ಲಿಂಗಾಯತ ಧರ್ಮ ಹೋರಾಟಕ್ಕೆ ದಾರಿ ಯಾವುದಯ್ಯ?

ಲಿಂಗಾಯತ ಧರ್ಮ ಹೋರಾಟಕ್ಕೆ ದಾರಿ ಯಾವುದಯ್ಯ?

 

ಲಿಂಗಾಯತ ಧರ್ಮ ಹೋರಾಟವು ರಾಜಕಾರಣ ಮತ್ತು ಸ್ಥಾಪಿತವಾದ ಮಠ ವ್ಯವಸ್ಥೆಯಡಿ ನೆಲ ಕಚ್ಚಿತೆ?

ಲಿಂಗಾಯತರ ಧರ್ಮ ಬೇಡಿಕೆ ಹಕ್ಕು ಇಂದು ನಿನ್ನೆಯದಲ್ಲ .
ಕಳೆದ ಇನ್ನೂರು ವರ್ಷಗಳಿಗೂ ಮಿಕ್ಕಿ ಸುಧಿರ್ಘ ಹೋರಾಟ ಮಾಡಿದ ಇತಿಹಾಸವಿದೆ .

ಭಾರತ ನೆಲದಲ್ಲಿ ಬುದ್ಧನ ನಂತರ ಅತ್ಯಂತ ಉಗ್ರವಾಗಿ ವೈದಿಕ ಸನಾತನ ಸುಲಿಗೆ ಶೋಷಣೆ ವಿರೊಧಿಸಿದ ಗಟ್ಟಿ ಸಿದ್ದಾಂತ ಎಂದರೆ ಅದು ಶರಣ ಸಿದ್ದಾಂತ .

ಅಖಿಲ ಭಾರತ ವೀರಶೈವ ಮಹಾಸಭೆ ಲಿಂಗಾಯತ ಧರ್ಮ
ಸ್ವತಂತ್ರ ಧರ್ಮ ಮನ್ಯತೆಯ ಬಗ್ಗೆ ಚಿಂತಿಸಿಲ್ಲ .

ಅವರಿಗೆ ರಾಜಕೀಯ ಲಾಭ ಹೊರತು ಪಡೆಸಿದರೆ ಸಮುದಾಯದ ಕಾಳಜಿ ಇಲ್ಲ.
ಶ್ರೀ ಸಿದ್ಧರಾಮಯ್ಯ ಅವರ ಸರಕಾರದಲ್ಲಿ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನಕ್ಕಾಗಿ ಯತ್ನಿಸಿ ಈಗ ಅದರಿಂದ ಸಂಪೂರ್ಣ ದೂರ ಇದ್ದಾರೆ.

ಅಷ್ಟೇ ಅಲ್ಲ ಧರ್ಮದ ವಿಷಯದಲ್ಲಿ ಭಾಗ ವಹಿಸುವದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭೆಗೆ ಪರ್ಯಾಯ ಸಂಘಟನೆಯಾಗಿ ಜಾಗತಿಕ ಲಿಂಗಾಯತ ಮಹಾಸಭೆ ಎಂದು ಹುಟ್ಟಿಕೊಂಡಿತು. ಆದರೆ ಅದು ಸಂಪೂರ್ಣ ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಹಿಡಿತದಿಂದ ಹೊರ ಬರಲಿಲ್ಲ.

ಕಳೆದ ಐದು ವರ್ಷಗಳ ತೀವ್ರ ಹೋರಾಟ ಮಾಡುವ ಕೆಲಸ ಈಗ ಸಂಪೂರ್ಣ ನೆಲ ಕಚ್ಚಿದೆ.

ಹಾಗಿದ್ದರೆ ಯಾರನ್ನು ನಂಬಬೇಕು
ಕೆಲ ರಾಜಕೀಯ ಮುಖಂಡರು ಸ್ವಾಮಿಗಳು ಕಾವಿಯ ದಂಡು ನಿವೃತ್ತ ಅಧಿಕಾರಿಗಳೂ ಹೀಗೆ ಒಂದು ದೊಡ್ಡ ತಂಡವೇ ಲಿಂಗಾಯತ ಧರ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತಿತ್ತು.
ಈಗ ಸ್ಮಶಾನ ಮೌನ ಯಾರಿಗೂ ಅದರ ಕಾಳಜಿ ಇಲ್ಲ. ಲಿಂಗಾಯತ ಧರ್ಮ ಹೋರಾಟವು ಶ್ರೀಮಂತರಿಗೆ ಬೇಕಿಲ್ಲ ಬಡವರಿಗೆ ಗೊತ್ತಿಲ್ಲ ಮಧ್ಯಮ ವರ್ಗದ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ.
ಕಾರಣ ಅವರಲ್ಲಿ ಶಕ್ತಿ ಇಲ್ಲ.

ಇಂದು ಬಸವ ಭಕ್ತರು ಇಂತಹ ಕಾವಿ ಖಾದಿ ಬಿಟ್ಟು ಸಮಾನ ಮನಸ್ಕರ ಸಭೆಯಲ್ಲಿ ಹೋರಾಟದ ದಾರಿ ಹುಡುಕ ಬೇಕು . ಹೋರಾಟದ ನೀಲ ನಕ್ಷೆ ಸಿದ್ಧ ಪಡಿಸ ಬೇಕು. ಮಠ ವ್ಯವಸ್ಥೆಯಡಿ ಗುಲಾಮಗಿರಿ ಬಿಟ್ಟು ಭಕ್ತ ಅರಿವೇ ಗುರು ಆಚಾರವೆ ಲಿಂಗ ಅನುಭಾವವೆ ಜಂಗಮ ಎಂಬ ನೀತಿಯಡಿ ಹೋರಾಟ ರೂಪಿಸ
ಬೇಕು.

ಇಂದು ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಎಲ್ಲಾ ರಾಜಕೀಯ ಪಕ್ಷಗಳು ಬಲವಾಗಿ ಪ್ರತಿ ಪಾದಿಸುತ್ತವೆ.

ಅಂದು ಲಿಂಗಾಯತ ನನ್ನ ಅಸ್ಮಿತೆ ಎಂದು ಬೊಬ್ಬೆ ಹೊಡೆದವರು ಇಂದು ಮೌನಕ್ಕೆ ಜಾರಿದ್ದಾರೆ.

ಸ್ವಾಮಿಗಳನ್ನು ರಾಜಕೀಯ ಮುಖಂಡರನ್ನು ನಂಬದೆ ಮುಂದಿನ ಹೋರಾಟ ಕ್ಕೆ ಸಿದ್ಧವಾಗುವಂತೆ ನಮ್ಮ ಯೋಜನೆಗಳು ಜಾರಿಗೆ ತರುವ ನಿಟ್ಟಿನಲ್ಲಿ ನಾವು ಕಾರ್ಯ ಮಾಡ ಬೇಕು.

ಲಿಂಗಾಯತ ಧರ್ಮ ಹೋರಾಟಕ್ಕೆ ದಾರಿ ಯಾವುದಯ್ಯ? ಎಂದು ಯೋಚಿಸ ಬೇಕು.

ನಮ್ಮ ಮುಂದೆ ಇರುವ ದಾರಿ ಯಾವವು.

೧ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ವರದಿ ಆಧಾರಿತ ಹಿಂದಿನ ಕರ್ನಾಟಕ ಸರಕಾರದ ಸಚಿವ ಸಂಪುಟ ನಿರ್ಣಯ ಮತ್ತು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಪ್ರಸ್ಥಾವನೆ.
ಮರು ಪರಿಶೀಲನೆ ಒತ್ತಾಯ

೨ ಇಂದಿನ ರಾಜ್ಯ ಹಾಗೂ ಕೇಂದ್ರ ಸರಕಾರದ ಮೇಲೆ

ನ್ಯಾಯಮೂರ್ತಿ ನಾಗ ಮೋಹನ್ ದಾಸ್ ವರದಿ ಆಧಾರಿತ ಹಿಂದಿನ ಕರ್ನಾಟಕ ಸರಕಾರದ ಸಚಿವ ಸಂಪುಟ ನಿರ್ಣಯ ಮತ್ತು ಆದೇಶದ ಅನುಷ್ಠಾನ ಕ್ಕೆ ಮೆಲ್ಮನವಿ

೩. ನ್ಯಾಯಮೂರ್ತಿ ಶ್ರೀ ವೆಂಕಟಾಚಲಯ್ಯ ಅವರ ಸುಪ್ರೀಂ ಕೋರ್ಟ್ ನಿರ್ಣಯ ಅನುಸಾರ ಕೇಂದ್ರ ಮತ್ತು ರಾಜ್ಯ ಸರಕಾರದ ಮುಂದೆ ಪ್ರಸ್ತಾಪವನ್ನು ಸಲ್ಲಿಸಿ ಹೋರಾಟ ಜೀವಂತ ಇಡುವುದು.

೪ ಹಿಂದೂ ಮತ್ತು ಲಿಂಗಾಯತ ವಲ್ಲದ ನಿವೃತ್ತ ನ್ಯಾಯ ಮೂರ್ತಿಗಳ ಅಧ್ಯಕ್ಷ ತೇಯಲ್ಲಿ ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನ ಮಾನಕ್ಕಾಗಿ ಒಂದು ನಿಯೊಗ ಕೇಂದ್ರ ಮಟ್ಟದಲ್ಲಿ ರಚಿತ ಗೊಂಡು ಆಂಧ್ರ ತಮಿಳುನಾಡ ಕೇರಳ ಕರ್ನಾಟಕ ಮಹಾರಾಷ್ಟ್ರ ಗೋವಾ ಪುದಚೆರಿ ತೆಲಂಗಾಣ ಮುಂತಾದ ಹಲವು ರಾಜ್ಯಗಳಲ್ಲಿ
ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಏಕ ಕಾಲಕ್ಕೆ ಆರಂಭ ವಾಗ ಬೇಕು.

ಲಿಂಗಾಯತ ಧರ್ಮ ಸಂವಿಧಾನ ನೀಡಿದ ನಮ್ಮ ಹಕ್ಕು ಅದನ್ನು ಪಡೆಯಲು ನಾವು ಬದ್ಧರಾಗಬೇಕು.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!