ಶತಮಾನ ಕಂಡ ಯೋಗಿ ಪುರುಷ ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳು

 

ಶತಮಾನ ಕಂಡ ಯೋಗಿ ಪುರುಷ
ಶ್ರೀ ಗುರು ಸಿದ್ದೇಶ್ವರ ಸ್ವಾಮಿಗಳು

ಶ್ರೀ ಗುರುವೇ ಸುಜ್ಞಾನ ಸಾಗರವೇ
ನೀವು ಭುವಿಯಲಿ ಬಂದು
ಜ್ಞಾನ ಯೋಗಿಯಾಗಿ ನಿಂದು
ಜನ ಮನದ ಬೆಳ ಕಾದಿರಿ ಇಂದು. ||

ಬಿಜ್ಜರಿಗೆಯ ತುಂಬು ಕುಟುಂಬದ ಲಿ ಹುಟ್ಟಿ
ತಮ್ಮ ವಿದ್ಯಾಭ್ಯಾಸ ವ ಸಾಗಿಸುತಲಿ
ಬಿಜ್ಜರಿಗಿ ಚಡಚಣ ವಿಜಯಪುರ ಹಾಗು
ಕೊಲ್ಲಾಪುರ ದ ವಿದ್ಯಾ ಪೀಠದಲ ಲಿ
ಪದವಿಯ ನು ಪಡೆದಿರಿ ತತ್ವ ಜ್ಞಾನದಲಿ ||

ವಿಜಯಾ ಪುರದ ಮಲ್ಲಿಕಾರ್ಜುನ ಸ್ವಾಮಿಗಳ
ಶಿಷ್ಯರಾಗಿ ,ಅವರ ತತ್ವ ಜ್ಞಾನವ ತಮ್ಮಲ್ಲಿ
ಅಳವಡಿಸಿ ಕೊಂಡಿರಿ
ಗುರುವಿಗೆ ತಕ್ಕ ಶಿಷ್ಯ ರಾದಿರಿ ಪೂರ್ವಾಶ್ರಮವ
ತ್ಯಜಿಸಿ ,ಸಮಾಜ ಕಲ್ಯಾಣ ಕ್ಕಾಗಿ ತಮ್ಮ
ಜೀವನವನ್ನೇ ಮೀಸಲಾಗಿಟ್ಟಿರಿ ||

ಮಾನವಸಹಜ ಬಯಕೆಗಳ ತೊರೆದು
ಲೌಕಿಕದ ಸುಖವ ಬಯಸದೆ ನಿಜವಾದ
ಸನ್ಯಾಸತ್ವ ದ ಅರ್ಥವನ್ನು ಜಗಕೆಲ್ಲ ತೋರಿದಿರಿ
ಬುದ್ಧ ಬಸವಣ್ಣ ಅಲ್ಲ ಮರ ವಾಣಿಯನ್ನು
ತಮ್ಮಲ್ಲಿ ಅಳವಡಿಸಿ ಕೊಂಡು ಬರೀ
ಮಾತಿನಲ್ಲಿ ಹೇಳದೆ ಕೃತಿಯಲ್ಲಿ ತೋರಿಸಿದಿರಿ ||

ನೊಂದು ಬೆಂದು ಬಳಲಿ ಬಂದ ಜನರಿಗೆ
ಸಾಂತ್ವನದ ನುಡಿಗಳಿಂದ ಜನರ ಮನದಲಿ
ಆಶಾ ಕಿರಣ ಮೂಡಿಸಿದಿರಿ
ಬಡವರ ದೀನರ ಮಕ್ಕಳಿಗೆ ಅನ್ನ ದಾನ ,
ವಿದ್ಯಾ ದಾನ ನೀಡಿ ಸಲಹಿದಿರಿ
ಜಾತಿ ಭೇದವ ತೊಡೆದು , ಮೇಲು ಕೀಳೆಂಬ
ಭಾವನೆಯ ತೊರೆದು , ತಂದೆ , ತಾಯಿ ,
ಗುರುವಾಗಿ ಅವರಿಗೆ ಹಾಗು ನಮಗೆಲ್ಲ
ನಡೆದಾಡುವ ದೇವರಾ ದಿರಿ. ||

ಸದಾ ನೆಮ್ಮದಿಯ ಜೀವನ ನಡೆಸಿ
ಜಗಕೆಲ್ಲ ಶಾಂತಿ ಧೂ ತರಾದಿರಿ
ಆಸೆ ಆಮಿಷ ಗಳಿಂದ ದೂರವಿದ್ದು ,
ಸಂದ ಪದವಿಗಳನು ನಯವಾಗಿ ನಿರಾಕರಿಸಿ
ತ್ಯಾಗ ಮೂರ್ತಿಯಾಗಿ ನಿಂದಿರಿ ||

ಶ್ವೇತ ಬಣ್ಣದಲ್ಲಿ ಎಲ್ಲಾ ಬಣ್ಣಗಳು ಅಡಗಿರುವತೆ
ಶ್ವೇತ ಧಾರಿಯಾಗಿ , ಎಲ್ಲವನ್ನೂ ತಮ್ಮೊಳಗೆ
ಅಡ ಗಿಸಿಕೊಂ ಡು , ಶ್ವೇತ ಧಾ ರಿಯಾಗಿ ಚರಿಸಿದಿರಿ
ನಿರ್ಲಿಪ್ತ ನಿಲುವನು ಮುಟ್ಟಿ , ಪಂಚ ಭೂತ ಗ ಳಲಿ
ಒಂದಾದ ಅಗ್ನಿ ಯೊಳಗೆ ಸಮಾವೇಶ ವಾಗಿ
ಬಯಲ ಲಿ ಬಯಲಾಗಿ ಬಯಲಾ ದಿ ರಿ ||

ಸ್ಥಾವರಕ್ಕೆ ಅಳಿ ವುಂಟು ಜಂಗಮಕ್ಕೆ ಅಳಿವಿಲ್ಲ
ಎನುವಂತೆ ನಿಮ್ಮ ಆತ್ಮಕ್ಕೆ ಅಳಿವಿಲ್ಲ ದಂತೆ
ಭಕ್ತ ಜನ ಮನದಲ್ಲಿ , ಹೃದಯ ದಲ್ಲಿ ಶಾಶ್ವತ ವಾಗಿ
ಅಡಗಿ ಅಮಾರರಾಗಿ ಉಳಿದಿರಿ. ||

ತಂದೆಯೇ ನಿಮ್ಮಂತಹ ಪುತ್ರ ನನ್ನು ಪಡೆದ
ಭಾರತ ಮಾತೆಯ ತನುಜಾತೆ ಯಾದ
ಕನ್ನಡ ಮಾತೆಯೇ ಧನ್ಯಳು • ನಿಮ್ಮಂತಹ
ಗುರುವನು ಪಡೆದ ನಾವೇ ಪುಣ್ಯ ವಂತರು ||

ತಮ್ಮಾಶೀರ್ವಾದ ಸದಾ ನಮ್ಮನ್ನು ಕಾಯಲಿ
ನಿಮ್ಮ ಶಾಂತಿ ಸಂದೇಶ ನಮ್ಮೆಲ್ಲ ರ
ದಾರಿ ದೀಪವಾ ಗಲಿ
ಶತಮಾನ ಕಂಡ ಸಂತನಿಗೆ ಜಯವಾಗಲಿ. ||

ಮೀನಾಕ್ಷಿ ವಿ. ಥಳಂಗೆ ಸೊಲ್ಲಾಪುರ

Don`t copy text!