ನನ್ನವ್ವ ಇರದ ಒಂದು ದಿನ
ನನ್ನವ್ವ ಇರದ ಒಂದು ದಿನ
ನನಗಿಗ ಘನ ಘೋರ ಯುಗ
ನನ್ನ ಶಕ್ತಿ ಯುಕ್ತಿ ನನ್ನವ್ವ
ನಿನ್ನೆ ಮಣ್ಣಲ್ಲಿ ಮಣ್ಣಾದಳು
ಅವ್ವ ಮಹಾಮಾನವ ಮಂತ್ರ
ಕಲಿಸಿದಳು ಅಕ್ಷರ ಪದ ತಾಯಿ
ಅರಿವು ಮೂಡಿಸಿದ ಶರಣೆ
ಸ್ನೇಹ ಸಮತೆ ಶಾಂತಿ ಮೂರ್ತಿ
ಅಂದು ನಗೆ ಮಾತು ಹರಟೆ
ಕಣ್ಣಲ್ಲಿ ಕಣ್ಣಿಟ್ಟು ಜೀವ ಬಿಟ್ಟಳು
ಅವ್ವ ನನಗೆಲ್ಲಾ ಕಲಿಸಿದಳು
ಅವ್ವನ ಬಿಟ್ಟ ಹೇಗೆ ಇರಬೇಕು ಹೇಳಲಿಲ್ಲ
–ಡಾ ಶಶಿಕಾಂತ ಪಟ್ಟಣ ಪುಣೆ