ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಯುವಕವಿ ಸೂಗೂರೇಶ ಹಿರೇಮಠ ಆಯ್ಕೆ

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ನಡೆಯುವ ಮೊದಲ ದಿನದ ಕವಿಗೋಷ್ಟಿಗೆ ರಾಯಚೂರು ಜಿಲ್ಲೆಯ ಭರವಸೆಯ ಯುವಕವಿ ಸೂಗೂರೇಶ ಹಿರೇಮಠ ರವರು ಆಯ್ಕೆಯಾಗಿದ್ದಾರೆ.
ಈಗಾಗಲೆ ಸೂಗೂರೇಶ ಹಿರೇಮಠ ರವರು ಮುರಿದ ಟೊಂಗೆಯ ಚಿಗುರು ಎಂಬ ಕವನಸಂಕಲನವನ್ನು ಪ್ರಕಟಣೆ ಮಾಡಿದ್ದು, ೨೦೧೭ ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. ಬಹುಮುಖ ಪ್ರತಿಭೆಯ ಶಿಕ್ಷಕರಾಗಿರುವ ಇವರು ಮಕ್ಕಳಿಗಾಗಿ ಚಿಣ್ಣರ ಛಾವಣಿ ಪತ್ರಿಕೆಯನ್ನು ತರುತ್ತಿದ್ದು ಮಕ್ಕಳನ್ನು ಸಾಹಿತ್ಯದಲ್ಲಿ ತೊಡಗಿಸುವ ಕಾರ್ಯ ಮಾಡುತ್ತಿದ್ದಾರೆ.

ಅನೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸಿರುವ ಸೂಗೂರೇಶ ಹಿರೇಮಠರು ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಆಯ್ಕೆಯಾಗಿದ್ದಕ್ಕೆ ರಾಯಚೂರು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ ಅಳ್ಳುಂಡಿ ಹಾಗೂ ಲಿಂಗಸೂಗೂರು ತಾಲೂಕು ಕಸಾಪ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡೂರು ಹಾಗೂ ಮಸ್ಕಿ ಕಸಾಪದ ಅಧ್ಯಕ್ಷರು ಆದಪ್ಪ ಹೆಂಬಾ, ಮಹಾಂತೇಶ ಮಸ್ಕಿ ಗುಂಡೂರಾವ್ ದೇಸಾಯಿ ಮತ್ತು ಜಿಲ್ಲೆಯ ಸಾಹಿತ್ಯ ಬಳಗದಿಂದ ಅಭಿನಂದನೆ ತಿಳಿಸಿದ್ದಾರೆ.

Don`t copy text!