ಬಾಯಿ ಬೊಂಬಾಯಿ

ಬಾಯಿ ಬೊಂಬಾಯಿ

(ಲಲಿತ ಪ್ರಬಂಧ)

ಬಾಯಿಗೆ ಬೊಂಬಾಯಿಗೆ ಏನ್ ಸಂಬಂಧ ಅಂತಿರಾ, ನನಗೂ ಹಂಗ ಅನಸತಿತ್ತು ಊರಲಿದ್ದಾಗ, ಎಲ್ಲರೂ ಹಂಗ ಅಂತಿದ್ರು ಹೆಚ್ಚು ಮಾತಾಡಿದ್ರ, ಜೋರಾಗಿ ಮಾತಾಡಿದ್ರ, ಏನ್ ಬಾಯಿ ಬಂಬೈ ಅಂತಿದ್ರು, ಇಲ್ಲಿಗೆ ಬಂದಮ್ಯಾಲೆ ಈ ಶಹರದಾಗಿನ ಜನಜಾತ್ರಿ, ರೇಲ್ವೆ ಸ್ಟೇಶನದಾಗಿನ ನೂಕನುಗ್ಗಲು ಜನರ ಮಾತು ನೋಡಿ ಯಪ್ಪಾರೆ ಬೋರೆಗೌಡ ಬೆಂಗಳೂರಿಗೆ ಬಂದ ಸಿನಿಮಾದಂಗ ,ನಾನು ಟ್ರೇನು ,ಜನಜಂಗುಳಿ, ಇದೆಲ್ಲ ನೋಡಿ ಕಣ್ ತಕ್ಕಂಡು ಬಾಯಿ ತಕ್ಕೊಂಡ್ ತೆರಬಾಯಿ ಆಗಿ ನೋಡತಿದ್ದೆ, ಜನರ ಮಾತು,ಗದ್ಲ,ಕಲಕಲ ಅವರ ಬಾಯಾಗಿನ ಮಾತು ಭಾಷೆ ಕೇಳಿ ದಂಗಾಗಿಬಿಟ್ಟಿದ್ದೆ. ಒಂದೆರಡು ಟ್ರೇನಲ್ಲಾದ ಅನುಭವದ ಘಟನೆ ,ಹೊಸತಾಗಿ ಬಂದಾಗ ಮೀರಾರೋಡಿನಿಂದ ಅಂಧೇರಿಗೆ ಬರುವಾಗ ಸೂಟ್ಕೇಸ್ ತಂದಿದ್ದೆ ಯಪ್ಪಾ ಅಂದೇರಿಯಲಿ ಇಳೆವತ್ನಾಗ ಸೂಟಕೇಸ್ ಹಿಡಕೊಂಡು ಇಳ್ಯಾಕ ಬಿಡವಲ್ಲರು ಗುಬು ಗುಬುಅಂತಾ ತೂರಿಕೆಂಡ ಹತ್ತಾಕತಬಿಟ್ರು ,ನಾನರ್ ಹಳ್ಳಿಯಿಂದ ಬಂದಕಿ ಟ್ರೇನ್ದಾಗ ಹತ್ತಿದ್ದ ಮೊದಲನೆ ಸಲ ಮುಂಬಯಿದಾಗ,ಅವಸರಫಟಾ ಫಟಾ ಅನ್ನೋದ ಗೊತ್ತಿದ್ದಿಲ್ಲ, ನನ್ನಹಿಂದ ಇದ್ದವರು ದೂಕೆಂಡು ಹೋರಗೇನು ಇಳಸಿದ್ರು, ಯಪ್ಪರೆ ನನ ಕೈಯಾಗ ಸೂಟಕೇಸ್ ಹ್ಯಾಂಡಲ್ ಇತ್ತು ಸೂಟ್ಕೇಸ್ ಟ್ರೇನ್ಒಳಗಡೆ ಬಿದ್ದಿತ್ತು,ನಾನಂತೂ ಪೂರಾ ಗಾಬರಿಯಾಗಿ ಜೋರಾಗಿ ಬಾಯಿಮಾಡಿ ಹೇ ಏ ಸೂಟ್ಕೇಸ್ ಸೂಟ್ಕೇಸ್ ಅಂತ ಒದರದ ಕೇಳಿ ಯಾ ಪುಣ್ಯಾತಿಗಿತ್ತಿಗೆ ಕೇಳಿತೋ ಏನೊ ಪಟ್ಕನ್ ನನ್ನ ಸೂಟ್ಕೇಸ್ನ ಹೊರಗ ಒಗದ್ರು,ಯಪ್ಪಾ ಆಗ ಜೀವಬಂದಗಾತು ನೋಡ್ರಿ, ನಾ ಬಾಯಿತಗದು ವದರಲಿಲ್ಲಂದ್ರ ನನ್ ಸೂಟ್ಕೇಸ್ ,ಸಿಗತಿರಲಿಲ್ಲ,
ಮತೆ ಇನ್ನೊಂದ ಸಲ ನನ್ನಗಂಡನ ರೆಕಾರಡಿಂಗ್ ಇತ್ತು ಚರ್ಚ್ಗೇಟಿನಲಿ ,ಅವಾಗ ನೀನು ಬಾ ರೆಕಾರ್ಡಿಂಗ್ ಮಾಡೋದು ಹ್ಯಾಂಗ ಇರತಂತ ನೋಡುವಂತಿ ಅಂತ ಕರಕೊಂಡು ಹೋದ್ರು ಮತೆ ಟ್ರೇನ್ಲೆ ಇವರು ಹೇಳಿದ್ರು ಲೇಡೀಸ್ ಡಬ್ಬಾದಾಗ ಹೋಗ್ನೀ ಅಂತ ಕಳಿಸಿದ್ರು, ಹರಸಾಹಸ ಮಾಡಿ ಹತ್ತಿದೆ,ಹತ್ತೋದೇನು ಎಳಕೋಂಡ ಹೋಗಿಬಿಡ್ತಾರ, ನಂತರ ಚರ್ಚ್ ಗೆಟಿನಲಿ ಇಳಿವತ್ನಾಗ ನನ್ಕಾಲಿಗಿನ ಚಪ್ಪಲಿ ಒಂದ್ ಕಾಲಗಿತ್ತು,ಇನ್ನೊಂದು ಟ್ರೇನಾಗ ಇತ್ತು,ಆದರೆ ಈಸಲದ ನನ್ನ ಬಾಯಿಂದ ಬಂದ ಮೇರಾ ಚಪ್ಪಲ್ ,ಮೇರಾ ಚಪ್ಪಲ್ ಅನೋದು ಯಾರೂ ಕೇಳಿಸಿಕೊಳ್ಳದೆ ಇದ್ದದ್ದು ನೋಡಿ ಬಾಯಿಮುಚೆಗೆಂಡು ಸುಮ್ಮನೆಆದೆ ,
,ಬರತಾ ಬರತಾ ಗೊತ್ತಾತು ಇಲ್ಲಿ ಜೀವನಶೈಲಿ,ಬೇಗ‌ ಬೇಗ ಹತ್ತೊದು,ಇಳೆದೂ, ಜಂಜಾಟ,ಅದರಾಗ ರೇಲ್ವೆದಾಗ ಗುಜರಾತಿ ಮಂದಿ ಮಾತಾಡದ್ ನೋಡಿ ,ಯವ್ವಾ ಇವರಿಗೇನು ಬಾಯಿ ಗಿಯಿ ನೋಯುತೊ ಇಲ್ಲಾಂತ ಅನಕೊಂತಿದ್ದೆ ಪಟ್ಪಟ್ ಹಳ್ಳ ಹುರದಂಗ ಮಾತಾಡದ ಕೇಳಿ, ಕಟಿಗಿ ಬಾಯಾಗಿದ್ರ ಚಟ್ಪಟ್ ಮುರಕೊಂಡ ಬಿಡತಿತ್ತು ಅನಸತಿತ್ತ,

 


ಹಂಗ ನೋಡ್ರಿ ನಮ್ಮೂರಾಗ ಒಬ್ಬಾಕಿ ಅಜ್ಜಿ ಇದ್ಲು ಆಕಿ ಇಷ್ಟ್ ಮಾತಾಡತಿದ್ಲುಂದ್ರ ಯಾವಾಗ್ಲೂ ಮಾತಾಡಿದ್ದ ಮಾತಾಡಾದ್ದು ಅದಕೆ ಆಕಿಗೆ ವಟವಟ ಛತ್ರವ್ವ ಅಂತಿದ್ರ, ಮಾತಾಡಿದ್ರ ಒಂದು ಮಾತಾಡಲಿಲ್ಲಂದ್ರ ಒಂದು, ಮಾತಾಡಿದ್ರ ಬಾಯಿಗೆ ಬೀಗ ಹಾಕ್ಯಾ ಅಂತಾರ, ಮಾತಾಡಿಲಿಲ್ಲಂದ್ರ ಮುಚ್ಚಿದ ಬಾಯಿ ಮುಗದ ಕೈ ಅಂತಾರ, ಹತ್ತ್ ಕೊಟ್ಟ್ ಮಾತಾಡಿಸಿದ್ರ ಇಪ್ಪತ್ತ್ ಕೊಟ್ಟ ಬಿಡಿಸಬೇಕು ಅಂತಾರ, ಈ ಬಾಯಿ ಇದೆಯಲ್ರಿ ಸಾಮಾನ್ಯ ಅಲ್ಲ ಎಲಬಿಲ್ಲದ ನಾಲಿಗೆ ಬಾಯಿಗೆಬಂದಂಗ ಮಾತಾಡಿ ,ಗೆಳೆತನ, ಸಂಬಂಧಗಗಳನು ಅಗಲಸ್ತೈತಿ ಮತೆ ಬಂಗಾರದಂತ ಮಾತುಗಳನು ಬಾಯಿಂದಾಡಿಸಿ ಜೋಡಸ್ತೈತಿ,
ನಮ್ ಊರಕಡೆಂತೂ ಗಂಡ ಹೆಂಡ್ತಿ ಜಗಳ ಮಾಡೆತ್ನಗಂತ್ರು ಅವರ ಬಾಯಿಂದ ಒಂದೊಂದು ಶಬ್ದಗಳ ಕೇಳಿದ್ರಂತೂ ಬಾಯಿ ಮುಚ್ಚಿಗೆಂತ್ರಿ ನೋಡ್ರಿ, ಗಂಡಂತು ಹೆಂಡ್ತಿಗೆ ಬಾಯನ್ ಹಲ್ಲ್ ಉದ್ರೆಸಿಗಂತಿ ನೋಡ್ ಅಂದ್ರ್,ಹೆಂಡ್ತಿ ಆಕಿ ಸುಮ್ನೆ ಬಿಡತಾಳನು ನೋಡು ಬಾಯಿಗೆ ಬೀಗ ಹಾಕ್ಯ್ ಅನ್ನೊದು,ಎಂತಾ ಬಾಯಿ ಅಯಿತೆವ್ವ ಇದರದು ಕರ್ ಬಾಯಿ ಅಂತಿದ್ರು,
ಇನ್ನು ಜಗಳದಾಗ ನೋಡಬೇಕ್ರಿ ,ಅವರೊಂದು ಬಾಯಿಗೆ ಬಂದಂಗ ಮಾತಾಡೋದು ಬಾಯೆಂಬುದು ಹೊಲಸಕುಣಿಕೆ ಆಗಿರ್ತಾವ ನೋಡ್ರಿ, ಸರಿಗೆ ಮಾತಾಡ್ ಇಲ್ಲಾಂದ್ರ ಬಾಯಾಗಿನ ಮೂವತ್ತೆರಡು ಹಲ್ಲ್ ಉದ್ರೆಸೆನು ಅಂತಾರ ಬಾಯಾನ ಹಲ್ಲ್ಂದ್ರ,ಮೆಕ್ಕೆಜೋಳಂತ್ ತಿಳ್ಕಂಡರೇನು,ಇಲ್ಲಾ ಡಾಳಿಂಬ್ರ ಬೀಜಂತ ತಿಳಕೊಂಡರ ಸುಲದ್ರ್ ಪಟಾಪಟಂತ ಬರಾಕ್,ದೇವರು ಬಾಯಿ ಕೊಟ್ಟಾನಂತ್ ಹಿಂದ ಮುಂದ ನೋಡದ್ ಹಚ್ಚಿ ಹೊಡದದ್ದ್ ಒಂದ ಕೆಲಸ ಮಾಡಬಾರದು ನೋಡ್ರಿ.


ಮತೆ ಹಿಂಗೂ ಅಂತಾರನೋಡ್ರಿ ಗೊತ್ತೈತ್ತಲ್ರಿ ಹೇ ಆಕಿ ಮುಂದ ಏನೂ ಹೇಳಬಾರದವ್ವ ಆಕಿ ಬಾಯಾಗ್ ಮಾತ ನಿಂದ್ರಂಗಿಲ್ಲ ಅನಕೊಂತ ಎಲ್ಲರ ಮುಂದ ಹೇಳೋದು,
ಆತರ ಏನ್ ಬಾಯಿಬಡಕ್ ಅದಾನ್ರಿ ಈಗರ್ ಮಾತಾಡಿದ್ದ ,ಈಗಾಗ್ಲೆ ಇಲ್ಲಂತ ಬಾಯಿಬಡಿತಾನ ನೋಡ್ರಿ,ಯವ್ವಾ ಎಂತಾ ಬಾಯಿ. ಬಾಯಾಗಾ ಹುಳ ಬಿಳ್ಳಿ, ಬಾಯಾಗ ಹುಳ ಬಿದ್ದ ಸಾಯ್ತಾನೋಡ್ರಿ ಹಂಗ ಸಾಯಂಗಿಲ್ಲ ಅಂತ ಅನ್ನೋದು
ಮತೆ ಆತ ನೋಡ್ರಿ ಹೆಂಡ್ತಿ ಅಂದ್ರ ಬಾಯ್ಬಾಯಿ ಬಿಡತಾನೋಡ್ರಿ. ಆಕಿ ಒಂದಸಲಕ ಬಾಯಿತಗದು ಜೋರಾಗಿ ಹೇಳಿದ್ರ ಮುಚ್ಚಿದ ಬಾಯಿ ಮುಗದ ಕೈ ಶಿರಸಾವಹಿಸ್ತಾನೋಡ್ರಿ ಅನ್ನೋದು,
ಮತೆ ಒಬ್ಬೊಬ್ರ ಬಾಯಿ ಇಡೀ ಓಣಿಗೆ ಕೇಳಿಸಿರಬೇಕು ಅಷ್ಟು ಜೋರ್ ಬಾಯಿ ,,ಮತೆ ಹೀಗೂನು ಅಂತಿಂದ್ರು ನಿನ್ನ ಬಾಯಿಗೆ ಮಾಳಿಗೆ ಬೀಳ್ತಾವ ನೋಡು ಸ್ವಲ್ಪ ಸಣ್ಣ್ದು ಬಾಯಿಮಾಡು,
ಹೇ ಆ ಸ್ವಾಮೆರ್ ಬಾಯಾಗಿನ ಮಾತು ಒಂದು ಸುಳ್ಳಾಗಲ್ಲ ನೋಡ,

ಈ ಬಾಯಿಗೆ ಎಷ್ಟು ಆಳವಾದ ಬಾಯಿ ಭಯ ಇದೆ ನೋಡ್ರಿ
ಹೀಗೆನೂ ಹೇಳ್ತಿವಲ್ಲ ಕ್ರಿಷ್ಣನ ಬಾಯಲಿ ಬ್ರಹ್ಮಾಂಡ ಕಂಡಹಾಗೆ.

ಮತೆ ಅದರಬಾಯಿ ಸುದ್ದಿಲ್ಲ ಅದನ ತಡವಕ್ ಹೋಗಬ್ಯಾಡ್ರಿ,
ಬಾಯಾಗ್ ಎನ್ ಇಟಗಂಡಿ ಸೆಗಣಿ,ಹೇಳಕ್ಬರ್ತನ್ ಇಲ್ಲ,ಇಷ್ಟ್ನಾವ ವದರಕತ್ತಿವಿ ಬಾಯಿಮುಚೆಗೆಂಡ್ ಕುಂತಿಯಲ್ಲ ಬಾಯಿಬಿಟ್ಟ ಮಾತಾಡಕ್ ಬರ್ತನ್ ಇಲ್ಲ.ಬಾಯಿಗೆಒಂದ್ ಬಿಗದ್ರ ಬಾಯಿ ಬಿಡ್ತೇನು? ಅನ್ನೋದು
ಬಾಯಾಗ್ ತೊಂಬ್ಲ ಇಕ್ಲಿ.
ಬಾಯಾಗ್ ಬಟ್ಟ್ಇಟಗೊಂಡ ಕುಂತಿಯೇನು, ಅನ್ಯೋದು,
ಬಾಯಿ ಮುಚ್ಚಿಗೆಂಡ ಕುಂತ್ರೊಂದು, ಬಾಯಿಬಿಟ್ರೊಂದು,
ಬಾಯಿ ಬಾಯಿ ಬಡಕಂಡ್ರೊಂದು,

ಹೆಣ್ಮಕ್ಕಳ ಬಾಯಾಗ್ ಮಾತ್ ನಿಂದ್ರಂಗಿಲ್ಲ
ಗಣಮಕ್ಕಳ ಕೈಯಾಗ ರೊಕ್ಕ ನಿಂದ್ರಲ್ಲ ಅಂತಾರನೋಡ್ರಿ,
ಆಕಿ ಎಷ್ಟ್ಚೇಂದ್ ಹಾಡ್ತಾಳ ಆಕಿ ಬಾಯಿಂದ ಹಾಡ ಕೇಳದರೆ ಹಂಗ ಕೇಳಬೇಕಪ ಅನಸ್ತ್ ನೋಡ್ರಿ ಅನ್ನೋದು
ಯಪ್ಪಾ ಆಕಿ ಬಾಯಿ ತಗದ್ರ ಆಕಿ ದ್ವನಿಗೆ ಓಡಿಹೋಗಬೇಕನ್ಸತ್ ನೋಡಪ ಅನ್ನೋದು,

ಮತೆ ಇನ್ನೊಂದು ಒಬ್ಬೊಬ್ರು ಬಾಯಿ ತಕ್ಕಂಡ ಆರಾಮಸೆ ಮಲಗಿರ್ತಾರ ,ಅಯ್ಯೊ ಬಾಯಾಗ್ ನೊಣ ಹೋಗಿ ಹಾರಾಡಿ ಬರ್ತಾವ ನೋಡಪ ಅನ್ನೊದು,

ಒಟ್ಟನಲಿ
ತಾಯಿ ಇರಲಾರದವರು ಬದುಕಬಹುದಂತೆ
ಬಾಯಿ ಇರಲಾರದವರು
ಬದಕಕಾಗಲ್ಲ ಅಂತಾರ
ಮತೆ ಬಾಯಿ ಇದ್ದವರು ಬಂಬೈದಾಗ ಬದುಕಬಹುದು ಅಂತಾರ ಅದ್ರಗ ಏನ್ ಬಿಡ್ರಿ ಬಾಯಿ ಇದ್ದವರು ದುಬೈದಾಗೂ ಬದುಕಬಹುದು ಎನ್ನುವ ತಾತ್ಪರ್ಯ ಚಾಲಾಕಿತನ ಅಂತ ಗೊತ್ತಾಯ್ತು ಹೌದಲ್ರಿ.

ಏನ್ ಬಿಡ್ರಿ ಮಾತಾಡಿದ್ರೆ ಎಷ್ಟ್ ಮಾತಾಡ್ತಾನಂತ ಅಂತಾರ,ಮಾತಾಡಲಿಲ್ಲಂದ್ರ್ ,ಮುಚ್ಚಿದ ಬಾಯಿ ಮುಗಿದ್ ಕೈ ಅಂತಾರ, ,ಒಟ್ಟಾರೆ ಈ ಬಾಯಿ ಇದೆಯಲ್ರಿ ಸಕಲ ಸರ್ವ,ಬಾಯಿಂದಲೆ ಸುಖ ಬಾಯಿಂದಲೆ ದುಃಖ ಅದಕಾಗಿ ಬಾಯಿಯನು ಹದ್ದುಬಸ್ತಿನಲಿ ಇಟಗೊಳೊದು ಮುಖ್ಯ ನೋಡ್ರಿ.

ರೊಕ್ಕ್ ಅಂದ್ರ ಬಾಯಿ ಬಾಯಿ ಬಿಡ್ತಾರ ನೋಡಪ
ಹಣ ಅಂದ್ರ ಹೆಣನೂ ಬಾಯಿ ತಗಿಯುತ್ತಂತೆ.

ಏ ಆತೇನ್ ಹೆಣ್ಮಕ್ಕಳನ್ ಎಂದರ್ ನೋಡೆನನ್ ಇಲ್ಲ,ಹಿಂಗ್ಯಾಕ ಬಾಯಿ ತಕ್ಕೊಂಡ್ ನೋಡಕತ್ತಾನ ಅಂತ ಅನ್ನೋದು, ಮಾತಾಡೋದು ನಾವು ನೀವು ಕೇಳಿರ್ತಿವಿ ಹೌದಲ್ರಿ.
ಬಾಯಿ ಮುಚ್ಚಿಸೋಕೆ ನಂಬರ್ಒನ್ ಸೊಸೆ ಅದಾಳ ನೋಡ್ರಿ ಆಕಿ, ಅತ್ತಿ,ಮಾವಗ ಅನ್ನೋದು.

ಬಾಯಿ ಇಲ್ಲದವ ಸಂಪನ್ನ ಆತ ಎನ್ ಮಾಡಬೇಕು ಪಾಪ ,ಅನ್ನೋದು
ದೇವರ ಬಾಯಿ ಕೊಟ್ಟನಂತೇಳಿ ಬಾಯಿಗೆ ಬಂದಂಗ ಮಾತಾಡದನು
ಬಾಯನ್ ಮಾತು ಹೊರಗ ಬರವಲ್ಲವು ಆದ್ರೂ ಹ್ಯಾಂಗ್ ಗುಸುಗುಸು ಮಾತಾಡತಾರ ಎನಪ ಇದು ಬಾಯಿ
ಇದರ ಗಾತ್ರ ಇದರ ಪಾತ್ರ
ಬಾಯಿ ಮಿತ್ರ,
ಬಾಯಿ ಶತ್ರು, ಬಾಯಿ ಪವಿತ್ರ
ಬಾಯಿ ಅಪವಿತ್ರ
ಇಂತಪ್ಪ ಬಾಯಿಂದ
ಒಳಿತು ನುಡಿದರೆ
ಜೀವನ ಪರಮ ಪವಿತ್ರ.

ನಿಜವಾಗಿ ಬಾಯಿಗೆ ಬೀಗ ಹಾಕಿಸಿದ್ದುಂದ್ರ ಕೊರೊನ.

ಆದರೆ ಕೊರೊನಾದಲಿ ತಿಳಿತು ಬಾಯಿ ಪಾತ್ರ ಯಾರೂ ಏಷ್ಟೇ ಹೇಳಿದ್ರು ಬಾಯಿಗೆ ಬೀಗ ಹಾಕಲಾರದವರು ಕೊರೊನಾ ಎಂಬ ಕಾಣದ ವೈರಸ್ಗೆ ಹ್ಯಾಂಗ್ ಬಾಯಿಗೆ ಬಟ್ಟಿ ಕಟ್ಟಿಸಿಬಿಡ್ತು ಜಗತ್ತಿನ ಜನರಿಗೆ ಒಂದೆರಡು ವರುಷ ನೆನೆಸಿಕೊಂಡ್ರ ಮೈ ಜುಮ್ ಅಂತೈತಿ ನೋಡ್ರಿ,

ಆದರೂ ಗಡಿಗಿ ಬಾಯಿ ಮುಚ್ಚ್ ಬಹುದು ಜನರ ಬಾಯಿ ಮುಚ್ಚಲಿಕೆ ದೇವರಿಂದಲೂ ಸಾದ್ಯವಿಲ್ಲ ನೋಡ್ರಿ, ನೀವು ಹ್ಯಾಂಗರ್ ಮಾಡ್ರಿ ಏನರ್ ಒಂದಹೆಸರ ಇಡತಾರ ಒಳ್ಳೆದು ಮಾಡಿದ್ರೂ ಅಂತಾರ ಕೆಟ್ಟದು ಮಾಡಿದರೂ ಅಂತಾರ,
ಈ ಒಳ್ಳೆಯ ಕೆಟ್ಟದರ ಅಂತರದ ಅರಿವನು ಅರಿತು ನುಡಿಯಬೇಕು ನಡೆಯಬೇಕು,
ಮನುಷ್ಯರ ನಡತೆಯನು ಅವರಾಡುವ ಬಾಯಿಯ ಮಾತಿಂದ ಅಳೆಬಹುದು, ಸಬ್ಯತೆಯ ಲಕ್ಷಣವು ಅವರ ಬಾಯಿಂದ ಬರುವ ಮಾತುಗಳಿಂದ ಗೊತ್ತಾಗುತ್ತದೆ,

ನಮ್ಮ ಕಡೆಂತೂ ಒಂದು ಬಾಯಿಗೆ ಝಾಡಿಸಿ ಕೊಟ್ರಂದ್ರ ಹನುಮಪ್ಪನ ಮುಷಣಿ ಆಗತ್ನೋಡು ಅಂತಾರ,

ಏನರ್ ಸಿಹಿಸುದ್ದಿ ಶುಭಸುದ್ದಿ ಹೇಳಿದ್ರ ನಿಮ್ಬಾಯಿಗೆ ಸಕ್ರಿ ಹಾಕಬೇಕು ಅನ್ನೋದು,
ಕೆಟ್ಟದು ಮಾತಾಡಿದ್ರೆ, ಅಪಶಕುನ ನಿನ್ ಬಾಯಾಗ್ ಹುಳಬಿಳ್ಲಿ ,ಕರ್ಬಾಯಿ ಅಂತಿದ್ರು,
ಬಾಯಿಗೂ,ನಾಯಿಗೂ ಹೋಲಿಸಿ ಹಂಗ್ಯಾಕ್ ಬೊಗಳ್ತಿ ನಾಯಿ ಬೊಗಳಿದಂಗ ಅನ್ನೋದು,
ಅದಕನೋಡ್ರಿ ದೊಡ್ಡೋರು ಹಿರಿಯರು ಹೇಳತಿದ್ರು, ಅದೇನದು ಬಾಯಿಗೆ ಬಂದಂಗ್ ಮಾತಾಡೋದು ಹಿರಿಯರನಂಗಿಲ್ಲ ಕಿರಿಯರನಂಗಿಲ್ಲ,ಸ್ವಲ್ಪ ಮನಕರ್ ಅಂಜಬೇಕು ಇಲ್ಲಾ ಜನ್ಕರ್ ಅಂಜಬೇಕು,

ಒಟ್ಟಾರೆ ಬಾಯಿ ಸಭ್ಯತೆಯಿಂದ ಒಳ್ಳೆಯ ಮಾತುಗಳಿಂದ ಬೆಸುಗೆ ಬೆಸೆಯಬಹುದು ಬಾಯಿಬಿಟ್ವು ಹ್ಯಾಂಗರ ಮಾತಾಡಿದ್ರ ದ್ವೇಷನೂ ಕಟಿಗೊಳಕ ದಾರಿ ಮಾಡತ್ ನೋಡ್ರಿಅದಕ್ ಅನ್ನೋದು ಮಾತು ಅನಗಾಲ,ಮಾತಿಂದ ಮನಿಹಾಳು ತೂತಿಂದ ಒಲೆ ಹಾಳು,ಹಿರಿಯರು ಹೇಳತಿದ್ರು,
ಅದಕೇನೆ ಹಬ್ಬ ಹರಿದಿನಗಳಲಿ ಸಂಕ್ರಾಂತಿಹಬ್ಬದಾಗ ,
ಎಳ್ಳು ಬೆಲ್ಲತಿಂದು ಒಳ್ಳೊಳ್ಳೆ ಮಾತಾಡಣ ಅನ್ನೋದು,
ದಸರಾ ಹಬ್ಬದಾಗ ಬನ್ನಿ ತಗೊಂಡು ಬಂಗಾರದಂಗ ಇರೋಣ ಅನ್ನುವ ಮಾತುಗಳು ಬಾಯಿಂದ ಬರುವ ಶುಭನುಡಿಗಳು ಒಳಿತನ್ನು ಬಯಸ್ತಾ ಇದ್ರು.

ಹಾಂ ಮತೆ ಕೊನೆಗೆ ಇನ್ನೊಂದು ನೆನಪಾತನೋಡ್ರಿ ನಾವು ಸಣ್ಣವರಿದ್ದಾಗ ಸಾಲ್ಯಾಗ ಗಲಾಟೆ ಮಾಡಿದ್ರ ,ಟೀಚರ್ ಬಡಿಗಿ ಹಿಡಕೊಂಡು ತೋರಿಸಿ,ಎಲ್ರೂ ಗಲಾಟೆ ಮಾಡ್ದೆ ಬಾಯಿಮೇಲೆ ಬಟ್ ಇಟಗೊಂಡು ಛುಪ್ ಚಾಪ್ ಕುಂದ್ರತ್ರೆ ಇಲ್ಲ ಬಡಿಗಿ ತಗೊಂಡು ನಾಕ್ ಬಿಗದ್ರ ಬಾಯಿ ಮುಚ್ಚಿಗೆಂತರಿ ಅನ್ನೊದೆ ತಡ ಎಲ್ರೂ ಬಾಯಿ ಮೇಲೆ ಬಟ್ಇಟಗೆಂಡ ಕುಂತ ನೆನಪು, ಬಾಯಿ ಬಾಲ್ಯವನು ನೆನಪಿಸಿತು ನೋಡ್ರಿ,

-ಲಲಿತಾ ಪ್ರಭು ಅಂಗಡಿ.
ಮುಂಬಯಿ-69 •ಅಂಧೇರಿಪೂರ್ವ.

Don`t copy text!