ಕಲಿಯುಗದ ದೈವ ಶ್ರೀ ಸಿದ್ದೇಶ್ವರ ಗುರುಗಳು
ನಡೆದಾಡುವ ದೇವರೆಂದು ಪ್ರಸಿದ್ಧವಾಗಿರುವ ಪರಮ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮಿಗಳ ಬಗ್ಗೆ ನಾನು ತಿಳಿದಷ್ಟು ಬರೆಯುತ್ತಿದ್ದೇನೆ .ನನಗೆ ಮಾತ್ರ ಮೊದಲ ಸಲ ಕಣ್ಣಮುಂದೆನೆ ಸರಳತೆಯಲ್ಲಿ ಸಾಕಾರ ಸದಾನಂದ ಮೂರುತಿಯನ್ನು ನೋಡಿದಾಗ ದೇವರನ್ನೇ ನೋಡಿದಷ್ಟು ಸಂತೋಷವಾಯಿತು . ಅವರ ದರ್ಶನ ಭೇಟಿಯಾದಾಗ ನನಗೆ ಮಾತೇ ಹೊರಡದಾಯಿತು , ಅಷ್ಟು ಆನಂದ ಅವರ ಆಶೀರ್ವಾದ ಪಡೆದಾಗ ಜೀವ ಸಾರ್ಥಕ ಎನಿಸಿತು .
ಸಿದ್ದೇಶ್ವರ ಸ್ವಾಮಿಗಳು ಹುಟ್ಟಿದ್ದು 24/10/1941 , ಬಿಜ್ಜರಗಿ ಗ್ರಾಮದ ರೈತ ಕುಟುಂಬದಲ್ಲಿ ಜನನ.ಇವರು ಚಿಕ್ಕವರಿದ್ದಾಗ ಎಲ್ಲ ಮಕ್ಕಳಂತೆ ಇರದೇ ಅಪಾರ ಜ್ಞಾನ ಇತ್ತು. ” ಬೆಳೆಯುವ ಸಿರಿ ಮೊಳಕೆಯಲಿ” ಎಂಬಂತೆ ಇದನ್ನರಿತ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಇವರನ್ನು ತಮ್ಮ ಕಡೆ ಕರೆಯಿಸಿಕೊಂಡು ಇವರ ಜ್ಞಾನ ಭಂಡಾರ ವಿಸೃತಗೊಳಿಸಿದರು. ಇವರ ಹತ್ತಿರ ಇದ್ದು ಶಿಕ್ಷಣ ಜೊತೆ ಗುರುಗಳ ಜೀವನ ಅಳವಡಿಸೋಕೊಂಡು ಅವರಂತೆ ಬಾಳಲು ರೂಢಿಸಿ ಕೊಂಡರು . ಗುರುಗಳು ತಮ್ಮ ಪ್ರವಚನಕ್ಕೆ ಇವರನ್ನು ಜೊತೆ ಕರೆದುಕೊಂಡು ಹೋಗುತ್ತಿದ್ದರು . ಗುರು ತಕ್ಕ ಶಿಷ್ಯ ಆದರು.
ಇವರು ಕೊಲ್ಹಾಪುರದಲ್ಲಿ ಎಂ. ಎ ಕಲಿಯುತ್ತಿರುವಾಗ ತಮ್ಮ ಗುರುಗಳ ಪ್ರವಚನಗಳನ್ನು ಸಂಗ್ರಹಿಸಿ “ಸಿದ್ದಾಂತ ಶಿಖಾಮಣಿ“ಎಂಬ ಪುಸ್ತಕ ಗುರುಗಳ ಹೆಸರಿನಲ್ಲಿ ಪ್ರಕಟಿಸಿದ್ದರು. ಆಗ ಇವರಿಗೆ ಕೇವಲ 19 ವಯಸ್ಸು .ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಜ್ಞಾನದ ಹಸಿವು , ಹಂಬಲ ಇವರಲ್ಲಿತ್ತು. ಎಂ. ಎ ಕಲಿತು ವಿಜಯಪುರಕ್ಕೆ ಮರಳಿದ ನಂತರ
ಮಲ್ಲಿಕಾರ್ಜುನ ಸ್ವಾಮಿಗಳು ಇವರಿಗೆ ಭಗವದ್ಗೀತೆ , ಉಪನಿಷತ್,ವಚನ ಶಾಸ್ತ್ರ, ಯೋಗಶಾಸ್ತ್ರ , ವಿವಿಧ ಅಧ್ಯಾನಗಳಲ್ಲಿ ಮಾರ್ಗದರ್ಶನ ಮಾಡ್ತಾ ಇವರ ಜ್ಞಾನ ವಿಸ್ತಾರಗೊಳಿಸಲು ಪರಿಪೂರ್ಣ ಗುರು ಎನಿಸಿದರು. “ಪತಂಜಲಿ ಯೋಗ” ಶಾಸ್ತ್ರದಲ್ಲಿ ಪರಿಪೂರ್ಣ ಪಾಂಡಿತ್ಯ ಹೊಂದಿದ್ದಾರೆ .ಭಾರತದ ಸಂತರು ಮತ್ತು ಸಿಯರ್ಸ್ ಕೃತಿಗಳ ಆಧಾರದ ಮೇಲೆ
ಪುಸ್ತಕಗಳನ್ನು ಬರೆದಿದ್ದಾರೆ. ಮತ್ತು ಸರಳ ಯೋಗ , ಸರಳ ಜೀವನ ಶೈಲಿ, ಅಧ್ಯಾತ್ಮ ಚಿಂತನ, ಹೀಗೆ ಇವರ ಹಲವಾರು ಪುಸ್ತಕಗಳು ಬರೆದಿದ್ದಾರೆ .
ವಿಜಯಪುರದ”ಜ್ಞಾನಯೋಗಾನಂದ ಆಶ್ರಮ” ಮಲ್ಲಿಕಾರ್ಜುನ ಸ್ವಾಮಿಗಳಿ0ದ ಸ್ಥಾಪಿಸಲ್ಪಟ್ಟ ಆಶ್ರಮ ಸಹಸ್ರ ಜನರಿಗೆ ಜ್ಞಾನ ದಾಸೋಹ ಜೊತೆ ಅನ್ನ ದಾಸೋಹ ಮಾಡಿ ಜನಪರ ಕಾರ್ಯಗಳಲ್ಲಿ ಈ ಆಶ್ರಮ ನಿಸ್ವಾರ್ಥ ಸೇವೆ ಮಾಡುತ್ತದೆ.ಬಡವರಿಗೆ ಅಕ್ಷರದಿಂದ ವಂಚಿತರಾದವರಿಗೆ ಉಚಿತ ವಸತಿಶಾಲೆ ಇದೆ . ಇನ್ನು ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮೇಲೆ ಇದನ್ನ ಮುಂದುವರಿಸಿ ಕೊಂಡು ಹೋಗುವದರ ಜೊತೆ ವಿವಿಧ ರೀತಿಯಲ್ಲಿ ಬೆಳವಣಿಗೆ ಮಾಡಿದ್ದಾರೆ .ಇದರ ಜೊತೆಗೆ ಇಂದಿನ ಸಮಾಜ ನೈತಿಕತೆ ಕುಸಿಯುತ್ತಿರುವಾಗ ಇವರು ಪ್ರವಚನಗಳ ಮೂಲಕ ಜನರ ಮನಸೂರೆಗೊಂಡಿದ್ದಾರೆ.
ಇವರ ಪ್ರವಚನದಿಂದ ಎಷ್ಟೋ ಜನರು ತಮ್ಮ ಜೀವನದಲ್ಲಿ ಬದಲಾವಣೆ ಕಂಡಿದ್ದಾರೆ . ಇಂದು ಸಹ ವಿವಾದರಹಿತ ವ್ಯಕ್ತಿತ್ವದಿಂದ ಸಾವಿರಾರು ಜನರ ಮನದಲ್ಲಿ ಮನೆ ಮಾಡಿದ್ದಾರೆ . ಇಂದಿನ ಸಮಾಜದಲ್ಲಿ ಸಾಕಷ್ಟು ಅಧ್ಯಾತ್ಮ ಗುರುಗಳು ಇದ್ದಾರೆ. ಆದರೆ ಇವರ0ತೆ ಇರುವರು ಅಪರೂಪ ಅನಿಸುತ್ತೆ .ಯಾವ ರಾಜಕೀಯ ಮತ್ತು ಇತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಸ್ವಪ್ರತಿಷ್ಠೆ ಯಲ್ಲಿ ಹೆಸರು ಗಳಿಸಬೇಕೆ0ಬ ಯಾವ ಹಂಬಲ ಇರದೆ , *ಜನರಿಗಾಗಿ ,* *ಜನರಿಗೋಸ್ಕರ* ಅನ್ನುವ ಒಂದೇ ಧ್ಯೇಯ ಇವರದು. ಅಂತೆಯೇ ದೇಶ ವಿದೇಶಗಳಲ್ಲಿ ಇವರ ಭಕ್ತರು ಇದ್ದಾರೆ.
ಇವರು ಹೇಳಬೇಕಾದ ಪ್ರವಚನ ಸಂಗತಿಗಳು , ನಮ್ಮ ಜೀವನದ ಹಾಸು ಹೊಕ್ಕಾಗಿರುವ ಸಂಗತಿಗಳನ್ನೇ , ಅಧ್ಯಾತ್ಮ ಚಿಂತನೆಗೆ ಒಳಪಡಿಸಿ ಸರಳವಾಗಿ ತಿಳಿಯುವಂತೆ ಹೇಳುತ್ತಾರೆ. ಇವರ ಪ್ರವಚನ ಎಂತಹ ಮೂಢ ಇರಲಿ ಅಥವಾಅನಕ್ಷರಸ್ಥ ಇದ್ದರು ತಿಳಿಯುತ್ತದೆ .ಹಾಗೆ ಮನ ಮುಟ್ಟುವ ರೀತಿಯಲ್ಲಿ ಹೇಳುವ ಶೈಲಿ ಅದ್ಭುತ.ಹಾಗೆ ಯಾವ ತತ್ವಜ್ಞಾನಿಯ ಚಿಂತನೆ ಯಿರಲಿ ಅದನ್ನು ಹೊಸ ದೃಷ್ಟಿ ಕೋನದ ಮೂಲಕ ಸೃಜನತೆಯಿಂದ ಹೇಳುತ್ತಾರೆ . ಇವರು ಹೇಳುವ ಪ್ರವಚನದಲ್ಲಿ ವೇದ , ಉಪನಿಷತ್ತು , ವಚನಶಾಸ್ತ್ರ , ಹೀಗೆ ಕಲಿತ ವಿವಿಧ ಎಲ್ಲ ಜ್ಞಾನದ ಸಾರ ಸಮ್ಮಿಳಿಸಿರುತ್ತದೆ . ಇವರ ಪ್ರವಚನ ಕರ್ಣಾನಂದ ಮತ್ತು ಆತ್ಮಾನಂದ .
ಪ್ರತಿ ವರುಷ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಪ್ರವಚನ ಇರುತ್ತೆ. ಸವಿಸ್ತಾರವಾದ ಆಶ್ರಮದ ತೋಟದ ಆವರಣದಲ್ಲಿ , ವಿವಿಧ ಜಾತಿಯ ಗಿಡಮರಗಳು ಮತ್ತು ಹೂದೋಟದ ನಡುವೆ , ಹಕ್ಕಿಗಳ ಕಲರವದಲಿ ಮುಂಜಾವಿನ ಅರುಣೋದಯದಲಿ ಇವರ ವಾಗ್ ಝರಿ ನೀನಾದದಲಿ ಪ್ರವಚನದ ಅಮೃತ ಸವಿಯುತ ಮುಗಿಯಿತೇಕೆ ಈ ರಸಗಳಿಗೆ ಅನಿಸುತ್ತದೆ. ಆಗ ಸಹಸ್ರ ಜನರು ಶ್ರಾವಣ ಮಾಸ ಪ್ರವಚನಕ್ಕೆ ಕಾತರದ ಕಣ್ಣಂಚಿನಿಂದ ಕಾಯ್ತಿರ್ತಾರೆ.
ಶ್ರಾವಣಮಾಸದ ಈ ಪ್ರವಚನ ಅಧ್ಯಾತ್ಮದ
ಹಬ್ಬದೂಟ ಇದ್ದ ಹಾಗೆ. ಕೊನೆಗೆ ಮುಗಿಯುವವಾಗ ಯಾಕ್ ಮುಗಿಯೂತೋ ಅನ್ನುವ ಭಾವ ಪ್ರತಿಯೊಬ್ಬ ರಲ್ಲಿ ಮುಡಿರುತ್ತೆ. ಇಲ್ಲಿಯ ಇನ್ನೊಂದು ವಿಶೇಷ ಅಂದರೆ ಸಾದಾಹರಣ ನಾವೆಲ್ಲರೂ ನೋಡಿರುತ್ತೇವೆ ಎಲ್ಲಿ ಯಾದರೂ ಪ್ರವಚನ ನಡೆದರೆ ಗುಸುಗುಸು ಪಿಸುಮಾತುಗಳು ನಡೆಯುತ್ತಿರುತ್ತವೆ , ಮತ್ತು ಯಾವುದೋ ಸದ್ದುಗದ್ದಲ ಇರುತ್ತೆ , ಆದರೆ ಇಲ್ಲಿ ಪ್ರವಚನದ ವೇಳೆಯಲ್ಲಿ ” ಸೂಜಿ ಬಿದ್ದರು ಸಪ್ಪಳ ಕೇಳಿಸಬೇಕು ” ಅಷ್ಟು ಶಾಂತತೆಯಿಂದ ಜನರು ಇರುತ್ತಾರೆ .ಆ ಸಮದಲ್ಲಿ ಆಶ್ರಮದ ಆವರಣದ ಎಲ್ಲಾಕಡೆ ಜನರು ಕುಳಿತಿರುತ್ತಾರೆ . ಸ್ಪೀಕರ ವ್ಯವಸ್ಥೆ ಇದೆ , ಸ್ವಜಾಗೃತಿಯಿಂದ ಪ್ರತಿಯೊಬ್ಬರು ಶಾಂತತೆ ಕಾಪಾಡಿಕೊಂಡು ಹೋಗುತ್ತಾರೆ.
ಇವರ ಪ್ರವಚನ ಕೇಳಿ ಬರುವಾಗ “ಮನಸ್ಸು ಹತ್ತಿಯಂತೆ ಹಗುರವಾಗಿರುತ್ತದೆ”. ಇವರ ಪ್ರವಚನಕ್ಕೆ ಯಾವ ಜಾತಿ ಕಟ್ಟಳೆ ಇರದೆ , ತೋರದೆ ಎಲ್ಲರೂ ಬರುತ್ತಾರೆ. ಹಾಗೆಯೇ ಪ್ರತಿಯೊಬ್ಬರನ್ನು ಹಸನ್ಮುಖದಿಂದ ಮಾತಾಡಿಸುತ್ತಾ ಅವರ ಸಮಸ್ಯೆಗಳನ್ನು ಸಹನೆಯಿಂದ ಕೇಳಿ ತಾಯಿಯ ಪ್ರೀತಿ ತೋರಿಸುತ್ತಾ ಮಾರ್ಗದರ್ಶನ ಮಾಡುತ್ತಾರೆ. ಇವರು ಪ್ರತಿಯೊಬ್ಬರಿಗೂ ತಮ್ಮ ಕೈಂದಲೇ ಸ್ವಂತ್ ಊಟಕ್ಕೆ ಬಡಿಸುತ್ತಾರೆ . ಸರಕಾರಿ ಸಾರಿಗೆ ಬಸ್ಸು ವ್ಯವಸ್ಥೆ ಆವೇಳೆಗೆ ಹೆಚ್ಚಿಗೆ ಇಟ್ಟಿರುತ್ತಾರೆ .
ಸಿದ್ದೇಶ್ವರ ಸ್ವಾಮಿಗಳು ಭಾರತ ಮತ್ತು ರಾಜ್ಯಗಳು ಸರಕಾರ ಕೊಡ ಮಾಡುವ ಮತ್ತು ಯಾವುದೇ ಪ್ರಶಸ್ತಿ ಸನ್ಮಾನ ಇವರು ಸ್ವೀಕರಿಸುವದಿಲ್ಲ ಹಾಗೆಯೇ ಗೌರವ ಡಾಕ್ಟರೇಟ್ ಪದವಿ ಹೀಗೆ ಸನ್ಮಾನವನ್ನು ನಾನು ಸಾಮಾನ್ಯ ಮನುಷ್ಯ ಎಂದು ಹೇಳಿ ನಿರಾಕರಿಸಿದವರು . ಇವರ ಒಂದೇ ಉದ್ದೇಶ ಅಂದರೆ ದಾಸರು ಹೇಳಿದಂತೆ ” ಕೆರೆಯನೀರನು ಕೆರೆಗೆ ಚೆಲ್ಲಿ ” ಎಂಬ ಉಕ್ತಿಯಂತೆ ಪಾಲಿಸಿದವರು. ಇವರ ಈ ಗುಣಗಳೇ ಎಲ್ಲರಿಗೂ ಅಚ್ಚುಮೆಚ್ಚು.
ಇಂತಹ ಗುರುಗಳನ್ನು ಪಡೆದ ನಾವು
ವಿಜಯಪುರದ ಜನಗಳೇ ಧನ್ಯ.
ಶ್ರೀ ಪರಮ ಪೂಜ್ಯರಿಗೆ ಶಿರಸಾ ನಮಸ್ಕಾರಗಳು
✍️ ಪ್ರಿಯಾ ಪ್ರಾಣೇಶ ಹರಿದಾಸ