ಅನ್ಯ ಭಾಷೆ ವ್ಯಾಮೋಹ ಬಿಟ್ಟು ಮಾತೃ ಭಾಷೆಯನ್ನೆ ಮಕ್ಕಳಿಗೆ ಕಲಿಸಲು ಪಾಲಕರು ಮುಂದಾಗಿ – ಡಾ ಹೇಮಾ ಪಟ್ಟಣಶೆಟ್ಟಿ.
ವರದಿ ವೀರೇಶ ಅಂಗಡಿ ಗೌಡೂರು
ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ೧೧ನೇ ಜಿಲ್ಲಾ ಸಮ್ಮೇಳನವನ್ನು ಡಾ.ಹೇಮಾ ಪಟ್ಟಣಶೆಟ್ಟಿ ಧಾರವಾಡ ಇವರು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಇದರಿಂದ ಪ್ರಸ್ತುತ ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ. ಕನ್ನಡ ನಾಡಿನಲ್ಲಿ ಪ್ರಾದೇಶಿಕ ಅಸಮಾನತೆಯು ತೊಲಗಬೇಕಾಗಿದೆ. ಸರ್ಕಾರವು ಕನ್ನಡ ಭಾಷೆಗೆ ತಾತ್ಸಾರ ಮನೋಭಾವನೆಯಿಂದ ಕಾಣಬಾರದು ಕನ್ನಡ ಭಾಷೆ ಸಾಹಿತ್ಯ ಉಳಿಯಬೇಕಾದರೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಭಾಷೆ ಕಲಿಯಲು ಪ್ರೋತ್ಸಾಹಿಸಿ ಮಕ್ಕಳಿಗೆ ಉತ್ತೆಜನ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಡಿ ಭಾಗದ ಹಳ್ಳಿಗಳಲ್ಲಿ ಇರುವ ಮಕ್ಕಳಿಗೆ ಕನ್ನಡ ಮಾಯವಾಗುತ್ತದೆ .
ರಾಯಚೂರು ಜಿಲ್ಲೆಯೂ ಶರಣರ ನಾಡು ಈ ನಾಡಿನಲ್ಲಿ ಕನ್ನಡ ಸಾಹಿತ್ಯ ಭಾಷೆ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಕನ್ನಡವು ಅಳುವಿನಂಚಿಗೆ ಸಾಗಿದೆ ನಮ್ಮೆಲ್ಲರನ್ನು ಆಳುವ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ಕನ್ನಡ ಭಾಷೆ ನಲುಗಿಹೊಗಿದೆ .ಕನ್ನಡ ಭಾಷೆ ಸಾಹಿತಿಗಳಿಂದ ಉಳಿದಿಲ್ಲ ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಭಾಷೆ ಮಾತನಾಡುವುದರಿಂದ ಕನ್ನಡ ಭಾಷೆ ಉಳಿದಿದೆ. ರಾಜಕಾರಣಿಗಳು ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯಲ್ಲಿ ಭಾಷಣದ ಮೂಲಕ ವೇದಿಕೆಗೆ ಸಿಮೀತವಾಗಬಾರದು ರಾಜಕಾರಣಿಗಳಿಗೆ ತಮ್ಮದೇ ಆದ ರೀತಿಯಲ್ಲಿ ಡಾ.ಹೇಮಾ ಪಟ್ಟಣಶೆಟ್ಟಿ ಚಾಟಿ ಬೀಸಿದರು.
ಅಲ್ಲದೇ ವಿದ್ಯಾರ್ಥಿಗಳ ಜೀವನ ಕೇವಲ ಅಂಕಪಟ್ಟಿಯಿಂದ ನಿರ್ಧರಿಸದೆ ಅಂತಃಕರಣದಿಂದ ನಿರ್ದರಿಸುವಂತಾಗಬೇಕು. ಪಾಲಕರು ಮಕ್ಕಳಿಗೆ ಇದನ್ನೇ ಕಲಿಬೇಕು ಎಂದು ಒತ್ತಾಯ ಮಾಡಬಾರದು ಅವರ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದರು.
ಸಮಾರಂಭಕ್ಕೆ ಮುನ್ನ ಸಮ್ಮೇಳನಾಧ್ಯಕ್ಷರ ಮೆರವಣಿಗೆ ರಥಕ್ಕೆ ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ ಹಾಗೂ ಗಣ್ಯರು ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ತಾಲೂಕಿನ ವಿವಿಧ ಐತಿಹಾಸಿಕ ಸ್ಥಬ್ದ ಚಿತ್ರಗಳು,ದೇಶದ ಮಹಾನ್ ವ್ಯಕ್ತಿಗಳ ಛದ್ಮ ವೇಷದಲ್ಲಿ ಶಾಲಾ ಶಿಕ್ಷಕರು ಗಮನ ಸೆಳೆದರು.
ಸಮ್ಮೇಳನದಲ್ಲಿ 20 ಕ್ಕೂ ಅಧಿಕ ಪುಸ್ತಕ ವ್ಯಾಪಾರ ಮಳಿಗೆಗಳನ್ನು ತೆರೆಯಲಾಗಿದ್ದು .ಅಧಿಕ ಸಂಖ್ಯೆಯಲ್ಲಿ ಓದುಗರ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ಪುಸ್ತಕ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ಲಿಂಗಸುಗೂರ ಶಾಸಕರಾದ ಡಿ.ಎಸ್ ಹೂಲಗೇರಿಯವರು ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯ ಮಾನ್ಯರನ್ನು ಸ್ವಾಗತ ಕೋರಿದರು.
ರಾಯಚೂರು ಸಂಸದರಾದ ರಾಜ ಅಮರೇಶ ನಾಯಕ್, ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಮಾನಪ್ಪ.ಡಿ ವಜ್ಜಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರಗೇಶ, ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಡಿ.ವೈ.ಎಸ್.ಪಿ ಮಂಜುನಾಥ ನ.ಯೋ.ಪ್ರಾ.
ಅಧ್ಯಕ್ಷ ಡಾ.ಶಿವಬಸಪ್ಪ ಹೆಸರೂರು ಭೂಪನಗೌಡ ಕರಡಕಲ್ ,ಅಮರಗುಂಡಪ್ಪ ಮೇಟಿ, ಪಾಮಯ್ಯ ಮುರಾರಿ ,ವೀರನಗೌಡ ಲೆಕ್ಕಿಹಾಳ,ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ತಾಲುಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು ಮಂಜುನಾಥ ಕಾಮೀನ್ ಸೇರಿದಂತೆ, ಹಲವಾರು ಸಾಹಿತಿಗಳು ,ಕಲಾವಿದರು ಲಿಂಗಸುಗೂರ ತಾಲ್ಲೂಕಿನ ಸಾವಿರಾರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.