ಮಕ್ಕಳ ಕತೆಗಳ ಪುಸ್ತಕ
ಮಕ್ಕಳ ಮನದ ಕತೆಗಳು
ಲೇಖಕರು-ಗುಂಡುರಾವ್ ದೇಸಾಯಿ ಮಸ್ಕಿ
ಉತ್ತರ ಕರ್ನಾಟಕದಲ್ಲಿ ಮಕ್ಕಳ ಸಾಹಿತ್ಯದ ಕುರಿತು ಧ್ಯಾನಸ್ಥರಾಗಿ ಬರೆಯುವ ಬೆರಳೆಣಿಕೆಯ ಹಿರಿಯರಲ್ಲಿ ಶ್ರೀ ಗುಂಡುರಾವ್ ದೇಸಾಯಿ ಸರ್ ಸಹ ಒಬ್ಬರು.. ಅವರ ಮಕ್ಕಳ ಕಥೆಗಳು ತುಂಬಾ ಅತ್ಯದ್ಭುತ ವಾಗಿ ಮೂಡಿ ಬಂದಿವೆ. ಎಷ್ಟೊಂದು ಸರಳವಾಗಿ ಸುಲಲಿತವಾಗಿ ಕಂಡು ಬಂದಿವೆಯೆಂದರೆ ಯಾರಾದರೂ ಬಹು ಸರಳವಾಗಿ ಮಕ್ಕಳ ಕತೆ ಬರೆಯಬಹುದು ಎಂದು ಓದುಗನಿಗೆ ಅನಿಸುತ್ತದೆ ,ಓದುಗನಿಗೆ ಹುಮ್ಮಸ್ಸು ,ಉತ್ಸಾಹ ಮೂಡುತ್ತದೆ
ಈ ಕಥೆಗಳಲ್ಲಿ ತಿಳಿ ಹಾಸ್ಯ ಸಹಜವಾಗಿ ಮೂಡಿ ಬಂದು ನೆನಪಲ್ಲುಳಿಯುವಂತಹದು.
ಸುತ್ತ ಮುತ್ತ ನಡೆಯುವ ಸನ್ನಿವೇಶಗಳನ್ನಿಟ್ಟುಕೊಂಡು ತುಂಬ ಸುಲಭವಾಗಿ ನಾವು ಸಹ ಮಕ್ಕಳ ಕತೆ ಬರೆಯಬಹುದು ಎಂಬ ಸ್ಪೂರ್ತಿ ಹುಟ್ಟುತ್ತದೆ.
(ಲೇಖಕರು -ಗುಂಡೂರಾವ್ ದೇಸಾಯಿ ಮಸ್ಕಿ)
ಎಗ್ ರೈಸ್ ಮಂತ್ರಿ ಈ ಕಥೆಯಲ್ಲಿ ಮಕ್ಕಳು ಶಾಲೆಯಲ್ಲಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಂಡು ಜಾಣನಾಗಿರುವ ಮತ್ತು ಎಲ್ಲರಿಗೂ ಬೇಕಾದ ಮಲ್ಲೇಶ ಎಂಬ ವಿದ್ಯಾರ್ಥಿ ಗೆಲ್ಲತ್ತಾನೆಂದು ಭಾವಿಸಿರುತ್ತಾರೆ. ಆದರಿಲ್ಲಿ ಮಲ್ಲೇಶನ ಎದುರಾಳು ಸ್ಪರ್ಧಿಯಾದ ನಾಗ ಎಂಬ ವಿದ್ಯಾರ್ಥಿ ಮುಖ್ಯಮಂತ್ರಿ ಯಾಗಿ ಆಯ್ಕೆಯಾಗುತ್ತಾನೆ. ಇಲ್ಲಿ ನಾಗ ಗೆಲ್ಲಲು ಕಾರಣವೇನೆಂದರೆ ತನ್ನ ಗೆಳೆಯರಿಗೆ “ಎಲೆಕ್ಷನ್ನಾಗ ನನಗೆ ಓಟು ಹಾಕಿದ್ರ ನಿಮಗೆಲ್ಲ ಎಗ್ ರೈಸ್ ಕೊಡಸ್ತಿನಿ” ಅಂತ ಸುಳ್ಳು ಹೇಳಿ ಓಟುಗಳನ್ನು ಪಡೆದುಕೊಂಡಿರುತ್ತಾನೆ. ಗೆದ್ದ ನಂತರ ಅದೆಲ್ಲವೂ ಹುಸಿ ಮಾತುಗಳಿವು ಎಂದು ಎಲ್ಲರಿಗೂ ತಿಳಿಯುತ್ತದೆ. ಇದನ್ನು ಇನ್ನಷ್ಟು ಆಲೋಚಿಸಿದರೆ ಚುನಾವಣೆ ಸಮಯದಲ್ಲಿ ಈ ರೀತಿಯ ಉಢಾಫೆ ಮಾತುಗಳಿಗೆ, ನೋಟುಗಳಿಗೆ ಜನರು ಮೊರೆ ಹೋಗಿದ್ದಾರೆ. ಎಲೆಕ್ಷನ್ ಸಮಯದಲ್ಲಿ ನಮ್ಮ ಮನೆಯ ಬಳಿ ಬಂದು ಭಾಷಣ ಬಿಗಿದು ಹೋಗುವ ಜನರನ್ನು ನಾವು ತುಂಬಾ ಕಂಡಿದ್ದೇವೆ.
ಮಗ ಮತ್ತು ಗಾಳಿಪಟದ ಕಥೆಯಲ್ಲಿ ಗುರಿ ಮುಟ್ಟಬೇಕಾದರೆ ಮುಂದೆ ಗುರಿ ಹಿಂದೆ ಗುರು ಇದ್ದರೆ ಎಂತಹ ಕಷ್ಟದ ಕೆಲಸವಿದ್ದರೂ ಸಾಧಿಸಬಹುದು ಎಂಬ ಮಾತು ಸತ್ಯವಾಗಿದೆ.
ತಂದೆ ಮಗನಿಗೆ ತುಂಬ ಸಪೋರ್ಟ್ ಮಾಡುತ್ತಿರುತ್ತಾನೆ, ಮಗನಿಗೆ ಬುಗುರಿ ಆಡಿಸಲು ಬರುವುದಿಲ್ಲ ಅದನ್ನು ತಂದೆ ಹೇಳಿಕೊಡುತ್ತಿರುತ್ತಾನೆ,”ಅಪ್ಪ ಆಡವಲ್ತು” ಅಂತ ಒದ್ದಾಡಿದಾಗ ” ಪ್ರಯತ್ನ ಮಾಡೋ ಬರುತ್ತದೆ ” ಅಂದಾಗ ಒಂದೆರೆಡು ಸಾರಿ ಸಮುನ ಬುಗುರಿ ಸರಿಯಾಗಿ ಆಡಲಿಲ್ಲ ಅಪ್ಪನ ಮಾತಿನಂತೆ ಮಗ ಮರಳಿ ಯತ್ನವ ಮಾಡು ಎಂಬ ಗಾದೆ ಮಾತಿನಂತೆ ಪ್ರಯತ್ನ ಮಾಡುತ್ತಿರುತ್ತಾನೆ. ನಂತರ ಬುಗುರಿ ಚೆನ್ನಾಗಿ ಆಡಲು ಆರಂಭಿಸಿತು. ತಂದೆ ಇಲ್ಲಿ ಒಂದೊಳ್ಳೆ ಮಾತುಗಳನ್ನಾಡಿದನು “ಏಕಾಗ್ರತೆ ನಮ್ಮದು ಅದೆ ಸ್ಥಿತಿಯಲ್ಲಿದ್ದಾಗ ಸಾಧ್ಯ ” ಎಂದಾಗ ಮಗನು ಒಂದು ವಾರದಲ್ಲಿ ಜಾಳಿಗೆ ಬೀಸಿ ಅಂಗೈಯಲ್ಲಿ ಹಾಕಿಕೊಂಡು ಆಡೋದನ್ನು ಕಲಿತುಕೊಂಡ ಆಗ ತಂದೆಗೆ ಎಲ್ಲಿಲ್ಲದ ಖುಷಿ, ತನಗೆ ಅಂಗೈಯಲ್ಲಿ ಆಡಿಸಲು ಬರೋದೆ ಇಲ್ಲ ಮಗ ಕಲಿತನೆಂದು ಬಹಳಷ್ಟು ಆನಂದ ಪಟ್ಟನು. ಇದಾದ ನಂತರ ಗಾಳಿಪಟ ಹಾರಿಸಲು ಎಷ್ಟು ಬಾರಿ ಪ್ರಯತ್ನ ಪಟ್ಟರೂ ಅಲ್ಲೂ ಕೂಡ ವಿಫಲನಾಗುವ. ನಾನೇ ಪ್ರಯತ್ನ ಮಾಡುತ್ತೇನೆಂದು ಛಲ ಬಿಡದೆ ಪ್ರಯತ್ನ ಮುಂದುವರಿಸುತ್ತಿದ್ದ. ಇವನ ಕಾಟಕ್ಕೆ ಪೇಪರ್ ಅಂಟು ,ಕಸಬಾರಿಗೆ,ರೀಲು ಕಾಣಿಸದ ಹಾಗೆ ಅಜ್ಜಿ ಬಚ್ಚಿಟ್ಟಿದ್ದಳು.
ಒಂದು ದಿನ ರಾತ್ರಿ ತಂದೆಗೆ ಮಗ “ಅಪ್ಪ ನಾಳೆ ಲಾಸ್ಟ್ ಚಾನ್ಸ್ ,ಅಮ್ಮನ ಅಲಮಾರಿಯಿಂದ ರೀಲ್ ದಾರ ಕೊಡು ಅಪ್ಪ ದಯವಿಟ್ಟು “ಎಂದು ಗಂಟು ಬಿದ್ದು ಕೇಳಿದಾಗ ಅವನ ಉತ್ಸಾಹಕ್ಕೆ ಹೆಂಡತಿಗೂ ಗೊತ್ತಾಗದ ಹಾಗೆ ತಂದು ಕೊಟ್ಟ
. ಕೊನೆಗೆ ಸಮು ಗಾಳಿಪಟ ಹಾರಿಸಿಯೇ ಬಿಟ್ಟನು ಇದನ್ನು ಕಂಡು ಸಮುನ ಅಕ್ಕ ,ಅಮ್ಮ ,ಅಪ್ಪ ಸಂತೋಷ ಪಟ್ಟರು ಸಮುಗೆ ಗೆಲುವು ಸಾಧಿಸಿದ ಉತ್ಸಾಹ ಉಕ್ಕಿ ಹರಿಯಿತು.
ಮಕ್ಕಳೇನು ಸಣ್ಣವರಲ್ಲ ಈ ಕಥೆಯಲ್ಲಿಯು ಹಳ್ಳಿಯ ಜೀವನದ ಬಗ್ಗೆ ತಿಳಿದು ಬರುತ್ತದೆ. ಅಜ್ಜಿ ಹಲವಾರು ಜನರನ್ನು ಕರೆದುಕೊಂಡು ಬಂದು ಪಾರಿವಾಳದ ಕಳ್ಳತನ ಅಪವಾದ ಇವರ ಮೇಲೆ ಹಾಕಿ ಬೈದು ಹೋದಳು.`ನಾಗ`ಎಂಬ ಹುಡುಗ ತಾನೇ ಪಾರಿವಾಳ ಸಾಕಿದ್ದ ಅಜ್ಜಿ ಕಡೆಯವರು ಬಂದು 800ರೂ.ಗೆ ಕೊಡುತೀವಿ ಕೊಡು ಎಂದಾಗ ನಾಗ ಪಾರಿವಾಳಗಳನ್ನು ಕೊಡುವುದಿಲ್ಲ. ಇನ್ನೊಬ್ಬ ನಾಗರಬೆಂಚಿಯ ಹುಡುಗನಾದ ನಿರುಪಾದಿ ಪಾರಿವಾಳ ಸಾಕಿದರೆ ತನ್ನ ತಂದೆ ಬೈಯುತ್ತಾನೆಂದು ನಾಗನಿಗೆ ಸಾಕಲು ಕೊಟ್ಟಿರುತ್ತಾನೆ. ಶಿಕ್ಷಕರಿಗೆ ತಿಳಿಯದ ಕೆಲವು ವಿಷಯಗಳು ಮಕ್ಕಳು ತಿಳಿದುಕೊಂಡು ತಮ್ಮ ಶಿಕ್ಷಕರಿಗೆ ಪಾರಿವಾಳದ ಬಗ್ಗೆ ವಿವರಿಸುತ್ತಾ ಹೋಗುತಿರುತ್ತಾರೆ. ಮಕ್ಕಳು ಪಾರಿವಾಳದಿಂದ ಹಳ್ಳಿಯಲ್ಲಿ ಜೂಜಾಟ ಆಡುತ್ತಾರೆ ಸರ್ ಎಂದು ಹೇಳುತ್ತಾರೆ. ಆದರೆ ನಾವು ಬಡವರು ನಮ್ಮ ಬಳಿ ಹಣವಿಲ್ಲದ ಕಾರಣ ಅದನ್ನು ಆಡುವುದಿಲ್ಲ ಸರ್ ಮನೆಗೆ ಸಹಾಯವಾಗುತ್ತದೆ ಎಂದು ಹೇಳಿದರು. ಏನು ಸಹಾಯ ಅದರಿಂದ ಎಂದು ಕೇಳಿದಾಗ ಪಾರಿವಾಳದ ರಕ್ತ ಪಾರ್ಸಿ, ಲಕ್ವ ಹೊಡೆದವರಿಗೆ ಹಚ್ಚಿದರೆ ಬೇಗನೆ ಗುಣಮುಖರಾಗುತ್ತಾರೆಂದು ಮಕ್ಕಳು ತಿಳಿದುಕೊಂಡಿದ್ದರು. ಈ ಕತೆಯಲ್ಲಿ ಮಕ್ಕಳ ಸಹಜ ಕುತೂಹಲದ ಜೊತೆಗೆ ಅವರ ಸಾಮಾನ್ಯ ಜ್ಙಾನದ ಕುರಿತು ಹೇಳುತ್ತಾರೆ.
ಚಿರತೆ ಮತ್ತು ಸ್ನ್ಯಾಕ್ಸ್ ಈ ಕಥೆಯಲ್ಲಿ ಸಮು,ಅನು,ರಾಜು ರಜೆ ಬಂದರೆ ಸುಮ್ಮನೆ ಕೂರೋರು ಅಲ್ಲ. ಸಸ್ಯಗಳು ,ಪಕ್ಷಿಗಳು ,ಪ್ರಕೃತಿಯ ಸಂಭ್ರಮವನ್ನು ಅನುಭವಿಸಬೇಕೆಂದು ಮಕ್ಕಳಿಗೆ ಸಂತೋಷ. ಈ ಮಕ್ಕಳಿಗೆ ತಾವು ತಿಂದ ಹಣ್ಣುಗಳ ಬೀಜಗಳನ್ನ ಒಣಗಿಸಿ ತಯಾರಿಸಿದ ಸೀಡ್ ಬಾಲ್‌ಗಳನ್ನು ಹಿಡಿದುಕೊಂಡು ಒಗೆಯುವ ಹವ್ಯಾಸ ಬೆಳಸಿಕೊಂಡವರು. ಒಂದು ದಿನ ಮಸ್ಕಿ ಗುಡ್ಡಕ್ಕೆ ಹೋಗಿ ಸೀಡ್ ಬಾಲಗಳನ್ನು ಒಗೆದು ಬರಲು ನಿರ್ಧರಿಸಿದರು. ಆ ಬಗ್ಗೆ ತಂದೆಗೆ ಹೇಳಿದಾಗ ” ಬೇಡ ಮಕ್ಕಳೆ,ಪಕ್ಕದ ಹಳ್ಳಿಗಳಲ್ಲಿ ಚಿರತೆ ಬಂದಿದೆ ಎಂದು ಸುದ್ದಿಯಾಗಿದ್ದರಿಂದ ಹೋಗಬೇಡಿ ಇನ್ನೊಂದು ಸಾರಿ ಹೋಗುವಿರಂತೆ” ಎಂದರು.
ಎಷ್ಟೋ ಸಾರಿ ಹೋಗಿ ಸಾಹಸ ಮಾಡಿದಿವಿ ಇದೇನು ಮಹಾದೊಡ್ಡ ಎಂಬಂತೆ ಮಕ್ಕಳು ಮಾತನಾಡಿದರು.ಚಿರತೆ ದೊಡ್ಡ ಪ್ರಾಣಿ ಈ ಗುಡ್ಡಕ್ಕೆ ಬಂದರೆ ಎಂದು ಪ್ರಶ್ನೆ ಮಾಡಿದ ತಂದೆ. ಧೈರ್ಯ ಹೇಳುತ್ತಿದ್ದ ನೀನೆ ನಮ್ಮನ್ನ ಅಧೈರ್ಯಗೊಳಿಸಿದರೆ ಹೇಗೆ ಎಂದು ಅನು ತಂದೆಯನ್ನು ಪ್ರಶ್ನಿಸಿದಳು. ದೊಡ್ಡವರ ಮಾತು ಕೇಳಿ,ಬೇಡ ಎಂದರೆ ಬೇಡ ಎಂದು ತಂದೆ ಒಳಹೋದರು. ಅಕ್ಕ ನಾನು ಚಿರತೆಯನ್ನು ನೋಡಿಯೇ ಇಲ್ಲ. ನೋಡೋಕಾದ್ರೂ ಹೋಗೋಣ ಎಂದ ಚೋಟು ಸಮ್ಮು.
ಲೇ ಅದೇನೂ ಬೆಕ್ಕು ಅನಕೊಂಡಿಯಾ? ಮನುಷ್ಯರನ್ನ ಕಂಡ್ರೆ ಮೊದಲೆ ಹಾರುತ್ತೆ…ನೋಡತಾನಂತೆ…ನೋಡುತಾನೆ ಎಂದಳು ಅನು…ಈ ಸಂಭಾಷಣೆಗಲಕು ಸಹಜವಾಗಿಯೆ ನಗೆ ಉಕ್ಕಿಸುತ್ತವೆ.
“ಅದೆಲ್ಲ ಬಿಡಿ ಚಿರತೆ ಬರೋಲ್ಲ ಏನು ಬರಲ್ಲ ನಮ್ಮ ಗುಡ್ಡದಲ್ಲಿ ತಿನ್ನೋಕೆ ಏನಿದೆ ಬರಿ ಬೋಳು ,ಹೋಗೋಣ ಫಾರ್ ಚೇಂಚ್ ಥ್ರೀಲ್ ಆಗಿರುತ್ತೆ ಎಂದನು ರಾಜು. ಮಕ್ಕಳಿಗೆ ಎಷ್ಟೊಂದು ಉತ್ಸಾಹ ಅವರ ಹಠ ವನ್ನು ಇಲ್ಲಿ ಕಾಣಬಹುದಾಗಿದೆ.
ಮನೆಯಲ್ಲಿ ಬೇಡ ಎಂದಿದ್ದಾರೆ ದುಡ್ಡಿದಷ್ಟು ಸ್ಯ್ನಾಕ್ಸ್ ತೆಗೆದುಕೊಂಡು ನಾಳೆನೇ ಹೋಗೋಣ. ಬೆಳಗು ಆಗುವಷ್ಟರಲ್ಲಿಯೇ ಮಕ್ಕಳು ಗುಡ್ಡಕ್ಕೆ ಹೋಗಿದ್ದರು. ತಂದೆ ಪತ್ರಿಕೆ ಓದುವಾಗ ಮಸ್ಕಿ ಗುಡ್ಡಕ್ಕೆ ಚಿರತೆ ಬಂದಿದೆ ಎಂಬ ಸುದ್ದಿಯನ್ನು ಓದಿದ .ಮಕ್ಕಳು ಮನೆಯಲ್ಲಿ ಕಾಣಿಸಲಿಲ್ಲ ಗುಡ್ಡಕ್ಕೆ ಹೋಗಿರಬೇಕೆಂದು ಊಹಿಸಿ ಗಾಬರಿಯಾದ. ಪೋಲೀಸ್ ಸ್ಟೇಷನ್ ಹೋಗಿ ವಿಷಯ ತಿಳಿಸಿದ ಅವರು ಅರಣ್ಯ ಇಲಾಖೆಗೆ ಕರೆಮಾಡಿದರು.
ಮಕ್ಕಳು ಗುಡ್ಡದಲ್ಲಿ ತಾವು ಕಳೆದ ವರ್ಷ ಸೀಡ್ ಬಾಲ‌್‌ಗಳನ್ನು ಒಗೆದಿದ್ದರು ಅವು ಮೊಳಕೆ ಹೊಡೆದು ಗಿಡಗಳಾಗಿದ್ದನ್ನು ನೋಡಿ ಖುಷಿಪಟ್ಟರು. ಬೆಳಗಿನ ಸೂರ್ಯೋದಯ, ಅಲ್ಲಿ ಸಿಗುವ ಹಣ್ಣು ,ಹೂವುಗಳು ,ಪಕ್ಷಿಗಳ ಗಾಯನ ಕಂಡು ಪ್ರಕೃತಿ ಸೌಂದರ್ಯವನ್ನು ಅನುಭವಿಸಿದರು.
ಅಷ್ಟರಲ್ಲಿಯೇ ಚಿರತೆ ಬರುತ್ತಿರುವುದನ್ನು ಕಂಡು ಮಕ್ಕಳಿಗೆ ಭಯ ಶುರುವಾಯಿತು. ಏಕಾಶಿಲಾಬಂಡೆಗೆ ಕೊಂಡಿ ಹಾಕಿ ಒಬ್ಬರೊಬ್ಬರನು ಹತ್ತಿಸಿದ ರಾಜು. ಚಿರತೆ ಬರುವುದನ್ನು ನೋಡುತ್ತಾ ವಾಹ್ ವಾಹ್ ಎಂದು ಮಜ ಮಾಡುತಿದ್ದ ಸಮ್ಮು. ಮನುಷ್ಯನ ವಾಸನೆಗೆ ಕಂಡು ಇವರತ್ತ ಬಂದಿತು ಚಿರತೆ.
ಪಾಪ ಅಕ್ಕ ಅದು ಮೇಲೆ ಬರಲಿ ಬೀಡು ಎಂದ ಸಮ್ಮು.
ಅದೇನು ಬೆಕ್ಕು ನಾಯಿ ಅಂದುಕೊಂಡಿಯಾ ಚಿರತೆ ಅದು. ಮೇಲೆ ಬಂದರೆ ನಾವು ಯಾರು ಉಳಿಯಲ್ಲ ಎಂದಳು ಅನು. ಸಮ್ಮುಗೆ ಸ್ನ್ಯಾಕ್ಸ್ ತಿನ್ನುವ ಚಿಂತೆ ,ಸ್ನ್ಯಾಕ್ಸ್ ತಗೆಯಿರಿ ತಿನ್ನೋಣ ಎಂದಾಗ ಅವರೆಲ್ಲರು ಗಾಬರಿಯಲ್ಲಿಯೇ ಇದ್ದರು. ಸಮ್ಮು ಮಾತ್ರ ತನ್ನ ಲೋಕದಲ್ಲಿ ತಾನು ಮುಳುಗಿದ್ದ. ಮಕ್ಕಳು ಚೀರುವುದನ್ನು ಕಂಡು ಅರಣ್ಯ ಇಲಾಖೆಯವರು ,ಸಮ್ಮುನ ತಂದೆ ನಾವು ಬಂದಿದ್ದೇವೆ ಧೈರ್ಯವಾಗಿ ಇರಿ ಎಂದು ಸೂಚನೆ ತಿಳಿಸಿದರು. ಚಿರತೆಯ ಮೈಂಡ್ ಡೈವರೇಶನ್ ಮಾಡಬೇಕೆಂದು ಸೀಡ್ ಬಾಲ್ಗಳನ್ನು,ಕಲ್ಲುಗಳನ್ನು ಚಿರತೆಗೆ ಒಗೆಯುತ್ತಿದ್ದರು. ಚಿರತೆ ಮತ್ತಷ್ಟು ಆಕ್ರೋಶಗೊಂಡಿತು. ಬಾಯಿ ತೆಗೆದುಕೊಂಡು ಬರುತ್ತಿದ್ದ ಚಿರತೆಯ ಬಾಯಿಗೆ ಸಮ್ಮು ಕುರುಕುರೆ ಒಗೆಯ ತೊಡಗಿದ. ಕೆಲವು ಗಾಳಿಗೆ ಹೋದವು.ಇನ್ನೂ ಕೆಲವು ಅದರ ಬಾಯಿಯಲ್ಲಿ ಬಿದ್ದವು.ಅವನ್ನೇಕೆ ಒಗಿತಿಯೊ ನಾವೆಲ್ಲ ಭಯದಿಂದ ಇದ್ದಿವಿ ನೀನು ಎಂತವನು ಎಂದು ಬೈದ ರಾಜು.
ಕುರುಕುರೆಯಲ್ಲಿ ಉಪ್ಪು ,ಖಾರ ಕಣ್ಣಿಗೆ ಬಿದ್ರೆ ಕಣ್ಣು ಕಾಣಲ್ಲ ಓಡಿಹೋಗುತ್ತದೆ ಎಂದಾಗ ಎಲ್ಲರು ತಂದ ಪಾಕೇಟ್ ಗಳನ್ನು ಒಗೆಯಲು ಶುರುಮಾಡಿದರು.ಚಿರತೆಗೆ ರುಚಿ ಹತ್ತಿತೇನು ಬಾಯಿ ಚಪ್ಪರಿಸತೊಡಗಿತು. ಅದರ ರುಚಿಗೆ ಮಾರುಹೋಗಿ ಮುಂದೆ ಬಂದು ತಿನ್ನತೊಡಗಿತು.ಚಾಕಲೇಟು ಕೂಡ ಎಸೆದಾಗ ಅದನ್ನು ಸಹ ತಿಂದಿತು. ಚೀಪ್ಸ್ ಕುರುಕುರೆ ಒಂದೇ ಪಾಕೀಟ್ ಇರುವಷ್ಟರಲ್ಲಿ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿದು ಪಂಜರದಲ್ಲಿ ಹಾಕಿದರು.ಈ ಕಥೆಯು ಓದಿದಾಗ ಸಮ್ಮುನ ಮಾತು ಸಹಜ ನಗು ತರಿಸುತ್ತದೆ. ಮತ್ತು ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿಯೂ ಸಹ ಈ ಕತೆಯಲ್ಲಿದೆ.
ಹೊಟ್ಟೆಯಲ್ಲಿ ಮರ ಈ ಕತೆಯು ಕೂಡ ಹಾಸ್ಯಭರಿತವಾಗಿದೆ. ಎಲ್ಲರ ಬಾಲ್ಯಕ್ಕೆ ಜಾರಿಸುತ್ತದೆ. ಹುಣಸೆ ಹಣ್ಣು ತಿನ್ನುತ್ತಿದ್ದ ಸಮ್ಮ . ಅವನ ಅಕ್ಕ ಎಷ್ಟೇ ಬೇಡವೆಂದರು ತಿನ್ನದೆ ಬಿಡಲೆ ಇಲ್ಲ. ಸ್ವಲ್ಪ ಹೊತ್ತಿನ ನಂತರ ಅಳುತ್ತ ಅಕ್ಕನ ಬಳಿ ಬಂದ ಸಮ್ಮು “ಅಕ್ಕಾ ಅಕ್ಕಾ ನಾನು ಬೀಜಗಳನ್ನು ನುಂಗಿ ಬಿಟ್ಟಿನಿ ಏನು ಆಗಲ್ಲಲ್ಲ “ಎಂದ.
ಅಯ್ಯೋ ಬೀಜಗಳನ್ನು ನುಂಗಿಬಿಟ್ಟಿಯಾ,ಬೇಡ ಅಂತ ಹೇಳಿದೆ ಈಗ ಅನುಭವಿಸು ಎಂದು ಗಾಬರಿಗೊಳಿಸಿದಳು.
ಅಂಜಿ ಹೋಗಿದ್ದ ಸಮ್ಮು ಮತ್ತಷ್ಟು ಗಾಬರಿಯಾದ. ಅಕ್ಕಾ ಏನಗ್ತಾದ ಎಂದ. ಅದಕ್ಕೆ ಅವನ ಅಕ್ಕ – ಬೀಜನ ನೆಲದಲ್ಲಿ ಹೂತ್ರೆ ಏನಾಗುತ್ತದೆ…? ಬೀಜ ಮೊಳಕೆ ಒಡೆದು ಗಿಡ ಬೆಳೆಯುತ್ತದೆ.ಹಾಗೆ ನಿನ್ನ ಹೊಟ್ಟೆಯಲ್ಲೂ…..ಎಂದಾಗ ಸಮ್ಮುನ ಎದೆ ಬಡಿತ ಜೋರಾಯಿತು. ಎಂದೊ ಕೇಳಿದ ನೆನಪು ಬೀಜ ನುಂಗಿದಾಗ ಬಾಳೆಹಣ್ಣು ತಿಂದರೆ ಕಕ್ಕಸದಲ್ಲಿ ಬರುತ್ತದೆ ಎಂದು ತಿಳಿದಾಗ ಸಮ್ಮುನ ತಂದೆ ಸಂಜೆ ಬಾಳೆಹಣ್ಣು ತಂದಿದ್ದನು ರಾತ್ರಿ ಎದ್ದು ಒಂದು ಡಜನ್ ಬಾಳೆಹಣ್ಣು ತಿಂದು ಮಲಗಿದನು.ಬೆಳಿಗ್ಗೆ ಸಮ್ಮುನ ತಾಯಿ ಬಾಳೆಹಣ್ಣು ನೋಡಿದಾಗ ಎಲ್ಲವೂ ಖಾಲಿ ಮಾಡಿದ್ದ,ತುಂಬಾ ಗಾಬರಿಯಾದಳು ಆಗ ತಾನೆ ಬೆಳಗಿನ ವಿಸರ್ಜನೆ ಮುಗಿಸಿಕೊಂಡು ಬಂದ ಸಮ್ಮು ತಾಯಿಗೆ ಬೀಜಗಳನ್ನು ತೋರಿಸಿ ನಡೆದ ವಿಚಾರ ತಿಳಿಸಿದ. ಈಗ ಗಿಡ ಹೇಗೆ ಹೊಟ್ಟೆಯಲ್ಲಿ ಬೆಳೆಯಲು ಸಾಧ್ಯ ಎಂದು ಹೇಳಿ ಖುಷಿ ಪಟ್ಟ.
ಅಮ್ಮ ಹುಣಸೆ ಕಪ್ಪ (ಬೀಜ) ಹುರಿದುಕೊಡಮ್ಮ ಎಂದು ಸಮ್ಮುನ ಅಕ್ಕ ಕೇಳಿದಳು. ಎಲ್ಲಾ ಖಾಲಿ ಆಗಿವೆ ಎಲ್ಲಿಂದ ತರೋದು ಎಂದಳು ತಾಯಿ. ಬೇಕೆ ಬೇಕೆಂದು ಹಠ ಮಾಡಿದಳು ಸಮ್ಮುನ ಅಕ್ಕ. ಅದಕ್ಕೆ ಸಮ್ಮು – ಅಕ್ಕ ನನಗೆ ತಿಂದ್ರೆ ಗಿಡ ಆಗುತ್ತ ಅಂದೆ,ನಿನಗೇನು ಆಗಲ್ವಾ ಎಂದು ಕೇಳಿದ.
ಅಯ್ಯೋ ಪೆದ್ದ ಹಸಿದು ತಿಂದಿಯಾ ವಾರ ತಡಿ ಅದು ಬೆಳೆಯುತ್ತೆ ಬಾಯಿಯಿಂದ ಹೊರಬರುತ್ತೆ .ಆದರೆ ಅದು ಹುರಿದು ತಿಂದ್ರೆ ಬೆಳೆಯಲ್ಲ ಅಂದು ಸಮ್ಮುನ ಮತ್ತಷ್ಟು ಕಾಲಲೆಳೆದಳು. ಸಮ್ಮುನ ಅಕ್ಕ ಅಮ್ಮ ನನಗೆ ಹುಣಸೆ ಬೀಜ ಬೇಕೆ ಬೇಕು ಕೊಡಮ್ಮ ಎಂದಾಗ ಮಾಡದಲ್ಲಿ ಇದ್ದ ನಾಲ್ಕು ಬೀಜಗಳು ಕಂಡವು.ಅದಕ್ಕೆ ಉಪ್ಪು ಹಾಕಿ ಉರಿದು ತಿನ್ನುವಾಗ ಸಮ್ಮು ಕೇಳಿದ ಅಕ್ಕ ನನಗೆ ಒಂದು ಕೊಡು ಎಂದು. ಅವನಕ್ಕ ಕೊಡಲೆ ಇಲ್ಲ .ನೋಡುವವರೆಗೆ ನೋಡಿ ಜೋರಾಗಿ ನಗುತ್ತಿದ್ದನು.
ಯಾಕೆ ನಗತಿಯಾ? ಅಂತ ಸಮ್ಮುನ ತಾಯಿ, ಅಕ್ಕ ಇಬ್ಬರು ಕೇಳಿದಾಗ.
ಅಮ್ಮ ಅವು ಬೀಜಗಳು ಎಲ್ಲಿದ್ದವು ,ಅವು ಯಾವುವು ಗೊತ್ತಾ ಮೊನ್ನೆ ಹುಣಸೆ ಹಣ್ಣು ತಿನ್ನುವಾಗ ನುಂಗಿದ ಬೀಜಗಳು.ಲ್ಯಾಟ್ರಿನ್ ಮಾಡುವಾಗ ಬಂದದ್ದು ….ಹ್ಯಾ ಛೀ ಎಂದು ಬಿಟ್ಟ.
ವಾಯಕ್ ವ್ಯಾಕ್ ಎನ್ನುತ್ತ ಬಚ್ಚಲಮನೆ ಕಡೆಗೆ ಹೋದಳು.
ಹಾಂಗೆ ಹಾಗಬೇಕು ಹಾಂಗೆ ಆಗಬೇಕು ಎಂದು ಸಮ್ಮು ಕೂಗತೊಡಿಗಿದ. ಅವರ ತಂದೆ ಕಣ್ಣು ತಿರಿವಿದಾಗ ಸಮ್ಮು ಸುಮ್ಮನಾದ. ಏನೋ ಒಂಥರ ಆಗ್ತಿದಿ ಅಪ್ಪ ಎಂದಾಗ ಏನು ಆಗಲ್ಲ ಸುಮ್ಮನಿರು ಎಂದು ಹೇಳಿದ ಸಮ್ಮುನ ಅಪ್ಪ.
ಸಮು ಅವನ್ನು ತೊಗೊಂಡು ಬಾರೋ ಎಂದು ಕೂಗಿದ ಅಪ್ಪ.
ಒಂದು ಹಾಳೆಯಲ್ಲಿ ಸುತ್ತಿದ್ದ ನುಂಗಿದ ಬೀಜಗಳನ್ನು ತಂದು ತೋರಿಸಿದ. ನೀನು ತಿಂದಿದ್ದು ಇವಲ್ಲ ಬೇರೆ .ಅಂದು ಅವನಿಗೆ ಗಿಡ ಬೆಳೆಯುತ್ತೆ ಎಂದು ಹೆದರಿಸಿದಾಗ ಹೆದರಿ ನಿತ್ರಾಣನಾಗಿದ್ದ,ಸಮಾಧಾನಿಸಿ ನಿನಗೂ ಬುದ್ದಿ ಕಲಿಸೋಣ ಎಂದು ನಾಟಕ ಮಾಡಿದ್ವಿ. ಎಂದಾಗ ಅವಳಿಗೆ ಜೀವ ಬಂದಂತಾಯಿತು. ಸಮು ನನಗೆ ಚಳ್ಳೆ ಹಣ್ಣು ತಿನಿಸಿದ್ಯಾ ಮಾಡುತೀನಿ ಬಾ ಎಂದು ಬಡಿಯಲು ಹೋದಾಗ. ಸಮ್ಮುನ ಅಪ್ಪ – ” ಸುಳ್ಳು ಹೇಳೋದಕ್ಕಿಂತ ಸತ್ಯ ಹೇಳಿ ಪರಿಹಾರ ನೀಡಬೇಕು ಎದುರಿಸಬಾರದು ಎಂದೇಳಿದ ತಂದೆ ಹೇಳಿದ ಸಾರಂಶ ನಿಜಕ್ಕೂ ಸತ್ಯವಾದಂತದ್ದು.
ಪ್ಲಾಸ್ಟಿಕಾಯಾಣ ಈ ಕಥೆಯಲ್ಲಿ ಮಕ್ಕಳೆಲ್ಲ ಸೇರಿ ಪ್ಲಾಸ್ಟಿಕ್ ಮುಕ್ತವಾಗಬೇಕು ಎಂದು ಏನೆಲ್ಲಾ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಪ್ರಭಾತಭೇರಿ ಮಾಡಿದ್ರು,ಪ್ಲಾಸ್ಟಿಕ್ ಸಂಗ್ರಹ ಅಭಿಯಾನ ಮಾಡೋಣ,ಸರಕಾರಕ್ಕೆ ಒತ್ತಾಯಿಸೋಣ ಅಂತ ಹಲವಾರು ಯೋಚನೆಗಳು ಮಕ್ಕಳಲ್ಲಿ ತುಂಬಿದ್ದವು.ಹೇಗಾದರೂ ಮಾಡಿ ಪ್ಲಾಸ್ಟಿಕ್ ಬಳಕೆ ಮಾಡಬಾರದೆಂದು ಒಂದು ಉಪಾಯ ಮಾಡಿದರು. ಚರಂಡಿಲಿ ತಿಪ್ಪೇಲಿ ಬಿದ್ದ ಕೊಳಕಾದ ಪ್ಲಾಸ್ಟಿಕ್ ಬಾಟಲ್ ,ಚೀಲಗಳನ್ನ ನಾಲ್ಕು ಫಂಟೆಗೆ ಎದ್ದು ಪ್ರತಿಯೊಬ್ಬರ ಮನೆಮುಂದೆ ಒಗೆದು ಬರೋಣ ಎಂದು ಉಪಾಯ ಮಾಡಿದರು.ಒಬ್ಬೊಬ್ಬರಿಗೆ ಹತ್ತತ್ತು ಮನಿ ಗುತ್ತಿಗೆ ಕೊಡೋಣ ಯಾರೂ ಎದ್ದಿರದ ಸಮಯದಲ್ಲಿ ವಸ್ತುಗಳನ್ನು ಚೆಲ್ಲಿ ಬೀಡೋಣ ಎಂದು ತೀರ್ಮಾನಿಸಿದರು. ಪ್ರತಿ ದಿನ ಬೆಳಿಗ್ಗೆ ಸಂಜೆ ಕಾಣದ ಹಗೆ ಮಕ್ಕಳೆಲ್ಲರು ಪ್ಲಾಸ್ಟಿಕ್ ರಾಶಿಯನ್ನು ಒಗೆಯಲಾರಂಭಿಸಿದರು.ಇಡೀ ಊರ ಮಂದಿ ಪುರಸಭೆಗೆಶಾಪ ಹಾಕಿದರು.ಕಳ್ಳರು ಯಾರೆಂದು ಪತ್ತೆ ಹಚ್ಚಿದರೂ ಸಹ ಸುಳಿವು ಸಿಗಲಿಲ್ಲ.ಇದೇನು ಭಾನಾಮತಿ ಮಾಡಿಸಿದ್ದಾರೆ ಎಂದು ಜನರು ಆತಂಕಗೊಡರು.ಒಂದು ದಿನ ಕಸದ ರಾಶಿಯಿಂದ ಚರಂಡಿಯಿಂದ ಕೊಳಕು ಪ್ಲಾಸ್ಟಿಕನ್ನು ಒಗೆಯುವಾಗ ಕೆಲ ಹುಡುಗರು ಸಿಕ್ಕಿಹಾಕಿಕೊಳ್ಳುತ್ತಾರೆ. ಅಧ್ಯಕ್ಷರು ,ಕೌಸ್ಸಿಲರ್ ಅಧಿಕಾರಿಗಳಿ ವಿಚಾರಿಸಿದಾಗ ಈ ಮಕ್ಕಳಿಗೆ ಸಾಥ್ ನೀಡಿದರು.
ಊರ ಜನರು ಏನೆಲ್ಲಾ ಮಾಡಿದರೂ ಯಾವುದು ಪ್ರಯೋಜನವಾಗಲಿಲ್ಲ.ನಿತ್ಯ ಕೈಯಿಂದ ಎತ್ತಿ ಹಾಕಿ ಜನರು ಬೆಸತ್ತರು.ಪ್ಲಾಸ್ಟಿಕ್ ಬಳಸುವುದನ್ನೆ ಬಿಡಬೇಕೆಂದು ಸಂಕಲ್ಪ ಮಾಡಿದರು. ಕೆಲವೇ ದಿನಗಳಲ್ಲಿ ತಿಪ್ಪೆಗಳು ಪ್ಲಾಸ್ಟಿಕ್ ಇಲ್ಲದೆ ಗೊಬ್ಬರದ ತಾಣಗಳಾದವು. ಅಂಗಡಿಗೆ ಹೋದರೆ ಮನೆಯಿಂದ ಕೈ ಚೀಲಗಳು ಒಯ್ಯಲು ಆರಂಭಿಸಿದರು.ಪ್ಲಾಸ್ಟಿಕ್ ಮುಕ್ತ ನಗರ ಎಂದು ಸುದ್ದಿಯಾದಾಗ ಮುಖ್ಯಮಂತ್ರಿಗಳೆ ಬಂದು ಅಧಿಕಾರಿಗಳಿಗೆ ಎಲ್ಲಾ ಕೌನ್ಸಲರ್‌ರಿಗೆ ಸನ್ಮಾನ ಮಾಡಲು ಬಂದರು.ಪೌರನಾಯಕರು ಇದಕ್ಕೆಲ್ಲ ಮಕ್ಕಳೆ ಕಾರಣರು ಎಂದೇಳಿದರು.ಮಕ್ಕಳಲ್ಲಿರುವ ಪರಿಸರ ಪ್ರಜ್ಞೆ ಅಧಿಕಾರ ನಡೆಸುವ ನಮಗಿಲ್ಲದಿರುವುದು ನಿಜಕ್ಕೂ ಖೇದದ ಸಂಗತಿ ಇನ್ನು ಮುಂದೆ ರಾಜ್ಯದಲ್ಲಿ ಪ್ಲಾಸ್ಟಿಕ್ ಇಲ್ಲದಂತೆ ಕಂಪನಿಗಳನ್ನೆ ಮುಚ್ಚಿಸುವೆ ಎಂದರು ಮುಖ್ಯಮಂತ್ರಿಗಳು.
ಪ್ಲಾಸ್ಟಿಕ್ ಬಳಕೆ ಮಾಡುವುದು ಕಡಿಮೆಯಾಗಬೇಕು ಅದರಿಂದಾಗುವ ದುಷ್ಪರಿಣಾಮಗಳು ಹಲವಾರು ಎಂಬ ಸಂದೇಶ ನೀಡಿದರು ಈ ಕತೆ ಪರಿಸರ ಪ್ರಜ್ಞೆಯನ್ನು ತಿಳಿಸುವಂತಿದೆ.
ಗುಂಡುರಾವ್ ದೇಸಾಯಿ ಸರ್ ಅವರು ಮಕ್ಕಳೇನು ಸಣ್ಣವರಲ್ಲ ಕಥೆಯಲ್ಲಿ ನೀತಿ ಕಥೆಯ ಜೊತೆಗೆ ಹಾಸ್ಯ ,ಮನೋರಂಜನೆ ಇದೆ. ಈ ಮಕ್ಕಳ ಸಂಕಲನ ಪ್ರತಿ ಮಕ್ಕಳ ಕೈಗೆ ಸಿಕ್ಕು ಅವರು ಓದುವಂತಾಗಲಿ ಅವರ ಭೌಧ್ದಿಕ ಸಂಪತ್ತಿನ ವಿಕಾಸವಾಗಲಿ ಎಂಬುದು ನಮ್ಮ ಆಸೆ.. ಶ್ರೀಯುತ ಗುಂಡೂರಾವ್ ಸರ್ ರವರು ಇನ್ನಷ್ಟು ಮಕ್ಕಳ ಸಾಹಿತ್ಯದಲ್ಲಿ ತೊಡಗಿ ಇನ್ನಷ್ಟು ಕೃತಿಗಳನ್ನ ಬರೆಯಲಿ ಎಂದು ಆಶಿಸುವೆವು.
ಈ ಸಂಕಲನ ಕೇವಲ ಮಕ್ಕಳಿಗಾಗಿ ಅಲ್ಲದೆ ಹಿರಿಯರೂ ಓದಿ ಸಂಭ್ರಮಿಸಬೇಕಾದ ಪುಸ್ತಕವಾಗಿದೆ.
– ಉಮಾಸೂಗೂರೇಶ ಹಿರೇಮಠ
ಕನ್ನಾಳ