ಸೂರ್ಯ ದೇವಗೆ ಸ್ವಾಗತ
ಬಂಗಾರದ ತೇರನೇರಿ
ಸೂರ್ಯ ಬಂದ ಭೂಮಿಗೆ,
ಕೊ, ಕ್ಕೋ ಎಂದು ಕೂಗಿ ಕೋಳಿ
ಸ್ವಾಗತಿಸಿತು ಅವನಿಗೆ
ಮಯೂರವು ನರ್ತಿಸಿ,
ಸ್ವಾಗತ ಮಾಡಿತವಗೆ,
ಹಕ್ಕಿಗಳ ಚಿಲಿಪಿಲಿ ಗಾನ
ಶುಭ ಕೋರಿತು ಅವನಿಗೆ,
ಮುಂಜಾವಿನ ಇಬ್ಬನಿ
ತೊಡಿಸಿತು ತನ್ನ ಸರ ರವಿಗೆ
ನಗುತ ಬಂದು ಉಷೆಯ
ರಂಗು ಆರತಿ ಎತ್ತಿತು ಭಾನುವಿಗೆ
ಹೀಗಾಯಿತೊಂದು ಬೆಳಗು
ಶುಭವಾಗಲಿ ಎಲ್ಲರಿಗೆ
✍️ ರೇಖಾ. ಮುತಾಲಿಕ್