ಎರಡನೇ ಶ್ರೀ ಶೈಲ ಖ್ಯಾತಿಯ ಮಸ್ಕಿ ಮಲ್ಲಿಕಾರ್ಜುನ ಮಹಾ ರಥೋತ್ಸವ

e-ಸುದ್ದಿ ಮಸ್ಕಿ

ಮಸ್ಕಿ ಪಟ್ಟಣದ ಇತಿಹಾಸ ಪ್ರಸಿದ್ಧ ಮಸ್ಕಿ ಮಲ್ಲಿಕಾರ್ಜುನ ದೇವರ ಜಾತ್ರೆ ಹಾಗೂ ಮಹಾ ರಥೋತ್ಸವ ಅತೀ ವಿಜೃಂಭಣೆಯಿಂದ ಜರುಗಿತು.

ಗಚ್ಚಿನ ಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮಿಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ ಮಲ್ಲಿಕಾರ್ಜುನ ದೇವರಿಗೆ ಮಹಾ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ನಡೆಯಿತು. ಸಂಜೆ ರಥಕ್ಕೆ ಕಳಸಾವರೋಹಣ ವೇಳೆ ಭಕ್ತರು ದಿಡ್ ನಮಸ್ಕಾರ ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು. ಬೃಹದಾಕಾರದ ಅತ್ಯಂತ ಶತಮಾನ ಕಂಡ ಹಳೆಯದಾದ  ರಥವನ್ನ ಸಾವಿರಾರು ಭಕ್ತರು ಎಳೆದು ಪುನೀತರಾದರು. ಭಕ್ತಿಭಾವದಿಂದ ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವದಲ್ಲಿ ಮಸ್ಕಿ ಶಾಸಕ ಆರ್ ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಅದ್ಧೂರಿ ಜಾತ್ರೆಯ ಯಶಸ್ಸಿಗೆ ಸಾಕ್ಷಿಯಾದರು.

Don`t copy text!