ಸಂಗೊಳ್ಳಿ ರಾಯಣ್ಣ ಅರ್ಬನ್ ಸಹಕಾರಿ ಸೊಸೈಟಿಯ ಠೇವಣಿಗಳು ಠೇವಣಿದಾರರಿಗೆ ಎಂದು ಸಂದಾಯವಾಗುವವು?

ಸಂಗೊಳ್ಳಿ ರಾಯಣ್ಣ ಅರ್ಬನ್ ಸಹಕಾರಿ ಸೊಸೈಟಿಯ ಠೇವಣಿಗಳು ಠೇವಣಿದಾರರಿಗೆ ಎಂದು ಸಂದಾಯವಾಗುವವು?

e-ಸುದ್ದಿ ಬೆಳಗಾವಿ

ಸುಮಾರು ಮುನ್ನೂರು ಕೋಟಿ ಹಣವನ್ನು ಠೇವಣಿದಾರರಿಗೆ ಮರು ಪಾವತಿಸದೆ ವಂಚಿಸಿದ್ದ ಆನಂದ ಅಪ್ಪುಗೋಳ ಎಂಬ ಉಧ್ಯಮಿ ಬೆಳಗಾವಿ ಸೇರಿ ಬೇರೆ ಬೇರೆ ಜಿಲ್ಲೆಯಲ್ಲಿ
ಕಳೆದ ಐದು ವರ್ಷಗಳಿಂದ ಐವತ್ತಕ್ಕು ಅಧಿಕ ಶಾಖೆ ಹೊಂದಿರುವ ಸಂಗೊಳ್ಳಿ ರಾಯಣ್ಣ ಅರ್ಬನ್ ಸಹಕಾರಿ ಸೊಸೈಟಿಯಲ್ಲಿ ಹಣವನ್ನು ತೊಡಗಿಸಿದ ಠೇವಣಿದಾರರಿಗೆ ಇನ್ನು ನ್ಯಾಯ ಸಿಕ್ಕಿಲ್ಲ .
ಅವನ ವಿರುದ್ಧ ೮೦೦ ಪ್ರಕರಣಗಳು ನ್ಯಾಯಾಲಯ ಮತ್ತು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣಗಳು ತೀರ್ಮಾನ ಮಾಡಿದ್ದರು ಸಹಿತ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪೊಲೀಸ
ಠೇವಣಿದಾರರ ನೋವಿಗೆ ಸ್ಪಂದಿಸಿಲ್ಲ Justice delayed is Justice Denied. ಎಂಬಂತೆ ಇನ್ನೂ ಅದೆಷ್ಟು ವರ್ಷಗಳ ವರೆಗೆ ತಾವು ಕಷ್ಟ ಪಟ್ಟು ದುಡಿದು ಇಟ್ಟ ಹಣವನ್ನು ಠೇವಣಿದಾರರು ಮರಳಿ ಪಡೆಯಬಹುದು.

ಸಾವಿರಾರು ಕೋಟಿ ರೂಪಾಯಿ ಆಸ್ತಿ ಮಾಡಿದ ವಂಚಕ ಆನಂದ ಅಪ್ಪುಗೋಳ ಇವನ ಆಸ್ತಿ ಮುಟ್ಟು ಗೋಲು ಹಾಕಲಾಗಿದೆ. ಅದನ್ನು ಹರಾಜು ಹಾಕಿ ಆದಷ್ಟು ಬೇಗ ಠೇವಣಿದಾರರಿಗೆ ನಿವೃತ್ತಿ ಬಡ ಮಧ್ಯಮ ವರ್ಗದ ಠೇವಣಿದಾರರಿಗೆ ತಾವು ಕಷ್ಟ ಪಟ್ಟು ಇಟ್ಟ ಹಣಕ್ಕೆ ನ್ಯಾಯಾಲಯದ ಆದೇಶದಂತೆ ಬಡ್ಡಿ ಸಮೇತ ಹಣ ಮರಳಿ ದೊರಕಬೆಕು ಎಂದು ಕರ್ನಾಟಕ ಘನ ಸರಕಾರ ಮುಖ್ಯ ಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಸಾಹೇಬರು ಜಿಲ್ಲಾಧಿಕಾರಿ ಬೆಳಗಾವಿ ಇತ್ತ ಗಮನ ಹರಿಸಿ ಎಂದು ಠೇವಣಿದಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

Don`t copy text!