ಮಹಾನಾಯಕ

1891ರಲ್ಲಿ ಮಹಾರಾಷ್ಟ್ರದ
ರತ್ನಗಿರಿ ಜಿಲ್ಲೆಯ ಅಂಬಾವಾಡೆ
ರಾಮಜೀ ಸಕ್ಬಾಲ ಭೀಮಾಬಾಯಿ
ಉದರದಲ್ಲಿ ಜನಿಸಿದ
14ನೇ ಕುವರ
ಭೀಮನ ಕಾಯದ
ಕುಟುಂಬ ಕಾಯುವ ಕಾವಲುಗಾರನೀತ

ಬಾಲ್ಯದಲ್ಲೇ ಬಳಲಿ
ಶೋಷಣೆಯ ಮಡಿ -ಮೈಲಿಗೆ ಯಲಿ
ಅರಳಿನಿಂತ ಧೃತಿಗೆಡದ
ವೀರನೀತ

ಕಷ್ಟಕ್ಕೆ ಕುಗ್ಗದೇ
ಹಣೆಬರಹಕ್ಕೆ ದೇವರನ್ನು
ನಂಬಿಕೂರದೇ
ದೇಶ ಬೆಳಗಿದ
ಸೂರ್ಯ ನೀತ

ಮನೆ ಮನಗಳಲ್ಲಿಯ
ದಡ್ಡತನ ಸಣ್ಣತನ
ಹೋಗಲಾಡಿಸಿ
ಸ್ವಾತಂತ್ರ್ಯ ಸಮಾನತೆ
ಭಾತೃತ್ವ ಕಲಿಸಿದ
ಧರ್ಮರಾಜನೀತ

ರಾಜಕೀಯ ಎಂಬ ದೇಹಕ್ಕೆ
ಕಾನೂನು ಸುವ್ಯವಸ್ಥೆಗಳೇ
ಔಷಧಿ ಗಳಾಗಿ ಬಡ
ಮತ್ತು ಮಧ್ಯಮವರ್ಗಕ್ಕೆ
ಅಗ್ಗದಲ್ಲಿ ದೊರಕುವಂತೆ ಮಾಡಿದ
ನ್ಯಾಯಾಧೀಶ ನೀತ

ಅಪಚಾರ ಅನಾಚಾರ
ಬಾಲ್ಯ ವಿವಾಹ ಜಾತಿಪದ್ಧತಿ
ದೇವದಾಸಿ ಪದ್ಧತಿ
ಕಿತ್ತೆಸೆದ
ಗಂಡುಗಲಿ ಈತ

ದೇಶದ ಅರಾಜಕತೆ
ಹೋಗಲಾಡಿಸಿ
2ವರ್ಷ 11ತಿಂಗಳ18ದಿವಸ ಶಾಶ್ವತ ಸಂವಿಧಾನ ರಚಿಸಿ
ಜಗತ್ತಿನಲ್ಲೇ ದೊಡ್ಡ ಸಂವಿಧಾನ
ಕೀರ್ತಿ ಪತಾಕೆ ಹಾರಿಸಿದ
ಸಂವಿಧಾನ ಶಿಲ್ಪಿ ಈತ

ಭಾರತದ ನಾಗ್ಪುರದಲ್ಲಿ
1956-ಅಕ್ಟೋಬರ್ 14ರಂದು
ದೀಕ್ಷಾ ಭೂಮಿಯಲ್ಲಿ ಮತಾಂತರಗೊಂಡು
ಸಮ ಸಮಾಜದ ಸಮಾಜ ನಿರ್ಮಾಣದ ಅವಶ್ಯಕತೆ ಅರುಹಿದ
ಬೌದ್ಧ ನೀತ

ಸಾವಿತ್ರಿ.ಮಹದೇವಪ್ಪ ಕಮಲಾಪೂರ
ಪ್ರಾಚಾರ್ಯರು ಸರಕಾರಿ ಪದವಿಪೂರ್ವ ಕಾಲೇಜು ಖನಗಾಂವ/ ಮೂಡಲಗಿ

 

Don`t copy text!