ಜಾಗತಿಕ ಲಿಂಗಾಯತ ಮತ್ತು ಮಠಾಧೀಶರ ಒಕ್ಕೂಟಗಳ ಮೌನವೇಕೆ ?
ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ವಿಷಯದಲ್ಲಿ ಬಹು ದೊಡ್ಡ ಹೋರಾಟ ಮಾಡಿ ಈಗ ಒಮ್ಮಿಲೆ ಶಾಂತವಾದ ಸಂದರ್ಭವೇನು ?
ಜಾಗತಿಕ ಲಿಂಗಾಯತ ಮಹಾ ಸಭೆ ಮತ್ತು ಮಠಾಧೀಶರ ಒಕ್ಕೂಟಗಳ ಮೌನವೇಕೆ ?
ಇದೆ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ವೀರಶೈವ ಲಿಂಗಾಯತ ಮಹಾ ಸಮಾವೆಶ
ಮಾಡುತ್ತಿರುವುದು ಪತ್ರಿಕೆಯಲ್ಲಿ ಓದಿದ್ದೆವೆ
ಏಕೆ ಇಂತಹ ಬೆಳವಣಿಗೆ ಇದು ನಮ್ಮ ಲಿಂಗಾಯತ ಧರ್ಮ ಮಾನ್ಯತೆಗೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಮಾನ್ಯತೆಗೆ ಅಡ್ಡಗಾಲು.
ಇಲ್ಲಿ ಯಾರನ್ನೂ ಮಠಾಧೀಶರ ಮತ್ತು ರಾಜಕಾರಣಿ ಇವರನ್ನು ಪೂರ್ತಿಯಾಗಿ ಸಮಗ್ರವಾಗಿ ನಂಬದೆ ವೀರಶೈವ ಮಹಾಸಭೆಗೆ ಪರ್ಯಾಯ ಪ್ರತಿ ಸಂಘಟನೆ ಎಂದು ನಂಬಿಸಿ ಲಿಂಗಾಯತರ ಭಾವನೆಗಳ ಜೊತೆಗೆ ಆಟವಾಡಿ ಈಗ ಲಿಂಗಾಯತ ವೀರಶೈವ ಒಂದೇ ಎಂದು ಅವರ ಜೊತೆಗೆ ಕೈ ಕೈ ಮಿಲಾಯಿಸಿ ಅಪ್ಪಿದ ರೀತಿ ನಾಚಿಕೆ ತರುವ ಯೋಚನೆ.
ತಮ್ಮ ರಾಜಕೀಯ ಸ್ವಾರ್ಥಕ್ಕೆ ಲಿಂಗಾಯತ ಧರ್ಮ ಒತ್ತೆ ಇಡುವದಕ್ಕೆ ಹಿಂದು ಮುಂದು ನೋಡದ ರಾಜಕಾರಣಿಗಳ ಮತ್ತು ಮಠಾಧೀಶರ ನಡೆ
ನಮ್ಮ ಪ್ರಶ್ನೆಗಳು
೧ ) ಲಿಂಗಾಯತ ಧರ್ಮ ಮಾನ್ಯತೆಗೆ ಹುಟ್ಟಿಕೊಂಡ ಜಾಗತಿಕ ಲಿಂಗಾಯತ ಮಹಾ ಸಭೆ ,ಮತ್ತು ಮಠಾಧೀಶರ ಒಕ್ಕೂಟಗಳ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನ ಪದೆಯುವಲ್ಲಿ ಸಧ್ಯದ ಹೋರಾಟದ ದಾರಿ ಯಾವವು?
೨ ) ಜಾಗತಿಕ ಲಿಂಗಾಯತ ಮಹಾಸಭೆಯ ಅಂಗ ಮಠಾಧೀಶರ ಒಕ್ಕೂಟವು ರಾಜಕೀಯ ಪಕ್ಷಗಳ ಅನತಿಯಂತೆ ನಡೆದು ಕೊಳ್ಳುತ್ತಿವೆಯೆ ?
೩ ) ನ್ಯಾಯಮೂರ್ತಿ ಶ್ರೀ ನಾಗ ಮೋಹನ ದಾಸ್ ಇವರ ವರದಿ ಆಧಾರಿತ ಕರ್ನಾಟಕದ ಅಂದಿನ ಸರಕಾರವು ಕೈಗೊಂಡ ನಿರ್ಧಾರ ಮತ್ತು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಶಿಫಾರಸು ತಿರಸ್ಕಾರವಾದ ಮೇಲೆ ಜಾಗತಿಕ ಲಿಂಗಾಯತ ಮಹಾಸಭೆಯ ಅಂಗ ಮಠಾಧೀಶರ ಒಕ್ಕೂಟವು ಯಾವ ನಿರ್ಧಾರ ಕೈ ಕೊಂಡಿವೇ?
೪ ) ಲಿಂಗಾಯತ ಮತ್ತು ವೀರಶೈವ ಎಂದೂ ತಾತ್ವಿಕವಾಗಿ ಒಂದು ಆಗಲಾರವು ಹಾಗಿದ್ದಾಗ
ವಿರಕ್ತರು ಪಂಚ ಪೀಠದವರ ಜೊತೆಗೆ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಅಖಿಲ ಭಾರತ ವೀರಶೈವ ಮಹಾಸಭೆಯ ಜೊತೆಗೆ ಹೊಂದಾಣಿಕೆ ಮಾಡಿ ಕೊಂಡರೆ ಎಂಬುದು ಕೋಟಿ ಲಿಂಗಾಯತರ ಪ್ರಶ್ನೆಯಾಗಿದೆ
೫ ) ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಡಾ ಎಂ ಬಿ ಪಾಟೀಲರು ಈಗ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರು ಕೂಡಾ ಹೌದು ಸನ್ಮಾನ್ಯರು ಲಿಂಗಾಯತ ಧರ್ಮ ಮಾನ್ಯತೆಯ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡುವ ಯೋಚನೆ ತಮಗೆ ಇದೆಯೋ ಅಥವಾ ವೀರಶೈವ ಮಹಾ ಸಭೆಯ ಜೊತೆಗೆ ಕೂಡಿಕೊಂಡು ವೀರಶೈವ ಲಿಂಗಾಯತ ಎರಡು ಒಂದೇ ಎನ್ನುವ ನಿರ್ಧಾರಕ್ಕೆ ಬಂದು ವೀರಶೈವ ಲಿಂಗಾಯತ ಧರ್ಮ ಮಾನ್ಯತೆಗೆ ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡುವ ವಿಚಾರ ತಮ್ಮ ಮುಂದೆ ಇದೆಯೋ?
೬ ) ಜಾಗತಿಕ ಲಿಂಗಾಯತ ಮಹಾ ಸಭೆ ಮತ್ತು ಮಠಾಧೀಶರ ಒಕ್ಕೂಟಗಳ ಮೌನವೊ ಅಸಹಾಯಕವೊ ಅಥವಾ ನಿಸ್ಕ್ರಿಯವೊ? ತಿಳಿಸಿ
೭ )ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಮಠಾಧೀಶರ ಒಕ್ಕೂಟಗಳ ಹೋರಾಟ ಕೇವಲ ಚುನಾವಣೆಗೆ ಸೀಮಿತವಾದ ಪಂಚ ವಾರ್ಷಿಕ ಯೋಜನೆಯೇ?
ಬಹುತೇಕ ಬಸವ ಪ್ರಜ್ಞೆಯುಳ್ಳ ಲಿಂಗಾಯತರಿಗೆ ಉತ್ತರ ಗೊತ್ತಿದೆ ಆದರೆ ರಾಜಕಾರಣ ಮತ್ತು ಧರ್ಮ ಸಂಸ್ಥೆಗಳೂ ಸೇರಿ ಬಸವ ಪ್ರಜ್ಞೆ ಲಿಂಗಾಯತ ಧರ್ಮಕ್ಕೆ ಮಹಾಮೋಸ ಮಾಡುತ್ತಿರುವುದು ಅನೇಕ ಮುಗ್ಧ ಲಿಂಗಾಯತರಿಗೆ ಗೊತ್ತಿಲ್ಲ.
ಕೆಲ ಕಾರ್ಯಕರ್ತರ ಒಳ್ಳೆಯ ಲಿಂಗಾಯತ ಸಾಮಾಜಿಕ ಕಾಳಜಿ ಇರುವ ಜನರು ಬದ್ಧತೆಯ ಸ್ವಾಮೀಜಿಯವರ ಅನೇಕ ಅನುಮಾನ ಸಂದೇಹಗಳಿಗೆ ತಮ್ಮ ಉತ್ತರ ಪ್ರಾಮಾಣಿಕ ಸ್ಪಂದನೆ ಅಗತ್ಯ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ
೯೫೫೨೦೦೨೩೩೮