ಸಜ್ಜಲಗುಡ್ಡದ ಮಠಕ್ಕೆ ನೂತನ ದ್ವಾರ ಬಾಗಿಲು ಸ್ಥಾಪನೆಗೆ ಪೂಜೆ

ಸಜ್ಜಲಗುಡ್ಡದ ಮಠಕ್ಕೆ ನೂತನ ದ್ವಾರ ಬಾಗಿಲು ಸ್ಥಾಪನೆಗೆ ಪೂಜೆ

e-ಸುದ್ದಿ ಇಲಕಲ್

ಇಳಕಲ್ ತಾಲೂಕಿನ ಸುಕ್ಷೇತ್ರ ಕಂಬಳಿಹಾಳ ಗ್ರಾಮದಲ್ಲಿ ಭಕ್ತರ ಆರಾಧ್ಯ ದೇವತೆ ಶರಣಮ್ಮ ತಾಯಿ ಅವರ ಶ್ರೀಮಠದ ದ್ವಾರ ಬಾಗಿಲು ಸ್ಥಾಪನೆಗೆ ನಂದವಾಡಗಿ ಪರಮಪೂಜ್ಯರಾದ ಷ.ಬ್ರ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗುಡದೂರಿನ ನೀಲಕಂಠಯ್ಯ ತಾತನವರು, ಸಜ್ಜಲಗುಡ್ಡದ ಶ್ರೀ ದೊಡ್ಡಬಸರ್ವಾಯ ತಾತನವರು ತ್ರಿರತ್ನ ಪೂಜ್ಯರ ಸಾನಿಧ್ಯದಲ್ಲಿ ದ್ವಾರ ಬಾಗಿಲನ್ನು ಶಿವರಾತ್ರಿ ಶಿವಯೋಗ ನಿಮಿತ್ಯ ಬೆಳಗಿನ ಜಾವ ಪೂಜೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಶರಣಮ್ಮ ತಾಯಿ ಅವರ ಶ್ರೀಮಠದ ದ್ವಾರ ಬಾಗಿಲು ಭಕ್ತಿ ಸೇವೆ ನೀಡಿದ ಕಂಬಳಿಹಾಳ ಗ್ರಾಮದ ಶ್ರೀಮಠದ ಪರಮಭಕ್ತ ಕಾಚಾಪುರ ಮನೆತನ ಕುಟುಂಬ ಸದಸ್ಯರು ಇದ್ದರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶ್ರೀಮಠದ ಸಧ್ಬಕ್ತರು ಬೆಳಗಿನಜಾವ ಕಾರ್ಯಕ್ರಮ ದಲ್ಲಿ ಇದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!