ಲಿಂಗಸುಗೂರಿನಲ್ಲಿ ಕಲ್ಯಾಣಿ ಚಾಲುಕ್ಯರ ಶಾಸನವೊಂದು ಪತ್ತೆ

ಲಿಂಗಸುಗೂರಿನಲ್ಲಿ ಕಲ್ಯಾಣಿ ಚಾಲುಕ್ಯರ ಶಾಸನವೊಂದು ಪತ್ತೆ

e-ಸುದ್ದಿ ಲಿಂಗಸುಗೂರು

೧೧-೧೨ನೇ ಶತಮಾನದ ಕಲ್ಯಾಣಿ ಚಾಲುಕ್ಯರ ತೃಟಿತ ಶಾಸನವೊಂದು ಲಿಂಗಸುಗೂರು ನಗರದ ಮಧ್ಯಭಾಗದಲ್ಲಿರುವ ಇಳೆ ಭಾವಿಯ ಹತ್ತಿರ ಪತ್ತೆ ಆಗಿದೆ.

ಕರಿಯ ಕಲ್ಲಿನ ಮೇಲೆ ಶಾಸನವನ್ನು ಮೂರು ಕಡೆ ಕೆತ್ತಿದ್ದಾರೆ. ಆದರೆ ಶಾಸನದ ಒಂದನೆಯ ಭಾಗ ಅಂದರೆ ಮುಂಬಾಗವು ಪೂರ್ಣ ಹಾಳಾಗಿದೆ. ಯಾರೋ ಬ್ರೀಟಿಷರ ಆಳ್ವಿಕೆಯ ಕಾಲದಲ್ಲಿ, ಶಾಸನವನ್ನು ಹಳಿಸಿ ಅದರ ಮೇಲೆ ಇಂಗ್ಲಿಷಿನ LW ಎಂಬ ಅಕ್ಷರವನ್ನು ಕೆತ್ತಿಸಿದ್ದಾರೆ.

ಇನ್ನುಳಿದ ಶಾಸನ ಕಲ್ಲಿನ ಎಡ ಮತ್ತು ಬಲಭಾಗದಲ್ಲಿ ಕೆತ್ತಿರುವುದು ಮಾತ್ರ ಓದ ಬಹುದಾಗಿದೆ. ಒಟ್ಟು 36 ಸಾಲುಗಳು ಈ ಶಾಸನದಲ್ಲಿ ಉಳಿದುಕೊಂಡಿದ್ದಾವೆ.

ಈ ಶಾಸನವು ೧೧-೧೨ ಶತಮಾನದಲ್ಲಿ ಈ ಸ್ಥಳದಲ್ಲಿ ಕೀರ್ತಿ ಸೋಮೇಶ್ವರ ಎಂಬ ದೇವಸ್ಥಾನ ಸ್ಥಾಪನೆ ಮಾಡಿ ಆ ದೇವಸ್ಥಾನಕ್ಕೆ ಭೂದಾನ ಬಿಟ್ಟ ಬಗ್ಗೆ ಹೇಳುತ್ತದೆ, ಮತ್ತು ಆಗಲೇ ಇಲ್ಲೊಂದು ನಾರಾಯಣ ದೇವಸ್ಥಾನ ಇದ್ದು, ಆ ನಾರಾಯಣ ದೇವಸ್ಥಾನಕ್ಕು ಕೂಡ ಭೂ ದಾನ ನೀಡಿದ್ದಾರೆ, ಆದರೆ ದಾನ ನೀಡಿದ ರಾಜರ ಬಗ್ಗೆ ಈ ಶಾಸನದಲ್ಲಿ ಎಲ್ಲಿಯು ಸಿಗುವುದಿಲ್ಲಾ ಕಾರಣ ಶಾಸನದ ಮುಂಬಾಗದಲ್ಲಿ ಹಾಳಾಗಿದೆ.

ಇನ್ನು ಶಾಸನದ ಕೊನೆಯಲ್ಲಿ ದಾನ ನೀಡಿದವರಿಗೆ ಕುರುಕ್ಷೇತ್ರ, ಪ್ರಯಾಗ, ವಾರಾಣಾಸಿಯಲ್ಲಿ ಪೂಜೆ ಮಾಡಿದ ಫಲ ಸಿಗುತ್ತದೆ ಎಂದು ಹೇಳಲಾಗಿದೆ.

ಈ ಶಾಸನವನ್ನು ಓದಿ ಕೊಟ್ಟವರು ಕೆ ಮುನಿರತ್ನಮ್ ರೆಡ್ಡಿ ಭಾರತೀಯ ಪುರಾತತ್ವ ಇಲಾಖೆ ದೆಹಲಿ ಮತ್ತು ಶಶಿಕುಮಾರ ನಾಯ್ಕ ಮಿಥಿಕ್ ಸೊಸೈಟಿ ಬೆಂಗಳೂರು.

ಅಶೋಕ ನಾಯಕ ದಿದ್ದಿಗಿಯವರು ಈ ಶಾಸನವನ್ನು ಪತ್ತೆಮಾಡಿದ್ದು ಮತ್ತು ಈ ಕ್ಷೇತ್ರ ಕಾರ್ಯಕ್ಕೆ ಸಹಾಯ ಮಾಡಿದ್ದು ಸೋಮಶೇಖರ ನಾಯಕ ಲಿಂಗಸುಗೂರು, ಕೃಷ್ಣ ನಾಯಕ ಲಿಂಗಸುಗೂರು.

-ವೀರೇಶ ಅಂಗಡಿ ಗೌಡುರು

Don`t copy text!