ಬಯಲೊಳಗೆ ಬಯಲಾಗಿ..

ಅರಿಷಡ್ವರ್ಗಗಳ ಮೆಟ್ಟಿ
ಅರಿವಿನ ಮೇರು ಗಿರಿಯನೇರಿ
ಬಯಲೊಳಗೆ ಬಯಲಾಗಿ
ತಿರುಗಿಸಿ ಬೆನ್ನು ನಡೆದಿರಿ ನೀವು
ಅನಾಥರಾದೆವಲ್ಲಾ ನಾವಿಂದು…

ಕಾಯಕಯೋಗಿಯಾಗಿ
ನಿಸ್ವಾರ್ಥ ಭಕ್ತಿಯಲಿ
ಮನುಕುಲದ ಹಿತದಲಿ
ಆನಂದ ಪಡೆದವರು;
ಮೂಢಮತಿಗಳನು
ಉದ್ಧರಿಸೋ ದೇವದೂತರು
ಕಾರುಣ್ಯಕಡಲಿನ ಹೃದಯವಂತರು…

ಸರಳತೆಯ ನಡೆನುಡಿಯು
ಶರಣತತ್ವದ ಕಲಶ ನೀವು
ಜಾತಿಮತಭೇದವಿರದ
ನಿರಾಭಾರಿಯು ನೀವು ನೊಂದವರ ಸಾಂತ್ವನಕೆ
ಪನ್ನೀರ ನಗೆಯವರು….

ನೀವಿಟ್ಟ ಹೆಜ್ಜೆ ಹುಡಿ ಪಾವನ ಭಸ್ಮವು
ನೀವಾಡಿದ ನುಡಿಗಳು ಪವಿತ್ರ ಪ್ರಸಾದವು
ನಿಮ್ಮ ದರ್ಶನ ಭಾಗ್ಯ ಪುಣ್ಯ ಫಲವು
ಪರಿಪಕ್ವ ಫಲವೊಂದು
ತೊಟ್ಟು ಕಳಚಿತೇ..
ಶಿವನ ಸನ್ನಿಧಿಯಲ್ಲಿ
ತಾ ಲೀನವಾಯಿತೇ…

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!