ವ್ಯಕ್ತಿತ್ವ ವಿಕಸನ ಮಾಲೆಯ ಸರಣಿ ಲೇಖನ
ಪ್ರಯತ್ನ ಮಾತ್ರ ನಮ್ಮದು
ಒಂದು ಒಳ್ಳೆಯ ಪುಸ್ತಕ ನಾವು ಬದುಕುವ ರೀತಿ ಬದಲಿಸಬಲ್ಲದು , ನಮ್ಮ ಜೀವನದಲ್ಲಿ ನಾವು ಎಷ್ಟು ಸುಖೀ ಎಂಬುದು ಯೋಚಿಸುವ ಲಕ್ಷಣದಲ್ಲಿ ಇದೆ . ಹೊರತು ಬೇರೆ ಯಾವುದರಲ್ಲೂ ಇಲ್ಲ.
ಕಷ್ಟಪಟ್ಟು ಕೆಲಸ ಮಾಡಿದರು ನಮ್ಮ ಸುಖ ದುಃಖಗಳನ್ನು ನಾವು ಯಾವತ್ತೂ ನಿರ್ಧರಿಸುವುದಿಲ್ಲ.
ಹಿಂದಿಗಿಂತ ಇಂದು ಬದುಕು ತರಹ ತರಹವಾಗಿ ತೆರೆದುಕೊಳ್ಳುತ್ತಿದೆ. ಇಂದಿನ ಜನ ಜೀವನ ಕಂಡಾಗ ಸೌಕರ್ಯ ಹೆಚ್ಚಿದರು ನೋವು ಕಡಿಮೆ ಇಲ್ಲ, ನಲಿವು ಎಲ್ಲೋ ಅವಿತುಕೊಂಡು ಕುಳಿತಿದೆ, ಅನಿಸುತ್ತಿದೆ.
ಯಾವಾಗಲೂ ಒಮ್ಮೆ ಸಂತೋಷ ಇಣುಕಿ ನೋಡಿದರು ಜಾಗ ಖಾಲಿ ಕಾಣುತ್ತಿದೆ . ಹೀಗಾಗಿ ನೆಮ್ಮದಿ ಗಗನ ಕುಸುಮ ಇದ್ದಂತೆ ಎನಿಸುತ್ತಿದೆ.
ಇದಕ್ಕೆ ಕಾರಣ ವಿಧಿಯಾಟ ಹಣೆಬರ ಇಲ್ಲವೇ ಇಲ್ಲ. ಜಗದ ಪ್ರತಿಯೊಂದು ಆಗುಹೋಗುಗಳನ್ನ ನಮ್ಮಿಂದ ಬದಲಿಸಲು ಸಾಧ್ಯವಿಲ್ಲ ಎಂಬುದೂ. ಬದುಕು ಜಟಕಾ ಬಂಡಿ ಎಂದು ಯಾರು ಕೊರಗುತ್ತಾರೋ ಅವರು ಖಂಡಿತ ದುಃಖಕ್ಕೆಗಡಾಗುತ್ತಾರೆ.
ಬಡವನೇ ಇರಲಿ ಬಲಿದವನಿರಲಿ ಒಳ್ಳೆಯವನೀರಲಿ, ಕೆಟ್ಟವನಿರಲಿ ಎಲ್ಲರಲ್ಲೂ ಕಷ್ಟ ಸುಖ ಸಮಾನವಾಗಿರುತ್ತದೆ.
ಅವು ಬಾಳಿನ ಹಾದಿಯಲ್ಲಿ ಸದಾ ಸಾಗುತ್ತಲೇ ಇರುತ್ತದೆ. ಒಮ್ಮೆ ಬಿರುಸಾದ ಗಾಳಿ ಹೊಡೆತಕ್ಕೆ ಜೀವ ಮೇಲೆ ಕೆಳಗೆ ಆದರೂ ಇನ್ನೊಮ್ಮೆ ಎಲ್ಲಿಂದಲೋ ತಂಪಾದ ತಂಗಾಳಿ ಬೀಸಿ ಹೋಗುತ್ತದೆ.
ಅದೇ ನಮಗೆ ಖುಷಿಯಿಂದ ಇರಿಸುತ್ತದೆ .
ಕರ್ಮ ಮಾತ್ರ ಒಳ್ಳೆಯದಾಗಿರಬೇಕು.
ಈ ಭೂಮಿ ಮನುಷ್ಯನ ಕರ್ಮ ಸ್ಥಳ ವಿಧಿ ಎಂಬ ಯಂತ್ರದ ಚಾಲನೆಯನ್ನು ನಂಬಿ ಕೈ ಕಟ್ಟಿ ಕುಳಿತರೆ ಭಯ ಹತಾಶ ನಿರಾಶ ಆತಂಕ ಬಾಳಿನ ಹೊಸ್ತಿಲು ದಾಟಿ ಒಳಬಂದು ಮಲಗಿಬಿಡುತ್ತವೆ.
ಇಂತಹ ಬದುಕು ಕೆಲವರಲ್ಲಿ ಮರುಕವನ್ನು ಹುಟ್ಟಿಸುತ್ತದೆ ದೈವ ಮರುಕ ತೋರಿಸಿದಂತೆ ನಟನೆ ಮಾಡುತ್ತದೆ , ಬಲಿ ಕೊಡುವ ಮುನ್ನ ಕುರಿಯನ್ನು ಬೆಳೆಸಿದಂತೆ ಕಟುಕ ಬೇಟೆಯಾಗುವ ಮುನ್ನ ಪ್ರಾಣಿಗಳಿಗೆ ಧ್ಯಾನ ನೀಡುವಂತೆ.
ತಲೆ ಕೆಳಗೆ ಮಾಡಿ ನಿಂತರು ಸಹಿತ ಜೀವನ ಬದಲಾಗಲ್ಲ ಏಕೆಂದರೆ ನಮ್ಮ ಗ್ರಹಗತಿಗಳು ಸರಿ ಇಲ್ಲ ಯಾವ ಜ್ಯೋತಿಷಿ ನನ್ನ ಗ್ರಹ ಸರಿಪಡಿಸಲಾರ ಎನ್ನುವವರನ್ನು ಕಷ್ಟಗಳಿಂದ ಪಾಠ ಕಲಿಯದೆ ಕಲ್ಲು ಬಂಡೆಯಂತೆ ಇದ್ದವರನ್ನು ಯಾರಿಂದಲೂ ಬದಾಲಾಯಿಸಲು ಸಾಧ್ಯವೇ ಇಲ್ಲ,
ಅವರು ಅವರಾಗಿ ಬದಲಾಗಬೇಕು ಮನಸ್ಸು ಮಾಡಿದರೆ ಇದು ಖಂಡಿತ ಸಾಧ್ಯವಾಗುತ್ತದೆ, ಒಂದು ಕೆಲಸ ಯಾವುದೇ ಉತ್ತಮವಾಗಿ ಆಗಬೇಕೆಂದರೆ ಮೊದಲು ನಮ್ಮಿಂದಲೇ ಆಗಬೇಕು ಎನ್ನುವುದು ಪ್ರಯತ್ನವಾಗಿದೆ.
ಈ ವಿಧಿ ಹಣೆಬರ ಗ್ರಹಗತಿ ಜ್ಯೋತಿಷ್ಯ ಎಂದು ಕೊಡುವವರ ಮುಖ ನೋಡಲಾಗದು, ಆದರಿಂದ
ಹೃದಯ ಭಗ್ನ ವಾದಂತೆ ನೋಡಿಕೊಳ್ಳೋಣ ಸತತ ಪ್ರಯತ್ನವೇ ಜೀವಂತಿಕೆ ಲಕ್ಷಣವಾಗಿರಿಸೋಣ. ಆಗ ಉತ್ತಮ ರೀತಿಯ ಪ್ರತಿಫಲ ನಮ್ಮದಾಗುತ್ತದೆ.
ಮುಂದುವರೆಯುತ್ತದೆ……
– ಮೇನಕಾ ಪಾಟೀಲ್