ಉತ್ತಮ ಆರೋಗ್ಯಕ್ಕಾಗಿ ಮನೆ ಮದ್ದು ಬಳಸಿ -ಡಾ ನಿರ್ಮಲಾ ಕೆಳಮನಿ
e-ಸುದ್ದಿ ಲಿಂಗಸುಗೂರು
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಲಿಂಗಸೂರು ತಾಲೂಕು ಮಟ್ಟದ ಮಹಿಳೆಯರಿಗಾಗಿ ಮನೆಮದ್ದು ಹಾಗೂ ಮಾನವೀಯ ಸಂಬಂಧಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಗುರುವಾರ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕರಾದ ಈರೇಶ ಇಲ್ಲೂರು ಇವರು ಮಾತನಾಡಿದರು .
ಕಾರ್ಯಕ್ರಮವನ್ನು ಉದ್ದೇಶಿಸಿ ವಿಕಾಸ ಅಕಾಡೆಮಿ ತಾಲೂಕು ಸಂಚಾಲಕರಾದ ಗವಿಸಿದ್ದಪ್ಪ ಸಾಹುಕಾರ್ ಅವರು ಮಾತನಾಡಿದರು.
ಆಯುರ್ವೇದ ತಜ್ಞರಾದ ಮುರುಳಿಧರ ಗುಂಗುರುಮಳೆ ಅವರು ಮಾತನಾಡಿ ನಮಗೆ ಬರುವ ಸಣ್ಣ ಪುಟ್ಟ ಖಾಯಿಲೆಗಳಿಗೆ ಆಸ್ಪತ್ರೆಗೆ ತೆರಳದೆ ನಮ್ಮ ಮನೆಯ ಪರಿಸರದ ಸುತ್ತಮುತ್ತಲೂ ಇರುವಂತಹ ಅನೇಕ ತೆರನಾದ ಗಿಡಮೂಲಿಕೆಗಳಿಂದ ಉಪಯೋಗವಾಗುವ ಔಷದಿಯ ಗುಣಗಳ ಬಗ್ಗೆ ಸುಧಿರ್ಗವಾಗಿ ವಿವರಿಸಿ ಅವುಗಳ ಸದ್ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇನ್ನೊರ್ವ ಮುಖ್ಯ ಉಪನ್ಯಾಸಕಿಯರಾದ ಕಲಬುರ್ಗಿಯ ಹಿಂಗುಲಾಂಬಿಕ ಆಯುರ್ವೇದಿಕ್ ಕಾಲೇಜಿನ ಡಾ. ನಿರ್ಮಲ ಕೆಳಮನೆ ಮಾತನಾಡಿ ಸಣ್ಣ ಪುಟ್ಟ ಖಾಯಿಲೆಗಳಿಗೆ ಆಸ್ಪತ್ರೆಗೆ ಹೋಗದೆ ಅಡಿಗೆ ಮನೆಯಲ್ಲಿರುವ ಅನೇಕ ಮನೆ ಮದ್ದುಗಳನ್ನು ಉಪಯೋಗಿಸುವುದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದರು.
ಸಣ್ಣ ಪುಟ್ಟ ಖಾಯಿಲೆಗಳಾದ ಕೆಮ್ಮು ನೆಗಡಿ ತಲೆನೋವು ಎಸಿಡಿಯಂತಹ ಖಾಯಿಲೆಗಳನ್ನು ನಿವಾರಿಸಿಕೊಳ್ಳಲು ಆಸ್ಪತ್ರೆಗೆ ತೆರಳಿ ಹೆಚ್ಚಿನ ಹಣ ಖರ್ಚು ಮಾಡದೆ ಮನೆಯಲ್ಲಿ ಉಚಿತವಾಗಿ ಸಿಗುವ ಮನೆಮದ್ದುಗಳಾದ ಅರಿಶಿಣ ,ಬೆಳ್ಳುಳ್ಳಿ, ಜೀರಿಗೆ ಅಲ್ಲ ,ಸುಂಟಿ ಸೇರಿದಂತೆ ವಿವಿಧ ಬಗೆಯ ವಸ್ತುಗಳ ಉಪಯೋಗಗಳ ಕುರಿತು ತಿಳಿಸಿ ಅದರ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು .
ವಿಶೇಷವಾಗಿ ಮಹಿಳೆಯರಿಗೆ ಮಾನವಿಯ ಸಂಬಂಧಗಳ ಕುರಿತು ಪ್ರತಿನಿತ್ಯ ಜೀವನದಲ್ಲಿ ಪರಸ್ಪರ ಹೇಗೆ ಹೊಂದಾಣಿಕೆಯಿಂದ ಬಾಳಬೇಕು ಎಂಬುದರ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ವೀರೇಶ ಬಲ್ಲೂರು ದಾವಣಗೇರೆ , ಕಲ್ಯಾಣ ಕರ್ನಾಟಕ ಸಂಘದ ತಾಲೂಕು ಸಂಯೋಜಕರು ,ನಗರ ಮತ್ತು ಗ್ರಾಮಾಂತರ ಪ್ರದೇಶದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.