ವೈಫಲ್ಯಗಳ ಗೈರು ಹಾಜರಿಯಿಂದ ಯಶಸ್ಸು ಅಳೆಯುವದಿಲ್ಲ 

ವೈಫಲ್ಯಗಳ ಗೈರು ಹಾಜರಿಯಿಂದ ಯಶಸ್ಸು ಅಳೆಯುವದಿಲ್ಲ 

ಸಮರದಲ್ಲಿ ಗೆಲುವನ್ನು ಸಾಧಿಸುವುದು ಸಣ್ಣಪುಟ್ಟ ಬಡಿದಾಟದಿಂದಲ್ಲ. ಹಾಗೆಯೇ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟ ಅನೇಕ ಜನರನ್ನು ನೀವು ಭೇಟಿ ಮಾಡಿರಬಹುದು, ನೋಡಿರಬಹುದು ಅವರಲ್ಲಿ ಎಲ್ಲರೂ ಯಶಸ್ಸು ಪಡೆದವರಾಗಿರುವಾದಿಲ್ಲ .

ಅನೇಕರು ಯಶಸ್ಸಿಗಾಗಿ ಜೀವನದಲ್ಲಿ ಹೋರಾಟ ನಡೆಸಿರಬಹುದು, ನಡೆಸಿದವರನ್ನು ನಾವು ನೀವೆಲ್ಲ ನೋಡಿರಲುಬಹುದು, ಅವರೆಲ್ಲ ತಮ್ಮ ಜೀವನವನ್ನು ಕ್ರಮಬದ್ಧವಾಗಿ ರೂಪಿಸಿಕೊಂಡವರೆನಾ?

ಅವರೆಲ್ಲ ಯೋಚಿತವಾಗಿ ಬದುಕಿದವರಲ್ಲ , ಅವರಿಗೆ ಅದೃಷ್ಟ ಹೇಗೆ ಒಲೆದಿದೆಯೋ ಹಾಗೆ ತಮ್ಮ ಜೀವನವನ್ನು ಸವಿಸುತ್ತಾ ಬಂದವರು, ಅವರಲ್ಲಿ ಕೆಲವರು ಇದ್ದಕ್ಕಿದ್ದಂತೆ ಯಶಸ್ವಿನಿಸಿಕೊಂಡಿರಬಹುದು.

ಆದರೆ ಈ ವರ್ಗಕ್ಕೆ ಸೇರಿದ ಬಹುತೇಕ ಮಂದಿ ಹತಾಶೆ ಅಸಮಾಧಾನ ಬೇಸರದಿಂದ ಬಳಲುತ್ತಿರುವವರೆ. ಹಾಗಾದರೆ ನಮ್ಮ ಮನಸ್ಸು ನಾವು ಯಾವುದರ ಮೇಲೆ ಕೇಂದ್ರೀಕರಿಸಬೇಕು?
ನಮಗೆ ಯಶಸ್ಸು ಹೇಗೆ ತಾನೆ ಸಿಕ್ಕಿತ್ತು?

ಯಶಸ್ಸು ತನಗೆ ತಾನೇ ಬಂದತದಲ್ಲ, ಅದು ನಮ್ಮ ಮನೋಭಾವ , ಅಥವಾ ನಡವಳಿಕೆಯ ಪರಿಣಾಮ ಅಷ್ಟೇ.
ಈ ನಡುವಳಿಕೆಯನ್ನು ನಾವು ಗುರುತಿಸಿಕೊಂಡಿದಾಗ ಮಾತ್ರ ಅದರಿಂದ ಯಶಸ್ಸು ಎಂಬುದೇ ಹೊರತು ಅದು ಏಕಾಏಕಿ ಬರುವಂತದ್ದಲ್ಲ, ಇದನ್ನು ನಾವು ಮೊದಲು ತಿಳಿದುಕೊಳ್ಳಬೇಕು.

ನಮಗೇನು ಬೇಕು ಎಂಬ ಬಗ್ಗೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕೆ ಹೊರತು ನಮಗೇನು ಬೇಡ ಎಂಬುದರ ಮೇಲಲ್ಲ

ಹಾಗಾದ್ರೆ ಯಶಸ್ಸು ಅಂದರೇನು?

ಯಶಸ್ಸು ಹಾಗೂ ಸಾಫಲ್ಯದ ಬಗ್ಗೆ ಸಾಕಷ್ಟು ಜನ ಬರೆದಿದ್ದಾರೆ ಜೊತೆಗೆ ಸಂಶೋಧನೆಗಳಾಗಿವೆ. ಇತಿಹಾಸದ ಪುಟಗಳಲ್ಲಿ ಇವುಗಳ ಬಗ್ಗೆ ವಿಫಲವಾಗಿ ಪ್ರಸ್ತಾಪವಾಗಿದೆ . ಯಶಸ್ಸನ್ನು ಸಾಧಿಸಿದವರ ಜೀವನ ಚರಿತ್ರೆ ಲಭ್ಯವಾಗುವಾಗ ಅವರೆಲ್ಲ ಸಾಮಾನ್ಯರಲ್ಲಿ ಸಾಮಾನ್ಯರೆ ಅಂತ ಅನಿಸಿ ಬಿಡುತ್ತದೆ. ಆ ವ್ಯಕ್ತಿಯು ಇತಿಹಾಸದ ಯಾವ ಅವಧಿಯಲ್ಲಿ ಜೀವಿಸಿದರು ಎನ್ನುವದು ಮುಖ್ಯವಲ್ಲ. ಆದರೇ ಹೇಗೆ ಯಶಸ್ಸಿನ ಪಥದತ್ತ ಸಾಗಿದರು ಎನ್ನುವದು ನೋಡಬೇಕಾಗುತ್ತದೆ. ಯಶಸ್ಸು ಕೆಲವೊಂದು ಸುಳಿವುಗಳನ್ನು ಬಿಟ್ಟಿರುತ್ತದೆ . ನಾವು ಅವುಗಳನ್ನು ಗುರುತಿಸಿ ಯಶಸ್ವಿ ವ್ಯಕ್ತಿಗಳ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯ.

ಹಾಗೆ ಎಲ್ಲಾ ವೈಫಲ್ಯಗಳಲ್ಲೂ ಸಾಮಾನ್ಯವಾಗಿರುವಂಥ ಗುಣಗಳೇ ಇರುತ್ತವೆ. ನಾವು ಆ ಗುಣಗಲಿಂದ ದೂರವಿದ್ದರೆ ವೈಫಲ್ಯವು ಇಡಬಹುದು.

ಈ ಯಶಸ್ಸು ಎನ್ನುವುದು ರಹಸ್ಯವೇನಲ್ಲ ಕೆಲವೇ ಕೆಲವು ಸಾಮಾನ್ಯ ತತ್ವಗಳು ನಿರಂತರವಾಗಿ ಅಳವಡಿಸಿಕೊಂಡಿದ್ದರೆ ಈ ಯಶಸ್ಸು ಕೂಡ ತುಂಬಾ ವಿರಳ ಅಂತ ಅನಿಸುತ್ತದೆ.

ಹಾಗಾದರೆ ಯಶಸ್ಸನ್ನು ವ್ಯಾಖ್ಯಾನಿಸುವುದು ಹೇಗೆ?

ಒಬ್ಬ ವ್ಯಕ್ತಿ ಹೇಗೆ ಯಶಸ್ವಿಯಾಗುತ್ತಾನೆ, ಕೆಲವರಿಗೆ ಈ ಯಶಸ್ಸೂ ಅಂದರೆ ಅದು ಸಂಪತ್ತಿರಬಹುದು, ಇನ್ನು ಕೆಲವರಿಗೆ ಉತ್ತಮ ಆರೋಗ್ಯ, ಸ್ಥಾನಮಾನ, ಗೌರವ ,ಕುಟುಂಬ ಸಂತೋಷ, ಮನಶಾಂತಿ, ಇದು ಬೇರೆಯವರಿಗೆ ಬೇರೆ ಬೇರೆ ರೀತಿ ಕಾಣಬಹುದು.

ಆದರೆ

ನನ್ನ ಪ್ರಕಾರ ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿ ಪೂರ್ವಕವಾಗಿ ಸಾಧಿಸುವುದೇ ಪರಮ ಯಶಸ್ಸು ಗುರಿಲದ ಮನುಷ್ಯ ಗೋರಿ ಸೇರುತ್ತಾನೆ, ಎನ್ನುವುದೇ ನನ್ನ ಉದ್ದೇಶ. ಯಶಸ್ಸು ಒಂದು ಸ್ಥಳವಲ್ಲ ನಾವು ಒಂದು ಕಡೆ ತಂಗುವಂತಿಲ್ಲ, ನಮ್ಮ ಗುರಿ ತಲುಪಿದ ಬಳಿಕ ಮತ್ತೊಂದು ಗುರಿ ಇರಬೇಕು, ಹಾಗೆ ಗುರಿ ಮುಟ್ಟಬೇಕು ಅನಂತರ ಮತ್ತೊಂದು ಹೀಗೆ ಮುಂದುವರೆಯುತ್ತಿರಬೇಕು.

ಯಶಸ್ಸಿನ ಮಂತ್ರ ನನಗೆ ತಿಳಿಯದಾದರೂ ಪ್ರತಿಯೊಬ್ಬರನ್ನು ನೀವು ಸಂತೋಷ ಪಡಿಸುವುದು ಮಾತ್ರ ವೈಫಲ್ಯಕ್ಕೆ ಕಾರಣವಾಗಬಹುದು. ಅದಕ್ಕಾಗಿ ಶರಣರು ಹೇಳಿಲ್ಲವೇ ನಿಮ್ಮ ಮನವ ಸಂತೈ ಸಿಕೊಳ್ಳಿ ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ . ಎಲ್ಲರಿಗೂ ಬೇಕಾದ ವ್ಯಕ್ತಿ ಆಗುವುದು ಯಶಸ್ಸಲ್ಲ, ಆಯ್ಕೆಗೆ ಅವಕಾಶ ಇರಲಿ. ಹಲವು ಜನ ವ್ಯಕ್ತಿಗಳನ್ನು ನಾನು ಬಯಸುವುದಿಲ್ಲ. ಅನಪೇಕ್ಷಿತ ಜನರ ಮೆಚ್ಚುಗೆ ಹೊಗಳಿಗಿಂತ ಪೆದ್ದರೂ, ಬುದ್ಧಿ ಹೀನರ ಟೀಕೆ ನಮ್ಮ ಯಶಸ್ಸಿಗೆ ಕಾರಣ ಎಂದು ನಾನು ಭಾವಿಸುತ್ತೇನೆ. ಪ್ರೇರಣೆ ಆಕಾಂಕ್ಷೆ ಹತಾಶೆ ಹೀಗೆ ಪರಿಶ್ರಮದ ಪರಿಣಾಮದಿಂದ ವ್ಯಕ್ತವಾದ ಅದೃಷ್ಟ ಯಶಸ್ಸು ಎಂಬುದು ನನ್ನ ಅಭಿಪ್ರಾಯ.

ಯಶಸ್ಸು ಯಾವತ್ತು ಶ್ರೇಣಿಯಲ್ಲಿರುತ್ತದೆ. ನಾವು ಯಶಸ್ಸಿನ ಹಾದಿಯಲ್ಲಿದ್ದಾಗ ಮಾತ್ರ ನಮಗೆ ಸಂತೋಷದಕ್ಕುತ್ತದೆ . ನಮಗೆ ಬೇಕಾದದ್ದನ್ನು ಪಡೆಯುವುದೇ ಯಶಸ್ಸು. ಆಸ್ತಿ ಅಂತಸ್ತು ಯಶಸ್ಸಲ್ಲ ಇದು ಅದಕ್ಕಿಂತ ಮಿಗಿಲು ನಾನು ಕಂಡ ಪ್ರಕಾರ ಯಶಸ್ವಿಗೆ ತೊಡಕಾದಂತವು ನಮ್ಮ ಅಹಂ, ಸ್ವಯಂ ಪ್ರೇರಣೆ ಕೊರತೆ, ಯೋಜನೆ ರಹಿತ ಗುರಿ,, ಜೀವನ ಬದಲಾವಣೆ ವಿಳಂಬ , ನೀತಿ ಆರ್ಥಿಕ ಭದ್ರತೆ ಬೇಜವಾಬ್ದಾರಿತನ ಆದ್ಯತೆ ನೀಡದಿರುವುದು ಎಲ್ಲಕ್ಕಿಂತ ಹೆಚ್ಚಾಗಿ ಕೌಟುಂಬಿಕ ಜವಾಬ್ದಾರಿ ಇವೆ ನಮ್ಮ ಯಶಸ್ಸಿನ ತೊಡಕುಗಳು ಅಂತ ನನ್ನ ಅನಿಸಿಕೆ….

ಮುಂದುವರೆಯುವುದು ….

_ ಮೇನಕಾ ಪಾಟೀಲ್

Don`t copy text!