e-ಸುದ್ದಿ ವರದಿ:ಇಳಕಲ್
ಇಳಕಲ್ ತಾಲೂಕಿನ ದಂಡಾಧಿಕಾರಿಗಳ ಕಚೇರಿ ಆವರಣದಲ್ಲಿ ಅಹೋ ರಾತ್ರಿ ಧರಣಿ ಕುಳಿತ ತುಂಬ ಗ್ರಾಮದ ರೈತ ಶಶಿಕುಮಾರ್….
ಬಾಗಲಕೋಟ ಜಿಲ್ಲೆಯ ಇಲಕಲ್ಲ ತಾಲೂಕಿನ ತುಂಬ ಗ್ರಾಮದ ರೈತ ಶಶಿಕುಮಾರ ಹಿರೇಮಠ ಅವರ ಒಡೆತನದ ತುರಮರಿ ಗ್ರಾಮದ ಸರ್ವೆ ನಂಬರ ೨೩ ರ ಉತಾರದ ಕಲಂ ನಂಬರ ೧೧ ರಲ್ಲಿ ಇರುವ ಹಕ್ಕುಗಳು ತೆಗೆದು ಹಾಕುವ ಕುರಿತು ಅರ್ಜಿ ಸಲ್ಲಿಸಿದರು ಅದೇಶದ ನಕಲು ಪ್ರತಿ ನೀಡಿಲ್ಲ ಕಛೆರಿಗೆ ಬಂದು ಕೇಳಿದರೆ ಹುನಗುಂದ ತಹಶಿಲ್ದಾರರ ಕಚೇರಿ ಬರುತ್ತದೆ ಎನ್ನುತ್ತಾರೆ. ಈ ಮಾಹಿತಿಗಾಗಿ ಹುನಗುಂದಕ್ಕೆ ಹೋದರೆ ಇಲಕಲ್ಲ ತಾಲೂಕ ತಹಶಿಲ್ದಾರರ ಕಚೇರಿ ಗೆ ಕಳಿಸುತ್ತಾರೆ. ಒಂದು ತಿಂಗಳಿಂದ ಅಲೆದಾಡಿ ಸುಸ್ತಾಗಿ ಇಲಕಲ್ಲ ತಾಲೂಕ ಕಛೇರಿಯ ಆವರಣದಲ್ಲಿ ನ್ಯಾಯ ಸಿಗುವರೆಗೂ ಅಹೋ ರಾತ್ರಿ ಧರಣಿಗೆ ಕುಳಿತಿದ್ದೆನೆ ಎಂದು ರೈತ ಮಾಧ್ಯಮದವರ ಮುಂದೆ ತಮ್ಮ ಅಳಲು ತೊಂಡಿಕೊಂಡರು. ಸಂಬಂಧಪಟ್ಟ ಅಧಿಕಾರಿಗಳು ರೈತನ ಹತ್ತಿರ ಬಂದು ನ್ಯಾಯ ದೊರಕಿಸಿ ಕೊಡಲಿ ಎಂಬುದು ನಮ್ಮ ಆಶಯ..
ವರದಿಗಾರರು: ಶರಣಗೌಡ ಕಂದಕೂರ