ಕೇಂದ್ರ ಬಜೆಟ್ ಉತ್ತೇಜಕ ಬಜೆಟ್ ;ಪ್ರಶಾಂತ ಹಂಚಾಟೆ…
e-ಸುದ್ದಿ ಇಳಕಲ್
ಕೃಷಿ ಚಟುವಟಿಕೆಯನ್ನು ಉತ್ಪಾದಕ ಘಟಕ ಎಂದು ಘೋಷಿಸಲು ಸಲ್ಲಿಸಲಾಗಿದ್ದ ಬಹು ದಿನದ ಬೇಡಿಕೆಯನ್ನು ಕೃಷಿ ಚಟುವಟಿಕೆಗಳಿಗೆ ವೇಗವರ್ದಕ ನಿಧಿಯನ್ನು ಸ್ಥಾಪಿಸುವ ಮೂಲಕ ಈಡೇರಿಸಲು ನಮ್ಮ ದೇಶದ ರೈತ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ ಎಂದು ಪ್ರಶಾಂತ ಹಂಚಾಟೆ ತಿಳಿಸಿದ್ದಾರೆ.
ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ ಮಧ್ಯಮ ವರ್ಗದ ಜನರ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಟ್ಟ ದಿಟ್ಟ ಹೆಜ್ಜೆ ಮೆಚ್ಚುವಂತಹುದು.
ಸಣ್ಣ, ಮಧ್ಯಮ ಹಾಗೂ ಅತೀ ಸಣ್ಣ ಉದ್ದಿಮೆ ಘಟಕಗಳಿಗೆ ಮುಂದುವರಿಸಿದ ಉತ್ತೇಜಕ ಯೋಜನೆಗಳು ಅಭಿವೃದ್ಧಿಗೆ ಆಶಾದಾಯಕವಾಗಿದೆ.
ಸರಕು ಮತ್ತು ಸೇವಾ ತೆರಿಗೆ ಕರ ಸಮಾಧಾನ ಹಾಗೂ ಸರಳೀಕರಣ ಯೋಜನೆಯನ್ನು ಜಾರಿಗೊಳಿಸಲು ಸಲ್ಲಿಸಿದ್ದ ಮನವಿಯನ್ನು ಮುಂಬರುವ ದಿನಮಾನಗಳಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಾರೆಂಬ ವಿಶ್ವಾಸವಿದೆ.
ವರದಿಗಾರರು: ಶರಣಗೌಡ ಕಂದಕೂರ