ಹಣೆ ಹಚ್ಚಿ ಬಂದೆನು
ಹಣೆ ಹಚ್ಚಿ ಬಂದೆನು
ಸಮಾಧಿಯ ನೆರಳು
ಹಲಸಂಗಿಯ ಕರುಳು
ಹಿಡಿದು ನಡೆಸೆನ್ನ
ಮಹಿಮಾ ನನ್ನ ಬೆರಳು
ಕನ್ನಡದ ಕವಿ ತಿಲಕ
ಅರವಿಂದ ಅಲ್ಲಮರ
ರಾಜಯೋಗದ ಪಥಿಕ
ಮಾತಾಮಯಿ ಕರುಣಾ
ಶರಣ ಸಂಜಾತ
ಹಳ್ಳಿ ಹೊಲದ ಚಿಗುರು
ಗೆಳೆಯರ ಗುಂಪು
ರೇವಪ್ಪ ಲಿಂಗಪ್ಪ
ಧೂಲಾಸಾಬರ ಕಂಪು
ನಲ್ಲನ ಹಾಡು ಕೇಳಲು ಇಂಪು
ಮನೆ ತುಂಬಾ ಮಕ್ಕಳು
ಬೆಂಬಿಡದ ಬಡತನವು
ಕೈ ಬಿಡದ ನಿಮ್ಮ ಛಲ
ಕಾಶಿಯಾಯಿತು ಇಂಡಿ
ಕನ್ನಡದ ಬೆಳಕಿಂಡಿ
ದೊಡ್ಡ ವೇದಿಕೆ ಮೇಲೆ
ಎಳೆಯ ಹುಡುಗರ ಓದು
ಕಟ್ಟಿದರು ಕರುನಾಡು
ನುಡಿ ಭಾಷೆ ಸಂಸ್ಕೃತಿ
ಬುದ್ಧ ಬಸವನ ಬಿಡು
ಹಣೆ ಹಚ್ಚಿ ಬಂದೆನು
ಮಧುರ ಚೆನ್ನರೇ ನಿಮಗೆ
ಸಾಹಿತ್ಯಅರಿವಿನ ಅನುಭಾವ
ಉರಿಯುಂಡು ಕರ್ಪುರ
ಬಯಲು ಪರಿಮಳವು
–ಡಾ ಶಶಿಕಾಂತ ಪಟ್ಟಣ ಪುಣೆ ರಾಮದುರ್ಗ