ಚೆಲುವ ಚಿಣ್ಣರು ಪುಸ್ತಕ ಬಹುಮಾನ ಪ್ರಕಟ
e-ಸುದ್ದಿ ಸಿಂಧನೂರು
2019/2020/2021 ನೇ ಸಾಲಿನ ಮೂರು ವರ್ಷಗಳ ಚೆಲುವ ಚಿಣ್ಣರು ಪುಸ್ತಕ ಬಹುಮಾನವನ್ನು ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು ಹಾಗೂ ಚೆಲುವ ಚಿಣ್ಣರು ಮಕ್ಕಳ ಸಾಹಿತ್ಯ ಪತ್ರಿಕೆ ಸಿಂಧನೂರು ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಸಾಹಿತಿಗಳಿಗೆ ನೀಡುವ ಪುರಸ್ಕಾರ ಇದಾಗಿದೆ.
ಮಾರ್ಚ್ ತಿಂಗಳಿನಲ್ಲಿ ನಡೆಯುವ ಮಕ್ಕಳ ಸಾಹಿತ್ಯೋತ್ಸವ 2023ರ ಕಾರ್ಯಕ್ರಮದಲ್ಲಿ ಚೆಲುವ ಚಿಣ್ಣರು ಪುಸ್ತಕ ಬಹುಮಾನವನ್ನು ನೀಡಿ ಪ್ರಶಸ್ತಿ ಪುರಸ್ಕೃತರಾದವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶಂಕರ ದೇವರು ಹಿರೇಮಠ ಅವರು ತಿಳಿಸಿದ್ದಾರೆ.
2019ರ ಸಾಲಿನಲ್ಲಿ ತಮ್ಮಣ್ಣ ಬೀಗಾರ ಅವರ ಉಲ್ಟಾಅಂಗಿ ಮಕ್ಕಳ ಕಥಾಸಂಕಲನ
ಅರುಣಾ ನರೇಂದ್ರ ಅವರ ನೇಸರನೋಡು ಮಕ್ಕಳ ಕವನಸಂಕಲನ
2020ರ ಸಾಲಿನಲ್ಲಿ
ಶಕುಂತಲಾ ಹಿರೇಮಠ ಅವರ ಹೊಸ ಚಿಗುರು ಹಳೆ ಬೇರು ಮಕ್ಕಳ ಕಥಾಸಂಕಲನ
ವೈ.ಜಿ.ಭಗವತಿ ಅವರ
ಮತ್ತೆ ಹೊಸ ಗೆಳೆಯರು ಮಕ್ಕಳ ಕಾದಂಬರಿ
ದೀವಿತ ಎಸ್ ಕೆ ಪೆರಾಡಿ ಅವರ ಮುದ್ದು ಗುಮ್ಮ ಮಕ್ಕಳ ಕವನ ಸಂಕಲನ ಆಯ್ಕೆ ಆಗಿದೆ
2021ನೇ ಸಾಲಿನಲ್ಲಿ
ವನರಾಗ ಶಮ೯ ಅವರ ಏಳು ಮಲ್ಲಿಗೆ ರಾಜಕುಮಾರಿ
ಮಕ್ಕಳ ಕಥಾಸಂಕಲನ
ಗಣಪತಿ ಹೆಗಡೆ ಅವರ ಜಗದೊಡೆಯ ಮಕ್ಕಳ ನಾಟಕ
ನಾಗವೇಣಿ ಶಿರಸಿ ಅವರ
ಒಲವ ಹಂಚುವ ಮುದುಕಿ
ಪ್ರಸನ್ನ ಮಂಡಲಗಿರಿ ಅವರ ಹೊಳೆದಂಡೆ ಸಾಲು ಮತ್ತು ಬೆಳಕ್ಕಿಗಳು
ಚೆಲುವ ಚಿಣ್ಣರು ಪುಸ್ತಕ ಬಹುಮಾನಕ್ಕೆ ಒಟ್ಟು ಒಂಬತ್ತು ಜನ ಮಕ್ಕಳ ಸಾಹಿತಿಗಳ ಕೃತಿಗಳು ಆಯ್ಕೆ ಯಾಗಿವೆ . ಪ್ರಶಸ್ತಿ ಮೂರು ಸಾವಿರ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಯನ್ನು ಒಳಗೊಂಡಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಶಂಕರ ದೇವರು ಹಿರೇಮಠ ಅವರು ತಿಳಿಸಿದ್ದಾರೆ