ವ್ಯಕ್ತಿತ್ವ ವಿಕಸನ ಮಾಲೆ
ಗೊಡ್ಡು ಹರಟೆ ಬಿಟ್ಟು ಬದ್ಧತೆ ಕಾಪಾಡಿಕೊಳ್ಳೋಣ
ಜವಬ್ದಾರಿ ಇಲ್ಲದ ಮನುಷ್ಯರು ಯಾವಾಗಲೂ ಇತರರ ಬಗ್ಗೆ ಮಾತನಾಡುತ್ತಾರೆ, ಸಾಧಾರಣ ವ್ಯಕ್ತಿಗಳು ವಿಷಯದ ಬಗ್ಗೆ! ಅದೇ ರೀತಿ ಮಹಾನ್ ವ್ಯಕ್ತಿಗಳು ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆ. ಇದು ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಕಿವಿಮಾತು.
ವ್ಯಕ್ತಿತ್ವಕ್ಕೆ ಅಪಮಾನ ಮಾಡುವಾಗ ಹಾಗೂ ಧಕ್ಕೆ ತರುವ ಕೆಲಸವನ್ನು ಗಾಸಿಪ್ ಮಾಡುತ್ತದೆ ಯಾರು ಈ ಗಾಸಿಪ್‌ಗಳನ್ನು ಕೇಳುತ್ತಾರೋ ಅವರು ಗಾಸಿಪ್ ಹರಡುವವರು ಮಾಡುವಷ್ಟೇ ತಪ್ಪನ್ನೆ ಮಾಡುತ್ತಾರೆ.
ನೆನಪಿರಲಿ , ಯಾರ ವಿರುದ್ಧ ನೀವು ವದಂತಿ ಹರಡುತ್ತಿರೋ ನಿಮ್ಮ ಅನುಭವ ಸ್ಥಿತಿಯಲ್ಲಿ ನಿಮ್ಮ ಬಗ್ಗೆಯೂ ಅಂಥವರು ವದಂತಿ ಹಬ್ಬಿಸಬಹುದು ಹುಷಾರ್!
ಗಾಸಿಪ್ ಅಥವಾ ಗೊಡ್ಡು ಹರಟೆ ಮತ್ತು ಸುಳ್ಳು ಎರಡು ತೀರ ಹತ್ತಿರದ ಸಂಬಂಧ ಹೊಂದಿದೆ. ಯಾಕೆಂದರೆ ಬಿಡುವಿದ್ದಾಗ ಅದು ಪುನರಾವರ್ತನೆಯಾಗುತ್ತಿರುತ್ತದೆ . ತನ್ನ ಸ್ವಂತ ಕೆಲಸ ಕಾರ್ಯಗಳ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಇದಕ್ಕೆ ಸ್ವಂತ ಮಾಡಲು ಕೆಲಸ ಇರುವುದಿಲ್ಲ. ಗಾಸಿಪ್ ಹರಡುವವರು ಯಾವಾಗಲೂ ಯಾರು ಹೇಳಿರುತ್ತರೂ ಹಾಗೆಯೇ ಮುಂದೆ ಹರಿದುಬಿಡುತ್ತಾರೆ.
ಗಾಸಿಪ್ ಹರಡುವವರು ಸಾಮಾನ್ಯವಾಗಿ ತಮ್ಮ ಮಾತುಗಳಲ್ಲೇ ಸಿಕ್ಕಿಬೀಳುತ್ತಾರೆ. ಇದು ಎಷ್ಟರಮಟ್ಟಿಗೆ ಒಳ್ಳೆಯದು ವಿಚಾರಿಸಿ. ಇಂಥದ್ದು ನ್ಯಾಯಕ್ಕೆ ಗೌರವ ಕೊಡುವುದಿಲ್ಲ.
ಈ ಗಾಸಿಪ್ ಎಷ್ಟು ಹೃದಯಗಳನ್ನು ಒಡೆಯುತ್ತದೆ . ಬದುಕನ್ನು ಅದು ಹಾಳುಮಾಡುತ್ತದೆ. ಪ್ರತಿಷ್ಠೆ ಗೌರವಗಳನ್ನು ಮಣ್ಣು ಪಾಲು ಮಾಡುತ್ತದೆ . ಎಂತೆಂಥ ದೊಡ್ಡ ಸರ್ಕಾರಗಳು ಉರುಳಿಸುತ್ತದೆ. ಎಷ್ಟು ಮದುವೆಗಳನ್ನ ಮುರಿಯುತ್ತದೆ. ಬರುವ ನಾಳೆಯ ಒಳ್ಳೆಯ ದಿನದ ಭವಿಷ್ಯ ಹಾಳು ಮಾಡುತ್ತದೆ. ಮುಗ್ಧರು ದುಃಖಿಗಳಾಗುತ್ತಾರೆ. ಹೃದಯಕ್ಕೆ ನೋವು ಕೊಡುವ ಜೊತೆಗೆ ನಿದ್ದೆ ಹಾಳುಮಾಡುತ್ತದೆ.
ಹಾಗಾದ್ರೆ ನೀವು ಗಾಸಿಪ್ ಮಾಡುವವರ ಪಟ್ಟಿಯಲ್ಲಿ ಇದ್ರೆ ಈ ಕೆಲವೊಂದು ವಿಷಯಗಳು ನಿಮ್ಮನ್ನು ನೀವು ಕೇಳಿಕೊಳ್ಳಿ
ಅದು ಯಾವ ವಿಷಯವಿದೆ ಎಂದು ಮೊದಲು ತಿಳಿದುಕೊಳ್ಳಿ, ದಯಾಪರ ಸೌಮ್ಯವಾಗಿದೆಯೇ? ಇದು ನಮಗೆ ಅಗತ್ಯವಿದೆಯೇ? ನಾನು ಇತರರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಹೇಳುತ್ತಿದ್ದೇನೆಯೆ ? ಯಾರಿಗೂ ಇದನ್ನು ಹೇಳಬೇಡ ಎಂದಾದರೆ ಮತ್ತೇಕೆ ನಾನು ಆರಂಭಿಸುತ್ತಿರುವೆ ? ಎಲ್ಲಕ್ಕಿಂತ ಹೆಚ್ಚಾಗಿ ಇದು ಸತ್ಯವಾಗಿದೆ? ಎಂದು ನಿಮ್ಮನ್ನು ನೀವು ಚಿಂತನೆ ಮಾಡಿ ಕೊಳ್ಳಿ.
ದೊಡ್ಡ ಬಾಯಿಗಳಿಂದಲೇ ಸಣ್ಣ ಮಾತು ಹೊರ ಬರುತ್ತವೆ ಎಂಬುದು ನೆನಪಿನಲ್ಲಿಡಬೇಕು
ಹಾಗಾದ್ರೆ ಇದನ್ನ ಬದ್ಧತೆ ಯಾಗಿ ಹೇಗೆ ಪರಿವರ್ತಿಸುವುದು?
ಈ ವಾಗ್ದಾನ ಈ ಗಾಸಿಪ್ ಬದ್ಧತೆಗಳ ನಡುವಿನ ವ್ಯತ್ಯಾಸ ಉದ್ದೇಶಗಳೇನು ?
ಇದು ಪೂರ್ಣಗೊಳಿಸಲು ಯಾವುದೇ ಅಡೆತಡೆ ಇದ್ದರೂ ಖಚಿತವಾಗಿ ಮಾಡಿ ತೀರ್ವ ಪ್ರಮಾಣವಿರಬೇಕು. ಏನೇ ಬರಲಿ ನಾನು ಅನೈತಿಕ ಹಾಗೂ ಅಕ್ರಮ ಕೆಲಸಗಳಿಂದ ದೂರವಿರುತ್ತೇನೆ. ಎಂದು ನಮ್ಮಲ್ಲಿ ನಾವು ದೊಡ್ಡ ವಿಶ್ವಾಸ ಹೊಂದಿರಬೇಕು.
ಜೊತೆಗೆ ಈ ಬದ್ಧತೆ ಪ್ರಾಮಾಣಿಕತೆ ಎನ್ನುವುದು ನಮ್ಮ ವ್ಯಕ್ತಿತ್ವದಿಂದ ಹೊರಹೊಮ್ಮುತ್ತದೆ. ಎಂದು ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಳ್ಳಬೇಕು.
ಯಾರೊಬ್ಬರೂ ಇನ್ನೊಬ್ಬರೊಂದಿಗೆ ಯಾವುದೇ ಸಂದರ್ಭದಲ್ಲಿ ಬದ್ಧತೆಯ ಮಾತು ಕೊಟ್ಟಿದ್ದರೆ ಈ ಪ್ರಪಂಚ ಹೇಗಿರುತ್ತದೆ ಎಂದು ಉಳಿಸಿಕೊಳ್ಳಬೇಕು.
ಈ ಗಾಸಿಪ್ ಹರಡುವ ಕೆಲಸದಲ್ಲಿ ಸಂಬಂಧಗಳು ಯಾವುದಿದೆ ? ಈ ಸಂಬಂಧ ಏನಾಗುತ್ತದೆ? ಗಂಡ ಹೆಂಡತಿ, ಮಾಲೀಕ ಕೆಲಸಗಾರ, ಪೋಷಕ ಮಕ್ಕಳು , ಗ್ರಾಹಕ ಮಾರಾಟಗಾರ, ಜೊತೆಗೆ ನಮ್ಮ ಹೆಣ್ಣುಮಕ್ಕಳಿನ ಕಿಟ್ಟಿ ಪಾರ್ಟಿಗಳು, ಇಲ್ಲವೇ ಎಲ್ಲಕಿಂತ ಮುಖ್ಯ ಮನೆಯ ಅಕ್ಕ ಪಕ್ಕದಲ್ಲಿದ್ದ ಹೆಣ್ಣುಮಕ್ಕಳು ಹೀಗೆ ನೋಡಿ ತೀರ್ಮಾನಿಸಬೇಕು.
ಬದ್ಧರಾಗಿಲ್ಲದ ಸಂಬಂಧಗಳು ಯಾವಾಗಲೂ ಟೊಳ್ಳು ಮತ್ತು ಅನುಪಯುಕ್ತವಾಗಿರುತ್ತದೆ
ಹಾಗೂ ಕೇವಲ ಅನುಕೂಲತೆ ತಕ್ಕಂತೆ ತಾತ್ಕಾಲಿಕ , ಅದಕ್ಕಾಗಿ ನಮ್ಮಲ್ಲಿ ಬದ್ಧತೆ ಇಲ್ಲದೆ ಯಾವುದು ಸಾಧ್ಯವಿಲ್ಲ .
ಬದ್ಧತೆ ಹೇಳುತ್ತದೆ ಏನನ್ನು ಹೇಳಲು ಆಗದಂತಹ ಸಂದರ್ಭದಲ್ಲಿ ಕೂಡ, ನನ್ನ ಮೇಲೆ ನೀನು ನಿರೀಕ್ಷೆ ಇಟ್ಟಿಕೊಳ್ಳಬಹುದು , ಅನೇಕ ಜನಬದ್ಧತೆಯನ್ನು ಬಂಧನದೊಂದಿಗೆ ಗೊಂದಲಕ್ಕೀಡು ಮಾಡಿಕೊಳ್ಳುತ್ತಾರೆ , ಈ ಬದ್ಧತೆ ಎಂದಿಗೂ ನಮ್ಮ ಸ್ವಾತಂತ್ರ ಹರಣ ಮಾಡುವುದಿಲ್ಲ. ಬದಲಿಗೆ ಅದು ಭದ್ರತೆಯನ್ನು ನೀಡುತ್ತದೆ, ನಾವು ನಮ್ಮ ಮೌಲ್ಯಗಳಿಗೆ ಬದ್ಧರಾಗಿದ್ದರೆ. ಅದಕ್ಕೆ ನಾವು ಮೊಟ್ಟಮೊದಲು ಮಹತ್ವ ಕೊಡಬೇಕು. ಇದು ಎಂದಿಗೂ ಅನುಭವದ ಸಂಬಂಧ ಉಳಿಸುತ್ತಾ ಹೋಗುತ್ತದೆ , ವಿನಹ ವ್ಯಕ್ತಿಯ ವ್ಯಕ್ತಿತ್ವ ಹಾಳು ಮಾಡುವುದಿಲ್ಲ. ಹಾಗಾಗಿ ನಮ್ಮಲ್ಲಿರತಕ್ಕಂತಹ ಗಾಸಿಪ್ ಮೊದಲು ತ್ಯಜಿಸಬೇಕು.
ಮುಂದುವರೆಯುವುದು….
_ ಮೇನಕಾ ಪಾಟೀಲ್