ಗುರಿಯಿಲ್ಲದ ಜೀವನ ಹರಿದ ಗಾಳಿಪಟದಂತೆ

ಗುರಿಯಿಲ್ಲದ ಜೀವನ ಹರಿದ ಗಾಳಿಪಟದಂತೆ

ಎಷ್ಟೇ ಕಷ್ಟಪಟ್ಟು ದುಡಿದರು ನಮಗೆ ಬೇಕಾದ ಗುರಿ ಮುಟ್ಟಲು ಆಗುತ್ತಿಲ್ಲ. ಎಷ್ಟೇ ಓದಿದರು ಯಾವ ಪದವಿ ಪಡೆದರು ಉದ್ಯೋಗ ದೊರೆಯುವುದಿಲ್ಲ, ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತದೆ.

ಯಾಕೆ ಹೀಗೆ?? ಎಂದು ಯೋಚಿಸಿದರೆ, ಅವರು ತಮ್ಮ ಜೀವನದಲ್ಲಿ ಏನು ಮಾಡಬೇಕು ಎಂದು ಖಚಿತವಾಗಿ ಇರುವುದಿಲ್ಲ.

ನಮ್ಮ ಜೀವನ ನಮ್ಮ ಇಷ್ಟದ ಪ್ರಕಾರ ಬದುಕಲು ಯೋಚಿಸುವುದು ತುಂಬಾ ಮುಖ್ಯವಾಗಿದೆ, ಇಲ್ಲದಿದ್ದರೆ ಬೇರೆಯವರ, ಗುರಿಗಳು ನನಸಾಗಿಸುವುದಕ್ಕೆ ಕಷ್ಟಪಟ್ಟು ದುಡಿಯಬೇಕಾಗುತ್ತದೆ,

ಅದರಲ್ಲೂ ಅಯೋಗ್ಯರಂತೆ ಕಾಣುತ್ತಾ ಅವಮಾನ ಸಹಿಸಿಕೊಳ್ಳಬೇಕಾಗುತ್ತದೆ

ಅಲ್ಲಿ ಇಲ್ಲಿ ಎಲ್ಲೆಲ್ಲೋ ಅಲ್ಲಿದಾಡಿ ಸಮಯ ಕಳೆದು ದುಃಖ ನೋವುಗಳಿಗೆ ಬಲಿಯಾಗಿ ನಮ್ಮ ಜೀವನ ನರಕವಾಗಿಸಬೇಕಾಗುತ್ತದೆ,

ಇದಕ್ಕೆಲ್ಲ ಕಾರಣ ಜೀವನದಲ್ಲಿ ಗುರಿ ಇಲ್ಲದಿರುವುದು .

ಹಾಗಾದರೆ ನಮ್ಮ ಜೀವನದ ಉದ್ದೇಶ ಏನು?

ಹಲವಾರು ರೀತಿಯ ಬಯಕೆಗಳಿರುತ್ತವೆ, ಯಶಸ್ಸಿನ ಬಯಕೆ ಸುಖ ಬಲಿ ಕೊಟ್ಟಾದರೂ ಕರ್ತವ್ಯ ನಿಭಾಯಿಸುವ ಬಯಕೆ, ಹೀಗೆ ಒಂದು ನಿರ್ದಿಷ್ಟ ಉದ್ದೇಶ ಈಡೇರಿಸುವ ಬಯಕೆ. ಹೀಗೆ ನಮ್ಮ ಆತ್ಮ ಸಾಕ್ಷಿಯನ್ನು ಬಲಿಕೊಟ್ಟು ಇಡೀ ಪ್ರಪಂಚವನ್ನು ಜಯಿಸಿದರೆ ಅದರಿಂದ ಏನು ಪ್ರಯೋಜನವಾದಿತ್ತು??

ಉದ್ದೇಶ ರಹಿತ ಜೀವನವೆಂದರೆ ಜೀವಂತ ಸಾವು

ನಮ್ಮ ಜೀವನದ ಉದ್ದೇಶವೇನು? ಅಸಲಿಗೆ ಏನಾದರೂ ಉದ್ದೇಶವಿದೆಯೇ? ಉದ್ದೇಶ ಉದ್ವೇಗಳನ್ನು ಉಂಟುಮಾಡುತ್ತದೆಯೇ? ಉದ್ದೇಶವನ್ನು ಸೃಷ್ಟಿಸಿ, ಅಥವಾ ಹುಡುಕಿ ನಂತರ ಅದನ್ನು ನಿಷ್ಠೆಯಿಂದ ಸಾಧಿಸಬೇಕೇ ಹೀಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ.

ಪ್ರತಿನಿತ್ಯ ನಮ್ಮನ್ನು ನಾವು ಒಂದು ಪ್ರಶ್ನೆ ಕೇಳಿಕೊಳ್ಳೋಣ.
ನಮ್ಮ ಜೀವನದ ಉದ್ದೇಶ ಸಾಧನೆಗೆ ಸ್ವಲ್ಪವಾದರೂ ಯೋಚಿಸುತ್ತೇವೆಯೆ ???

ನಾವು ಜೀವಿಸಲು ಒಂದು ಉತ್ತಮ ತಾಣವನ್ನಾಗಿ ಮಾಡುತ್ತಿದ್ದೇವೆ, ಇದರ ಉತ್ತರ ಇಲ್ಲ ಅಂತಾದರೆ ನಾವು ನಮ್ಮ ಜೀವನದ ಒಂದು ದಿನವನ್ನು ವ್ಯರ್ಥವಾಗಿ ಕಳೆದಿದ್ದೇವೆ ಎಂದು ಅರ್ಥ,

ನಮ್ಮ ಕೊಡುಗೆಗೆ ಅನುಗುಣವಾಗಿ ಜೀವನ ನಮಗೆ ಪ್ರತಿಫಲ ನೀಡುತ್ತದೆ, ಹೌದು! ಇದು ಅಕ್ಷರಸಹ ಸತ್ಯ ಕೂಡ.

ಜೀವನದಲ್ಲಿ ಎಷ್ಟು ಮುಂಚಿತವಾಗಿ ಒಂದು ಉದ್ದೇಶ ಕಂಡುಕೊಳ್ಳುತ್ತೇವೋ ಅಷ್ಟು ಒಳ್ಳೇದು , ಕೆಲವೊಮ್ಮೆ ಮಹತ್ತರ ಜೀವನ ಉದ್ದೇಶ ಹುಡುಕುವುದೇ ಒಂದು ದೊಡ್ಡ ಸವಾಲವಾಗಿ ಎದುರಿಗೆ ನಿಂತ ಕೊಳ್ಳುತ್ತದೆ, ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ ಕುಟುಂಬಗಳು ಸಂಘಟನೆಗಳು ಮತ್ತು ಉದ್ದೇಶ ಸ್ಪಷ್ಟವಾಗಿ ನಡುವಿನ ಆಂತರಿಕ ಸಂಘರ್ಷ ತಂತಾನೆ ಸಮತೋಲನಕ್ಕೆ ಬರುತ್ತದೆ,

ಆಗ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದು ಸ್ಪಷ್ಟವಾಗುತ್ತದೆ.

ಇದರಿಂದ ಅಲ್ಪಾವಧಿಯಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವುದನ್ನು ನಿಲ್ಲಿಸುತ್ತೇವೆ. ಜಾಣತನ ಮತ್ತು ಪ್ರಬುದ್ಧತೆಯಿಂದ ಪ್ರಮುಖ ವಿಷಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ನಮಗೆ ನೆರವಾಗುತ್ತದೆ,

ನಾನು ಶಾಶ್ವತವಾಗಿ ಜೀವಿಸಿರುತ್ತೇನೆ, ಎಂದುಕೊಂಡು ಅಧ್ಯಯನ ನಡೆಸಬೇಕು, ನಾನು ನಾಳೆಯ ಸಾಯುತ್ತೇನೆ ಎಂದುಕೊಂಡು ಬದುಕಬೇಕಂತೆ.

ಇತರರಿಗೆ ಸಹಾಯ ಮಾಡದಿದ್ದರೆ ನಮಗೆ ನಾವು ಸಹಾಯ ಮಾಡಿಕೊಳ್ಳುವ ಸಾಧ್ಯವೆ?? ಎನ್ನುವ ಪ್ರಶ್ನೆ ನಮ್ಮ ನಾವು ಕೇಳಿದರೆ ಜೀವನದ ಉದ್ದೇಶ ಕೂಡ ಅರ್ಥ ಆಗ್ಬಹುದು.

ಸಾಧಾರಣ ಮಟ್ಟದ ಜೀವನದಿಂದ ತೃಪ್ತಿ ಹೊಂದಿರುವ ಒಬ್ಬ ಮನುಷ್ಯನಾದರೂ ನನಗೆ ತೋರಿಸಿ, ನಾನು ನಿಮಗೆ ಸೋಲುವುದಕ್ಕೆ ಒಂದೇ ಬದುಕಿರುವವರನ್ನು ತೋರಿಸುತ್ತೇನೆ, ಎಂದು ಜನರೇಟ್ ಕೋಲ್ ಹೇಳಿದರಂತೆ.

ಜೀವನ ಎಂದರೆ ಪ್ರೇಕ್ಷಕರು ನೋಡಿ ಆನಂದಿಸುವಂತಹ ಕ್ರೀಡೆಯಲ್ಲ, ಅಲ್ಲಿ ಏನು ನಡೆಯುತ್ತಿದೆ ಎಂದು ಕೈಕಟ್ಟಿ ಕುಳಿತು ನೋಡಲು ಸಾಧ್ಯವಿಲ್ಲ ಜೀವನವನ್ನು ಅರ್ಥಪೂರ್ಣಗೊಳಿಸಬೇಕಾದರೆ ನಾವು ಅದಕ್ಕೊಂದು ಉದ್ದೇಶ ಕಂಡುಕೊಳ್ಳಬೇಕು,

ಹಾಗಾದ್ರೆ ಉದ್ದೇಶದೊಂದಿಗೆ ಹೇಗೆ ಬದುಕುವುದು?

ಒಂದಲ್ಲ ಒಂದು ಉದ್ದೇಶಕ್ಕಾಗಿ ನಾವು ಈ ಭೂಮಿ ಮೇಲೆ ಬದುಕಿದ್ದೇವೆ , ನಾವು ದೊಡ್ಡ ಜೀವನದ ಒಂದು ಚಿಕ್ಕ ಭಾಗವಷ್ಟೇ , ನಾವು ಏಕೆ ಈ ಭೂಮಿ ಮೇಲಿದ್ದೇವೆ ? ಎಂದು ಅಲ್ಬರ್ಟ್ ಐನ್ಸ್ಟೀನ್ ಅವರನ್ನು ಯಾರೂ ಒಬ್ಬರು ಕೇಳಿದರಂತೆ ಆಗ ಅವರು “ ಪ್ರಪಂಚವೆಂಬುದು ಒಂದು ಆಕಸ್ಮಿಕವಾದರೆ ನಾವೆಲ್ಲರೂ ಆಕಸ್ಮಿಕಗಳೇ , ಆದರೆ ಈ ಪ್ರಪಂಚಕ್ಕೆ ಏನಾದರೂ ಅರ್ಥವಿದೆ ಎಂದಾದರೆ ನಮಗೂ ಕೂಡ ಅರ್ಥವಿದೆ ಎಂದು ಉತ್ತರಿಸಿದರಂತೆ

ಹಾಗಾದ್ರೆ ನಮ್ಮ ಜೀವನದ ಗುರಿ ಏನಾಗಿರಬೇಕು?

ಜೀವನ ಸ್ಪೂರ್ತಿಯ ಮೂಲವೇ ಗುರಿ ಎನ್ನುವುದು ವ್ಯಕ್ತಿ ಅಥವಾ ವ್ಯವಸ್ಥೆ ಊಹಿಸುವ ಯೋಜನೆ ಮತ್ತು ಕೆಲವು ಪ್ರೀತಿಯ ಊಹೆ ಅಭಿವೃದ್ಧಿಯಲ್ಲಿ ವೈಯಕ್ತಿಕ ಅಥವಾ ಸಾಂಸ್ಥಿಕ ಅಪೇಕ್ಷಿತ ಅಂತಿಮ ಹಂತವನ್ನು ಸಾಧಿಸಲು ಬದ್ಧರಾಗಿರುವಂತದ್ದು ಭವಿಷ್ಯಕ್ಕಾಗಿ ನಾವು ಮಾಡುವ ಯಾವುದೇ ಯೋಜನೆ ಗು. ಸಾಮಾನ್ಯವಾಗಿ ಉತ್ಸಾಹ ಕ್ರಿಯಾಶೀಲತೆ ಕೂಡ ಗುರಿ ಇರುವ ಸಾಮರ್ಥ್ಯರಿಗೆ ಮಾತ್ರ ಇರುತ್ತದೆ,

ಒಬ್ಬ ಸಾಮಾನ್ಯನು ಅಸಾಮಾನ್ಯ ನಾಗಬಲ್ಲ ಎಂಬುದು ಅವರ ಉದ್ದೇಶದಿಂದ ಸಾಬೀತುಪಡಿಸುತ್ತದೆ. ಹಾಗಾಗಿ ಜೀವನದಲ್ಲೂ ಯಶಸ್ಸನ್ನು ಕಂಡುಕೊಳ್ಳಬೇಕಾದರೆ ನಮ್ಮ ನಿರ್ದಿಷ್ಟ ಗುರಿ ಇರಬೇಕು ನಮ್ಮಲ್ಲಿರುವ ಕೌಶಲ್ಯ ಆಸಕ್ತಿಗೆ ಹೊಂದಾಣಿಕೆ ಆಗುವಂತಿರಬೇಕು, ನಾವು ಎಲ್ಲಿಯವರೆಗೆ ಸಾಧಿಸುತ್ತೇವೆ ಎಂಬುದು ಮೊದಲ ನಿಗದಿಪಡಿಸಿ ಗುರಿಗಳನ್ನು ತಲುಪಲು ಸಣ್ಣ ಸಣ್ಣ ಕೆಲಸದಿಂದ ಪ್ರಾರಂಭಿಸಬೇಕು,

ಒಂದು ಮನೆ ಕಟ್ಟಲು ನಾವು ಎಷ್ಟೊಂದು ಯೋಜನೆಗಳೆಲ್ಲ ಹಾಕುತ್ತೇವೆ, ಆದರೆ ಜೀವನವನ್ನು ನಿರ್ಮಿಸಲು ಯಾಕೆ ಯಾವುದೇ ಗುರಿಯನ್ನು ನಾವು ಹಾಕುವುದಿಲ್ಲ, ಎಂಬ ಪ್ರಶ್ನೆ ನಮ್ಮನ್ನು ನಾವು ಕೇಳಿಕೊಳ್ಳಬೇಕು

ಗುರಿಯಿರದ ಜೀವನ ಸೂತ್ರ ಹರಿದಾಗ ಗಾಳಿಪಟದಂತೆ ಗುರಿ ಇರಲಿ ಜೀವನದಲ್ಲಿ ಫಲ ಏನೇ ಬರಲಿ ಆದರೆ ನಮ್ಮ ಚಿತ್ತ ಗುರಿಯತ್ತ ಇದ್ದರೆ, ಸ್ವಭಾವವನ್ನು ಮೀರಿಸಿ ಹೊಸ ಎತ್ತರಕ್ಕೆ ತಲುಪುತ್ತೇವೆ, ಎನ್ನುವುದರಲ್ಲಿ ಸಂಶಯವಿಲ್ಲ

ಜಗತ್ತನ್ನು ಉತ್ತಮ ಸ್ಥಳವಾಗಿಸಲು ಪ್ರತಿಯೊಬ್ಬರು ಗುರಿ ಹೊಂದಲಿ…

ಮುಂದುವರೆಯುವುದು…..

_ ಮೇನಕಾ ಪಾಟೀಲ್

Don`t copy text!