ನೇತಾಜಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಕನ್ನಡಿಗ ಹೊಸಮನಿ ಸಿದ್ದಪ್ಪನವರು

ನೇತಾಜಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಕನ್ನಡಿಗ ಹೊಸಮನಿ ಸಿದ್ದಪ್ಪನವರು

 

ನನಗೆ ರಕ್ತ ಕೂಡಿ ನಾನು ನಿಮಗೆ ಸ್ವಾತಂತ್ರ್ಯ ಕೂಡುತ್ತೆನೆ”ಮತ್ತು ಚಲೋದಿಲ್ಲಿ”ಘೋಷಣೆಗಳ ಮೂಲಕ ಭಾರತದ ಸ್ವಾತಂತ್ರ ಹೋರಾಟಕ್ಕೆ ಯುವ ಮನಸ್ಸಗಳನ್ನು ಹೊಸೆದು ಸ್ವಾತಂತ್ರ ಹೋರಾಟಕ್ಕೆ ಕಿಚ್ಚು ಹಚ್ಚಿದ ಸುಭಾಷ್ ಚಂದ್ರ ಬೋಸ್ ರು ಜನಿಸಿದ್ದು ಜನೇವರಿ ೨೩ರಂದು.

ಸುಭಾಸಚಂದ್ರ ಬೋಸರು ೧೯೩೮ರ ಗುಜರಾತಿನ ಹರಿಪುರದಲ್ಲಿ ಜರುಗಿದ ೫೧ನೇ ಕಾಂಗ್ರೆಸ್ ನ ಅಧ್ಯಕ್ಷ ರಾಗಿ ಇಡಿ ರಾಷ್ತ್ರದ ಗಮನ ಸೆಳೆದ ಯುವ ನಾಯಕರು.

ಮತ್ತೆ ಮರಳಿ ಸುಭಾಸಚಂದ್ರ ಬೋಸರು ೧೯೩೯ರ ತ್ರಿಪುರಾ ಕಾಂಗ್ರೆಸ್ ಅದೀವೇಶನ ಅದ್ಯಕ್ಷ ಸ್ಥಾನಕ್ಕೆಬಪುನರಾಯ್ಕೆಯನ್ನು ಬಯಸಿದರು.

ಆದರೆ ಕಾಂಗ್ರೆಸ್ ನಲ್ಲಿ ೧೯೨೦ ರಿಂದ೧೯೩೮ರವರೆಗೆ ಮಹಾತ್ಮಾ ಗಾಂಧೀಜಿ ಸೂಚಿಸಿದ ವ್ಯಕ್ತಿಯು ಅಧ್ಯಕ್ಷ ರಾಗುವ ಸಂಪ್ರದಾಯ ಬೆಳೆದು ಬಂದಿತ್ತು.

ಸುಭಾಷ್ ಚಂದ್ರ ಬೋಸ್ ರು ರಾಷ್ಟ್ರಿಯ ಕಾಂಗ್ರೆಸ ಅಧ್ಯಕ್ಷ ಸ್ಥಾನಕ್ಕೆ ಪುನಃ ಆಯ್ಕೆ ಬಯಸಿದಾಗ ಗಾಂಧಿಯವರು ಸಮ್ಮತಿಸಲಿಲ್ಲ.

ಸುಭಾಷ್ ಚಂದ್ರ ಬೋಸ್ ರ ವಿರುದ್ದ ಮಹಾತ್ಮಾ ಗಾಂಧೀಜಿಯವರು_ಪಟ್ಟಾಬೀ ಸೀತಾರಾಮಯ್ಯನವರನ್ನು ಅಭ್ಯರ್ಥಿ ಎಂದು ಘೋಷಿಸಿಸಿದರು.

ಆಗ ಆತಂಕದಿಂದಲೇ ಸುಭಾಸರು ನಾಮ ಪತ್ರ ಸಲ್ಲಿಸಿದರು.

ಆದರೆ ಸುಭಾಷ್ ಚಂದ್ರ ಬೋಸ್ ರಿಗೆ ತಮ್ಮ ಗೆಲುವಿನ ಕುರಿತು ಖಾತ್ರಿ ಇರಲಿಲ್ಲ.ಕಾರಣ ಪಟ್ಟಾಭಿಸೀತರಾಮ ರ ಜೂತೆ ಜವಹರಲಾಲ ನೆಹರು ಸರದಾರ ವಲ್ಲಭ ಬಾಯಿ ಪಟೇಲರು ಸೇರಿ ಕೊಂಡರು.

ಮುಂದುವರೆದು ದೇಶದ ಎಲ್ಲಾ ಪ್ರಾದೇಶಿಕ ಕಾಂಗ್ರೆಸ್ ಸಮಿತಿಗಳು ಗಾಂಧಿಜೀಯವರ ಯವರ ಅಭ್ಯರ್ಥಿಯಾದ ಪಟ್ಟಾಬಿ ಸೀತಾರಮಯ್ಯನವರ ಪರವಾಗಿ ಕೆಲಸ ಪ್ರಾರಂಬಿಸಿದವು.

ಈ ಸಂದಿಗ್ದ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ರು ಕರ್ನಾಟಕದ ಹಾವೇರಿಗೆ ಬಂದರು.

1939 ರ ಕಾಂಗ್ರೆಸ್ ಅಧ್ಯಕ್ಷಿಯ ಚುಣಾವಣೆಯಲ್ಲಿ ಚುನಾವಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಸೋತಿದ್ದರೆ ಅವರ ರಾಜಕೀಯ ಭವಿಷ್ಯ ಮಂಕಾಗುತ್ತಿತ್ತು.

ಸುಭಾಷ್ ಚಂದ್ರ ಬೋಸ್ ರಿಗೆ ಕನ್ನಡಿಗ ಮತ್ತು ಕರ್ನಾಟಕದ_ರಾಜಕೀಯ ಪುನಃ ರಾಜಕೀಯ ಜನ್ಮ ನಿಡೀತು.

ಅವರೇ ಹಾವೇರಿಯ ಸರ ಸಿದ್ದಪ್ಪಹೋಸಮನಿಯವರು. ಅವರಿಲ್ಲದೇ ಇದ್ದರೆ ಸುಭಾಸರ
ರಾಜಕೀಯ ೧೯೩೯ರಲ್ಲಿ ಮುಗಿದು ಹೋಗಿರುವುದೇನೊ?

ಸರ ಸಿದ್ದಪ್ಪ ಹೂಸಮನಿಯವರು ಆಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅದ್ಯಕ್ಷರು…ಇವರನ್ನು ಹುಡುಕಿಕೂಂಡು ಸುಭಾಷ್ ಚಂದ್ರಬೋಸ್ ರು ಕರ್ನಾಟಕ ದ ಹಾವೇರಿಯ ಸರ ಹೊಸಮನಿ ಸಿದ್ದಪ್ಪನವರ ಮನೆಗೆ ಆಗಮಿಸಿ ಸರ ಸಿದ್ದಪ್ಪ ಹೊಸಮನಿ ಯವರ ಪಾದಕ್ಕೆ ದೀರ್ಘದಂಡ ನಮಸ್ಕರಿಸಿ(ವಯಸ್ಸಿನಲ್ಲಿ ಹೊಸಮನಿಯವರು ಹಿರಿಯರಾದ ಕಾರಣ) ವರ್ತಮಾನದ ರಾಜಕೀಯ ವಿದ್ಯಮಾನ ಕುರಿತು ಚರ್ಚಿಸಿದರು.

ಸುಭಾಸ ಚಂದ್ರ ಬೋಸ್ ರು ಹೊಸಮನಿ ಸಿದ್ದಪ್ಪನವರಲ್ಲಿ ಚುಣಾವಣೆಗೆ ಆಶಿರ್ವಾದ ಮಾಡುವಂತೆ ಧೀರ್ಘದಂಡ ನಮಸ್ಕರಿಸಿ ಆಶಿರ್ವಾದ ಕೇಳಿದರು.

ಭಾರತಕ್ಕೆ ಬದಲಾದ ನಾಯಕತ್ವ ಅವಶ್ಯಕತೆ ಇರುವುದನ್ನು ಗಮನಿಸಿ ಹೊಸಮನಿಯವರು ಸುಭಾಸಚಂದ್ರ ಭೂಸ ಅವರ ಪರವಾಗಿ ಪ್ರಚಾರ ಆರಂಭಿಸಿದರು.

ಈ ಸಂದರ್ಭದಲ್ಲಿ ಗಾಂಧಿಜೀಯವರು ಪಟ್ಟಾಭಿಸಿತಾರಮಯ್ಯನವರ ಗೆಲುವು ಗಾಂದಿಜಿಯವರ ಗೆಲವು.””ಪಟ್ಟಾಭಿರಾಮರ ಸೋಲು ಗಾಂಧಿಯವರು ಸೋಲು”” ಎಂದು ಹೇಳುವ ಮೂಲಕ ಪ್ರಚಾರಕ್ಕೆ ಕಿಚ್ಚು ಹಚ್ಚಿದರು.

ಕೊನೆಗೆ ಚುನಾವಣೆ ನಡೆದು ಪಲಿತಾಂಶ ಬಂದಾಗ ಅಚ್ಚರಿ ಕಾದಿತ್ತು.

ಸುಭಾಷ್ ಚಂದ್ರ ಬೋಸ್ ರು “”೧೫೮೦ಮತಗಳನ್ನು ಮತ್ತು “”ಪಟ್ಟಾಭಿಸಿತಾರಮಯ್ಯನವರು೧೩೭೭””ಮತಗಳನ್ನು ಪಡೆದಿದ್ದರು..ಸುಭಾಷ್ ಚಂದ್ರ ಬೋಸ್ ರು ೨೦೩ ಮತಗಳ ಅಂತರದಿಂದ ಗೆದ್ದಿದ್ದರು.

ಇಡೀ ದೇಶದಲ್ಲಿಯೇ ಸುಭಾಸರಿಗೆ ಹೆಚ್ಚು ಮತಗಳನ್ನು ಕರ್ನಾಟಕದ ಜನತೆ ನೀಡಿದ್ದರು.ಇವರಿಗೆಲ್ಲ ಪ್ರೇರಕ ಶಕ್ತಿಯಾಗಿ ಕೆಲಸಮಾಡಿದವರು ಹಾವೇರಿಯ ಸರ ಸಿದ್ದಪ್ಪ ಹೂಸಮನಿಯವರು.ಅಂದು ಸಿದ್ದಪ್ಪ ಹೊಸಮನಿಯವರು ಸುಭಾಷ್ ಚಂದ್ರ ಬೋಸ್ ಅವರ ಬೆನ್ನಿಗೆ ನಿಲ್ಲದೇ ಇದ್ದರೆ ಮುಂದೆ ಸುಭಾಷ್ ಚಂದ್ರ ಬೋಸ್ ಅವರು ಜ್ವಾಲಾಮುಖಿ ಯಾಗಿ ಪರಿವರ್ತನೆ ಯಾಗುತ್ತಿದರೆಯೇ? ಎಂಬ ಸಂಶಯ ನಮ್ಮನ್ನು ಕಾಡುವುದು.

ಅವತ್ತು ಗಾಂಧೀಜೀ ಜವಹರಲಾಲ್ ನೆಹರು,ಸರದಾರ ವಲ್ಲಭ ಬಾಯಿ ಪಟೇಲರ ಮಾತನ್ನು ದಿಕ್ಕರಿಸಿ ಸುಭಾಸ ಚಂದ್ರ ಬೋಸ್ ರ ಪರವಾಗಿ ಕೆಲಸ ಮಾಡಿದರ ಪ್ರತಿಪಲವಾಗಿ ಸುಭಾಸರಿಗೆ ಗೆಲುವು ಸಾಧ್ಯವಾಯಿತು.

ಮುಂದೆ ಪಾರ್ವರ್ಡ ಬ್ಲಾಕ್ ಪಕ್ಷದ ಪತ್ರಿಕೆಯಲ್ಲಿ ಸುಭಾಷ್ ಚಂದ್ರ ಬೋಸ್ ರು ನಾನು ಸರ ಸಿದ್ದಪ್ಪ ಹೊಸಮನಿ ಯವರಿಂದ ಪ್ರೇರಿತಗೂಂಡಿದ್ದನೆ ಅವರು ನಿಷ್ಕಲ್ಮಸಿನ ನಿಷ್ಠುರವಾದಿ,ನಾನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ಪ್ರಮುಖರು ಎಂದು ಬರೆದುಕೂಂಡರು.

ಸುಭಾಷಚಂದ್ರ ಬೋಸರು ಕರ್ನಾಟಕ ಸಂಚಾರ ಮುಗಿಸಿ ಕಲಕತ್ತೆಗೆ ಮರಳಿ ಹೋದಮೇಲೆ ತಾವು ಹೊಸಮನಿಯವರೊಂದಿಗೆ ಚರ್ಚೆ ಮಾಡಿ ಪಡೆದುಕೊಂಡ ಅನುಭವವನ್ನು ತಮ್ಮ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಫಾರ್ವರ್ಡ ಬ್ಲಾಕ್’ ಪತ್ರಿಕೆಯಲ್ಲಿ ಬರೆದರು.

ಹೊಸಮನಿಯವರು ಶ್ರೇಷ್ಠ ನಿಷ್ಠಾತ ರಾಜಕಾರಣಿ. ಮುತ್ಸದ್ಧಿ ಮಹಾನುಭಾವ, ನಾನು ಕ೦ಡಿರುವವರಲ್ಲಿ ಅವರು ಅಪರೂಪದ ವ್ಯಕ್ತಿ. ನನಗೆ ಅವರು ರಾಜಕೀಯದ ಸ್ಫೂರ್ತಿ ಒದಗಿಸಿಕೊಟ್ಟಿದ್ದಾರೆ. ಅವರ ಸಭ್ಯತೆ, ಪ್ರಾಮಾಣಿಕತೆ, ದೇಶಾಭಿಮಾನ, ಎದೆಗಾರಿಕೆ ಹಾಗೂ ವಿಶಾಲ ಮನೋಭಾವನೆಗಳು ರಾಷ್ಟ್ರಕ್ಕೆ ಮಾರ್ಗದರ್ಶಕವಾಗಿವೆ. ದೈಹಿಕವಾಗಿ ಅವರು ವೃದ್ಧರಾಗಿದ್ದರೆ, ರಾಜಕೀಯ ವಿಚಾರಗಳ ದೃಷ್ಟಿಯಿಂದ ಅವರು ತರುಣರಾಗಿದ್ದಾರೆ.”

ಇಂದು ಹಾವೇರಿ ಜಿಲ್ಲೆಯ ಜಿಲ್ಲಾ ಕೆಂದ್ರ ಬಸ್ ನಿಲ್ದಾಣದಲ್ಲಿ golden colour statue ನಮಗೆ ನೋಡಲು ಕಾಣಸಿಗುತ್ತದೆ ,ಇದೇ ಸರ ಸಿದ್ದಪ್ಪ ಹೂಸಮನಿ ಯವರ ಪ್ರತಿಮೆ..

ಸುಭಾಷ್ ಚಂದ್ರ ಬೋಸ್ ರ ಜನ್ಮದಿನದಂದು ಸಭಾಸರನ್ನು ನೆನೆಯುವಾಗ ಸುಭಾಷ್ ಚಂದ್ರ ಬೋಸ್ ರಿಗೆ ರಾಜಕೀಯ ಪುನಃ ಜನ್ಮನೀಡಿದ ಕನ್ನಡಿಗ ಮುಂದಾಳತ್ವ ವಹಿಸಿದ್ದ ಸರ ಸಿದ್ದಪ್ಪ ಹೂಸಮನಿಯವರನ್ನು ನೆನೆಯುವುದು ಕನ್ನಡಿಗರ ಕರ್ತವ್ಯ…

ಆಗ ಸರ ಸಿದ್ದಪ್ಪ ಹೊಸಮನಿ ಯವರು ಮುಂಬೈ ಕೆಂದ್ರ ಶಾಸನ ಸಭೆಯ ಸದಸ್ಯರು.ಅದು ಇವತ್ತಿನ ಕರ್ನಾಟಕದ ಮೂರು ಜಿಲ್ಲೆ ಮತ್ತು ಮಹಾರಾಷ್ಟ್ರ ದ ನಾಲ್ಕು ಜಿಲ್ಲೆಯ ವ್ಯಾಪ್ತಿ ಹೂಂದಿರುವ ಚುನಾವಣಾ ಮತಕ್ಷೆತ್ರ.

೧೯೩೯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣಾ ಗೆಲುವಿನ ನಂತರ ಸುಭಾಷ್ ಚಂದ್ರ ಬೋಸ್ ರು ಅಂತರರಾಷ್ಟ್ರೀಯ ನಾಯಕರಾದರು.

ಅಲ್ಲಿಂದ ಹಿಟ್ಲರ ಮುಸಲೋನಿಯವರ ಸಂಪರ್ಕ, ಶತ್ರುವಿನ ಶತ್ರು ಮಿತ್ರ ತತ್ವದಡಿಯಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಜ್ವಾಲಾಮುಖಿಯಾಗಿ ಪರಿವರ್ತನೆ ಮಾಡಿದ್ದು ಸುಭಾಸ ಚಂದ್ರ ಭೋಸರ ಇತಿಹಾಸ…so ನೇತಾಜಿ ಯವರ ಜನ್ಮದಿನದ ಶುಭಾಶಯಗಳು.

ಲೇಖಕರು..ಮಹೇಶ ನೀ ಚನ್ನಂಗಿ.
ಮುಖ್ಯೋಪಾಧ್ಯಾಯರು.
ಸರಕಾರಿ ಪ್ರೌಢ ಶಾಲೆ ತುರಕರಶಿಗಿಹಳ್ಳಿ
ತಾಲೂಕು. ಬೈಲಹೂಂಗಲ.
೯೭೪೦೩೧೩೮೨೦

Don`t copy text!