ಮತಗಟ್ಟೆಗಳ ಬೂತ್ ವೀಕ್ಷಿಸಿದ ತಹಶೀಲ್ದಾರ್ ಬಸವರಾಜ್ ಮಳವಂಕಿ…

e-ಸುದ್ದಿ  ಇಳಕಲ್

ಇಳಕಲ್ ತಾಲೂಕಿನಲ್ಲಿ ಬರುವ ವಿವಿಧ ಮತಗಟ್ಟೆಗಳ ಬೂತುಗಳನ್ನು ತಾಲೂಕ ದಂಡಾಧಿಕಾರಿ ಬಸವರಾಜ್ ಮೇಳವಂಕಿ ವೀಕ್ಷಿಸಿ ಪರಿಶೀಲಿಸಿದರು.

ತಾಲೂಕಿನ ಹಿರೇ ಓತಗೇರಿ ಗೋನಾಳ ಹಾಗು ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಬೂತ್ ವ್ಯವಸ್ಥೆಯ ಬಗ್ಗೆ, ವಿವಿಧ ಸೌಲಭ್ಯಗಳ ಇರುವ ಕುರಿತು ಮಾಹಿತಿ ಕಲೆ ಹಾಕಿದರು.

ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಮಹೇಶ್ ವಾಗ್ಮೊರೆ, ಶರಣಗೌಡ ಬಿರಾದಾರ್, ಬಿ ಎಲ್ ಒಗಳು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!