ನಮ್ಮನ್ನು ನಾವು ಮೊದಲು ಗೌರವಿಸೋಣ
ಜನರ ಭಾವನೆಗೆ ಹಾಗೂ ಉತ್ಪಾದಕತೆಗೂ ನೇರ ಸಂಬಂಧವಿದೆ ಎಂಬುದನ್ನು ನೀವೆಲ್ಲ ಒಪ್ಪುತ್ತಿರಿ ಅಲ್ಲವೇ?
ಹಾಗಿದ್ದರೆ ಆಸ್ತಿ, ಕಾನೂನು, ಪಾಲಕರು ,ಬೇರೆಯವರು , ಹೀಗೆ ಎಲ್ಲಕಿಂತ ನಮ್ಮನ್ನು ನಾವು ಗೌರವದಿಂದ ಕಾಣುವುದರಲ್ಲಿ ಅತಿಯಾದ ಗೌರವ ವ್ಯಕ್ತವಾಗುತ್ತದೆ .
ಅದಕ್ಕೆ ನಮ್ಮನ್ನು ನಾವು ಗೌರವಿಸಬೇಕಾದರೆ ಜೀವನದಲ್ಲಿ ಕೆಲವೊಂದು ನೀತಿಗಳನ್ನು ಅಳವಡಿಸಿಕೊಳ್ಳಬೇಕು.
ಬಲವಾದ ದೃಢ ನಂಬಿಕೆಯನ್ನು ಮೂಡಿಸಿಕೊಂಡು ಜವಾಬ್ದಾರಿ ಸ್ವೀಕರಿಸುವ ಭಾವನೆ ಬರಬೇಕು ಜೊತೆಗೆ ಆಶಾವಾದಿ ನಡವಳಿಕೆ ಇಟ್ಟುಕೊಂಡು ಉತ್ತಮ ಸಂಬಂಧ ಹಾಗೂ ಸಂತೃಪ್ತ ಜೀವನದತ್ತ ಹೋಗಬೇಕು ಬೇರೆಯವರ ಅಗತ್ಯಗಳಿಗೆ ಸ್ಪಂದಿಸುವಂತೆ ನಮ್ಮನ್ನು ನಾವು ಪ್ರಚೋದಿಸಬೇಕು.
ಬೇರೆಯವರ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಇದು ನಮ್ಮ ವ್ಯಕ್ತಿತ್ವ ಅನಾವರಣಗೊಳಿಸುತ್ತದೆ. ಹೊಸ ಸವಾಲುಗಳನ್ನು ಎದುರಿಸುವ ಧೈರ್ಯ ಅದರಿಂದ ತನಗೆ ಬರುತ್ತದೆ.
ಸಾಧನೆಯ ಸುಧಾರಣೆಗೆ ನೆರವಾಗಬೇಕು ,
ಇದರಿಂದ ಅಪಾಯ ಎದುರಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ ಯಾವುದೇ ಅಪಾಯ ಬಂದರೂ ಅದಕ್ಕೆ ನಾವು ಹೆದರುವುದಿಲ್ಲ. ಯಾವುದೇ ಹೊಗಳಿಕೆತೆಗಳಿಗೆ ಸಮ ಚಿತ್ರದಿಂದ ಸುಲಭವಾಗಿ ಜಾಣತನದಿಂದ ಸ್ವೀಕರಿಸುವಂತಹ ಮನಸ್ಸು ಬರಬೇಕು.
ಹಾಗಾದರೆ ನಮ್ಮ ಜೀವನದಲ್ಲಿ ನಮಗೆ ದಿನನಿತ್ಯವೂ ಇಂತಹ ಮನಸ್ಸುಳ್ಳ ಅವರೇ ಸಿಗುತ್ತಾರೆ ಎಂದು ನಾವು ಅಂದುಕೊಳ್ಳುವ ಹಾಗಿಲ್ಲ, ಯಾಕೆಂದರೆ ಪ್ರತಿಯೊಬ್ಬರಿಗೆ ಅವರದೇ ಆದ ಗೌರವ ಸ್ವಾಭಿಮಾನ ಇರುತ್ತದೆ ಕೆಲವರಿಗಂತು ಅದು ಕೂಡ ಇರುವದಿಲ್ಲ. ಇನ್ನು ಕೆಲವರಿಗೆ ಅಲ್ಪ ಸ್ವಾಭಿಮಾನ ಬೇರೆ .
ಹಾಗಾದ್ರೆ ಈ ಅಲ್ಪ ಸ್ವಾಭಿಮಾನ ಇರುವವರನ್ನ ನಾವು ಹೇಗೆ ಗುರುತಿಸಬಹುದು?
ಕಳಪೆ ಅಥವಾ ಕ್ಷೀಣಿಸಿದ ಸ್ವಭಾವವನ್ನು ನಾವು ಗುರುತಿಸುವುದು ಅಥವಾ ಪತ್ತೆ ಹಚ್ಚುವುದು ಹೇಗಪ್ಪ ಅಂದರೆ ಕ್ಷೀಣಿಸಿದ ಗೌರವ ಹೊಂದಿರುವ ವ್ಯಕ್ತಿ ನಡವಳಿಕೆ ನಮ್ಮ ಕಣ್ಣಮುಂದೆ ತಾನಾಗೆ ಬರುತ್ತದೆ.
ಅವರು ಸಾಮಾನ್ಯವಾಗಿ ಗಾಸಿಪ್ ಪ್ರಿಯರು ವದಂತಿಯನ್ನೇ ನಂಬುವಂತಹ ಹಾಗೂ ಹಬ್ಬಿಸುವಂಥವರು ಟೀಕಾ ಪ್ರಿಯರು , ಇಂಥವರು ಪ್ರತಿಯೊಂದು ಟೀಕಿಸುತ್ತಾರೆ ಪ್ರತಿಯೊಬ್ಬರನ್ನು ಟಿಕಿಸುತ್ತಾರೆ ಯಾವ ಪರಿಸ್ಥಿತಿ ಎಂದರೆ ಟೀಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ಬಹುಮಾನ ಅವರರೆ ಗೆಲ್ಲಬಹುದು ಅಂತವರಿಗೆ ವಿಪರೀತ ಅಹಂಕಾರ ಬೇರೆ ಇವರ ಒರಟುವರ್ತನೆ ಎಲ್ಲವೂ ತನಗೆ ಗೊತ್ತು ಎಂಬ ಭಾವನೆ ಇವರಿಗೆ ಎಲ್ಲಿಂದ ಬರಬೇಕು ತನ್ನ ಮೇಲೆ ತನಗೆ ಗೌರವ!
ತಾನು ಕೆಲಸ ಮಾಡುವುದಿಲ್ಲ ಬೇರೆಯವರಿಗೂ ಕೆಲಸ ಮಾಡಲು ಬಿಡುವುದಿಲ್ಲ ಅಂತವರಿಗೆ ಮುಕ್ತ ಮನಸ್ಸು ಇರುವುದಿಲ್ಲ, ಯಾಕೆಂದರೆ ಅವರು ಹೇಳಿದ್ದೆ ವೇದ ವಾಕ್ಯ ಯಾವತ್ತು ನೆಪ ಹೇಳಿ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ. ಎಲ್ಲರಲ್ಲೂ ದೋಷ ಕಾಣುತ್ತಾರೆ . ಅಸೂಯ ಸ್ವಭಾವದವರು ಇಂಥವರು ಏಕಾಂಗಿಯಾಗಿದ್ದಾಗ ವಿಚಿತ್ರವಾಗಿ ಪರಿತಪಿಸುತ್ತಾರೆ ಯಾಕೆಂದರೆ ಬೇರೆಯವರ ಜೊತೆ ಗಾಸಿಪ್ ಮಾಡಿ ರೂಢಿರುತ್ತದೆ ಅಂತವರಿಗೆ ಅಸಮಾಧಾನದ ಭಾವ ಕಾಡುತ್ತದೆ ಸಬ್ಯತೆ ಮತ್ತು ಅಸಭ್ಯಮತೆ ಇವರಿಗೆ ಗೊತ್ತಿರುವುದಿಲ್ಲ . ಇಂಥವರಿಗೆ ಯೋಗ್ಯ ಸ್ನೇಹಿತರಂತು ಸಿಗುವದೆ ಇಲ್ಲ.
ವಿಪರೀತವಾದ ಭರವಸೆ ಆಶ್ವಾಸನೆಗಳನ್ನು ಕೊಡುತ್ತಾರೆ ಅದಕ್ಕೆ ಆಶ್ವಾಸನೆ ಈಡೇರಿಸುವುದು ಗೊತ್ತಿರುತ್ತದೆ.
ಅತಿಯಾದ ಗೌರವ ಹೊಂದಿರುವ ವ್ಯಕ್ತಿಗೆ ತನ್ನ ವಿಶ್ವಾಸಾರ್ಹತೆ ಧಕ್ಕೆ ಆಗುವುದನ್ನು ಸಹಿಸಲು ಆಗುವದಿಲ್ಲ. ಏಕೆಂದರೆ ಇವರು ವಿಶ್ವಾಸ ಇರುವಂತ ವ್ಯೇಕ್ತಿಗಳು.
ಕೆಲವರ ಇವರ ಚಂಚಲ ಸ್ವಭಾವ ಇಂದು ಸವಿ ಮಾತನಾಡಿದ್ದರಿಂದ ಅಂಥವರನ್ನು ನಂಬುತ್ತಿಲ್ಲ ಕಾರಣ ನಾಳೆ ಇವರು ಏನು ಮಾಡಲು ಸಹ ಹೇಸುವುದಿಲ್ಲ. ಏಕಾಂತವನ್ನು ಇಷ್ಟಪಡುತ್ತಾರೆ ಜನರೊಂದಿಗೆ ಬರೆಯುವುದಿಲ್ಲ ಸೂಕ್ಷ್ಮ ಸಂವೇದನೆಗಳು ಅಂದ್ರೆ ಯಾರಾದರೂ ಏನಾದರೂ ಹೇಳಿದರೆ ಅದು ತಮಗೆ ಹೇಳಿದ್ದೆ ಎಂದು ಭಾವಿಸಿ, ತಕ್ಷಣ ಒಪ್ಪಿಕೊಳ್ಳುತ್ತಾರೆ. ಅವರ ಅಹಂನಲ್ಲೂ ನೂರಾರು ಒಡಕುಗಳು ಇದು ಹತಾಶೆಗೆ ಮೂಲ ಕಾರಣವಾಗುತ್ತದೆ.
ಇಂಥವರನ್ನು ನಾವು ಎಷ್ಟೇ ತಿದ್ದಿ ಕೇಳಿದರು ಪ್ರಯೋಜನ ಆಗಲಾರದು…
ಅದರಲ್ಲೂ ನಾನಾ ರೀತಿಯ ಜನರನ್ನು ನಾವು ಕಾಣಬಹುದು ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳನ್ನು ನೋಡಿ ಅಂಥವರಂತೂ ಪಾಪಸ್ ಕಳ್ಳಿ ಇದ್ದ ಹಾಗೆ ಮುಟ್ಟಿದರೆ ಕಡಿಯುವ ಸ್ವಭಾವ ಸಂವಿಧಾನಾಶೀಲತೆ ಸಕರಾತ್ಮಕ ನಡವಳಿಕೆ ಕಾಳಜಿ ಹೊಂದುವವರ ಗುಣ ಬಹುತೇಕ ಸಂದರ್ಭಗಳಲ್ಲಿ ತಪ್ಪಾಗಿ ಉಪಯೋಗಿಸುವುದಂತು ಅವರ ಜೊತೆ ಮಾತನಾಡುವಾಗ ಬಲು ಎಚ್ಚರಿಕೆಯಿಂದ ಇರಬೇಕು, ನಿಜವಾದ ಅರ್ಥವೇನು ಎಂದರೆ ಅವರು ಅತಿ ಸೂಕ್ಷ್ಮವೆಂದು.
ತಮ್ಮ ಬಗ್ಗೆ ಹಾಗೂ ಬೇರೆಯವರ ಬಗ್ಗೆ ಕೂಡ ನಕರಾತ್ಮಕ ನಿರೀಕ್ಷೆಯನ್ನು ಇಂಥವರು ಹೊಂದಿರುತ್ತಾರೆ. ಯಾಕೆಂದರೆ ಇವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ ತಾವೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೆದರುತ್ತಾರೆ. ತಮ್ಮ ಬಗ್ಗೆ ತಾವು ಹೊಗಳಿಕೊಳ್ಳುವುದು ಕೂಡ ಆತ್ಮವಿಶ್ವಾಸದ ಕೊರತೆಯಿಂದಲೇ. ಆತ್ಮವಿಶ್ವಾಸದ ಕೊರತೆ ಇರುವರಿಗೆ ತಮ್ಮ ಬಗ್ಗೆ ನಂಬಿಕೆ ಇರುವುದಿಲ್ಲ, ಬೇರೆಯವರು ಮಾತನಾಡುತ್ತಾರೆ ,, ಎಂಬ ಕಾರಣಕ್ಕೆ ತಾವು ಮಾಡುವ ಕೆಲಸದ ಬಗ್ಗೆ ಅವರಿಗೆ ತೃಪ್ತಿ ಇರುವುದಿಲ್ಲ ಆದ್ರೂ ಮಾಡುತ್ತಾರೆ.
ಏಕೆಂದರೆ ಬೇರೆಯವರು ಮಾಡುತ್ತಾರೆ. ತಾವು ಮಾಡಿದ ಕೆಲಸಕ್ಕೆ ಅವರು ಬೇರೆಯವರ ಮಾನ್ಯತೆಯನ್ನು ಅಪೇಕ್ಷಿಸುತ್ತಾರೆ , ಆತ್ಮವಿಶ್ವಾಸದ ಕೊರತೆ ಹಾಗೆ ಯೋಚಿಸಂತೆ ಮಾಡುತ್ತದೆ.
ಇವುಗಳಲ್ಲಿ ನೀವ್ಯಾರು ಎಂದೊಮ್ಮೆ ನೋಡಿ !
ಮುಂದುವರೆಯುವುದು
– ಮೇನಕಾ ಪಾಟೀಲ್