ಮುದೇನೂರ ಗ್ರಾಮದಲ್ಲಿ ಸಂಭ್ರಮದಿಂದ ನಡೆದ ಕಲಿಕಾ ಮೇಳ ….

ಮುದೇನೂರ ಗ್ರಾಮದಲ್ಲಿ ಸಂಭ್ರಮದಿಂದ ನಡೆದ ಕಲಿಕಾ ಮೇಳ ….

e-ಸುದ್ದಿ ಮುದೇನೂರ

ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಪಂಚಾಯತ ಕೊಪ್ಪಳ ಶಾಲಾ ಶಿಕ್ಷಣ & ಸಾಕ್ಷರತೆ ಇಲಾಖೆ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಕುಷ್ಟಗಿ ಇವರ ಸಹಯೋಗದಲ್ಲಿ ಮುದೇನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುದೇನೂರ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ ಹಾಗೂ ಕಲಿಕಾ ಮೇಳ ಕಾರ್ಯಕ್ರಮ ನಡೆಯಿತು.

ಮಕ್ಕಳ ಕಲಿಕಾ ಹಬ್ಬ ಹಾಗೂ ಕಲಿಕಾ ಮೇಳ ಕಾರ್ಯಕ್ರಮವನ್ನು ಪ್ರೌಢಶಾಲೆಯ ಅದ್ಯಕ್ಷರಾದ ಬೀಮನಗೌಡ ಬರಗೂರ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಮತ್ತು ವೇದಿಕೆಯ ಮೇಲಿನ ಗಣ್ಯಮಾನ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಲ್ಲ ಮಕ್ಜಳು ವಿವಿಧ ವೇಶಗಳನ್ನು ಧರಿಸಿ,ಜನಪದ ನೃತ್ಯ ಗಳ ಮೂಲಕ ,ಕೋಲಾಟಗಳ ಮೂಲಕ ಟ್ರ್ಯಾಕ್ಟರ್ ಮೂಲಕ ಕಲಿಕಾ ಮೇಳದ ಮೆರವಣಿಗೆಯಲ್ಲಿ ಭಾಗಿಯಾದರು.

ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿಯ ಸದಸ್ಯರು, ಗ್ರಾಮದ ಗುರುಹಿರಿಯರು,ಯುವಕರು ಮತ್ತು ಮುದೇನೂರ ಕ್ಲಸ್ಟರ್ ಮಟ್ಟದಲ್ಲಿ ಬರುವ ಎಲ್ಲ ಶಾಲೆಯ ಮುಖ್ಯಗುರುಗಳು,ಸಹಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ-ಶರಣಗೌಡ ಕಂದಕೂರ

Don`t copy text!