ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನದ ಅಂಗವಾಗಿ ಅವರಿಗೊಂದು ಕವನಾಂಜಲಿ
ಬೆಂಕಿಯಲ್ಲಿ ಅರಳಿದ ಹೂವು
ಮತ್ತೊಮ್ಮೆ ಧರೆಗೆ ಬಾ ತಾಯಿಯೇ
ಅಕ್ಷರದ ಮಾತೆಯೇ
ದುಷ್ಟ ಕೂಟದ ಕೆಟ್ಟ ಮನಸ್ಸಿನ ವಿಕೃತಿಯನೊಮ್ಮೆ ನೋಡು ಬಾ
ಧರೆಯ ಮೇಲಿನ ಪಾಪ ಕೂಪಕ್ಕೆ ಮಿತಿ ಇಲ್ಲದಾಗಿದೆ,ಹೆಣ್ಣೊಂದು
ಹೊರ ಹೋಗಿ ಒಳ ಬರದಂತಾಗಿದೆ ಅತ್ಯಾಚಾರವೆಂಬ ಅಗ್ನಿಕುಂಡದಲಿ ನಿತ್ಯ ನೂರಾರು ಸೀತೆಯರು ಬೆಂದು ಕರಕಲಾಗಿ ಹೋಗುತಿಹರು
ವಿಕೃತಿ ಮನಸ್ಸಿನ ಮನುಜರ ನಡುವೆ..
ಅಂದು ನೀ
ಹೊಸಿಲು ದಾಟಿಸಿ ವಿದ್ಯೆ ಕಲಿಸಿ
ಬಾಳು ನಂದನವಾಗಿಸಿದೆ
ಇಂದು ಈ ದುರುಳರು
ಹೊಸಿಲು ದಾಟಿದ ಹೆಣ್ಣುಗಳ ಬಾಳು ನರಕ ಮಾಡುತಿಹರು
ಮತ್ತೊಮ್ಮೆ ಹುಟ್ಟಿ ಬಂದು
ಸ್ತ್ರೀಯರ ಅಳಲಿಗೆ ವಿರಾಮ ನೀಡು ಬಾ
ದುಷ್ಟ ಮನುಜರ ಮದವ ಇಳಿಸಿ, ಮಹಿಷಿಮರ್ದಿನಿಯಾಗು ಬಾ
ವಿದ್ಯೆ ಕಲಿಸಿ ಸ್ವಾತಂತ್ರ್ಯ ನೀಡಿದ ಮಕ್ಕಳ ಬದುಕನೊಮ್ಮೆ ನೋಡು ಬಾ
ಸ್ವಾತಂತ್ರ್ಯ ಸ್ವೇಚ್ಛೆಯಾಯಿತೆ???
ತಿದ್ದಿ ಬುದ್ದಿಯ ಹೇಳು ಬಾ…
ಶ್ರೀಮತಿ ಮೀನಾಕ್ಷಿ ಸುರೇಶ್ ಭಾಂಗಿ ಸೂಡಿ
ಸಾಹಿತಿ,ಶಿಕ್ಷಕಿ
ಚೆನ್ನಮ್ಮನಕಿತ್ತೂರ