ಕಾಶಿ ವಿಶ್ವನಾಥ

 

ಪ್ರವಾಸ ಕಥನ ಮಾಲಿಕೆ

ಕಾಶಿ ವಿಶ್ವನಾಥ

 

 

ಭಾರತದ ಸುಪ್ರಸಿದ್ಧ ಜ್ಯೋತಿರ್ಲಿಂಗ್ . ಮೋಕ್ಷ ಕ್ಷೇತ್ರ. ಹುಟ್ಟು ಸಾವಿನ ಚಕ್ರದಿಂದ ಬಿಡುಗಡೆ ಹೊಂದುವ ಶಕ್ತಿ ಸ್ಥಳ. ಸುಮಾರು 41ಲಕ್ಷ ಜನಸಂಖ್ಯೆ ಹೊಂದಿದ ಕ್ಷೇತ್ರ. ತುಂಬಾ ದಟ್ಟ ವಾಗಿ. ಒಂದಕೊಂದು ತಾಗಿಕೊಂಡಂತೆ ಜನವಸತಿ. ಮಾತೃಭಾಷೆ ಹಿಂದಿ ಆದರೂ ಭೋಜಪುರಿ ಮಾತನಾಡುತ್ತಾರೆ.
ಗಂಗೆಯ ಪಶ್ಚಿಮ ದಡದಲ್ಲಿರುವ ಕಾಶಿ ವಿಶ್ವನಾಥ ಇದೀಗ ಸುಂದರ್ ಕಾರಿಡಾರ್ ಹೊಂದಿದ ಗುಡಿ. ಸುಮಾರು 35ವರ್ಷಗಳ ಹಿಂದೆ ಭೆಟ್ಟಿ ಕೊಟ್ಟ ದೇವಸ್ಥಾನಕ್ಕೂ ಇಂದಿನ ಗುಡಿಗೂ ಅಜಾಗಜಾoತರ ವ್ಯತ್ಯಾಸ.
ಮೊದಲಿದ್ದ್ ದೇವಸ್ಥಾನವನ್ನು ಇಂದೋರ ಮಹಾರಾಣಿ ಅಹಲ್ಯ ಬಾಯಿ ಹೊಲ್ಕರ್ಳಿಂದ ಕಟ್ಟಲ್ಪಟ್ಟು. ಮಹಾರಾಜಾ ರಂಜಿತ್ ಸಿಂಗ್ ನಿಂದ ಬಂಗಾರದ ಹೊದಿಕೆ ಮಾಡಲಾಗಿತ್ತು. ಬಂಗಾರದ ಗೋಪುರ. ಬೆಳ್ಳಿ ಚೌಕಟ್ಟಿನಲ್ಲಿ ವಿರಾಜಮಾನನಾದ ವಿಶ್ವನಾಥ್.
ಐತಿಹಾಸದ ಕಥೆ ಪ್ರಕಾರ ಸ್ವರ್ಗದಿಂದ ಧೂಮಿಕಿದ ಗಂಗೆಯನ್ನು ಶಿವನು ತನ್ನ ಜಡೆಯಲ್ಲಿ ಹಿಡಿದದ್ದು ಇದೇ ಕಾಶಿಯಲ್ಲಿ ಎನ್ನುವ ನಂಬಿಕೆ.

 


ಪುರಾತನ ಪಟ್ಟಣ ವಾರಣಾಸಿ. ವರುಣ ಹಾಗೂ ಅಸ್ಸಿ ಎಂಬೆರಡು ನದಿ ಯಿಂದಾ ವಾರಣಾಸಿ ಎಂಬ ಹೆಸರಾಯಿತು.ಬೆಳಕಿನ ಊರು ಎಂಬ ಹೆಸರೂ ಇದೆ. ಬ್ರಿಟಿಷರಿಂದ ವಾರಣಾಸಿ ಬನಾರಸ್ ಆಯಿತoತೆ. ಬನಾರಸ್ ಸೀರೆಗೂ ಹೆಸರು ವಾಸಿ.
ಗಂಗಾ ಸ್ನಾನo. ತುಂಗಾ ಪಾನo ಎನ್ನುವಂತೆ ಗಂಗೆಯಲ್ಲಿ ಮಿಂದರೆ ಸರ್ವಪಾಪ ನಿವಾರಣೆ ಆಗುತ್ತೆ ಎನ್ನುವ ನಂಬಿಕೆ. ಎಲ್ಲರ ಪಾಪ ತೊಳೆದು ಗಂಗೆ ಹೇಗೆ ಪರಿಶುದ್ಧಳಾದಾಳು ಎನ್ನುವದು ನನ್ನ ಸಂಕಟ. ಮೊದಲಿದ್ದ ಹಾಗೆ ತೇಲುವ ಪ್ಲಾಸ್ಟಿಕ್. ಹೂವು ಇಲ್ಲವಾದರೂ ಮೋಕ್ಷಕ್ಕಾಗಿ ದಿನಕ್ಕೆ ನೂರಾರು ಜನರು ಮಾಡುವ ಪಿಂಡ ಪ್ರಧಾನ. ತರ್ಪಣೆ. ಹರಿಶ್ಚಂದ್ರ ಘಾಟ್. ಮಾಣಿಕರ್ಣಿಕಾ ಘಾಟ್ ನಲ್ಲಿ ಸುಡುವ ದೇಹಗಳು. ಮೋಕ್ಷಕ್ಕಾಗಿ ಕಾದಿರುವ ಮನಸ್ಸುಗಳು.
ವಿಶ್ವನಾಥ ದೇವಸ್ಥಾನದ ಹಿಂದೆ ಹೊಸದಾಗಿ ಪುಟ್ಟ ಅನ್ನಪೂರ್ಣೇಶ್ವರಿ ದೇವಸ್ಥಾನ. ಅಲ್ಲಿ ಇತ್ತಿತ್ತಲಾಗಿ ಮೋದಿಜಿ ಕೆನಡಾ ದಿಂದ ಮೊದಲಿನ ಅನ್ನಪೂರ್ಣೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.1913ರಲ್ಲಿ ಈ ಮೂರ್ತಿಯನ್ನು ಕದ್ದು ಕೆನಡಾಗೆ ತೆಗೆದುಕೊಂಡು ಹೋಗಿದ್ದರಂತೆ. ಸುಮಾರು 100ವರ್ಷಗಳ ಹಿಂದೆ ಹೋದ ಮೂರ್ತಿ ಮತ್ತೆ ವಾಪಸ್ಸು ಭಾರತಕ್ಕೆ ಬಂದದ್ದು ಸುಕೃತ ಫಲ.

 


ವಿಶ್ವನಾಥನ ಕಾರಿಡಾರ ನಲ್ಲಿ ಫೋಟೋ ತೆಗೆಯಲು ಅವಕಾಶವಿಲ್ಲ. ಬೆಳಗಿನ ಜಾವ 3ಗಂಟೆಗೆ ನಡೆಯುವ ಮೊದಲ ಪೂಜೆಗೆ ಹೋದರೆ…. ವಿಶ್ವನಾಥನನ್ನು ಮುಟ್ಟಿ ದರ್ಶನ್ ಪಡೆಯುವ ಭಾಗ್ಯ. ಇದಕ್ಕಾಗಿ ಮುಂಚಿತವಾಗಿ ಟಿಕೆಟ್ ಮಾಡಿಸಬೇಕು. Online ಕೂಡ ಲಭ್ಯ. ಉಳಿದಂತೆ ಇಡೀ ದಿನ ದೂರದಿಂದಲೇ ದರ್ಶನ್ ಪಡೆಯಬೇಕು. ಸ್ವಚ್ಯ. ಸುಂದರ್ ಪ್ರಾಂಗಣ. ಪೂಜೆ ಮಾಡಿಸಲು. ಗಂಗಾ ಆರತಿ ತೋರಿಸಲು ನಾನಾ ವಿಧದ ಆಮಿಷ ಒಡ್ದುವ ಪೂಜಾರಿಗಳಿಗೂ ಬರವಿಲ್ಲ.
ದಶಾಶ್ವಮೇಧಾ ಘಾಟ್ ನಲ್ಲಿ ನಡೆಯುವ ಗಂಗಾ ಆರತಿ ಬಹು ಪ್ರಸಿದ್ಧಿ. ಸಂಜೆ 6.15ಕ್ಕೆ ಶುರುವಾಗಿ 7.15ಕ್ಕೆ ಮುಗಿಯುತ್ತೆ. ಸಾವಿರಾರು ಜನರು ಆರತಿ ನೋಡಲು ಬರುತ್ತಾರೆ. ನದಿಯಲ್ಲಿ ಮುಂದೆ ನಾವೆಯಲ್ಲಿ ಕುಳಿತು ನೋಡುವ ಅವಕಾಶ ಇದೆ. ಗದ್ದಲ ನೋಡಿ ನಾವು ನಾವೆಯಲ್ಲಿ ಕುಳಿತು ನೋಡಿದೆವು. ಇನ್ನೂ ಹೊಸದಾಗಿ ಪ್ರಾರಂಭವಾದ ಅಲಕನಂದಾ ಕ್ರೂಜ್ ಕೂಡ ಗಂಗಾ ಆರತಿ ತೋರಿಸಲು 15ನಿಮಿಷ ನಿಲ್ಲುತ್ತೆ.
ರವಿದಾಸ ಘಾಟ್ ನಿಂದ ಪ್ರಾರಂಭವಾಗುವ ಕ್ರೂಜ್ ಗೆ ಟಿಕೆಟ್ online ಕೂಡ ಪಡೆಯಬಹುದು. ದೊಡ್ಡ ಗಾಜಿನ ಕಿಟಕಿ ಹೊಂದಿದ ಕ್ರೂಜ್ ವೀಕ್ಷಿಸಲು ಅನಕೂಲ. ಡೆಕ್ ಮೇಲೆ ಕೂಡ ಹೋಗಬಹುದು. ಸುಮಾರು ಒಂದು ಘಂಟೆ ಎಲ್ಲಾ ಘಾಟ್ ತೋರಿಸುತ್ತೆ. ವಿಶೇಷತೆ ಕೂಡ ತಿಳಿಸುತ್ತದೆ.
ಕಾಶಿ ವಿಶ್ವನಾಥ. ಅನ್ನಪೂರ್ಣೇಶ್ವರಿ. ಕಾಲಭೈರವ. ಸಂಕಟ ವಿಮೋಚನಾ ಹನುಮಾನ. ಮಲಗಿದ ಹನುಮಂತ. ಮಾಅ ಲೋಪಿಮಾತಾ. ಶಂಕರಿ ಶಕ್ತಿ ಪೀಠ. ಹೀಗೆ ದರ್ಶನ್ ಪಡೆದೆವು.
ಪ್ರಯಾಗ ರಾಜ…. ಗಂಗಾ. ಯಮುನಾ. ಸರಸ್ವತಿ ತ್ರಿವೇಣಿಗಳ ಸಂಗಮ. ಮೂರೂ ನದಿಗಳ ಬಣ್ಣ ಬೇರೆ ಬೇರೆ ಗುರ್ತಿಸಬಹುದು. ಸಂಗಮ್ಸ್ನಾನ ಪವಿತ್ರ. ಅದರಲ್ಲೂ ಮಕರ ಸಂಕ್ರಾಂತಿಗೆ ತುಂಬಾ ಜನ ಸೇರುತ್ತಾರಂತೆ.
ಗೌತಮ್ ಬುದ್ಧ ಮೊಟ್ಟ ಮೊದಲು ಉಪದೇಶಿಸಿದ ಸ್ಥಳ ಸಾರನಾಥ. ಅಲ್ಲಿಯ ದೇವಸ್ಥಾನದಲ್ಲಿ ಭಗವಾನ ಬುದ್ಧನ ಹಲ್ಲು ಹಾಗೂ ಎಲವು ಇದೆಯಂತೆ. ಬುದ್ಧಪೂರ್ಣಿಮಾ ದಿನ ಮೆರವಣಿಗೆ ಮಾಡುತ್ತಾರಂತೆ. ರಾಜಾ ಅಶೋಕ್ ಕಟ್ಟಿಸಿದ 103ಫೀಟ್ ಎತ್ತರದ ಸ್ತುಪಾ ಇದೆ. ನೋಡಲು ಶಿವಲಿಂಗ ಆಕಾರ್. ಉಲ್ಟಾ ಹಾಕಿದ್ರೆ ಬೌದ್ಧರ ಭೀಕ್ಷಾ ಪಾತ್ರೆ ಹಾಗೇ ಕಾಣುತ್ತೆ. ಪಂಚ ಧಾತುಗಳ ಸುಮಾರು 2ಕೋಟಿ ವೆಚ್ಚದ ಘಂಟೆ ಇದೆ. ಮುಂಜಾನೆ 4ಕ್ಕೆ ಸಂಜೆ 6ಕ್ಕೆ ನಿತ್ಯ ಬಾರಿಸಲಾಗುತ್ತೆ. ಚುನಾರ್ ಎಂಬ ಊರಿನಿಂದ ತಂದ ಗುಲಾಬಿ ಬಣ್ಣದ ಸ್ಯಾಂಡ್ ಸ್ಟೋನ್ ನಿಂದ ಮಾಡಿದ ದೇವಸ್ಥಾನ.
ಒಟ್ಟಿನಲ್ಲಿ ಮನದ ಆಸೆಯಂತೆ ಮನಸೋ ಇಚ್ಛೆ ಕಾಶಿ ವಿಶ್ವನಾಥ ನ ದರ್ಶನ ಪಡೆದ ಪುನೀತಭಾವ.

✍️ಶ್ರೀಮತಿ. ವಿದ್ಯಾ. ಹುಂಡೇಕರ.

Don`t copy text!