ಕ.ಸಾ.ಪ ಅಧ್ಯಕ್ಷರ ರಾಜೀನಾಮೆಗೆ ಅಗ್ರಹ -ವಿರೇಶಪಾಟೀಲ

ಮಸ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತನಿಂದ ಅವಮಾನ. ಅಧ್ಯಕ್ಷರ ರಾಜೀನಾಮೆಗೆ ಅಗ್ರಹ -ವಿರೇಶಪಾಟೀಲ

(ವೀರೇಶ ಪಾಟೀಲ‌ ಮಸ್ಕಿ)

ಲಿಂಗಸೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವಿದ್ದರೂ ಮಸ್ಕಿ ತಾಲ್ಲೂಕು  ಕನ್ಡಡ ಸಾಹಿತ್ಯ ಪರಿಷತ್ ಸದಸ್ಯರಿಗೆ ಆಮಂತ್ರಣ ಪತ್ರವಿಲ್ಲ, ಮಾಹಿತಿ ಇಲ್ಲ ಒಂದು ದಿನ ಮುಂಚೆ ಇರುವಾಗ ಎರಡು ಬ್ಯಾನರ್ ಸಂಜೆ ಹಾಕಿದ್ದಾರೆ. ಪ್ರಚಾರವಿಲ್ಲ ಕಸಾಪ ಅಧ್ಯಕ್ಷ ಆದಪ್ಪ ಹೆಂಬಾ ಅವರು ಅಧ್ಯಕ್ಷರಾದ ಮೇಲೆ ಯಾವುದೇ ಚಟುವಟಿಕೆಗಳನ್ನು ಮಾಡಿಲ್ಲ. ಅಲ್ಲದೆ ನವಂಬರ್ ತಿಂಗಳಲ್ಲಿ ಒಂದೇ ಒಂದು ಕನ್ನಡ ಕಾರ್ಯಕ್ರಮ ಮಾಡಿಲ್ಲ ಕೂಡಲೇ ಅಧ್ಯಕ್ಷರು ರಾಜಿನಾಮೇ ನೀಡುವಂತೆ ಕಸಾಪ ಆಜೀವ ಸದಸ್ಯ ವೀರೇಶ ಪಾಟೀಲ ಒತ್ತಾಯಿಸಿದ್ದಾರೆ.

(ಆದಪ್ಪ ಹೆಂಬಾ)

ರಾಜ್ಯ ಸಮ್ಮೇಳನ ಜ್ಯೋತಿ ಯಾತ್ರೆ ಮಸ್ಕಿ ಪಟ್ಟಣದ ಮುಖಾಂತರ ಸಿಂಧನೂರಿಗೆ ತೆರಳಿದೆ. ಜ್ಯೋತಿ ಯಾತ್ರೆಯನ್ನು ಬರಮಾಡಿಕೊಂಡಿಲ್ಲ. ಅವಮಾನ ಮಾಡಿದಂತಾಗಿದ. ಯಾರಿಗೂ ಮಾಹಿತಿ ಇಲ್ಲದೆ ಸಪ್ಪೆಯಾಗಿ ಯಾತ್ರೆ ಬೀಳ್ಕೊಡಲಾಗಿದೆ .ಅಧ್ಯಕ್ಷರು ಕೇವಲ ವಾಟ್ಸಪ್ ಗೆ ಮಾತ್ರ ಸೀಮಿತವಾಗಿದ್ದಾರೆ ಈ ಸಾಹಿತ್ಯ ಪರಿಷತ್ ಕೆಲವೇ ವ್ಯಕ್ತಿಗಳ ನಿಯಂತ್ರಣ ದಲ್ಲಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾ ಅಧ್ಯಕ್ಷರು ಮಸ್ಕಿ ತಾಲ್ಲೂಕಿಗೆ ಹೊಸ ಅಧ್ಯಕ್ಷರನ್ನು ನೇಮಿಸಬೇಕು. ಮತ್ತು ಪದಾಧಿಕಾರಿಗಳನ್ನು ನೇಮಿಸುವಾಗ ಮಸ್ಕಿ ತಾಲ್ಲೂಕಿನಲ್ಲಿ ಇರುವ ಆಜೀವ ಸದಸ್ಯರನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

.

Don`t copy text!