ರಾಷ್ಟ್ರಕವಿ…ಕುವೆಂಪು
ಕವಿ ಪರಿಚಯ
ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ – ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ …
ಸಾಹಿತ್ಯ ಚಳುವಳಿ: ನವೋದಯ
ಅಂತ್ಯ ಸಂಸ್ಕಾರ ಸ್ಥಳ: ಕುಪ್ಪಳಿ, ಶಿವಮೊಗ್ಗ ಜಿಲ್ಲೆ
ಕಾಲ: 20ನೆಯ ಶತಮಾನ
ಮರಣ: ನವೆಂಬರ್ 11, 1994; ಮೈಸೂರು,
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯ ಹಾಗೂ ಮನ ಮನೆಯಲ್ಲಿ, ಮಹಾನ್ ಚೇತನ ಕುವೆಂಪು ಅವರಿಗೆ ಅನಂತ ಕೋಟಿ ಶರಣು. ಆಡುಮುಟ್ಟದ ಸೊಪ್ಪಿಲ್ಲ ಕುವೆಂಪುರವರು ಬರೆಯದೇ ಇರುವ ವಿಷಯ ಇಲ್ಲವೇ ಇಲ್ಲ ಎನ್ನುವಂತೆ ಎಲ್ಲಾ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕುವೆಂಪುರವರ ಓ ನನ್ನ್ ಚೇತನ ಹಾಡುತ್ತ ಬೆಳೆದೆ ಆದ್ರೆ ಅದ್ರ ಆಳ ಹರುವು ಅತ್ಯಂತ ದೊಡ್ಡ ಪ್ರಮಾಣದ ಸಾಹಿತ್ಯದ ಇತಿಹಾಸದಲ್ಲಿ ಮೊತ್ತ ಮೊದಲು ಯೋಚನೆ ಮಾಡಿದ ಕವಿತೆ ಎನ್ನುವುದನ್ನು ಮರೆಯಲು ಸಾಧ್ಯವೇ!!!
ಅದ್ಭುತ ಅನುಭವ ಮೂಡುವ ಆನೇಕ ಕಥೆ ಕಾದಂಬರಿ ಹಾಗೂ ಕವನ ಸಂಕಲನ ಓದುತ್ತ ಇದ್ದಂತೆ ನಾವೆಲ್ಲೋ ಕಥಾಲೋಕದಲ್ಲಿ ಇರುವಂತೆ ಅನಿಸುತ್ತದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದೇನೆ ಅಂತೇನಿಲ್ಲ. ವಿಶ್ವ ಮಾನವ ಕುವೆಂಪುರವರ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ.
ಸಾಹಿತ್ಯದ ಯಾವುದೇ ಹೊಸ ಆಯಾಮ ತಿರುವು ಎಲ್ಲವು ಈ ಕವಿಯ ಅಭಿಮತ ಆಗಿದೆ. ಅವರ ಮಲೆಗಳಲ್ಲಿ ಮದು ಮಗಳು, ರಾಮಾಯಣ ದರ್ಶನ0 ಕೋಗಿಲೆ ಮತ್ತು ಸೋವಿಯತ್ ರಷ್ಯಾ ಕವನ ಸಂಕಲನ ಇನ್ನು ಮನಸ್ಸಲ್ಲಿ ಅಚ್ಚುಕಟ್ಟಾಗಿ ನೆಲೆ ನಿಂತಿವೆ.
ಕನ್ನಡ ಭಾಷೆಯ ಬಳಕೆ ಮತ್ತು ಸಂಸ್ಕೃತಿ ಸೂಕ್ಷ್ಮತೆ ಎಲ್ಲಕ್ಕಿಂತ ಮಿಗಿಲಾಗಿ ಪದಗಳ ಬಳಕೆ ಮಾಡುವ ಪ್ರಕ್ರಿಯೆ ಅತ್ಯುತ್ತಮ ಗುಣಮಟ್ಟದ ವಿಚಾರ ಮಾಡಿದವರು.
ಪುಟ್ಟ ಮಕ್ಕಳ ಮನಸ್ಸಿಗೆ ನಾಟುವ ಹಾಗೆ ಅತ್ಯಂತ ಹೆಚ್ಚು ಹೆಚ್ಚು ಮನಸೆಳೆದ ಹಾಡು.. ಜಯಭಾರತ ಜನನಿಯ ತನುಜಾತೆ ಎಷ್ಟೋ ಬಾರಿ ಓದಿದ್ರು ಹೊಸ ಹೊಸ ಅನುಭವ ನೀಡುತ್ತದೆ. ಅದರಂತೆಯೇ ನೇಗಿಲು ಹಿಡಿದು ಸಾಗಿದ ರೈತರ ತ್ಯಾಗದ ಹಾಗೂ ಅವರ ಜೀವನದ ಬಗ್ಗೆ ಮಾಹಿತಿ. ರೈತ ಉಳುಮೆ ಎಲ್ಲವು ವಿವರಿಸಿದರು. ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಓರ್ವ ಬರಹಗಾರ ಅದೆಷ್ಟು ಬಾರಿ ಹೊಸ ಬೆಳಕು ನೀಡುವ ಮೂಲಕ ಕನ್ನಡಕ್ಕೆ ಶೋಭೆ ತಂದಿರುವರು. ಬಸವಣ್ಣನವರ ಕುರಿತು ಕವಿತೆ…
ಕಾರ್ತಿಕದ ಕತ್ತಲಲ್ಲಿ ತುಂಬಾ ಚೆನ್ನಾಗಿ ಬರೆದಿರುವರು. ಎಲ್ಲೋ ಹುಡುಕಿದೆ ಇಲ್ಲದ ದೇವರ ಇವೆಲ್ಲವೂ ಗಮನಿಸಿದರೆ ವೈಚಾರಿಕ ಕವಿಗಳು
ದೇವರು ಸೆರೆಯಾಳ, ದೇಗುಲ ಸೆರೆಮನೆ ಪೂಜಾರಿ ಕಾವಲು
ನೀನವಾಗಲೂ ನನ್ನಯ ಬಳಿಯಿರೆ
ಬಲು ತೊಂದರೆ ಎಂದು
ಗಿರಿ ಶಿಖರದೊಳತೀದೂರದಿ ಕಟ್ಟಿದೆ
ಗುಡಿಯನ್ನು ನಿನಗೆಂದು:
ಕಲ್ಲಿನ ಗೋಪುರ ಕಲ್ಲಿನ
ಗೋಡೆ ದುರ್ಗದವೊಲೇ ಬಲು ದುರ್ಗಮ ನೋಡೇ!!
ಸೆರೆಯನ್ನು ತಪ್ಪಿಸಿಕೊಳ್ಳವ ತೆರೆದಿಲೀ
ಅರ್ಚಕ ರಕ್ಷೆಯಿದೆ;
ತೆಂಗಿನಕಾಯಿಯಲ್ಲೇ ತಲೆಯನ್ನು ಬಡಿಯುವ ಪೂಜೆಯ ಶಿಕ್ಷೆಯಿದೆ!!
ಪುರುಸೊತ್ತಾದ್ರೆ ಕೆಲಸದೊಳ್ಳಲ್ಲಿ
ಬೇಸರ ಪರಿಹರಕೆ ಬೇಹೆನಲ್ಲಿ!!
ಎಲ್ಲೋ ಹುಡುಕಿ ಹುಡುಕಿ ಹುಡುಕಿ ಸಾಗುವ ಜನರಿಗೆ ಇಲ್ಲದೇ ಇರುವ ದೇವರ ತನ್ನ ಅಂತರಂಗದ ಪ್ರೀತಿ ಪ್ರೇಮದ ಒಳಗೆ ಹುಡುಕಿಕೊಂಡು ಹೋಗಿ ಎನ್ನುವ ಮಾತು ಬೆಳೆದು, ಮುಂದೆ ದೇಗುಲದ ಬಗ್ಗೆ ಹಾಗೂ ಪುಜಾರಿ ಬಗ್ಗೆ ಅಷ್ಟೇ ಅಲ್ಲದೇ ಬಂಧಿ ದೇವರ ಬಗ್ಗೆ ಎಷ್ಟೊಂದು ಹೊಸ ಆಯಾಮ ಕೊಟ್ಟು ಹೇಳಿದ್ದಾರೆ ಅಂತರಂಗದ ಈ ಸಂಘರ್ಷದ ವಿಚಾರಗಳು ಪ್ರತಿಯೊಂದು ಚಿಂತನೆಗಳು ವೈಜ್ಞಾನಿಕ ಮನೋಧರ್ಮ ಹೊಂದಿದೆ