ಸಂಕ್ರಾಂತಿಯ ಈ ಸವಿಯು
ಸಂಕ್ರಾಂತಿ ಈ ಹಬ್ಬದಂದು
ಎಳ್ಳು ಬೆಲ್ಲದ ರುಚಿಯ ಸವಿದು
ಪರಸ್ಪರರು ಒಂದಾಗಿ ಇಂದು
ಸಿಹಿ ಹಂಚಿವೆ ಕೈಗಳಿಂದು
ಸಿಹಿ ನೆನಪುಗಳ ಉಳಿಸುತ
ಕಹಿನೆನಪುಗಳ ಅಳಿಸುತ
ಬಾಂಧವ್ಯ ಬೆಸೆಯುವ ಈ ಪರಿ
ಆತ್ಮಾವಲೋಕನಕೆ ಹೊಸ ದಾರಿ
ಭುವಿಯ ಸ್ವರ್ಗವಾಗಿಸಿದನು
ಬೆಳಕು ನೀಡಿ ಸೂರ್ಯದೇವನು
ಹೊಸ ಭಾವನೆಗಳ ಚಿಗುರಿಸಿ
ಸಂಕ್ರಮಣ ಬಂತು ಎಲ್ಲರನು ಅರಸಿ
ರಚನೆ : ಶ್ರೀಕಾಂತ ಅಮಾತಿ