ಸೌರಾಷ್ಟ್ರ ಸೋಮನಾಥ…..
ಹನ್ನೆರಡು ಜ್ಯೋತಿರ್ಲಿoಗಗಳಲ್ಲಿ ಮೊದಲನೆಯದು ಸೋಮನಾಥ ದೇವಾಲಯ. ಈ ನಗರವನ್ನು ವೇ ರಾವಳ. ಪ್ರಭಾಸ. ಆನರ್ಥ್ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಸೌರಾಷ್ಟ್ರದ ದಕ್ಷಿಣ ಭಾಗದ ಅರೇಬಿಯನ ಸಮುದ್ರ ದಂಡೆಯಲ್ಲಿದೆ.
ಸೋಮನಾಥನ ದರ್ಶನದಿಂದ ಭಕ್ತರ ಸರ್ವ ಪಾಪಗಳು ದೂರವಾಗುತ್ತವೆ. ಅಪೇಕ್ಷಿತ ಫಲ ಅನುಭವಿಸಿ ಮರಣಾನಂತರ ಸ್ವರ್ಗ ಸೇರುತ್ತಾರೆ ಎಂಬ ಪ್ರತೀತಿ.
ಈ ಕ್ಷೇತ್ರದ ಕುರಿತಾಗಿ ಪುರಾಣದಲ್ಲಿ ಕಥೆಯಿದೆ ದಕ್ಷ ಪ್ರಜಾಪತಿಯ ಇಪ್ಪತ್ತೇಳು ಹೆಣ್ಣು ಮಕ್ಕಳೂ ಚಂದ್ರನ ಪತ್ನಿಯರು. ಇವರೆಲ್ಲರನ್ನು ಸಮನಾಗಿ ನೋಡಿಕೊಳ್ಳುತ್ತೇನೆಂದು ಚಂದ್ರ.. ಪ್ರಜಾಪತಿಗೆ ಭಾಷೆ ಕೊಟ್ಟಿರುತ್ತಾನೆ. ಆದರೆ ಉಳಿದವರನ್ನು ನಿರ್ಲಕ್ಷಿಸಿ ಕೇವಲ ರೋಹಿಣಿಯನ್ನು ಮಾತ್ರ ಪ್ರೀತಿಸಲಾರoಭಿಸುತ್ತಾನೆ. ಇದರಿಂದ ಸಿಟ್ಟಾದ ಉಳಿದವರು ದಕ್ಷನಿಗೆ ದೂರು ನೀಡುತ್ತಾರೆ. ಸಿಟ್ಟಾದ ದಕ್ಷನು….. ಚಂದ್ರನಿಗೆ ಕ್ಷಿಣಿ ಸುವಂತೆ ಶಾಪಕೊಡುತ್ತಾನೆ. ಆಗ ಚಂದ್ರನಿಗೆ ತಪ್ಪಿನ ಅರಿವಾಗಿ ಕ್ಷಮಿಸಲು ಬೇಡಿಕೊಳ್ಳುತ್ತಾನೆ…. ದಕ್ಷನು ಶಾಪವನ್ನು ಉಪಾಸoಹ ರಿಸುವ ಶಕ್ತಿ ನನ್ನಲ್ಲಿಲ್ಲ. ಎಂದನು.
ಬ್ರಹ್ಮನ ಸಲಹೆಯoತೆ ಶಂಕರನ ಉಪಾಸನೆ ಮಾಡಿ ಶಾಪ ವಿಮುಕ್ತನಾದ.ಆ ಕ್ಷೇತ್ರವೇ ಪ್ರಭಾಸ ಕ್ಷೇತ್ರ.ಬಳಿಕ ಚಂದ್ರ ಇಲ್ಲಿ ಶಂಕರನಿಗಾಗಿ ಸ್ವರ್ಣ ಮಂದಿರ ಕಟ್ಟಿಸುತ್ತಾನೆ. ಕಾಲಗತಿಯಲ್ಲಿ ನಷ್ಟವಾಗಿ ರಾವಣನು ಬೆಳ್ಳಿ ಮಂದಿರಕಟ್ಟಿಸುತ್ತಾನೆ. ಅದೂ ನಷ್ಟವಾಗಿ ಕೃಷ್ಣ ಶ್ರೀಗಂಧದ ಮಂದಿರ ನಿರ್ಮಿಸುತ್ತಾನೆ
ಆರು ಶತಮಾನಗಳ ನಂತರ ಧರ್ಮಸೇನ ಮಹಾರಾಜ ಪುನಃ ಮಂದಿರ ಕಟ್ಟಿಸುತ್ತಾನೆ ಇದೂ ಕೂಡ ಅರಬ್ಬರ ಆಕ್ರಮಣ ದಿಂದ ಭಗ್ನ ವಾಯಿತು.
ಮುಂದೆ ಚಾಲುಕ್ಯ ಅರಸನಾದ ಭೀಮದೇವ ಪುನ್ಹ ಪ್ರತಿಷ್ಠಾಪಿ ಸುತ್ತಾನೆ.ಮೊಹಮ್ಮದ ಘಜ್ನಿ ಸೋಮನಾಥ ಮಂದಿರದಲಿ ಅಪಾರವಾದ ಸಂಪತ್ತು ಇದೆ ಎಂದು ಮಂದಿರ ನಾಶಗೊಳಿಸಿ ಅಪಾರ ಪ್ರಮಾಣದಲ್ಲಿ ಸಂಪತ್ತು ದೋಚಿಕೊಂಡು ಹೋಗುತ್ತಾನೆ.
ಆಗ ಗುಜರಾತ್ ಹಾಗೂ ಮಾಳವದ ದೊರೆಗಳಾದ ಭೀಮ್ ಹಾಗೂ ಭೋಜ ಎಂಬವರುಪುನಃ ಮಂದಿರ ಕಟ್ಟುತ್ತಾರೆ.
ಮುಂದೆ ಮತ್ತೆ ಮಂದಿರಅಲ್ಲವುದ್ದಿನ್ ಖಿಲ್ಜಿಯ ಸೇನಾನಿ ಅಲಫ್ಖಾನನ್ನಿಂದ ಮಂದಿರ್ ಭಗ್ನ ವಾಯಿತು. ಜುನಾಗಡದ ರಾಜ್ ಮಹಿಂಪಾಲ ಮಂದಿರದ ಜೀರ್ನೋದ್ಧಾರ ಮಾಡುತ್ತಾರೆ. ಆದರೂ ಅನೇಕ ಬಾರಿ ಹೀಗೆ ಮಂದಿರ್ ದ್ವಂಸಗೊಂಡು ಕೊನೆಗೆ ರಾಣಿ ಅಹಲ್ಯಬಾಯಿ ಹೊಳ್ಕರ ಕ್ರಿ. ಶ 1783ರಲ್ಲಿ ಹೊಸ ಮಂದಿರ ಕಟ್ಟಿಸುತ್ತಾಳೆ. ಮುಂದೆ ಈ ಮಂದಿರವನ್ನು ಸರ್ದಾರ ವಲ್ಲಭಬಾಯಿ ಪಟೇಲರು ಹೊಸ ಮಂದಿರ ಕಟ್ಟಿಸುತ್ತಾರೆ.
ಮೇ 1951ಮೇ 11ರಂದು ರಾಷ್ಟ್ರಪತಿ ಶ್ರೀ ಬಾಬು ರಾಜೇಂದ್ರ ಪ್ರಸಾದರ್ ಅಮೃತ್ ಹಸ್ತದಿಂದ ಶಿವಲಿಂಗದ ಪ್ರತಿಷ್ಠಾಪನೆಯಾಗಿ ಹಿಂದೂ ಸಮಾಜ ನೆಮ್ಮದಿ. ಸಂತಸದ ನಿಟ್ಟುಸಿರು ಬಿಟ್ಟರು.
ಇಂದಿನ ಹೊಸ ಮಂದಿರ್ ಭವ್ಯ. ಸುಂದರ ಅಪೂರ್ವ ಶಿಲ್ಪಕಲಾ ಮಂದಿರ್ವಾಗಿ ರೂ ಪುಗೊಂಡಿದೆ. ಸಾವಿರಾರು ಯಾತ್ರಿಕರು ನಿತ್ಯ ದರುಶನ ಪಡೆಯುತ್ತಾರೆ. ಪಕ್ಕದ ಸಮುದ್ರ ತೀರದ ಅಲೆಗಳು ಸೋಮನಾಥ ನ ಪಾದ ತೊಳೆಯಲು ಭೋರ್ಗರಿಸಿ ಅಪ್ಪಳಿಸುವ ದೃಶ್ಯ ಮೈನವಿರೇಳಿಸುತ್ತದೆ.ಈ ಮಂದಿರ ತನ್ನ ವೈಭವಕ್ಜೆ ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ. ಇರಾನಿನ ಕೊಲ್ಲಿ ರಾಷ್ಟ್ರ ಗಳಿಂದ ಬರುವ ವ್ಯಾಪಾರಿಗಳು ತಮ್ಮ್ ಯಶಸ್ಸಿಗೆ ಸೋಮನಾಥ ನಲ್ಲಿ ಪ್ರಾರ್ಥಿಸಿ ಹರಕೆ ಸಲ್ಲಿಸಿ ತಮ್ಮ್ ಲಾಭದ ಕೆಲವಂಶ ಸೋಮನಾಥ್ನಿಗೆ ಅರ್ಪಿಸುತ್ತಿದ್ದರು ಹಾಗಾಗಿ ಅಪಾರ ಪ್ರಮಾಣದ ಮುತ್ತು. ರತ್ನ. ವಜ್ರದ ರಾಶಿ ಇಲ್ಲಿತ್ತು.
ಈಗಿನ ದೇವಸ್ಥಾನ ಆಧುನಿಕ ವ್ಯವಸ್ಥೆಯೊಂದಿಗೆ ಭವ್ಯ ವಾಗಿದೆ ವಿಶಾಲ ಪ್ರಾಂಗಣ. ದೇವಸ್ಥಾನ ತಲುಪಲು ಬ್ಯಾಟರಿ ಕಾರ್ ವ್ಯವಸ್ಥೆ ಮಾಡಿದ್ದಾರೆ. ಪ್ರತ್ಯೇಕ ಪ್ರಸಾದ ಕೌಂಟರ್. ಶಿಸ್ತು ಪಾಲನೆ. ದೊಡ್ಡದಾದ ಉದ್ಯಾನಇದೆ. ಸುಂದರ ಕೆತ್ತನೆಯ ದೇವಸ್ಥಾನ.17ಬಾರಿ ಕೆಡವಿ ಕಟ್ಟಲ್ಪಟ್ಟ ಈ ದೇವಸ್ಥಾನ ಇಂದಿಗೂ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಸುಂದರ. ಸ್ವಚ್ಯ ಪರಿಸರ. ಭಕ್ತಿ ಹಾಗೂ ಮನದಲ್ಲಿ ಶಾಂತಿ ಮೂಡುತ್ತದೆ.
ಇಲ್ಲಿ ತ್ರಿವೇಣಿ ಸಂಗಮ ಇದೆ.
ಇತಿಹಾಸದ ಲೈಟ್ ಮತ್ತು ಸೌಂಡ್ ಶೋ ಇದೆ. ಹೊಸ ವಿಶಾಲ ಮಂದಿರ ಶ್ರದ್ಧಾಳು ಗಳಿಗಾಗಿ ಬಾಗಿಲು ತೆರೆದು ಸ್ವಾಗತಿಸುತ್ತಿದೆ. ಏನೇ ಕಷ್ಟ ಬರಲಿ ಮತ್ತೆ ಮತ್ತೆ ಎದ್ದು ನಿಂತು ಈ ಮಂದಿರ ತನ್ನ ಮಹತ್ವ ಸಾರುತ್ತಿದೆ. ಜೀವಮಾನದಲ್ಲಿ ಸಂದರ್ಶಿಸಬೇಕಾದ ಶಕ್ತಿ. ಮುಕ್ತಿ ಪೀಠ.
ಸೌರಾಸ್ಟ್ರೆ ಸೋಮನಾಥoಚ.
ಶ್ರೀಶೈಲೇ ಮಲ್ಲಿಕಾರ್ಜುನಮo
ಉಜ್ಜಯನಿನಾಮ ಮಹಾಕಾಳo.
ಓಂಕಾರ ಮಮಲೇಶ್ವರಂ
ಪರಳ್ಯಾo ವೈದ್ಯನಾಥo ಚ
ಡಾಕಿನ್ಯಾo ಭೀಮಾ ಶಂಕರo.
ಸೇತುಬಂಧೇತು ರಾಮೇಶo. ನಾಗೇಶo ದಾರುಕಾವನೇ.
ವಾರಣ್ಯಾತು ವಿಶ್ವೇಶ್ವರಂ
ತ್ರೈಯoಬಕo ಗೌತಮಿ ತಟೇ
ಹಿಮಾಲಯತು ಕೇದಾರo.
ಗ್ರೂಷ್ಮೆಣೇಶo ಶಿವಾಲಯೇ
ಏತಾನಿ ಜ್ಯೋತಿರ್ಲಿoಗಾನಿ
ಸಾಯo ಪ್ರಾತಃ ಪಠ ನಿತ್ಯo
ನರಸಪ್ತಜನ್ಮ ಕೃತ ಪಾಪo ಸ್ಮರಣೇನ ವಿನಶ್ಯತಿ. 🙏
✍️ಶ್ರೀಮತಿ. ವಿದ್ಯಾ. ಹುಂಡೇಕರ.