ಮಗುವಾಗಿರಬೇಕಿತ್ತು

 

ಮಗುವಾಗಿರಬೇಕಿತ್ತು

ಸದಾsss….. ನಗು
ಹಸಿವಿಗೆ ಮಾತ್ರ ಅಳು
ಹಸಿಯಲು
ಅಮ್ಮನೆಲ್ಲಿ ಬಿಟ್ಟಾಳು ?
ಎದೆಹಾಲಿನಮೃತ,
ಕೈತುತ್ತಿನ ಸುಕೃತ
ಅಮ್ಮನಿರುವಷ್ಟು ಹೊತ್ತು
ಅಳುವಿಗೇ ಆಪತ್ತು
ಮೈಮರೆತು
ನಗುತಲಿರಲು ನಾ
ಮಗುವಾಗಿರಬೇಕಿತ್ತು ||

ಅಕ್ಕರದಿ ಎದೆಗಪ್ಪಿ
ಮುದ್ದಿಸುತ ಮೊಲೆಯುಣಿಸೊ
ಅಮ್ಮಬಿಟ್ಟರೆ ನನಗೆ
ಎಲ್ಲರೂ ಒಂದೇ
ಅಪ್ಪನೊ ಮಾಮನೊ
ಅಜ್ಜಿಯೊ ತಾತನೊ
ಕಾಕಾ ಕಾಕೀ
ನನ್ನ ನಗುವ ಬಯಸುವ
ಎಲ್ಲರೂ
ಸಮವೆ ನನಗೆ
ಜಗದ ಜೊತೆ
ಲವಲೇಶವೂ ಕೊಳೆಯಿರದ
ನಗುವ
ನಗುತಲಿರಲು ನಾ
ಮಗುವಾಗಿರಬೇಕಿತ್ತು ||

ಶಾಲೆಗೋಗುವ ಗೊಡವೆ ಇಲ್ಲ
ಪಾಸು ಮಾಡುವ ಚಿಂತೆ ಇಲ್ಲ
ಕೆಲಸ ಮಾಡುವ ಸೀನು ?
ಇಲ್ಲವೇ ಇಲ್ಲ
ಮುಖದ ಮುಂದೆ
ಅನಗತ್ಯ ಹಾಡಿ ಹೊಗಳುವುದಿಲ್ಲ
ಬೆನ್ನಹಿಂದೆ
ಆಡಿಕೊಳ್ಳುವ ನಾಟಕವು‌ ಇಲ್ಲ
ನಾನೋರ್ವನೆ ಬೆಳೆಯಬೇಕೆನ್ನುವುದಿಲ್ಲ
ಅವರನ್ನು ತುಳಿಯಬೇಕೆನ್ನುವ ದರ್ದೂ ನನ್ನ ಹತ್ತಿರಕೆ ಸುಳಿಯುವುದಿಲ್ಲ
ಇಲ್ಲದಿರುವುದೆ ಸೌಖ್ಯ
ಇದು ಕಾರಣ ನಾ
ಮಗುವಾಗಿರಬೇಕಿತ್ತು ||

✍️ ಆದಪ್ಪ ಹೆಂಬಾ ಮಸ್ಕಿ

Don`t copy text!