ರಾಜ್ಯೋತ್ಸವ

ರಾಜ್ಯೋತ್ಸವ

ರಾಜ್ಯೋತ್ಸವ ರಾಜ್ಯದಲ್ಲೇ ಸಂಭ್ರಮದ ವಾತಾವರಣ. ಜೈ ಕನ್ನಡಾಂಬೆ ಎನ್ನುವ ಘೋಷಣೆ, ಕನ್ನಡದ ಹೋರಾಟಗಾರರ ಭಾಷಣಗಳು. ಕನ್ನಡದ ಹಿರಿಯ ಕವಿಗಳ ಕಟೌಟುಗಳು .ಮಾಲಾರ್ಪಣೆಗಳು, ಅದ್ದೂರಿ ಆರ್ಕೆಸ್ಟ್ರಾ ಗಳು, ಕನ್ನಡ ಉಳಿಸಿ ಬೆಳೆಸಿ ಎನ್ನುವ ಕೂಗು , ಒಂದಿಷ್ಟು ಯೋಜನೆಗಳು , ಒಂದಿಷ್ಟು ಭರವಸೆಗಳು, ಅನೇಕ ರಾಜ್ಯೋತ್ಸವ ಪ್ರಶಸ್ತಿಗಳು!

ಹೀಗೆ ನವೆಂಬರ್ ಬಂದ ತಕ್ಷಣ ರಾಜೋತ್ಸವ ಆಚರಣೆಯಲ್ಲಿ ಕಳೆದು ಹೋಗುತ್ತದೆ, ಮತ್ತೆ ಮುಂದಿನ ವರ್ಷ ನವೆಂಬರ್ ತಿಂಗಳು ಬಂದಾಗ ಇದೇ ಆಚರಣೆ ಪುನರ್ ವರ್ತಿಸುತ್ತದೆ .

ಪ್ರತಿ ಸಲ ಕರ್ನಾಟಕ ರಾಜ್ಯೋತ್ಸವ ಆಚರಣೆಯ ವೇಳೆ ಕೇಳಿ ಬರುವ ಕೂಗು ಒಂದೇ ಕನ್ನಡ ಭಾಷೆಯನ್ನು ಉಳಿಸಿ ಕನ್ನಡ ಭಾಷೆಯನ್ನು ಉಳಿಸಿ

ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಿ ಎಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಕನ್ನಡಿಗರಿಗೆದಾಗಿದೆ …

ಹಾಗಾದರೆ ನಮ್ಮ ಭಾಷೆಯನ್ನು ಸಾಯಿಸುತ್ತಿರುವವರು ಯಾರು?
ಜಾಗತೀಕರಣ ವಾಣಿಜ್ಯಕರಣದಿಂದ ಪರಭಾಷೆಗಳು ಕನ್ನಡದ ಮೇಲೆ ಪ್ರಭಾವ ಬೀರಬಹುದು, ಆದರೆ ಪ್ರಾಚೀನ ಹಾಗೂ ಸಮೃದ್ಧವಾದ ಕನ್ನಡ ನುಡಿ ಇಷ್ಟೊಂದು ಕ್ಷೀಣವಾಗಲು ಕಾರಣಕರ್ತರು ನಾವೇ ಅಲ್ಲವೇ ಎಂಬುದು ಚಿಂತಿಸಬೇಕಾದ ಸಂಗತಿ.

ಭಾಷೆ ಎನ್ನುವುದು ಸಂವಹನ ಮಾಧ್ಯಮ ಮಾತ್ರವಾಗಿರದೆ ಅದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅಂತಹ ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಕನ್ನಡ ನುಡಿ ಇಂದು ಕರ್ನಾಟಕದಲ್ಲಿ ಸೊರಗಿ ಹೋಗುತ್ತದೆ.

ಒಂದು ಕಾಲದಲ್ಲಿ ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಎಂದು ಹಾಡಿದ್ದ ನಾವು ಇಂದು ಕನ್ನಡ sorry I can’t speak kannada ಅನ್ನುವಂತಾಗಿದೆ.

ಹೌದು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಹಾಗೆ ವಿದೇಶಿ ಸಂಸ್ಕೃತಿಯ ಅನುಕರಣೆ ನಮ್ಮ ಭಾಷೆಯನ್ನು ಬಲಿ ತೆಗೆದುಕೊಂಡಿದೆ .ಭೌಗೋಳಿಕ ಪ್ರದೇಶದ ಖಾಸಗಿ ನಮ್ಮ ಭಾಷೆಯ ಮೇಲೆ ಇತರ ಸಂಸ್ಕೃತಿ ಹಾಗೂ ಭಾಷೆ ಪ್ರಭಾವವಿದೆ ಅದು ಮುಂದೆಯೂ ಇರುತ್ತದೆ ಹಾಗಂತ ನಮ್ಮ ಮಾತೃಭಾಷೆ ಕಡೆಗಣಿಸುವುದು ಎಷ್ಟು ಸರಿ ??

ಕಾಲ ಕಳೆದಂತೆ ಭಾಷೆ ಪ್ರಭುದ್ಧತೆಯನ್ನು ಗಳಿಸುತ್ತದೆ ಎನ್ನುವುದಾದರೆ ಕನ್ನಡ ಭಾಷೆಗೆ ಈ ಸ್ಥಿತಿ ಯಾಕೆ ಬಂತು? ಕನ್ನಡ ಭಾಷೆ ಬಗ್ಗೆ ಕೇಳಿರಿಮೆ ಯಾಕೆ? ಅಂದಹಾಗೆ ಕನ್ನಡ ಅನ್ನ ಕೊಡದ ಭಾಷೆಯೇ ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ.

ಕನ್ನಡ ಕಲಿತರೇನು ಸಿಗುತ್ತದೆ ? ಇಂಗ್ಲಿಷ್ ಕಲಿತರೆ ಮುಂದೆ ಸುಲಭವಾಗಿ ಕೆಲಸ ಸಿಗಬಹುದು ಎಂಬ ಆಸೆಯಿಂದ ನಮ್ಮ ಮಕ್ಕಳನ್ನು ಆಂಗ್ಲ ಶಾಲೆಗೆ ಅಟ್ಟುವವರೆ ಜಾಸ್ತಿ,
ಮಕ್ಕಳಿಗೆ ಪಾಠ ತಲೆಗೆ ಹತ್ತದಿದ್ದರೂ ಪರವಾಗಿಲ್ಲ , ನಮ್ಮ ಮಕ್ಕಳು ಇಂಗ್ಲೀಷಲ್ಲಿ ಕಲಿಯಬೇಕು ಎನ್ನುವ ಹಠ ಇಂಗ್ಲಿಷ್ ಶಾಲೆಗೆ ಹೋಗಿ ನಮ್ಮ ಮಕ್ಕಳ ಇಂಗ್ಲೀಷ್ ನಲ್ಲಿ ಮಾತನಾಡಿದರೆ ಹೆತ್ತವರ ಮುಖದಲ್ಲಿ ಧನ್ಯತಭಾವ ಎದ್ದು ಕಾಣುತ್ತದೆ .

ಇನ್ನು ಕೆಲವರು ಕನ್ನಡ ಉಳಿಯಬೇಕಾದರೆ ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿ ಎಂದು ಭಾಷಣ ಬೇಯುತ್ತಾರೆ. ಆದರೆ ಅವರು ಮಕ್ಕಳ ಮಾತ್ರ ಆಂಗ್ಲ ಮಾಧ್ಯಮದಲ್ಲೂ ಓದುವುದು.

ಇನ್ನು ಕೆಲವರು ಕನ್ನಡ ಗೊತ್ತಿದ್ದರೂ ತಮಗೆ ಕನ್ನಡವೇ ಗೊತ್ತಿಲ್ಲ ಎಂಬಂತೆ ನಟಿಸುತ್ತಾರೆ. ಕನ್ನಡದಲ್ಲಿ ಮಾತನಾಡಿದರೆ ತಮಗೆ ಗೌರವ ಸಿಗುವುದಿಲ್ಲ ಎಂಬ ಭಾವನೆಯಿಂದ ಕನ್ನಡವನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ,

ಇನ್ನೊಂದು ಕಡೆ ಕನ್ನಡ ಶಾಲೆಯಲ್ಲಿ ಕಲಿತ ಮಕ್ಕಳ ಪಾಡು ಯಾರಿಗೆ ಅರ್ಥವಾಗುತ್ತದೆ ಹೇಳಿ ? ಹಳ್ಳಿಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಜನೆಗಳಿದ ಮಕ್ಕಳು ಉದ್ಯೋಗವನ್ನು ನಡೆಸಿ ಬೆಂಗಳೂರಿಗೆ ಬಂದಿದ್ದಾರೆ ಎಂದುಕೊಳ್ಳಿ, ಅಲ್ಪಸಂಖ್ಯಾತ ಕನ್ನಡಿಗರು ಬೆಂಗಳೂರಿನಲ್ಲಿ ಇಂಗ್ಲಿಷ್ನಲ್ಲಿ ಕಾರು-ಬಾರು ಅಲ್ಲಿ ಕನ್ನಡ ಮಾತನಾಡಿದರೆ ಹಳ್ಳಿ ಗುಗ್ಗು ಎಂಬ ಪಟ್ಟ ಗ್ಯಾರಂಟಿ,

ಕನ್ನಡ ಮಾತನಾಡಲು ಹಿಂದೇಟು ಯಾಕೆ?

ಸಂವಹನದಿಂದಲೇ  ಭಾಷೆ ಬೆಳೆಯಲು ಸಾಧ್ಯ. ಆದರೆ ಇಂದೇನಾಗುತ್ತಿದೆ, ರಾಜ್ಯದಲ್ಲಿ ಪರಭಾಷೆ ಪರಭಾಷೆ ಏರಿದಿದ್ದಂತೆ ಕನ್ನಡದಲ್ಲಿ ವಿವರಿಸಿರುವ ಸಂಖ್ಯೆ ಕಡಿಮೆ ಆಗುತ್ತಿದೆ . ನಮ್ಮ ನೆರೆ ರಾಜ್ಯಗಳಾದ ತಮಿಳುನಾಡು ಕೇರಳ ಜನರನ್ನು ಗಮನಿಸಿ ಅವರು ಅನ್ಯ ಭಾಷೆಗಳಲ್ಲಿ ಅರ್ಥವಾಗದಿದ್ದರೂ ತಮ್ಮ ಮಾತೃಭಾಷೆಯಲ್ಲಿ ವಿವರಿಸುತ್ತಾರೆ. ತಮಿಳುನಾಡಿನಲ್ಲಿ ಇದ್ದರೆ ಕನ್ನಡಿಗನು ತಮಿಳು ಕಲಿತುಬಿಡುತ್ತಾರೆ. ಆದರೆ ಕರ್ನಾಟಕದಲ್ಲಿ ಕನ್ನಡಿಗರ ಕನ್ನಡ ಕಲಿಯಬೇಕಾದರೆ ತುಂಬಾ ಕಷ್ಟ ಪರಿಣಾಮ ಇತರ ಭಾಷೆಗಳ ಅಧಿಪತ್ಯವನ್ನು ಹೆಚ್ಚಾಗ ತೊಡಗಿದೆ.

ಸಂವಹನ ಅಂತ ಹೇಳುವಾಗ ಅದು ಮಾತಿಗೂ ಕೃತಿಗೂ ಅನ್ವಯವಾಗುತ್ತದೆ ಮಾತು ಕೃತಿ ಇವೆರಡರಲ್ಲಿ ಬಳಕೆಯಾಗುವ ಕನ್ನಡ ಸಾಮಾನ್ಯ ವ್ಯಕ್ತಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಲ್ಲದು ಯಾವುದೇ ಭಾಷೆಯಾಗಲಿ ಆದರೆ ಅದರ ಕಲಿಕೆ ಆರಂಭವಾಗುವುದೇ ಕೇಳುವುದರಿಂದ ನಿರಂತರವಾಗಿ ನಾವು ಆಲಿಸುವ ಭಾಷೆಯನ್ನು ನಾವು ಬೇಗನೆ ಕಲಿತು ಬಿಡುತ್ತೇವೆ. ಆದರೆ ನಾವೀಗ ಕೇಳುವ ಕನ್ನಡವಾದರೂ ಎಂತದ್ದು ಕೆಲವೊಮ್ಮೆ ಇದು ಕನ್ನಡವೇ ಎಂಬ ಪ್ರಶ್ನೆ ಕಾಡುತ್ತದೆ?

ಕನ್ನಡದ ಬಗ್ಗೆ ಮಾತನಾಡಬೇಕಾದರೆ ಇನ್ನು ತುಂಬಾ ಜಾಸ್ತಿ ಇದೆ ಒಟ್ಟಿನಲ್ಲಿ ಹೇಳುವುದೇನೆಂದರೆ, ಜ್ಞಾನ ಸಂಪಾದನೆಗೆ ಯಾವ ಭಾಷೆಯಾದರನಂತೆ, ನಮ್ಮ ನಡೆ-ನುಡಿ ಕನ್ನಡವಾಗಿರಲಿ!! ನಮ್ಮ ನಾಡು ನಮ್ಮ ಸಂಸ್ಕೃತಿ ಹಾಗೂ ನಮ್ಮ ಭಾಷೆಯ ಮೇಲಿರುವ ಈ ಪ್ರೀತಿ ಉತ್ಸಾಹ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ ಅಷ್ಟೇ.

ಜೈ ಕನ್ನಡಾಂಬೆ!

ಮೇನಕಾ ಪಾಟೀಲ್

Don`t copy text!