ್ತು ಈ ಹಿನ್ನಲೆಯಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ನಿರಂತರ ಚಟುವಟಿಕೆಯನ್ನು ಹಮ್ಮಿಕೊಂಡು ಯುವಕರಿಗೆ ವಚನ ಸಾಹಿತ್ಯವನ್ನು ಮುಟ್ಟಿಸುವ ಕೆಲಸವನ್ನು ತಾಲೂಕು ಅಧ್ಯಕ್ಷರು ಮಾಡಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಸ್ಕಿ ನಾಗರಾಜ ವಕೀಲರು ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ಶರಣ ಸಾಹಿತ್ಯ ಪರಿಷತ್ತ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಡಿಸೆಂಬರ ತಿಂಗಳಲ್ಲಿ ಗಡಿನಾಡ ಉತ್ಸವವನ್ನು ಗಡಿನಾಡ ಅಭಿವೃದ್ದಿ ಸಮಿತಿಯ ಸಹಯೋಗದಲ್ಲಿ ನಡೆಸಲು ನಿರ್ಧರಿಸಿದರು.
ಜಿಲ್ಲೆಯಲ್ಲಿ ೧೯ ದತ್ತಿಗಳಿದ್ದು ಪ್ರತಿಯೊಂದು ತಾಲೂಕಿನಲ್ಲಿ ದತ್ತಿ ಕಾರ್ಯಕ್ರಮ ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಶರಣರ ತತ್ವಗಳನ್ನು ಪ್ರಚಾರ ಮಾಡುವಂತೆ ಮಸ್ಕಿ ನಾಗರಾಜ ವಕೀಲರು ತಿಳಿಸಿದರು.
ಕದಳಿ ವೇದಿಕೆಯ ಜಿಲ್ಲಾ ಅಧ್ಯಕ್ಷೆ ಲಲಿತಾ ಬಸನಗೌಡ ಮಾತನಾಡಿ ಪ್ರತಿಯೊಂದು ತಾಲೂಕಿನಲ್ಲಿ ಮಹಿಳೆಯರ ಕದಳಿ ವೇದಿಕೆ ರಚನೆ ಮಾಡಬೇಕು. ಮಹಿಳೆಯರು ಹೆಚ್ಚು ಹೆಚ್ಚು ವಚನ ಸಾಹಿತ್ಯವನ್ನು ಅರಿತುಕೊಳ್ಳಲು ಕದಳಿ ವೇದಿಕೆ ಕಲ್ಪಿಸುವಂತೆ ಮನವಿ ಮಾಡಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹಾಂತೇಶ ಮಸ್ಕಿ, ಸುಮಂಗಲ ಸಕ್ರಿ, ಸಾಹಿತಿ ಶಶಿಕಾಂತ ಕಾಡ್ಲೂರು, ಲಿಂಗಸುಗೂರು ತಾಲೂಕು ಅಧ್ಯಕ್ಷ ಜಂಗಮಮೂರ್ತಿ ಬನ್ನಿಗೊಳಮಠ, ಸಿರವಾರ ತಾಲೂಕು ಅಧ್ಯಕ್ಷ ಸುಗುರೇಶ, ಮಸ್ಕಿ ತಾಲೂಕು ಅಧ್ಯಕ್ಷ ವೀರೇಶ ಸೌದ್ರಿ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಯನಾಂದ ಜೋಗಿನ್ ಇದ್ದರು

Don`t copy text!