ಗಣತಂತ್ರ ದಿನ 🇮🇳
ಪ್ರಜಾಪ್ರಭುತ್ವದ ಪ್ರಜೆಗಳ ದಿನ
ಆನಂದೋತ್ಸವದಿ ನಲಿವ ದಿನ
ನಿತ್ಯೋತ್ಸವ ಸ್ವಾತಂತ್ರ್ಯದ ಗಾನ
ಜಗದಲಿ ಭಾರತ ನಂದನವನ
ಸ್ವಾತಂತ್ರ್ಯವೀರರ ಅಮರಗಾನ
ಉಕ್ಕಿ ಹರಿಯುವದು ಸ್ವಾಭಿಮಾನ
ಕರ್ತವ್ಯಪಥದಲಿ ಶಕ್ತಿ ಪ್ರದರ್ಶನ
ಸಂಸ್ಕೃತಿ ಪರಂಪರೆಯ ದರ್ಶನ
ದೇಶಪ್ರೇಮಕೆ ರಾಷ್ಟೃಪತಿ ವಂದನ
ಪೂರ್ಣ ದೇಶವೇ ಆಚರಿಸುವದು
ಸಂಭ್ರಮದ ಸಡಗರದ ಹಬ್ಬ
ರಾಷ್ಟ್ರಧ್ವಜಕೆ ನಮಿಸುವ ಪರ್ವ
ಗಡಿನಾಡ ಯೋಧರಿಗೆ ಕೃತಜ್ಞತೆ
ಭಾರತೀಯರ ಬಲದ ಸಾರ್ಥಕತೆ
ಮೊಳಗಲಿ ಭಾರತದ ಜೈಘೋಷ
ಜೈ ಭಾರತ ಜೈ ಭಾರತ ಜೈ ಭಾರತ
🇮🇳🇮🇳🇮🇳🇮🇳🇮🇳🙏🏻
–ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ