ಎಚ್ಚೆತ್ತುಕೊಳ್ಳಿ ಇಂದೇ..
ಕುವೆಂಪುರವರ ವಿಶ್ವಮಾನವ ಸಂದೇಶ
ಮನುಕುಲಕ್ಕದುವೆ ಭಾವೈಕ್ಯತೆಯ ಸಂದೇಶ
ಕೂಡಿ ಬಾಳಲು ಇನ್ನೇನು ಬೇಕು ಮನುಜನೆ ?
“ಮನುಜ ಮತ ವಿಶ್ವ ಪಥ ”
ಕುವೆಂಪು ನುಡಿಯಿದು ಇದೊಂದೇ ಸಾಕಲ್ಲವೇ ?
ಹೃದಯ ತಟ್ಟಲು ಮನಸ್ಸು ಮಿಡಿಯಲು
ಕೂಡಿ ಬಾಳಲು ವಿಶ್ವ ಸಂದೇಶ ಸಾರಲು
ಮನುಕುಲದ ಭಾವೈಕ್ಯತೆಗೆ ಪ್ರೇಮ ದೀಪ್ತಿಗೆ
ಇನ್ನೇನೂ ಬೇಡವೆಮಗೆ ಇನ್ನೇನೂ ಬೇಡವೋ
ಅಳಿಸಿಬಿಡಿ ಇಂದೇ ನಿಮ್ಮೊಳಗಿನ ದ್ವೇಷದ ಕಿಚ್ಚನ್ನು
ಮಾನವಿಯತೆಯೇ ಸುಟ್ಟು ರಕ್ಕಸವೇ ಆಳುವ ಮುನ್ನ
– ಈಶ್ವರ್
(ಈಶ್ವರ ಮಮದಾಪೂರ)