ಪ್ರವಾಸ ಕಥನ ಮಾಲಿಕೆ
ಕುವೆಂಪು ಮನೆ…..
ಕರ್ನಾಟಕ ಕಂಡ ಮಹಾನ ಕವಿ. ರಾಷ್ಟ್ರ ಕವಿ ಕುವೆಂಪು ಅವರ ಮನೆ ಇರುವದು ತೀರ್ಥಹಳ್ಳಿಯ ಕುಪ್ಪಳ್ಳಿ ಎನ್ನುವ ಊರಲ್ಲಿ ಇದೆ. ಕುಪ್ಪಳ್ಳಿ. ವೆಂಕಟಪ್ಪ. ಪುಟ್ಟಪ್ಪ ಅವರು ಜನಿಸಿದ ಮನೆ. ಕನ್ನಡಕ್ಕೆ ಮೊದಲ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಕವಿ. ಅವರ ಕಾವ್ಯನಾಮ.. ಕುವೆಂಪು.
ಕನ್ನಡದ ಅಗ್ರಮಾನ್ಯ ಕವಿ. ನಾಟಕಕಾರ. ಕಾದಂಬರಿಕಾರ. ವಿಮರ್ಶಕ ಹಾಗೂ ಚಿಂತಕರು. ಕೊಪ್ಪ ತಾಲ್ಲೂಕಿನ ಹಿರೇಕೊಡಿಯಲ್ಲಿ ಜನನ. ಮುಂದೆ ತೀರ್ಥಹಳ್ಳಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ನಂತರದಲ್ಲಿ ಅದೇ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಸೇ ರಿಕೊಳ್ಳುತ್ತಾರೆ.ನಂತರ ಉಕುಲಪತಿಯಾಗಿ ಸೇವೆ ಸಲ್ಲಿಸುತ್ತಾರೆ. ಹೇಮಾವತಿಯವರನ್ನು ಮದುವೆಯಾಗುತ್ತಾರೆ. ಇವರ ಮಕ್ಕಳು.. ಇಂದುಕಲಾ. ಧಾರಿಣಿ. ಪೂರ್ಣ ಚಂದ್ರ ತೇಜಸ್ವಿ. ಕೋಕಿಲೊದಯ ಚಂದ್ರ.
ಕುವೆಂಪು ಅವರ ಮನೆಯಲ್ಲಿ ಅವರು ಉಪಯೋಗಿಸಿದ ವಸ್ತುಗಳು. ಪುಸ್ತಕಗಳು. ಕುಟುಂಬದವರ ಭಾವಚಿತ್ರಗಳನ್ನು ಪ್ರದರ್ಶನಕಿಟ್ಟಿ ದ್ದಾರೆ.
ಕುವೆಂಪು ಅವರ ಸಮಾಧಿ ಕವಿಶೈಲದಲ್ಲಿದೆ. ಅವರ ಮನೆ ಯ ಹತ್ತಿರ ಅಚ್ಚ ಹಸಿರಿನ ಕಾನನದಲ್ಲಿದೆ. ಇದನ್ನು ಮತ್ತಷ್ಟು ಸುಂದರವಾಗಿಸಿದ್ದು ಇಲ್ಲಿನ ಕಮಾನುಗಳು.ಪೂರ್ಣ ಚಂದ್ರ ತೇಜಸ್ವಿ ಅವರ ಆಸೆಯಂತೆ ಕಾಡಿಗೆ ಧಕ್ಕೆ ಮಾಡದೆ ಯಾವುದೇ ಮರ ಕಡಿಯದೆ ಕುವೆಂಪು ಸ್ಮಾರಕ ನಿರ್ಮಿಸಿದ್ದಾರೆ. ಒಟ್ಟು 35ಕಂಬಗಳಿವೆ. ಆ ಕಂಬಗಳ ಮೇಲೆ ತೊಲೆಗಳನ್ನು ಇಟ್ಟು ಕಮಾನು ಕಟ್ಟಿದ್ದಾರೆ ಒಟ್ಟಿನಲ್ಲಿ 25 ತೊಲೆಗಳಿವೆ.ಈ ಕಮಾನು ಸುತ್ತುವರೆದಿದೆ ಮಧ್ಯದಲ್ಲಿ ಕುವೆಂಪು ಸಮಾಧಿ ಇದೆ. ಹತ್ತಿರದಲ್ಲೇ ಕುವೆಂಪು ಅವರು ತಮ್ಮ ಮಿತ್ರರೊಂದಿಗೆ ಸಾಹಿತ್ಯ ಚರ್ಚಿಸುತ್ತಿದ್ದ ಸಣ್ಣ ಸಣ್ಣ ಬಂಡೆಯ ಕಲ್ಲು ಗಳಿವೆ. ನೋಡಲು ಸುಂದರ. ಮನಮೋಹಕ. ಸುಂದರ ಕಾನನದ ನಡುವಿನ ಸೌಂದರ್ಯ ಕವಿ ಮನಕ್ಕೆ ಪ್ರೇರಣೆ ಅನ್ನೋದು ಸತ್ಯ.11/11/1994 ರಂದು ಅಗಲಿದ ಕವಿ ಎಲ್ಲರ ಮನ ಗೆದ್ದ ಜಗದ ಕವಿ.
ಇವರು ಹುಟ್ಟಿದ ದಿನವನ್ನು ಕರ್ನಾಟಕ ರಾಜ್ಯ ಸರ್ಕಾರ….. ವಿಶ್ವಮಾನವ ದಿನ….. ಎಂದು ಘೋಷಣೆ ಮಾಡಿದ್ದಾರೆ. ಇದು ಅವರಿಗೇ ಸಂದoತಹ ದೊಡ್ಡ ಗೌರವ.
ರಸಋಷಿ ಅವರ ಮೇರುಕೃತಿ. ಶ್ರೀ ರಾಮಾಯಣ ದರ್ಶನo ಗೆ ಕೇಂದ್ರ ಸಾಹಿತಿ ಅಕ್ಯಾಡಮಿ ಪ್ರಶ ಸ್ತಿ ದೊರೆತಿದೆ. ಇವರು ಪಡೆದ ಅನೇಕ ಪ್ರಶಸ್ತಿಗಳು ಅನೇಕ..
ಪದ್ಮ ವಿಭೂಷಣ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ
ಪಂಪಾ ಪ್ರಶಸ್ತಿ
ರಾಷ್ಟ್ರಕವಿ ಪ್ರಶಸ್ತಿ.
ಕರ್ನಾಟಕ ಪ್ರಶಸ್ತಿ
ಪದ್ಮ ಭೂಷಣ ಪ್ರಶಸ್ತಿ.
ಇವರು ಬರೆದ ಕೃತಿಗಳು….
ಮಹಾಕಾವ್ಯ.. ಶ್ರೀ ರಾಮಾಯಣ ದರ್ಶನಂ.
ಖಂಡ ಕಾವ್ಯ.. ಚಿತ್ರಾoಗದ.
ಕವನ ಸಂಕಲನಗಳು..23
ಕಥಾ ಸಂಕಲನ..2
ಕಾದಂಬರಿ..2
ನಾಟಕಗಳು..12
ವಿಮರ್ಶೆ..6
ಪ್ರಬಂಧ..1
ಆತ್ಮಕಥೆ..1
ಜೀವನ ಚರಿತ್ರೆ..2
ಶಿಶು ಸಾಹಿತ್ಯ..9
ಆಯ್ದ ಸಂಕಲನ..3
ಮಲೆಗಲಲ್ಲಿ ಮದುಮಗಳು. ಕಾನೂನು ಹೆಗ್ಗಡತಿ. ಜಗತ್ತಿನ ಮಹಾಕಾದಂಬರಿ.
ಬೆರಳ್ಗೆ ಕೊರಳ.. ಚಲನ ಚಿತ್ರವಾಗಿದೆ.
ಹೀಗೆ ಸಾಹಿತ್ಯ ಲೋಕಕ್ಕೆ ಅನನ್ಯ ಸೇವೆಗೈದಿದ್ದಾರೆ.
ಓ ನನ್ನ ಚೇತನ
ಆಗು ನೀ ಅನಿಕೇತನ.
ಮನೆ ಮನೆ ನನ್ನ ಮನೆ
ನನ್ನತಾಯಿ ಒಲಿದ ಮನೆ
ನಾನು ನುಡಿಯ ಕಲಿತ ಮನೆ
ಮನೆ ಮನೆ ಮುದ್ದು ಮನೆ.
✍️ಶ್ರೀಮತಿ. ವಿದ್ಯಾ. ಹುಂಡೇಕರ.