ನುಡಿ ನಮನ
ಸಾಮಾನ್ಯರಾಗಿ ಹುಟ್ಟಿ
ಅಸಮಾನ್ಯರಾಗಿ ಬೆಳೆದ ಪರಿಯನೋಡಾ
ಸರ್ವಜ್ಞಾನಿಯಾಗಿದ್ದರೂ
ಸರಳತೆಯ ಸಾಕಾರ ಶಿಖರ ನೋಡಾ
ಮಮತೆ ಮೋಹಗಳ ಕಳೆದು
ಮಹಾಮಾನವತಾವಾದಿಯ ಮೇರು ಪರ್ವತ ನೋಡಾ
ನಾನೆಂಬುದ ತೊರೆದು
ಸಮಾಜವೆ ತಾನಾದ ಬಗೆಯ ನೋಡಾ
ವ್ಯಕ್ತಿ ಶಕ್ತಿಯಾಗಿ ಬೆಳೆದು
ಸಮಾಜದುದ್ಧಾರಕೆ ಸವೆದ ಮುಕ್ತಿ ಪಥವ ನೋಡಾ
ಮಾತೆಂಬುದು ಜ್ಯೋತಿರ್ಲಿಂಗ
ಎಂಬ ನುಡಿಗೆ ಪ್ರತಿರೂಪರು ನೋಡಾ
ಮಾತಿಗೆ ನಿಲುಕದ ಶರಣರು
ಉಪಮಿಸಬಾರದ ಉಪಮಾತೀತರು ನೋಡಾ
ಶರಣಪಥದಿ ಸಾಗಿದ ಬಂದ
ಮಹಾ ಶಿವಶರಣನ ನಿಲುವ ನೋಡಾ
ಎನ್ನ ತವನಿಧಿ ವಿಜಯಮಹಾಂತೇಶ
ನಿನ್ನಪಾದದಡಿ ಕೂಡಿದ ಕೂಟನೋಡಾ.
–ಸವಿತಾ ಮಾಟೂರ ಇಲಕಲ್ಲ