ಗಜಲ್ (ಜುಲ್ ಕಾಫಿಯಾ)
ನಿಷ್ಕಲ್ಮಷ ಭಾವದಲ್ಲಿಯೇ ದೇವರು ವಾಸವಿದ್ದಾನೆ ಅರಿಯದೇತಕೆ
ಕರುಣೆಯ ಮಹಲದಲ್ಲಿರಲು ಆತನು ಬಯಸುತ್ತಾನೆ ತಿಳಿಯದೇತಕೆ
ಗೊತ್ತಿದ್ದೂ ಮತ್ತೆ ಮತ್ತೆ ಮರುಳು ಮಾಡುವಿರೇಕೆ ಮುಗ್ಧರನ್ನು
ಬೆವರಿನ ಹನಿಯಲ್ಲಿ ದಾನಗೈದವರನ್ನು ಇಚ್ಚಿಸುತ್ತಾನೆ
ಗೊತ್ತಿಲ್ಲವೇತಕೆ
ಮನೆ ದೇವರ ಹೊರತು ದೂರದ ಮಂದಿರದಲ್ಲಿ ಬೇರೆ ದೇವರುಂಟೆ
ಸಾಲ ಮಾಡಿ ನೈವಧ್ಯೆ ನೀಡುವವರನ್ನು ತಿರಸ್ಕರಿಸುತ್ತಾನೆ
ನಂಬುತ್ತಿಲ್ಲವೇಕೆ
ಬೇಡನಿಗೊಲಿದ ಶಿವನಾಮದ ನುಡಿಯು ಭಕ್ತನಿಗಷ್ಟೇ ಮೀಸಲಿದೆ
ಹಸಿದೊಟ್ಟೆಗೆ ತುತ್ತನ್ನ ತಿನ್ನಿಸುವಲ್ಲಿಯೇ ನೆಲೆಸುತ್ತಾನೆ ದಯೆಯಿಲ್ಲವೇಕೆ
ಈಶ್ವರ ! ನೀನಿಲ್ಲದ ಜಗವುಂಟೆ ನಿನ್ನನ್ನು ಸ್ಮರಿಸಿದ ಸ್ಥಳವೇ ಕಾಶಿಯಲ್ಲವೆ
ತಿಳಿದೂ ಪಾಪಗಳನ್ನು ಮಾಡಿ ಕ್ಷಮಿಸೆನ್ನುವ ಕಟುಕರನ್ನು ಶಿಕ್ಷಿಸುತ್ತಾನೆ ಜಪವೇತಕೆ
– ಈಶ್ವರ ಮಮದಾಪೂರ , ಗೋಕಾಕ.
ಮೊಬೈಲ್ – ೯೫೩೫೭೨೬೩೦೬