ದೈಹಿಕವಾಗಿ ಮನುಷ್ಯ ಜಗತ್ತಿನಲ್ಲಿ ಉಳಿದೆಲ್ಲ ಜೀವಿಗಳಿಗಿಂತ ಸರ್ವಶಕ್ತ

ವ್ಯಕ್ತಿತ್ವ ವಿಕಸನ‌ ಮಾಲೆ

ದೈಹಿಕವಾಗಿ ಮನುಷ್ಯ ಜಗತ್ತಿನಲ್ಲಿ ಉಳಿದೆಲ್ಲ ಜೀವಿಗಳಿಗಿಂತ ಸರ್ವಶಕ್ತ

ಮನುಷ್ಯ ಪಕ್ಷಿಯಂತೆ ಹಾರಲಾರ, ಚಿರತೆಯಂತೆ ಓಡಲಾರನು, ಮೊಸಳೆಯಂತೆ ಈಜಲಾರನು, ಮಂಗನಂತೆ ಜಿಗಿಯಬಲ್ಲನು, ಆತನಿಗೆ ಹದ್ದಿನಂತಹ ಕಣ್ಣುಗಳು ಇಲ್ಲ, ಕಾಡು ಬೆಕ್ಕಿನಂತಹ ಹಲ್ಲುಗಳಿಲ್ಲ, ಆದರೆ, ನಿಸರ್ಗ ಮನುಷ್ಯನ ಬಗ್ಗೆ ಕೂಡ ಕರುಣೆ ಹಾಗೂ ರಿಯಾಯಿತಿಯನ್ನು ತೋರಿದೆ.

ಮನುಷ್ಯನಿಗೆ ಈ ನಿಸರ್ಗ ವಿಚಾರ ಶಕ್ತಿ ಎಂಬ ಮಹಾನ್ ಕೊಡುಗೆಯನ್ನು ನೀಡಿದೆ, ಮನುಷ್ಯ ತನಗೆ ಬೇಕಾದ ಪರಿಸರ ವಾತಾವರಣವನ್ನು ನಿರ್ಮಿಸಿಕೊಳ್ಳಬಲ್ಲ . ಆದರೆ ಅನ್ಯಜೀವಿಗಳು ತಮ್ಮ ಪರಿಸರ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ ದುರ್ದೈವೆಂದರೆ ಕೇವಲ ಕೆಲವೇ ಕೆಲವು ಜನರು ಮಾತ್ರ ತಮಗೆ ಅನಾಯಾಸವಾಗಿ ಬಂದಿರುವ ಈ ಮಹಾನ್ ಕಾಣಿಕೆ ವಿಚಾರ ಶಕ್ತಿಯನ್ನು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

*To live is very different from just knowing real knowledge has to become life , knowing has to become being*

ಜೀವನವೆಂಬುದು ಒಂದು ಹೋಟೆಲ್ ಇದ್ದ ಹಾಗೆ , ನೀವು ನಿಮ್ಮ ಊಟದ ತಟ್ಟೆ ತೆಗೆದುಕೊಂಡು ನಮಗೆ ಬೇಕಾದುದನ್ನ ಪಡಿಸಿಕೊಂಡು ಬೇರೆ ಕಡೆ ಬಿಲ್ ಕಟ್ಟುವುದು ನೀವು ಹಣ ಕೊಡುವವರೆಗೆ ನಿಮಗೆ ಬೇಕಾದದ್ದು ಸಿಗುತ್ತದೆ.

ಅದೇ ಊಟದ ವ್ಯವಸ್ಥೆ ಇರುವ ಕಡೆ, ನಿಮಗೆ ಬೇಕಾದುದನ್ನ ಬಡಿಸುವವರು ಬರುತ್ತಾರೆ. ನೀವು ಯಾವತ್ತೂ ಕಾಯುತ್ತಲೇ ಇರಬೇಕಾಗುತ್ತದೆ,
ಈ ಜೀವನವೆಂದರೆ ಹಾಗೆ ಆಯ್ಕೆ ಮಾಡಿಕೊಂಡು ಹೋಗಬೇಕಾಗುತ್ತದೆ, ನಾವು ವಿಪರೀತವಾಗಿ ಆಹಾರ ಸೇವಿಸಿದರೆ ನಮ್ಮ ದೇಹದ ತೂಕ ಹೆಚ್ಚುತ್ತದೆ, ಅತಿಯಾಗಿ ಮಧ್ಯಪಾನ ಸೇವಿಸಿದರೆ ಮರುದಿನ ತಲೆನೋವು ಬರುತ್ತದೆ , ನೀವು ಕುಡಿದು ವಾಹನ ಓಡಿಸಿದರೆ ಅಪಘಾತ ಸಂಭವವಾಗುತ್ತದೆ ,

ಇಲ್ಲಿ ಆಯ್ಕೆಯ ಪ್ರಶ್ನೆ ? ನಾವು ಬೇರೆಯವರನ್ನು ತುಚ್ಚವಾಗಿ ಕಂಡರೆ , ಅವರು ನಮ್ಮನ್ನು ಹಾಗೆ ಕಾಣುತ್ತಾರೆ. ಇದರಿಂದ ಅವರಿಗೆ ಅವಕಾಶ ಅಥವಾ ಆಯ್ಕೆ ಕಲ್ಪಿಸಿ ಕೊಟ್ಟ ಹಾಗೆ ಆಗುತ್ತದೆ. ನಾವು ಬೇರೆಯವರನ್ನ ಪ್ರೀತಿಯಿಂದ ಕಾಣದಿದ್ದರೆ ಅದಕ್ಕೆ ಪ್ರತಿಯಾಗಿ ಅವರು ನಮ್ಮನ್ನು ಹಾಗೆ ಕಾಣಲು ಆಯ್ಕೆಯನ್ನು ಕಲ್ಪಿಸಿ ಕೊಟ್ಟಂತಾಗುತ್ತದೆ. ಪ್ರತಿ ಆಯ್ಕೆಗೂ ಒಂದು ಪರಿಣಾಮ ಇದೆ.. ನಾವು ಏನೇ, ಯಾವದೇ ವಿಷಯ ಇರಲಿ ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯರಾಗಿದ್ದೇವೆ .

ಆದರೆ ಆಯ್ಕೆ ಮಾಡಿಕೊಂಡ ನಂತರ ಅದೇ ನಮ್ಮನ್ನು ನಿಯಂತ್ರಿಸ ತೊಡಗುತ್ತದೆ.

ಅಸಮಾನರಾಗಲು ನಮಗೆ ಸಮಾನ ಅವಕಾಶಗಳಿವೆ. ಆದರೆ ಆಯ್ಕೆ ಮಾತ್ರ ನಮ್ಮದು ಜೀವನವನ್ನು ತನಗೆ ಬೇಕಾದ ಹಾಗೆ ರೂಪಿಸಿಕೊಳ್ಳಬಹುದು. ಈ ನಮ್ಮ ಜೀವನ ಮಡಿಕೆಗಳನ್ನು ಮಾಡುವ ಕುಂಬಾರನಿಗೆ ಹೋಲಿಸಬಹುದು, ಹಾಗೆ ನಮ್ಮ ಜೀವನವನ್ನು ನಮಗೆ ಬೇಕಾದಂತೆ ನಾವು ರೂಪಿಸಿಕೊಳ್ಳಬಹುದು ಅಲ್ಲವೇ?

ಈ ಜೀವನವೆಂಬುದು ಕೇವಲ ಪಾರ್ಟಿ ಮಜಾ ಮಾಡುವುದಲ್ಲ ಇದರಲ್ಲಿ ನೋವು ಬೇಸರ ತುಂಬಾ ಇದೆ, ಕೆಲವೊಮ್ಮೆ ಯೋಚಿಸಲಾಗದಂತ ಪ್ರಸಂಗ ನಡೆಯುತ್ತದೆ , ಇನ್ನು ಕೆಲವೊಮ್ಮೆ ತಿರುಮೂರುವಿಯಾಗಿಬಿಡುತ್ತದೆ ಇನ್ನು ಕಷ್ಟಗಳು ಒಳ್ಳೆಯ ಜನರಿಗೆ ಹೆಚ್ಚು ಕಾಡುತ್ತವೆ, ಕೆಲ ಸಂದರ್ಭದಲ್ಲಿ ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಕೆಲ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಹೋಗುತ್ತವೆ,

ಪ್ರಶಾಂತವಾದ ವಿಶಾಲ ಸರೋವರದಲ್ಲಿ ನೂರಾರು ದೋಣಿಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುತ್ತಿರುತ್ತದೆ ಇದು ಕೂಡ ಹಾಗೆ, ಗಾಳಿ ಬಂದಿದೆ ತಾನು ಇದೇ ದಿಕ್ಕಿಗೆ ಸಾಗಬೇಕು ಎಂದು ನಾವಿಕ ಮೊದಲನೇ ನಿರ್ಧರಿಸುತ್ತಾನೆ. ಇದು ನಮ್ಮ ಜೀವನಕ್ಕೂ ಅನ್ವಯವಾಗುತ್ತದೆ , ಗಾಳಿ ಇದೇ ದಿಕ್ಕಿಗೆ ಬೀಸಬೇಕೆಂದು ನಿರ್ಧರಿಸಲು ನಾವ್ಯಾರು ? ನೀವ್ಯಾರು? ಅದು ನಮ್ಮಿಂದ ಸಾಧ್ಯವಾದ ಮಾತು,

ಆದರೆ ನಮ್ಮ ಜೀವನವೆಂಬ ದೋಣಿ ಇದೇ ದಿಕ್ಕಿಗೆ ಸಾಗಬೇಕು ಎಂದು ನಿರ್ಧರಿಸುವುದು ನಮ್ಮಿಂದಲೂ ಸಾಧ್ಯ. ಹಾಗೆಯೇ ಸನ್ನಿವೇಶಗಳನ್ನು ನಿರ್ಧರಿಸುವುದು ನಮಗೆ ಅಸಾಧ್ಯವಾಗಬಹುದು , ಆದರೆ ಆಯಾ ಸನಿವೇಶದಲ್ಲಿ ನಮ್ಮ ನಡುವಳಿಕೆ ಮನೋಭಾವ ಹೇಗಿರಬೇಕೆಂಬುದು ನಾವು ನಿರ್ಧರಿಸಬಹುದು.

ಈ ಸೋಲು ಗೆಲುವು ಕೂಡ ಹಾಗೆ , ಇಲ್ಲಿ ನಮ್ಮ ಸ್ಥಾನಮಾನಕ್ಕಿಂತ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬ ಸಂಗತಿ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ,

*ಮನುಷ್ಯರೆಂದರೆ ಯಾವುದೋ ಮರದ ಹಣ್ಣಿನ ಬೀಜವಲ್ಲ* ಹಣ್ಣಿನ ಬೀಜಕ್ಕೆ ತಾನು ಭೂಮಿ ಒಳಗೆ ಬಿದ್ದು ಇನ್ನೊಂದು ಮರವಾಗಬೇಕು ಅಥವಾ ಅಳಿಲುಗಳಿಗೆ ಆಹಾರವಾಗಬೇಕು, ಆದರೆ ಮನುಷ್ಯನಿಗೆ ಈ ಆಯ್ಕೆ ಅವಕಾಶ ಇದೆ, ಒಮ್ಮೆ ಏನಾದರೂ ತಪ್ಪಾದರೆ ನಾವು ಜವಾಬ್ದಾರಿಯುತವಾಗಿ ಪ್ರತಿಕ್ರಿಯಬೇಕು ಈ ರೀತಿ ತಪ್ಪುಗಳು ಆಗಾಗ ಸಂಭವಿಸುತ್ತದೆ , ನಮ್ಮ ತಪ್ಪು ಸರಿ ನಮಗೆ ಗೊತ್ತಾಗುತ್ತದೆ ,

ಒಬ್ಬ ಮನುಷ್ಯನಿಗೆ ಯಶಸ್ವಿಯಾಗಿ ಮಾಡುವಂತಹ ಗುಣ ಅದುವೆ *ಹಂಬಲ* ಏನಾದರೂ ಸಾಧಿಸಲಿ ಆದರೆ ನಮ್ಮ ಹಂಬಲವೇ ನಮ್ಮ ಯಶಸ್ಸಿಗೆ ಪ್ರೇರಣೆ ನೀಡುತ್ತದೆ.
ಜೊತೆಗೆ ಬದ್ಧತೆಯನ್ನು ರೂಪಿಸುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಅದು ಕಾಯ್ದುಕೊಳ್ಳುವುದಕ್ಕೆ ಇವು ಪ್ರಮಾಣಿಕತೆ ಮತ್ತು ವಿವೇಚನೆ ಸ್ತಂಭಗಳಿದ್ದಂತೆ,

ಈ ಯಶಸ್ಸು ನಮ್ಮ ವಿಚಾರ ಹಾಗೂ ನಿರ್ಧಾರಗಳ ಫಲಿತಾಂಶ ನಮ್ಮ ಜೀವನಕ್ಕೆ ಮುಖ್ಯವಾಗುವ ವಿಚಾರಗಳು. ಯಾವುದರಬೇಕೆಂದು ನಮ್ಮ ನಿರ್ಧಾರಕ್ಕೆ ಬಿಟ್ಟ ಸಂಗತಿ ಯಶಸ್ಸು ಏಕಾಏಕಿ ಘಟಿಸುವದಂತು ಅಲ್ಲ, ಅದು ನಮ್ಮ ನಡವಳಿಕೆ ಹಾಗೂ ಮನೋಭಾವದ ಪರಿಣಾಮ.

ಒಂದು ಸಂಗತಿ ನೆನಪಿನಲ್ಲಿಟ್ಟುಕೊಳ್ಳಬೇಕು, ನಮಗೆ ಅನುಕೂಲವಾದ ವಾತಾವರಣ ಅಥವಾ ಸನ್ನಿವೇಶ ಎಂದು ಯಾವತ್ತೂ ಬರುವುದಿಲ್ಲ, ದೋಣಿಯಲ್ಲಿ ಕುಳಿತ ತಕ್ಷಣ ಅದು ನಾವು ತಲುಪಬೇಕಾದ ತಾಣಕ್ಕೆ ಹೋಗಿ ನಿಲ್ಲುವುದಿಲ್ಲ, ಕೆಲವೊಮ್ಮೆ ಪ್ರವಾಹದ ವಿರುದ್ಧ ಪ್ರಯಾಸ ಪಟ್ಟು ತಾಣ ತಲುಪಬೇಕಾಗುತ್ತದೆ ,

ನಮ್ಮ ಯಶಸ್ಸಿಗೆ ನಾವು ಹೆಚ್ಚಿನ ಸಾಧನೆ ತೋರಿಸಬೇಕು ಹೆಚ್ಚು ಹೋರಾಡಬೇಕು, ಹೊಸ ಸವಾಲು ಎದುರಿಸಬೇಕು. ಈ ಯಶಸ್ ಎಂಬುದು ಕೂಡ ಸಾಧನೆ ಅಲ್ಲ, ಸಾಧಿಸುತ್ತಿರುವರಲ್ಲಿ ಯಶಸ್ಸಿದೆ ಯಾಕೆ ಎಲ್ಲರೂ ಪ್ರಯತ್ನಿಸುವುದಿಲ್ಲ, ಏಕೆಂದರೆ ಅವರಿಗೆ ಸುಳ್ಳಿನ ಭಯ , ಕಾರಣ ಬೇರೆಯವರು ತಮ್ಮನ್ನು ಅಲ್ಲಿಯೇ ಬಿಟ್ಟು ಮುಂದೆ ಹೊರಟು ಹೋಗಬಹುದು ಎಂಬ ದುಗುಡ, ಎರಡು ಮಾರ್ಗದಲ್ಲಿ ಅಪಾಯವಿದೆ.

ಸಮುದ್ರಕ್ಕೆ ಸಿಕ್ಕ ಹಡಗು ಬಿರುಗಾಳಿಗೆ ಸಿಕ್ಕಿ, ನುಚ್ಚು ನೂರಾಗಬಹುದು, ಹಾಗೆಂದು ಹಡುಗು ಅಲಿಯ ನಿಲ್ಲಿಸಿಬಿಟ್ಟರೆ ತುಕ್ಕು ಹಿಡಿದು ಹಾಳಾಗಬಹುದು, ಗೆಲ್ಲಲೆಂದೆ ಆಡುವವನಿಗೆ ಒತ್ತಡಗಳು ಸುಲಭವಾಗುತ್ತವೆ. ಕಾರಣ ಆತ ಒತ್ತಡಗಳನ್ನು ಎದುರಿಸಲು ಸಜ್ಜಾಗಿರುತ್ತಾನೆ.

ಸೋಲಬಾರದೆಂದು ಆಡುವವನಿಗೆ ಒತ್ತಡ ಶಕ್ತಿಯನ್ನು ಕುಂದಿಸಿ ಬಿಡುತ್ತದೆ ಇವರು ಗೆಲ್ಲಲು ಬಯಸುತ್ತಾರೆ. ಹೀಗಾಗಿ ತಮ್ಮ ಸಂಪೂರ್ಣ ಶಕ್ತಿ ಸಾಮರ್ಥ್ಯ ಉಪಯೋಗಿಸುವುದಿಲ್ಲ ಸೋಲುತ್ತೇನೆ ಎಂಬ ಭಯದಲ್ಲಿ ತಮ್ಮ ಶಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ.

ಆದ್ದರಿಂದ ಯಾವತ್ತಿಗಾದ್ರೂ ಉತ್ತಮವಾದ ಮೌಲ್ಯ ಪದ್ಧತಿ ಹೊಂದುವುದು ಅಗತ್ಯವಾಗಿದೆ ಏಕೆಂದರೆ ನಮ್ಮ ಧೃಡ ನಿಶ್ಚಯವು ಅಮೂಲ್ಯವಾದದು.

ಇದು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯಕವಾಗುತ್ತದೆ.

ಮುಂದುವರೆಯುವುದು…..

ಮೇನಕಾ ಪಾಟೀಲ್

Don`t copy text!