ಪ್ರಥಮ ವಾರ್ಷಿಕೋತ್ಸವ ನೂರು ವಾರ್ಷಿಕೋತ್ಸವ ಆಚರಿಸಿಕೊಳ್ಳುವಂತಾಗಲಿ

 

 

ಪ್ರಥಮ ವಾರ್ಷಿಕೋತ್ಸವ ನೂರು ವಾರ್ಷಿಕೋತ್ಸವ ಆಚರಿಸಿಕೊಳ್ಳುವಂತಾಗಲಿ

e-ಸುದ್ದಿ ಇಳಕಲ್

ಶ್ರೀ ವಿಜಯ ಮಹಾಂತೇಶ ವಿದ್ಯಾ ಗುರುಕುಲದಲ್ಲಿ ಕಲಿಯುತ್ತಿರುವ ಮಕ್ಕಳು ಸಂಸ್ಕಾರವಂತರಾಗಿ ಸದೃಡ ಸಮಾಜ ನಿರ್ಮಾಣ ಮಾಡುವ ಕೌಶಲ್ಯವಂತರಾಗಲಿ ಎಂದು ಶ್ರೀ ವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿ ಶ್ರೀ ಮ.ನಿ.ಪ್ರ ಗುರುಮಹಾಂತ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

 

ಇಳಕಲ್ ನಗರದಲ್ಲಿ ಭಾನುವಾರ ಶ್ರೀ ವಿಜಯಮಹಾಂತೇಶ ಗುರುಕುಲ ಶಾಲೆಯ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿದ್ಯವಹಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ನಾಡು ನುಡಿ ಕಟ್ಟುವಲ್ಲಿ ದೂರದೃಷ್ಟಿ ಉಳ್ಳವರಾಗಿ, ನಿಸ್ವಾರ್ಥ ಸೇವೆಯಿಂದ ಕಾರ್ಯಯೋಜನೆ ಹಾಕಿಕೊಂಡರೆ ಭವಿಷ್ಯದಲ್ಲಿ ಉತ್ತಮ‌ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತದೆ ಮತ್ತು ಶಿಕ್ಷಕರು ಮಕ್ಕಳನ್ನು ಮಾನಸಿಕಾಗಿ , ದೈಹಿಕವಾಗಿ ಸದೃಢ ಗೊಳಿಸಬೇಕು. ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಸನ್ನಡತೆ, ವಿನಯವಂತಿಕೆ, ನೈತಿಕ‌ ಮೌಲ್ಯ ಕಲಿಸಿದಾಗ ಇಂದಿನ ಮಕ್ಕಳು ಮುಂದಿನ ಅತ್ಯುತ್ತಮ ನಾಗರಿಕರಾಗುತ್ತಾರೆ ಎಂದರು.


ಶ್ರೀ ವಿಜಯಮಹಾಂತೇಶ ಗುರುಕುಲದ ಸಂಸ್ಥಾಪಕ‌ ಅಧ್ಯಕ್ಷೆ, ಶರಣ ಚಿಂತಕಿ ಶ್ರೀಮತಿ ಸವಿತಾ ಎಂ. ಮಾಟೂರು ತಾವು ಗುರುಕುಲ ಸ್ಥಾಪಿಸಿದ ಉದ್ದೇಶವನ್ನು ವಿವರಿಸಿದರು.
ಶಾಲೆಯ ಮಕ್ಕಳು‌ ರಾಷ್ಟ್ರ ನಾಯಕರ ಪೋಷಾಕು ಧರಿಸಿ ವಾರ್ಷಿಕೋತ್ಸವಕ್ಕೆ ಕಳೆ ಕಟ್ಟಿದ್ದರು. ತಮ್ಮ ತೊದಲು ನುಡಿಯ ಮೂಲಕ ಮಾತನಾಡಿ, ಹಾಡಿ ಕುಣಿದು ನೆರದಿದ್ದ ಪ್ರೇಕ್ಷಕರ ಗಮನ ಸೆಳೆದರು.

 


ಅಕ್ಕನ ಬಳಗದ ಶರಣೆಯರು , ಪಾಲಕರು ಭಾಗವಹಿಸಿದ್ದರು.

 


ಪಾದಪೂಜೆ- ಕಾರ್ಯಕ್ರಮದ ಆರಂಭದಲ್ಲಿ ಮಾಟೂರು ದಂಪತಿಗಳಾದ ಶ್ರೀಮತಿ ಸವಿತಾ ಮಾಟೂರು, ಶ್ರಿ ಮುದಕಪ್ಪ ಮಾಟೂರು ಗುರುಮಹಾಂತ ಸ್ವಾಮಿಗಳ ಪಾದಪೂಜೆಯನ್ನು ನೆರವೇರಿಸಿದರು.

Don`t copy text!