ಸೊಬಗಿನ ಸೃಷ್ಟಿ.
ಏನಿತು ಸುಂದರ ಜಗವಿದು
ದೇವನು ಸೃಷ್ಟಿಸಿದ ತಾಣವಿದು.
ಸೊಗಸು ಸೊಬಗಿನ ಹಸಿರು
ಹಸಿರಿದು
ಭುವಿಯ ತುಂಬಿ ತುಂಬಿದೆ ಬೆಸೆದು.
ನೀಲ ಗಗನದಲಿ ತೇಲುತಿವೆ
ಬೆಳ್ಳನೆಯ ತಿಳಿ ಮೋಡಗಳು
ನಭದಲಿ ಹರಡಿವೆ ರವಿಯ
ಸುಂದರ ಕಿರಣಗಳು.
ಹಾರುತ ಹಾರುತ ಗಗನಕೇರಿವೆ
ಬಣ್ಣದ ಗಿಳಿ ಹಿಂಡುಗಳು
ಬನದ ಮಡಿಲಲಿ ಚೆಂದ ಚೆಂದದಿ ನಲಿವ ನವಿಲುಗಳು.
ಹಳ್ಳ ಕೊಳ್ಳದಿ ಹರಿವ ತಿಳಿ ನೀರಿನ ನೆಲೆಯನು
ಗಗನ ತಟ್ಟುವ ಎತ್ತರದ ಮರಗಳ ಚೆಲುವನು.
ಹೇಗೆ ಬಣ್ಣಿಸಲಿ ಈ ಸೃಷ್ಟಿಯ
ಸವಿ ಸಿರಿಯನು
ದೇವನ ಈ ಕೊಡುಗೆಯ ಮನುಜ ತಾನು ಮರೆಯನು.
–ಕೃಷ್ಣ ಬೀಡಕರ, ವಿಜಯಪುರ.