ಆಸೆಪಟ್ಟು ಮಾಡುವ ಕೆಲಸ ಯಾವತ್ತಿಗೂ ಆನಂದ ಕೊಡಬಲ್ಲದು

ವ್ಯಕ್ತಿತ್ವ ವಿಕಸನ ಮಾಲೆ

ಆಸೆಪಟ್ಟು ಮಾಡುವ ಕೆಲಸ ಯಾವತ್ತಿಗೂ ಆನಂದ ಕೊಡಬಲ್ಲದು

ಯೋಗ್ಯತೆ ಮತ್ತು ನೀತಿ ಬಲ ಹೊಂದಿರುವ ಜನರು ಯಾವತ್ತೂ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆ , ಯಾಕೆಂದರೆ ಅವರ ಜೀವನದಲ್ಲಿ ಸದಾ ಯೋಗ್ಯ ನಿರ್ಧಾರ ತೆಗೆದುಕೊಂಡು ತಮ್ಮ ಬದುಕು ರೂಪಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಅವರಲ್ಲಿ ಇರುತ್ತದೆ.

ಜವಾಬ್ದಾರಿಯನ್ನ ಹೊಂದುವುದಾದರೆ ಅಪಾಯವನ್ನ ಮೈಮೇಲೆ ಎಳೆದುಕೊಂಡಂತೆ ಯಾಕೆಂದರೆ ಜವಾಬ್ದಾರಿಯನ್ನು ಸ್ವೀಕರಿಸುವದೆಂದರೆ ಉತ್ತರದಾಯಿತ್ವಕ್ಕೆ ತೆರೆದುಕೊಂಡಂತೆ, ಇದು ನನಗಂತೂ ಕೆಲ ದಿನಗಳಿಂದ ತುಂಬ ಅರ್ಥವಾಗುತ್ತಿದೆ.

ಇದು ಕಿರಿಕಿರಿ ಉಂಟು ಮಾಡುವ ವಿಷಯ , ಹೌದು ನಿಜ, ಬಹುತೇಕ ಮಂದಿ ಜವಾಬ್ದಾರಿಯನ್ನು ಹೊರವ ಬದಲು ಸುಖಕರವಾದ ಕಿರಿಕಿರಿ ಇಲ್ಲದ ಕ್ಷಣ ಕಳೆಯಲು ನಕರಾತ್ಮಕ ಬದುಕು ಸವಿಸುತ್ತಾರೆ, ಉತ್ತಮ ಕೆಲಸವನ್ನು ಮಾಡವ ಬದಲು ಉತ್ತಮ ಕೆಲಸ ತನ್ನಿಂದ ತಾನೇ ಆಗಲಿ ಎಂದು ಬಯಸುತ್ತಾರೆ.

ಅವರ ದೃಷ್ಟಿಯಲ್ಲಿ ಜವಾಬ್ದಾರಿನ ಸ್ವೀಕರಿಸುವುದೆಂದರೆ ಸುಖವನ್ನು ತ್ಯಜಿಸಿದಂತೆ, ಯಾಕೆಂದರೆ ಜವಾಬ್ದಾರಿ ಹೊರುವುದರಲ್ಲಿನ ಸಂತೋಷ ಮತ್ತೊಂದಿಲ್ಲ, ಎನ್ನುವ ಸತ್ಯ ನನಗಂತೂ ತುಂಬಾ ಚೆನ್ನಾಗಿ ಗೊತ್ತಾಗಿದೆ,

ಹೊಣೆಗಾರಿಕೆ ಉಳ್ಳ ವ್ಯಕ್ತಿ ಉಳಿದ ಜನರ ಕಣ್ಣಲ್ಲಿ ನಾಯಕನಂತೆ ಕಂಗಳಿಸುತ್ತಾನೆ , ಆತನಿಗೆ ತನಗಿಂತ ಎಲ್ಲರೂ ಸುಖವೇ ಮುಖ್ಯವಾಗಿ ಕಾಣುತ್ತದೆ.

ಹೀಗಾಗಿ ಆತ ಎಲ್ಲರೂ ಸುಖದಲ್ಲಿ ಸ್ವಲ್ಪ ಪಾಲನ್ನು ಪಡೆದು ಎಲ್ಲರಿಗಿಂತ ಹೆಚ್ಚು ಸುಖ ಹಾಗೂ ಸಮಾಧಾನದ ಭಾವ ಕಾಣುತ್ತಾನೆ .

ಜವಾಬ್ದಾರಿತರಾದ ಜನರು ತಮ್ಮ ಪ್ರಮಾದವನ್ನು ಒಪ್ಪಿಕೊಳ್ಳುತ್ತಾರೆ, ಹಾಗೂ ಅದರಿಂದ ಪಾಠ ಕಲಿಯುತ್ತಾರೆ. ಕೆಲ ಜನರು ಎಂದಿಗೂ ಕಲಿಯುವುದಿಲ್ಲ, ಪ್ರಮಾದಗಳ ಬಗ್ಗೆ ಮೂರು ಸಂಗತಿ ಮಾಡಬಹುದು ನಿರ್ಲಕ್ಷಿಸಬಹುದು ನಿರಾಕರಿಸಬಹುದು ಒಪ್ಪಿಕೊಂಡು ಪಾಠ ಕಲಿಯಬಹುದು, ಈ ಮೂರನೇ ಅಂಶಕ್ಕೆ ತೆಗೆದುಕೊಳ್ಳುವವರಿಗೆ ಧೈರ್ಯ ತುಂಬಾ ಇರುತ್ತದೆ , ಕಾರಣ ಅವರಲ್ಲಿ ಅಪಾಯ ಅಡಗಿದೆ, ಆದರೆ ಅದು ಪ್ರತಿಫಲದಾಯಕ.

ನಾವು ನಮ್ಮ ದೌರ್ಬಲ್ಯವನ್ನೇ ಸಮರ್ಥಿಸಿಕೊಂಡರೆ, ಅದರ ಸುತ್ತಲೂ ನಮ್ಮ ಜೀವನವನ್ನು ಕಟ್ಟಿಕೊಳ್ಳುತ್ತೇವೆ, ಆಗ ಇಡೀ ಜೀವನ ದುರ್ಬಲಗೊಳ್ಳುತ್ತದೆ.

ಆದ್ದರಿಂದ ಇದನ್ನು ಮೀರಿ ಬೆಳೆಯುವುದು ಅವಶ್ಯಕವಾಗಿದೆ, ಏನಾದ್ರೂ ತಪ್ಪಾದಲ್ಲಿ ನಕರಾತ್ಮಕ ಮನೋಭಾವಗಳು ದೋಷಿಸತೊಡಗುತ್ತಾರೆ ಅದಕ್ಕಾಗಿ ಕಠಿಣ ಪರಿಶ್ರಮ ಬೇಕು . ಯಶಸ್ಸು ಏನು ಪರಿಶ್ರಮವಿಲ್ಲದೆ ತನ್ನಷ್ಟಕ್ಕೆ ತಾನೇ ಬರುವುದಿಲ್ಲ , ಯಶಸ್ಸಿಗೆ ಸಾಕಷ್ಟು ಸಿದ್ಧತೆ ಆರಾಧನೆ ಬೇಕು. ಪ್ರತಿಯೊಬ್ಬರೂ ಜಯಗಳಿಸಲು ಇಷ್ಟಪಡುತ್ತಾರೆ ಆದರೆ ಎಷ್ಟು ಮಂದಿ ಜಯಗಳಿಸಲು ಬೇಕಾದ ಸಿದ್ಧತೆ ಮಾಡುತ್ತಾರೆ ಹೇಳಿ?

ಆದರೆ ಬೇಕಾದ ಪ್ರಯತ್ನಕ್ಕೆ ತ್ಯಾಗ ಹಾಗೂ ಸ್ವಯಂಶಿಸ್ತು ಬೇಕಲ್ಲವೇ ? ಪರಿಶ್ರಮತಿ ಅಂತ ಯಾವುದು ಇಲ್ಲ ,ಹೆಚ್ಚು ಖರ್ಚು ಪರಿಶ್ರಮಸಿದರೆ ಹೆಚ್ಚು ಲಾಭ ಸಿಗುತ್ತದೆ, ಕಠಿಣ ಪರಿಶ್ರಮವಿಲ್ಲದೆ ಮನುಷ್ಯನಿಗೆ ಏನು ದಕ್ಕುವುದಿಲ್ಲ, ಶಬ್ದಕೋಶವನ್ನು ಕೈಲಿಟ್ಟುಕೊಂಡರೆ ಎಲ್ಲ ಪದಗಳ ಅರ್ಥ ತಿಳಿಯುವುದಿಲ್ಲ ಯಾವುದೇ ಸಂಗತಿ ಇರಲಿ ಸುಲಭವಾಗಿ ಮಾಡಿ ತೋರಿಸುತ್ತಾರೆ , ಏಕೆಂದರೆ ಅವರಿಗೆ ಸಂಗತಿಗಳು ಕರಗತವಾಗಿರುತ್ತವೆ, ನನ್ನಲ್ಲಿರುವ ರಹಸ್ಯಗಳನ್ನು ಬಳಸಲು ನಾನು ಎಷ್ಟೊಂದು ಪರಿಶ್ರಮ ವಹಿಸಬೇಕೆಂಬುದು ಜನರಿಗೆ ಗೊತ್ತಾದ್ರೆ ಅವರು ಪರಿಶ್ರಮದ ಬಗ್ಗೆ ಅರಿಯಲಾರರು ,

ಮನುಷ್ಯ ಸಾಮಾನ್ಯ ತಾನು ಮಾಡುವ ಕೆಲಸದಲ್ಲಿ ಕೇವಲ 25 ರಷ್ಟು ಶಕ್ತಿ ಸಾಮರ್ಥ್ಯ ಉಪಯೋಗಿಸುತ್ತಾನೆ , ಆದರೆ ನೂರರಷ್ಟು ಶ್ರದ್ಧೆ ಹಾಗೂ 50ರಷ್ಟು ಸಾಮರ್ಥ್ಯ ತೊಡಗಿಸಿ ಕೆಲಸ ಮಾಡುವವರಿಗೆ ಮಾತ್ರ ಜನ ಸಲಾಂ ಹೊಡೆಯುತ್ತದೆ.

ಈ ಯಶಸ್ಸು ಯಾವತ್ತಿದ್ರೂ ಪರಿಶ್ರಮದಿಂದಲೇ ನಿರ್ಧರಿಸಬೇಕು, ಹೊರತು ಕಡಿಮೆ ಕೆಲಸದ ಫಲದಿಂದಲ್ಲ, ಅತ್ಯುತ್ತಮವಾದ ಸಂಗೀತಗಾರರು ಪ್ರತಿದಿನ ಅಭ್ಯಾಸ ಮಾಡುತ್ತಾರೆ. ಜಯಶಾಲಿಗಳು ಕಠಿಣ ದುಡಿತವನ್ನು ಮೈಗೂಡಿಸುತ್ತಾರೆ ನಾವು ಅನುಭವಿಸುವ ಆನಂದಿಸುವ ಪ್ರತಿ ಸಂಗತಿಯು ಯಾರದೆ ಪರಿಶ್ರಮ ಫಲ ಕೆಲಸ ಕಾಣುತ್ತವೆ , ಇನ್ನೂ ಕೆಲವು ಕಾಣುವುದಿಲ್ಲ, ಆದರೆ ಎರಡು ಅಷ್ಟೇ ಮುಖ್ಯ ನಿಮ್ಮ ಕೆಲಸದ ಬಗ್ಗೆ ಹೆಮ್ಮೆ ಪಡಿ, ಇತರರ ಕೆಲಸದ ಬಗ್ಗೆ ಗೌರವ ತೋರಿ, ಅದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿ, ನೀವು ಕಷ್ಟಪಟ್ಟು ಚೆನ್ನಾಗಿ ಕೆಲಸ ಮಾಡಿದರೆ , ನಿಮ್ಮ ನ್ಯೂನತೆ ಜೊತೆ ಕೆಲಸ ಪೂರ್ಣಗೊಳ್ಳುತ್ತದೆ ,
ಸಮಾಜದಲ್ಲಿ ಸ್ಥಾನ ಸಿಗುತ್ತದೆ,

ಅಂತದ್ರಲ್ಲಿ ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲಿ ಲಾಭ ಸಿಗುತ್ತದೆ, ನಿಜವಾದ ತೃಪ್ತಿ ಸಿಗುತ್ತದೆ, ಎಷ್ಟೋ ಜನರು ತಮ್ಮ ಉದ್ಯೋಗ ಸಿಕ್ಕಿದ ತಕ್ಷಣ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತಾರೆ, ಯಾಕೆಂದರೆ ಖಾಲಿ ಸಮಯ ಆರಾಮ ಸಮಯ ನಡುವಿನ ವ್ಯತ್ಯಾಸ ಗೊತ್ತಾಗುವುದಿಲ್ಲ,

ಪರಿಶ್ರಮದ ಫಲ ಏನು ಮಾಡದೆ ಅದೃಷ್ಟದ ಮೂಲಕ ಲಭಿಸುವುದಿಲ್ಲ, ಕಠಿಣ ಪರಿಶ್ರಮ ಅಭ್ಯಾಸದಿಂದ ಕೈಗೂಡುವಂಥದ್ದು, ಯಾವುದೇ ಕೆಲಸ ಮಾಡಲಿ ಕಠಿಣ ಪರಿಶ್ರಮ ವೈಶಿಷ್ಟ್ಯ ಯಾವತ್ತು ಲಾಭದಾಯಕ ,

ವ್ಯಕ್ತಿ ಹೆಚ್ಚು ಕಷ್ಟ ಪಟ್ಟು ದುಡಿಯೋಷ್ಟು ದಿನ ಧನ್ಯತಾಭಾವ ಕಾಣುತ್ತಾನೆ ಧನ್ಯವಾದ ಭಾವ ಕಂಡ ಹಾಗೆ ಆತ ಇನ್ನು ಹೆಚ್ಚು ದುಡಿಯಲು ಬಯಸುತ್ತಾನೆ. ಯಶಸ್ಸನ್ನು ಸಾಧಿಸುವ ಮಂತ್ರದಂಡ ಎಂಬುವುದಿಲ್ಲ ,

ಮುಂದುವರೆಯುವುದು….

ಮೇನಕಾ ಪಾಟೀಲ್

Don`t copy text!