ಡಾ ಶಶಿಕಾಂತ ಪಟ್ಟಣ ಅವರಿಗೆ ಡಾ . ಡಿ ಎಸ್‌ ಕರ್ಕಿ ಪ್ರತಿಷ್ಠಾನ ಪ್ರಶಸ್ತಿ

ಡಾ ಶಶಿಕಾಂತ ಪಟ್ಟಣ ಅವರಿಗೆ
ಡಾ . ಡಿ ಎಸ್‌ ಕರ್ಕಿ ಪ್ರತಿಷ್ಠಾನ ಪ್ರಶಸ್ತಿ

e-ಸುದ್ದಿ ಬೆಳಗಾವಿ

ಡಾ. ಡಿ ಎಸ್‌ ಕರ್ಕಿ ಪ್ರತಿಷ್ಠಾನ ಬೆಳಗಾವಿ ಅವರು ಕೊಡ ಮಾಡುವ 2022 ರ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿಗೆ ಡಾ ಶಶಿಕಾಂತ ಪಟ್ಟಣ, ರಾಮದುರ್ಗ ಇವರ “ಗಾಂಧೀಗೊಂದು ಪತ್ರ” ಎಂಬ ಕವನ ಸಂಕಲನಕ್ಕೆ ದೊರಕಿದೆ.
ನಾಡಿನ ವಿವಿಧ ಭಾಗಗಳಿಂದ ವೈವಿಧ್ಯಮಯವಾದ ಕವನ ಸಂಕಲನಗಳು ಸದರಿ ಪ್ರಶಸ್ತಿಗಾಗಿ ಬಂದಿದ್ದು, ಆಯ್ಕೆ ಸಮಿತಿಯು ಡಾ ಶಶಿಕಾಂತ ಪಟ್ಟಣ, ರಾಮದುರ್ಗ ಅವರ “ಗಾಂಧೀಗೊಂದು ಪತ್ರ” ಎಂಬ ಕವನ ಸಂಕಲನವನ್ನು ಆಯ್ಕೆ ಮಾಡಿ, ಪ್ರಶಸ್ತಿಗೆ ಬಾಜನರನ್ನಾಗಿಸಿದ್ದಾರೆ.

ದಿನಾಂಕ 17-12-2022 ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ನಡೆಯುವ ಡಾ ಡಿ ಎಸ್‌ ಕರ್ಕಿ ಅವರ ೧೧೫ ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಡಾ ಶಶಿಕಾಂತ ಪಟ್ಟಣ ಅವರಿಗೆ ನೀಡಲಿದೆ.

 

ಡಾ ಶಶಿಕಾಂತ ಪಟ್ಟಣ ಅವರು ೧೧ ಕವನ ಸಂಕಲನಗಳನ್ನು ಪ್ರಕಟಗೊಳಿಸಿದ್ದಾರೆ .
೧೭ ಲೇಖನಗಳ ಸಂಕಲನಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅಲ್ಲದೇ ಶರಣ ಸಾಹಿತ್ಯದಲ್ಲಿ ಸಹ ಈಗಾಗಲೇ ಸಾಕಷ್ಟು ಸಂಶೋಧನಾತ್ಮಕ ಲೇಖನಗಳ ಪುಸ್ತಕ ಪ್ರಕಟಿಸಿದ್ದಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಶರಣ ತತ್ವಗಳ ಪ್ರಸರಣದಲ್ಲಿ ತೊಡಗಿದ ಅಪ್ಪಟ ಬಸವಾಭಿಮಾನಿಗಳಾಗಿದ್ದಾರೆ.
ಕಲ್ಬುರ್ಗಿ ಫೌಂಡೇಷನ್‌ ವತಿಯಿಂದ ಸಾಹಿತ್ಯ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿದವರಿಗೆ ಇದೇ ವರ್ಷ ಡಾ ಎಂ ಎಂ ಕಲ್ಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿಯು ಸಹ ಡಾ ಶಶಿಕಾಂತ ಪಟ್ಟಣ ಅವರ ಮುಡಿಗೇರಿರುವುದನ್ನು ಕಲ್ಬುರ್ಗಿ ಫೌಂಡೇಶನ್‌ ದ ನಿರ್ದೆಶಕರಾದ ಡಾ ಎಂ ಎಂ ಪಡಶೆಟ್ಟಿಯವರು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೇ “ಡಾ ಎಂ ಎಂ ಕಲ್ಬುರ್ಗಿ ಸಾಹಿತ್ಯ ಸಿರಿ” ಪ್ರಶಸ್ತಿ ಪ್ರಧಾನ ಸಭೆಯು ಜನೇವರಿ 7, 2023 ರಂದು ಸಿಂಧಗಿಯಲ್ಲಿ ಜರುಗುವದೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೃಷಿ ಮಾಡುವ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ ಕವನಗಳು ಹೊರಬರಲಿ ಎಂದು ಆಶಿಸುತ್ತಾ, ಶ್ರೀಯುತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಆಯ್ಕೆ ಸಮಿತಿ ತಿಳಿಸಿದೆ.
ಡಾ ಶಶಿಕಾಂತ ಪಟ್ಟಣ ಅವರಿಗೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಮಸ್ತ ಶರಣ ಬಳಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು

Don`t copy text!