ಶ್ರೀ ಗುರು ಸಿದ್ದೇಶ್ವರ
ಶುಭ್ರ ವಸ್ತ್ರಧಾರಿ
ವಿಮಲ ಚೆತೋಹಾರಿ
ನಿರ್ಮಲ ಮನಕಾರಿ
ವಿಪುಲ ಗುಣಧಾರಿ
ಸರ್ವರಿಗೆ ಶುಭಕಾರಿ.
ಸುಂದರ ಭಾಷಣಕಾರ
ಶುದ್ಧ ವಾಗ್ಗೆಯಕಾರ
ಪರಿಶುದ್ಧ ಜ್ಞಾನಧಾರ
ಸಿದ್ಧನ ಧ್ಯಾನಕಾರ
ಸರ್ವರಿಗೆ ಉಪಕಾರ.
ನೋಡಲು ಬಲು ನೀಳಕಾಯ
ಹಿತವಚನ ನೀಡುವ ಉಪಾಯ
ತುಂಬು ಜೀವನದ ನಿರ್ಮಲ
ಕಾಯ
ದೇವನೊಲಿಸುತ ದಂಡಿಸುತ
ಕಾಯ
ಕಾಯದಿ ಇಂದು ನಮ್ಮಿಂದ
ಮಾಯ.
–ಕೃಷ್ಣ ಬೀಡಕರ ವಿಜಯಪುರ