ಬಾಲ್ಯದ ಸೈಕಲ್ ಆಟ

ಲಲಿತ ಪ್ರಬಂಧ

ಬಾಲ್ಯದ ಸೈಕಲ್ ಆಟ

1980ರ ದಶಕದಲಿ ನಾನಿದ್ದ ಗ್ರಾಮೀಣಪ್ರದೇಶ ಕನಕಗಿರಿಯಲಿ ಸ್ತ್ರೀ ಶಿಕ್ಷಣದಬಗ್ಗೆ ಅಷ್ಟೇನು ಕಾಜಿಇರತಿರಲಿಲ್ಲ ಪಾಲಕರಲಿ,ಸುಮ್ನೆ ಕಳಿಸತಿದ್ರು 7ನೇ ಕ್ಲಾಸ್ 5ನೇಕ್ಲಾಸತನಕ ಒದ್ಲಿಬಿಡಂತ ಮತ್ತು ಅವಾಗ ಸರಕಾರಿ ಶಾಲೆನಾಎಲ್ಲರಿಗೂ ,ಈಗಿನಂಗ ಅವಾಗ ಅಷ್ಟೋಂದು ಸೌಕರ್ಯನು ಇರಲಿಲ್ಲ,ಅಂದ್ರ ಸಮವಸ್ತ್ರ,ಪುಸ್ತಕ,ಬ್ಯಾಗು,ಮತ್ತು ಸೈಕಲ್ ಕೊಡುವ ವ್ಯವಸ್ಥೆ ಇರಲಿಲ್ಲ,ಮತ್ತು ಪಾಲಕರು ಹೆಚ್ಚಾಗಿ ವ್ಯವಹಾರ,ವ್ಯವಸಾಯ ಅವಲಂಬಿಸಿರುವುದರಿಂದ ಮಕ್ಕಳ ಶಿಕ್ಷಣದ ಬಗ್ಗೆನಮ್ಮ ಕಡೆ ಹೈದ್ರಬಾದ ಕರ್ನಾಟಕ ಅಂತ ಕರೀತಿವಿಯಲ್ಲ ಅಲ್ಲಿ ಅಷ್ಟೋಂದು ಕಾಳಜಿ ಇರಲಿಲ್ಲ ತಾತ್ಸಾರ ಇತ್ತು.

ಇಂತಹ ಪರಿಸರದಲಿ ಬೆಳೆದಿದ್ದ ನಾನು ಓದುವದರ ಜೊತೆಗೆ ಸೈಕಲ್ ಕಲಿಯಬೇಕೆಂಬ ಆಸೆ ಮೂಡಿದ್ದು ಹ್ಯಾಂಗಪಂದ್ರ.ನಮ್ಮದು ಕೂಡು ಕುಟುಂಬ ಸುಮಾರು 50-60ಜನ ಎಲ್ಲರೂ ಕೂಡಿ ಇದ್ದವರು ಗುಗ್ಗಳಶೆಟ್ರ ಕುಟುಂಬಂದ್ರ ಅರ್ದ ಊರ ಇದ್ದಂಗ ನೋಡು ಅಂತಿದ್ರು ಊರಾಗಿನ ಮಂದಿ,ನಮ್ಮತಾತ ಅಮ್ಮ ಭಾಳ ಸಂಪ್ರದಾಯವಂತಿದ್ರು ಯಾರು ಸಹ,ಅವರ ಹಾಕಿದ ಗೆರಿ ದಾಟತ್ತಿರಲಿಲ್ಲ . ನಮ್ಮ ಅಪ್ಪ ಮತ್ತು ನಮ್ಮಕಾಕ ಇಬ್ರು ಕಿರಾಣಿ ಅಂಗಡಿ ಮಾಡತಿದ್ರು ,ಮತ್ತೆ ವಾರಕೊಂದುಸಲ ಹಳ್ಳಿ ಹಳ್ಳಿ ಸಂತಿ ಹಾಕತಿದ್ರು, ಇನ್ನೂಬ್ಬ ಕಕ್ಕ ದಲಾಲಿ ಅಂಗಡಿ ಮಾಡತಿದ್ರು,ಇಬ್ರ ದೊಡ್ಡಪ್ಪನವರು ಹೊಲ ಮಾಡಸತಿದ್ರು,ಹಿಂಗಾಗಿ ಎರಡು ಮೂರು ಸೈಕಲ್ ಇದ್ದವು ನಮ್ಮಾನೆಗಾ, ಸೈಕಲ್ ಮನಿ ಮುಂದನಿಂದರಿಸಿದಾಗ ನಾನು ಪೆಡ್ಲ್ ತುಳಿಯೋದು ಸೀಟಿನಮೇಲೆ ಕೂಡಾಕ ಹೋಗೋದು ಅಡ್ಡಗಾಲಹಾಕಿ ಹೊಡಾಕ್ ಹೋಗೋದು ಮಾಡತಿದ್ದೆ
ನಮ್ಮೋಣೆಗ್ ಹೈನರ್ ಪಾರ್ವತಿ ಅಕ್ಕ ಆಕಿ ಸೈಕಲ್ ಬಾರಿ ಮಸ್ತ್ ಹೊಡಿತಿದ್ಲು,ಆಕಿನ ನೋಡಿ ಮತ್ತೆ ಇನ್ನೊಬ್ಬಾಕಿ ನಮ್ಮೂರಾಗ ಶೈನಾಜ್ ಬೇಗಂ ಅಂತ ಇದ್ಲು ನಾ ಮೂರನೆ ಕ್ಲಾಸ್ ಇದ್ದಾಗ ಆಕಿ 7ನೇ ಕ್ಲಾಸ್ಇದ್ಲು,ಆಕಿನೂ ಇಷ್ಟಮಸ್ತ್ ಸೈಕಲ್ ಸೊಯ್ ಅನ್ನಂಗ ಹೊಡಿತಿದ್ಲಂದ್ರ ನಾನಂತು ಆಕೀನ್ ನೋಡತಿದ್ದೆ. ಯಪ್ಪಾ ನಾನು ಆಕಿ ಹ್ಯಾಂಗ್ ಸೈಕಲ್ ಹೊಡಿಬೇಕಂತ ಭಾಳ ಆಸೆ ಇತ್ತು ಮನದಾಗ,ಆ ಶೈನಜಕ್ಕ ಹೊಲದಿಂದ ಮೇವು ತರತಿದ್ಲು ಸೈಕಲ್ ಮೇಲೆ, ಯಾರಿಗೂ ಅಂಜತಿದ್ದಿಲ್ಲ ಆಕಿ,ನಮ್ಮೂರಗಂತು ಎಲ್ಲರೂ ಬಾಯಿತಕ್ಕೊಂಡ ನೋಡತಿದ್ರು ಆಕಿನ್.ನನಗಂತು ಯಾವಗರ ನಾನು ಆಕಿನಂಗ ಸೈಕಲ್ ಕಲಿತನೋ ನಾನು ಯಾವಾಗ ಅವರಂಗ ಸೊಂಯ್ ಅಂತ ಸೈಕಲ್ ಬಿಟಗೊಂಡು ಹೋಗತಿನಿ ಅನಿಸಿತ್ತು.
ಪ್ರೈಮರಿ ಸ್ಕೂಲ್ವರೆಗೂ ಓಣಿಯ ಹುಡುಗರ ಹುಡುಗಿಯರ ಜೊತೆ ಲಗೋರಿ, ಕಬಡ್ಡಿ,ಚಿಣಿದಾಂಡ,ಗೋಲಿಗುಂಡಾಟ ಎಲ್ಲದರಲೂ ಕೂಡಿ ಆಡಿ ನಾನೆ ಮುಂದೆ ಇರತಿದ್ದೆ ಆದರೆ ಸೈಕಲ್ ಕಲಿಯಲು ಹೋದ್ರೆ ನಮ್ಮ ದೊಡ್ಡಪ್ಪ ಬೈತಿದ್ರು,ಏನ್ ಗಂಡ್ರಗೂಳಿ ಆದಾಂಗ ಎಲ್ಲ ಗಣಮಕ್ಕಳನ ಮಿರ್ಸಬೇಕಂತ ಮಾಡಿದಿ? ಹಿಂಗದ್ರ ಸಾಲೀನ್ ಬಿಡಸ್ತೀವಿ ನೋಡು ಅಂತಿದ್ರು,ಆಗ ನಾ ಅಂಜಿಕೊಂಡು ಏಲ್ಲಿ ಸಾಲಿ ಬಿಡಸ್ತಾರನಪ್ಪಂತ ತಿಳಿದು ಅಲ್ಲಿಗೆ ಬಿಟ್ಟದ್ದೆ.
ಒಂದ್ಸಲ ನಮ್ಮಪ್ಪನ ಜೊತಿಗೆ ಸೈಕಲ್ ಮೇಲೆ ಹೊಲಕ್ ಹೋಗಿದ್ದೆ ,ನಮ್ಮಪ್ಪ ಸೈಕಲ್ ಬದುವಿಗೆ ಬಿಟ್ಟು ಶೇಂಗಾ ರಾಶಿಮಾಡಲ್ಲಿ ಹೋಗಿದ್ರು ,ಆಗ ನಾ ಮೆಲ್ಲಕ್ ಹೋಗಿ ಸೈಕಲ್ಲ್ತಗೋಂಡು ಕಲ್ಲಿನಕಟ್ಟೆ ಹತ್ತಿರ ತಂದು ಕಟ್ಟಿಮ್ಯಾಲೆ ಹತ್ತಿ ಸೈಕಲ್ ಸೀಟಿನ ಮ್ಯಾಲೆ ಕುಂತಗೊಂಡ್ಯಾ ಯಾಕಂದ್ರ ಪೆಡ್ಲಹತ್ತಿ ಕುಂದ್ರಾಕ ಬರತ್ತಿದ್ದಿಲ್ಲ ಮತೆ ಇಳ್ಯಾಕುನ ಬರತ್ತಿದ್ದಿಲ್ಲ ಮತೆ ಕೇಳ್ರಿ ಪಜೀತಿ ಸೈಕಲ್ ಮೇಲೆ ಹತ್ತಿ ಸೀದಾಎನು ಹೊಡಕೊಂಡು ಹೋದೆ ನಮ್ಹೊಲ ಬಸ್ ,ಲಾರಿ,ಗಾಡಿ ವಾಹನಗಳು ಓಡಾಡುವ ಮೇನ್ ರೋಡಿನ ಬಗಲಗ ಇತ್ತು, ಅಪ್ಪಗ ಹೇಳದ ಕೇಳದ ಸೈಕಲ್ ಹತ್ತಿದ್ದೆ ಬೆಂವ್ ಅನ್ನಂಗ ಖುಷಿಯಿಂದ ಸೀದಾ ಹೊಡಕೊಂತ ಹೊಂಟಿದ್ದೆ,ಒಂದ್ಮೂರು ನಿಮಿಷದಾಗ ಎದರಗಡೆ ಹಡಗಲಿ ಗುಲ್ಬರ್ಗ ಸರಕಾರಿ ಬಸ್ ಬರದ್ನೋಡಿ ಕೈಕಾಲಯೆಲ್ಲಾ ತಣ್ಣಗಾಗಿ ಗಾಬರಿಯಾಗಕತ್ಬಿಡ್ತು, ಇಕ್ಕಾಡಿ ಇಳ್ಯಾಕ್ ಬರಂಗಿಲ್ಲ ಅಕ್ಕಾಡೆ ಸೈಡ್ ತಗೋಳಕ ಬರವಲ್ದು ಯಪ್ಪಾನನ್ ಪಜೀತಿ ಡ್ರೈವರ್ಗೆ ಗೊತ್ತಾಗಿ ಬ್ರೇಕ್ ಹಾಕಿ ಗಾಡಿ ನಿಂದ್ರಿಸಿದ,ನಾನಂತು ಹೌಹಾರಿ ಬಿದ್ದ ಬಿಟ್ಟಿದ್ದೆ,ಕೆಳಗಿಳಿದ ಬಂದ ಡ್ರೈವರ್ ಎಬಿಸಿ ನಿನಗೇನ್ ತಟಗರ್ ಅರವು ಐತೇನು ಇಲ್ಲ, ಗಾಡಿ ಓಡಾಡ ರಸ್ತಾದಾಗ ಸೈಕಲ್ ಕಲೆಕತ್ತಿದಿ ಅಂತಾ ಬೈಯೋದ್ರಾಗ ಬಸ್ಸಿನ ಕೆಲಮಂದಿ ಕಂಡಕ್ಟ್ರ್ ಎಲ್ಲರೂ ಕೆಳಗಿಳಿದ ಬಂದು,ಇದ್ ಜಾಗ ಐತಿ ನಿನಗ ಕಲ್ಯಾಕ? ಯಾರು ಇಲ್ಲನು ನಿನಜೊತಿಗೆ ಅನದ್ರಾಗ, ಬಸ್ ನಿಂತಿದ್ದ್ನೋಡಿ ಜನ ಎಲ್ಲ ಕೆಳಗಿಳದಿದ್ನೋಡಿ ನಮ್ಮಪ್ಪ ಮತೆ ಹೊಲದಾಗ ಕೆಲಸ ಮಾಡೋರು ಎಲ್ಲರೂ ಓಡೋಡಿ ನನ್ನತ್ರಬಂದು ಗಾಬರಿಯಾಗಿಬಿಟ್ಟಿದ್ರು, ಡ್ರೈವರ್ಂತು ನಮ್ಮಪ್ಪಗ್ ,ಎನ್ರಿ ನೋಡಾಕ್ ಬರಲ್ಲನಿಮಗ, ಗಾಡಿ ನಿಂದ್ರ್ಸಿದ್ರ ಎಷ್ಟ್ ಅನಾಹುತ ಆಗತಿತ್ತ್ ಗೊತ್ತೆನ್ರಿ,ನಮ್ ನೌಕರಿ ಕಳಕೊಂಡು ಮನಿಗೆ ಹೋಗಬೇಕಾಗತಿತ್ತು,ಅನದ್ರಾಗ್ ನಮ್ಮಪ್ಪ ,ಇರಲಿ ತಗಳ್ರಿ ಸಣ್ಣಹುಡುಗಿ ಮಳ್ಳ್ಐತಿ,ನಾವು ಅಲ್ಲಿ ರಾಶಿ ಮಾಡವತ್ನಾಗ್ ಇಕ್ಕಾಡೆ ಸೈಕಲ್ ತಗೊಂಡ್ ಬಂದಾಳ ಅಂತ ಅಂದ್ರು, ಅವಾಗ ನಮ್ಮಪ್ಪ ನನಗೆ ಬೈದ್ರು ನಿನಗ್ ಹೇಳಾಕ್ ಬರತ್ತಿಲ್ಲ ಯಾರನ್ನಾದ್ರು ಜೊತೆಗೆ ಕಳಸ್ತ್ತಿದ್ದೆ ಕಲಸಾಕ್ ಅಂತ ಬೈದು,ಕಾಲಿಗೇನರ್ ಪೆಟ್ಟ್ ಆಗೈತೇನು ಅಂತ ಕೇಳಿದ್ರು,ಮೊಣಕಾಲ ಎಲ್ಲಾ ಕೆತ್ತಿದ್ರೂ ನೋವು ಇದ್ರು ಇಲ್ಲಾಂತ ಸುಳ್ಳು ಹೇಳಿ ಒಳಗೋಳಗ ಸಂಕಟಪಟ್ಟ ಪಜೀತಿ ನೆನೆಸಿಕೊಂಡ್ರ,ಆ ಸೈಕಲ್ ಸವಾರಿಯ ನೆನಪು ಮುಟ್ಟಿಮುಟ್ಟಿ ನೋಡೆಕೆಣಂಗ ಮಾಡಿತ್ತು ನೋಡ್ರಿ,
,ನಮ್ ತಾತನಿಗೂ ಸಹ ಈ ಸುದ್ದಿ ಮುಟ್ಟಿತ್ತು, ಸೈಕಲ್ ಕಲ್ಯಾಕ್ಹೋಗಿ ಬಿದ್ದಾಳಂತ ತಿಳಿದು ತಗಳಪಾ ಶುರು ಆತು ನಮ್ಮಪ್ಪಗ್,ಬಸಪ್ಪಾ ನಿನಗೇನರ ತಟಗರ್ ಅರವು ಐತೇನು ಇಲ್ಲ ಬುದ್ದಿ ಎಲ್ಲಿಟ್ಟಿ,ಹೆಣ್ಣ್ ಹುಡುಗಿಗೆ ಸೈಕಲ್ ಹೊಡ್ಯಾಕ್ ಬಿಟ್ಟಿದ್ದಿ ಹೊಲದಾಗ,ಏನಕೇನರ್ ಆಗಿದ್ರ ಏನ್ಮಾಡತ್ತಿದ್ದಿ,ಅದಕಂತ್ರು ಸಣ್ಣ್ ಮಳ್ಳ್ ಅಂತಾರ ನಿನಗರ ತಿಳಿಲಿಲ್ಲೆನು,ಹೆಣ್ಮ್ಕ್ಕಳಿಗೆ ಸಡ್ಲ್ ಕೊಡಬಾರದು ಅಂತಿದ್ರು,ನಮ್ಮಪ್ಪ ತಾತನ ಎದುರು ಗಪ್ಚುಪ್ ಇದ್ರು, ತುಟಿ ಪಿಟಕ್ ಮಾಡಲಿಲ್ಲ, ಆದ್ರೆ ನಮ್ಮಪ್ಪ ನನಗಾತು ನನ್ತಂಗಿಗಾತು ಎಂದೂ ಬೇಧ ಬಾವ ಮಾಡಲಿಲ್ಲ,ನಮ್ಮ ತಮ್ಮನಜೊತೆಗೆ ನಮ್ಮನು ಸಹ ಅಷ್ಟೆ ಪ್ರೀತಿ ಮಾಡತಿದ್ರು ,ಹೋಟ್ಲುಕ್ಕೂ ಸಹ ಕರಕೊಂಡ ಹೋಗ್ತಿದ್ರು,,
ಮತೆ ಇನ್ನೊಂದಸಲ ಎನಾಯ್ತಂದ್ರ ನಮ್ ಕಿರಾಣಿ ಅಂಗಡ್ಯಾಗಿರೊ ಗುಮಾಸ್ತರು ನಬಿಸಾಬ ಮತ್ತು ಮುನ್ನೂರಾಜಪ್ಪ ಅಂತ ಇದ್ರು ಭಾಳ ಒಳ್ಳೆಯವರಿದ್ರು,ನಮ್ ಜೊತಿಗೆ ಭಾಳ ತಮಾಷೆ ಮಾಡತಿದ್ರು,ನೋಡಮ್ಮ ಲಲಿತೆಮ್ಮಾ ಇವತ್ತುತಾತನ ಜೊತೆಗೆ .ಹ್ಯಾಂಗ್ ಸುಳ್ಳೇಳಿ ಬೈಸ್ತೀವಿ ನೋಡಮ್ಮಅಂತ ಹೇಳಿ,
ತಾತ ನೋಡಪ್ಪ ಇವತ್ತು ಕೊಪ್ಪಳ ಬಸ್ ಹಿಂದ ಸೈಕಲ್ ತಗೊಂಡ್ ಹೋಗ್ತಾ ಇದ್ಲು ಲಲಿತೆಮ್ಮಾ,ಅಂತ ಹೇಳೋದೆ ತಡ,ನಮ್ಮತಾತ ಕರ್ಕಂಬರಿ ಇಲ್ಲಿ ಆಕಿನ್ ಅಷ್ಟ ಅದಮೀರಿ ಬಿಟ್ಟಾಳೇನ್ ಆಕಿ,ಬಡಿಗಿ ತಗಂಡ್ವಿ ನಾಕ್ ಬಿಗದ್ರ ಸೀದಾ ಆಗ್ತಾಳಂತಿದ್ರು ,ನಮ್ಮ ತಾತ ಅಂಗನ್ನೋದು ಕೇಳಿ ಎಲ್ಲರೂ ನಗದ್ ನಗೋದು, ಇಂತ ಸೈಕಲ್ ಹವಾ ಂತರಂ ಎಷ್ಟೋ ಆಗಿ ಸೈಕಲ್ ಚಕ್ರದ ತಿರುಗಿದಂಗ ಒಂದೊಂದು ನೆನಪು ನನ್ ತಲ್ಯಾಗ ಈಗೂನು ತಿರಗ್ತಾವ ನೋಡ್ರಿ ,ಅಯ್ಯೋ ಸೈಕಲ್ಲೆ ನೀನ್ಯಾಕೆ ಇನ್ನೂ ನೆನಪಲ್ಲೆ ನಿಂತಿಯಲ್ಲೆ ಅಂತ ಅನಿಸುತ್ತೆ.
ಮತೆ ಇಂಗ ಸ್ವಲ್ಪ ದಿವಸಾದಮೇಲೆ ಮತೆ ಹುಚ್ಚು ಮನಸು ಮಂಗ್ಯಾ ಇದ್ದಂಗ ಹೌದಲ್ರಿ,ಮತೆ ಸೈಕಲ್ ಕಲೀಬೇಕು ಅಂತ ಕುಣಿಸಕ ಹತ್ತಿತ್ತು ನೋಡ್ರಿ,

ನಮ್ಮೂರಾಗ ಖಾನ್ಸಾಬ್ ಅಂತ ಇದ್ರು,ಅವರದು ಸೈಕಲ್ ಶಾಪ್ ಇತ್ತು, ಬಾಡಿಗೆಗೆ ಸೈಕಲ್ ಕೊಡತಿದ್ರು ಮತ್ತು ಪಂಚರ್ ಹಾಕತಿದ್ರುಸೈಕಲ್ಗೆ ,ಮತೆ ಆ ಖಾನ್ಸಾಬ್ ಇಷ್ಟದಪ್ಪ ಇದ್ರುಅಂದ್ರೆ ಇಂತಾದೊಡ್ಡ ಹೊಟ್ಟೆ ಧಡೂತಿ ಮನುಷ್ಯ ಆನೆಇದ್ದಂಗ್ ಇದ್ರು,ಆದ್ರೆ ಅವರು ಸ್ವಭಾವದಿಂದ ಮಾತ್ರ ಭಾಳಾನ ಸಂಪನ್ನ ಮತ್ತು ಒಳ್ಳೆ ಮನುಷ್ಯ ಇದ್ರು, ಅವರು ಸೈಕಲ್ ಹೊಡಕೊಂತ ಬರ್ತಾಇದ್ರ ಕೆಲವೊಬ್ರು ಆ ಸೈಕಲ್ ಪಂಚರ್ ಆಗೋದು ಗ್ಯಾರಂಟಿ ನೋಡಪ ಅಂತಿದ್ರು,ಮತೆ ಇನ್ನೊಬ್ರು ಪಂಚರ್ ಅಂಗಡಿ ಆತಂದ್ ಐತಿ ಇರ್ಲಿಬಡೋ ಅಂತಿದ್ರು,ಆದರೆ ಖಾನ್ಸಾಬ್ ಚಾಚಾ ಮಾತ್ರ ಭಾಳ ಸಮಾಧಾನ ಮನಷ ಇದ್ರು ಯಾರ್ ಏನ್ಂದ್ರು ಹಚ್ಚಿಕೆಳಾಕ ಹೋಗತ್ತಿದ್ದಿಲ್ಲ,ಇರಲಿಬಿಡು ನಾ ದಪ್ಪ್ ಅದಿನಿ ಅದಕ್ಕ ಅಂತಾರ ಅದಕ್ಯಾಕ ಸಿಟ್ಟು,ನಾಚಿಕೆ ಅಂತಿದ್ರು,ಇದ್ಯಾಕಪ್ಪ ಇವೆಲ್ಲ ನಮಗೊತ್ತಾಗತಿದ್ವು ಅಂದ್ರ, ನಾವು

ಬ್ಯಾಸಿಗಿ ಸೂಟ್ಯಾಗ ಸೈಕಲ್ ಕಲೀಬೇಕಂತೇಳಿಅವರ ಅಂಗಡಿ ಮುಂದ ನಿಂತಾಗ ಇವೆಲ್ಲ ನಡೀತಿದ್ವು,
ನಾಕಣಿಗೆ ಒಂದತಾಸ ಸೈಕಲ್ ಬಾಡಿಗೆ ಕೊಡತಿದ್ರು ಅವಾಗೆಲ್ಲ,ಒಂದ ಸಲ ನಾನು ನಮ್ಮ ಓಣಿಗಿರೊ ಹೈನೆರ್ ಪಾರ್ವತಿಅಕ್ಕ ಸೇರಿ ಸೈಕಲ್ ತಗಂಡ್ವಿ ಆ ಅಕ್ಕಗ ಮಸ್ತ್ ಸೈಕಲ್ ಹೊಡ್ಯಾಕ ಬರತಿತ್ತುನನಗೂ ಕಲಿಸ್ತಾಳಂತ ನಾನು ನಮ್ಮಪ್ಪಗ ದೊಡ್ಡಪ್ಪಗ ಗೊತ್ತಗದಂಗ ತಗಂಡು ಅವರ ಎಲಿ ತೋಟದಕಡೆ ಹೋಗಿದ್ವಿ,ಆ ಅಕ್ಕ ನನಗ ಕಲಸ್ತಿನಿಂತ ಹೇಳಿ ಸೈಕಲ್ ಹಿಡಕೊಂಡ್ಲು ನಾನ್ ಸೀಟಿನ ಮೇಲೆ ಕೂಡೊತನಕ ಆಮೇಲೆ ಹಿಂದ ಗಡೆ ಹಿಡಕೊಂಡು ಸವಕಾಶ ಬರತಾಇದ್ಲು ನಾ ಸ್ವಲ್ಫ ಮುಂದ ಹೋಗಕತ್ತಿದ್ದೆ ಕೈ ಬಿಟ್ಲು ಆಗ ನನಗ ಪೂರಾ ಬ್ಯಾಲೆನ್ಸ ತಪ್ಪಿ ದೊಪ್ಪಂತ ಬಿದ್ರ ಬದುವಿನ್ಯಾಗಿನ ಮುಳ್ಳೆಲ್ಲಾ ಮೈಕೈಗೆ ಚುಚ್ಚಕೊಂಡಿದ್ದವು ಜೋರಾಗಿನ ಅಳಕತ್ತಿದ್ದೆ,ಆಗ ಅಕ್ಕ ಓಡಿ ಬಂದು ಎಬ್ಬಿಸಿ ಎನ್ ನೀ ಸರಿಯಾಗಿ ಬ್ಯಾಲೆನ್ಸ ಹಿಡಕಣಬರಲ್ಲಸೈಕಲ್ ಕಲಸುಅಂತಿ ಕಲಸಕೊದ್ರ ಹಿಂಗ ಮಾಡಕೆಂತಿ ನಿಮ್ಮನೆಗ ನನಗ ಬೈಯತಾರ ನೋಡವ ಅಂತ ಹೇಳಿ,ವಾಪಾಸ ಕರಕೊಂಡ ಬಂದ್ಲ.ಹಿಂಗ ನೋಡು ಸೈಕಲ್ ಕಲಿಬೇಕಂದ್ರ ಒಂದಸಲಕ ಬರಲ್ಲ ಅಂತಿದ್ಲು.
ಮತ್ತೆ ಸ್ವಲ್ಫ ದಿವಸಾದಮೇಲೆ ಆ ಪಾರ್ವತೆಕ್ಕ ತಮ್ಮ ಎಲಿತೋಟಕ ತನ್ನ ಸೈಕಲ್ ಮೇಲೆ ನನ್ನನ್ನು ಹಿಂದ ಕರಕೊಂಡ ಹೋಗಿದ್ಲು ಒಬ್ಬಾಕಿ ಆಗ್ತೀನಿ ಬಾ ಅಂತ.ಆಗ ಆಕಿ ದೀಪಾ ಮಂಜುಳ ಅಶೋಕ, ಸೀತಾರಾಮ್, ಅಭಿನಯಿಸಿದ ಸಿನಿಮಾದ ಕತಿ ಹೇಳಕಂತ ಹೊಡಿತಿದ್ಲು ಇಷ್ಟ ಚೆಂದ ಕತಿ ಹೇಳತಿದ್ಲು ಅಂದರೆ ಸಿನಿಮಾ ಪೂರ್ತಿ ಕಣ್ಣಿಗ ಕಟ್ಟುವ ಹಾಗೆ ನನಗೆ ಇಗ್ಲೂನು ನೆನಪೈತಿ ,ಅಶೋಕ ,ಮಂಜುಳ ಸೈಕಲ್ ಮೇಲೆ ಹಾಡುವ ಹಾಡು ,ನಗುನಗುತಿರುವ
ಮೊಗದಲಿ ಅರಳಿದೆ ತಾವರೆ ಚೆಲುವಲಿ,ಅಂತ ಅಕ್ಕ ಸೈಕಲ್ ಹೊಡಕೊಂತ ಆ ಸಿನಿಮಾದ ಆ ದ್ರಶ್ಯ ಹಾಡಿದ್ದು ,ಆ ಸಿನಿಮಾದಲಿ ಮಂಜುಳಾ ಮುದುಕನ ಮಾಡಿಕೊಂಡಿದ್ದು ,ದಾರಿ ಕಾಣದಾಗಿದೆ ರಾಘವೇಂದ್ರನೆ,ಹಾಡು ಮತೆ ಸಮಯಾ ಒಲಿದಿದೆ
•ನೆಲೆದಿದೆ ನಗುತಿದೆ,,,,ಅಂತಾ ಇಷ್ಟ ಚೆಂದ ಕತೆ ಹೇಳುವ ಆಕಿಯ ಜಾಣ್ಮೆ, ಸೈಕಲ್ ಹೊಡೆಯುವ ಧೈರ್ಯ ನನಗಂತು ಇನ್ನು ಕಣ್ಣ್ಮುಂದೆ ಕಟ್ಟಿದಂಗಿದೆ. ಮತೆ ಸ್ವಲ್ಪ ಈಗ ಹಿಂದಕ ಹೋಗಂಬ್ರಿ ಅಂದ್ರ ಪ್ಲಾಶ್ಬ್ಯಾಕ್ ಅಂತಿವಲ್ರಿ ಹಂಗ, ನಾನು ನಮ್ಮಪ್ಪನಜೊತಿ ಹೊಲಕ ಹೋದಾಗ ಬಿದ್ದಿದ್ದು ಹೇಳಿದನಲ್ರಿ ಮನಿಗೆ ಬಂದ ಮೇಲೆ ನಮ್ಮ ತಾತ ನಮ್ಮಪ್ಪಗ ಬೈದದ್ದು, ಇದರ ಜೋತೆಗೆ ,ರಾತ್ರಿ ಮನೆಗೆ ಬಂದ ಮೇಲೆ ಕಾಲ ಬ್ಯಾನಿ ಆಗಿ ಅಳಾಕತಬಿಟ್ಟದ್ದೆ ನಮ್ಮಪ್ಪ ನಮ್ಮವ್ವಗ ಹೇ ಲಲಿತೆವ್ವ ಹೊಲದಾಗ ಸೈಕಲ್ ಹಾಕ್ಕೊಂಡ ಬಿದ್ದ ಬಿಟ್ಟಾಳ ಆಕಿಗ ನೋಡು ಸ್ವಲ್ಗ ಉಪ್ಪಿನ ಕಾವು ಕೊಡು ,ಅಂತ ಅನ್ನೋದೆ ತಡ ,ನಮ್ಮವ್ವ ಏನ್ ಮಾಡಕ್ ಹೋಗಿದ್ದೆವ್ವ ಕಮಯ್ ಅಂತ ಅಂದು ಕಾಲ ತೋರಸಂತೇಳಿ ನೋಡಿ ಎಂತಕಿ ಅದಿಯವ ನೀನು ಯಾವಾಗರ ನೋಡ್ಲಿಗಣಮಕ್ಕಳ ಮಾಡಿದಂಗ ಮಾಡಬೇಕಂತಿದಿ ನೋಡು ಮಂಡೆಲ್ಲ ತೆರಕಂಡ ಹೋಗ್ಯಾವ ಅಂತಹೇಳಿ ರಕ್ತ ಬರವೂತ್ನಾಗ ಕಾವು ಕೊಡೋದು ಬ್ಯಾಡಂತ ನಮ್ಮಪ್ಪಗೇಳಿ ಡಾಕ್ಟರತಲಿ ಕರಕೊಂಡ ಹೋಗಿ ತೋರೆಸಗೆಂಡ ಬರಬಬೇಕಿಲ್ರಿ ಈಕಿಗೆಅಂತ ಕಳಿಸಿದ್ಲು ನಮ್ಮವ್ವ,. ಮರು ದಿವಸ ಬ್ಯಾಂಡೆಜ್ ಹಾಕಿಕೊಂಡು ಸಾಲಿಗೆ ಹೋಗಿದ್ದೆ, ಎಲ್ರಿಗೂ ಗೊತ್ತಾಗಿತ್ತು ಆಗಲೆ, ದಾರಿಯಲಿ ಎಲ್ಲರೂ ಏನ್ ಸೈಕಲ್ ಸವಾರಿ ಪೋರಿ ,ಕುಂಟೆಗೆಂತ ಬಂದಳ್ ನೋಡ್ರಿ, ಅಂತ ನಕಲಿ ಮಾಡತ್ತಿದ್ರು. ಮತೆ ನಮ ಸಾಲೆಗ ನನ್ನ ಗೆಳತಿ ರತ್ನ ನಂದೆಲ್ಲ ಅವಾಂತರ ಕೇಳಿದಮೇಲೆ,ಆಕಿದು ಒಂದು ಸೈಕಲ್ ಘಟನೆ ಹೇಳಿದ್ಲು,ಆಕಿನು ಹಿಂಗ ಅಡ್ಡಗಾಲ ಸೈಕಲ್ ಹೊಡಕೊಂಡು ಬರತಿದ್ಲಂತ ಎದರಗಡೆ ಒಂದ ಎತ್ತಿನಬಂಡಿ ಹೊಡಕೊಂಡು ಬರತಿದ್ರಂತ, ಸೈಡ್ನಲಿ ಸರೇಕೆ ಹೋಗಿ ಬಗಲಾಗ ಘಟರ್ದಾಗ ಸೈಕಲ್ ಹಾಕ್ಕೊಂಡ ಬಿದ್ಲಂತ್ ಮೈಕೈ ಬಟ್ಟಿ ಎಲ್ಲಾ ರಜ್ಜರಜ್ಜಾಗಿ ಬಿಟ್ಟದವಂತ್ ಬಂಡೆಗಾ ಕಂತವರು ಬಂದ ಎಬಿಸಿದರಂತ, ಆಕಿ ಈಗ ಹೆಂಗಹೋಗೋದು ಮನಿಗೆ ಬಜಾರದಾಗ ಎಲ್ರೂ ನೋಡತಾರಂತೇಳಿ ಅಲ್ಲಿ ಹೊತ್ತಮುಳೋಗತನಕ ಅಲ್ಲೆ ಒಬ್ರ ಗುಡಿಸಲದತ್ರ ನಿಂತುಗೊಂಡು ಆ ಮೇಲೆ ಮನಿಗೆ ಹೊದ್ಲಂತ ಎಲ್ಲರೂ ಗಾಬರಿಆಗಿಬಿಟ್ಟಿದ್ದರಂತ್, ಆಮೇಲೆ ಈಟಕಿ ಎಲ್ಲ ಹೇಳಿದ ಮೇಲೆ ನಕ್ಕಿದ್ದ ನಕ್ಕದ್ದಂತ ಎಲ್ರೂ, ಹಿಂಗ ನೋಡ್ರಿ ಬಿದ್ದ ಪೆಟ್ಟಕ್ಕಿಂತ ನಕ್ಕಪೆಟ್ಟ ಬಾಳ ನಾಡತಾವ ಮನಸಿಗೆ, ಒಟ್ಟಾರೆ ಬಾಲ್ಯದಲಿ ಸೈಕಲ್ ಕಲಿಯುವಾಗಿನ ಅವಾಂತರ,ಸೈಕಲ್ ಮೇಲೆ ಕುಳಿತ ಪುಳುಕುತನ,ಅಯ್ಯೋ ಸೈಕಲ್ಲೆ ನೀನ್ಯಾಕೆ ಎಲ್ಲರ ನೆನಪಲ್ಲೆ ,ಕುಂತಿಯೆ ಮನದಲ್ಲೆ ಅಂತ ಅನಿಸೈತಿ ನೋಡ್ರಿ,ಸೈಕಲ್ ನ ಅನುಭವಗಳು ಸೈಕಲ್ ಚಕ್ರದಂಗ ತಿರುಗಿ ತಿರುಗಿ ಬರ್ತಾವ ನೋಡ್ರಿ,ಹಂಗ ಬದುಕುನು ಸಹ ಒಂದತರಹ ಸೈಕಲ್ ಇದ್ದಾಂಗ ನೋಡ್ರಿ,ಸಮತೋಲನ ಕಾಯ್ದಕೊಂಡ್ರ ಬದುಕು ಸರಾಗವಾಗಿ ಸಾಗುತ್ತೆ ಜೋಲಿ ಹೊಡ್ಯಾಕಿನ ಮುಂಚೆ ಜೋಲಿ ಹಿಡದ್ರ .
ಮತೆ ಇನೊಂದ ವಿಶೇಷಂದ್ರ ಸೈಕಲ್ಂದ್ರ ನಮ್ಮೂರಾಗಿನ ಅಶೋಕಣ್ಣ ಅಂಚೆಅಣ್ಣ ಸಂದೇಶವು ಹೊತ್ತಗೊಂಡ ಮನಿಮುಂದ ಸೈಕಲ್ ಗಂಟೆ ಬಾರಿಸೋದೆ ತಡ ಯಾರಾದ್ರೂ ಕೈಯಾಗಿನ್ಕೆಲಸಬಿಟ್ಟು ಮೊದಲ ಹೋಗಿ ಇಸ್ಕೊಂತಿದ್ರು,ಏನ್ ಇರಬಹುದು ಸುದ್ದಿಅಂತಹೇಳಿ.
ಮತೆ ವಾರಕೊಂದ ಸಲಬರುವ ತರಂಗ ಹಾಕುವ ನಮ್ಮೂರಾಗಿನ ಬಾಳಪ್ಪನ ಸೈಕಲ್ ಗಂಟೆ ಮನಿಮುಂದ ಬಾರಸಿದ್ರು ಅಂದ್ರ ನಮ್ ತಂಗಿನಾನು ಓಡೋಡಿ ಹೋಗತ್ತಿದ್ವಿ ನಾಮುಂದು ನೀ ಮುಂದು ಅಂತ ಯಾರು ಮೊದಲು ಇಸಗೊಂತಾರೊ ಅವರು ಪೂರಾ ತರಂಗ ಓದುವವರೆಗೂ ಕೊಡತಿದ್ದಿಲ್ಲ,ಹೀಗೆ ಸೈಕಲ್ ಅನೇಕರಿಗೆ ಅನೇಕ ರೀತಿಯ ಪಜೀತಿ ಎಬ್ಬಿಸಿ ಕೈ ಕಾಲ, ಗದ್ದ,ನಡ ಎಲ್ಲ ಅವಯವಗಳಿಗೆ ಪೆಟ್ಟು ಕೊಟ್ಟು ತನ್ನ ಮ್ಯಾಲೆ ಕೂಡೋಕೆ ಅನುಮತಿ ಕೊಡತೈತಿ ನೋಡ್ರಿ ,ಆದರೂ ಸೈಕಲ್ ಬಾರಿ ಬಿಡ್ರಿ.ಸಣ್ಣವರಿದ್ದಾಗ ಪೆಟ್ಟ್ ತಿನ್ನಸ್ತಾ, ದೊಡ್ಡವರಾಗಿ ಸೈಕಲ್ ತುಳಿದ್ರೆ ದೇಹದ ಆರೋಗ್ಯ ಕಾಪಾಡತ್,
ಕೊನೆಗೆ ಮತ್ತೊಂದ ಸಲ ದೀಪಾ ಹಳೆಯ ಚಲನಚಿತ್ರದ ಹಾಡಿನೊಂದಿಗೆ ಕಂಡ ಕನಸು ನನಸಾಗಿ
ಇಂದು ಮನಸು ಹಗುರಾಗಿ, ಹಾರಾಡು ಬಾ
ತೇಲಾಡು ಬಾ ರಾಗ ತಾಳ ಸೇರಿದಂತೆ ತಾಳಮೇಳ ಕೂಡಿದಂತೆ,ಎನ್ನುವ ಹಾಗೆ ಸೈಕಲ್ ನ ಘಟನೆಗಳು ಹೇಗೆ ಒಂದಕೊಂದು ಮುಖಾಮುಖಿಯಾಗಿ ನನ್ ಕಣ್ಣ್ಮುಂದೆ ನಿಲ್ಲಿಸಿ ನಿಮ್ಮೋಂದಿಗೆ ಹಂಚಿಕೊಳ್ಳಲು ಹೊರಹಮ್ಮಿವೆ, ಬೈ ಬೈ ಬೈಸಿಕಲ್ಲು

ಲಲಿತಾ ಪ್ರಭು ಅಂಗಡಿ.

ಮುಂಬಯಿ-69. ಅಂಧೇರಿ ಪೂfರ್ವ

date

Don`t copy text!